ಕನ್ನಡ ಸುದ್ದಿ  /  ಮನರಂಜನೆ  /  ನಿರ್ಮಾಪಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ರ ಸನ್ನಿ ಡಿಯೋಲ್‌; ಶ್ರೀ ರಾಮ ಜನ್ಮಭೂಮಿ ಹೆಸರಲ್ಲಿ ವಂಚನೆ

ನಿರ್ಮಾಪಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ರ ಸನ್ನಿ ಡಿಯೋಲ್‌; ಶ್ರೀ ರಾಮ ಜನ್ಮಭೂಮಿ ಹೆಸರಲ್ಲಿ ವಂಚನೆ

ಬಾಲಿವುಡ್‌ನ ಜನಪ್ರಿಯ ನಟ ಸನ್ನಿ ಡಿಯೋಲ್‌ ಮೇಲೆ ನಿರ್ಮಾಪಕರೊಬ್ಬರು ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಮಾಡಿದ್ದಾರೆ. ಶ್ರೀ ರಾಮ ಜನ್ಮ ಭೂಮಿ ಎಂಬ ಸಿನಿಮಾ ಪ್ರಾಜೆಕ್ಟ್‌ಗಾಗಿ ನಟ ಮಾಡಿರುವ ಮೋಸದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ನಿರ್ಮಾಪಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ರ ಸನ್ನಿ ಡಿಯೋಲ್‌
ನಿರ್ಮಾಪಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ರ ಸನ್ನಿ ಡಿಯೋಲ್‌

ಬೆಂಗಳೂರು: ನಟ ಸನ್ನಿ ಡಿಯೋಲ್‌ ಬಾಲಿವುಡ್‌ ಸಿನಿಮಾಗಳಲ್ಲಿ ಹಲವು ಐಕಾನಿಕ್‌ ಪಾತ್ರಗಳನ್ನು ಮಾಡಿ ಖ್ಯಾತಿ ಪಡೆದಿದ್ದಾರೆ. ಇತ್ತೀಚಿನ ಗದರ್‌: ಏಕ್‌ ಪ್ರೇಮ್‌ ಕಥಾ ಸಿನಿಮಾವಂತೂ ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ಇದೀಗ ಈ ನಟನ ಮೇಲೆ ಹಣಕಾಸು ವಂಚನೆ ಆರೋಪ ಕೇಳಿಬಂದಿದೆ. ರಿಯಲ್ ಎಸ್ಟೇಟ್ ಡೆವಲಪರ್, ಚಲನಚಿತ್ರ ನಿರ್ಮಾಪಕ ಮತ್ತು ಸಂಡಾನ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಸೋರವ್‌ ಗುಪ್ತಾ ಅವರು ಸನ್ನಿ ಡಿಯೋಲ್‌ ವಿರುದ್ಧ ಆರೋಪ ಮಾಡಿದ್ದಾರೆ. 2016ರಲ್ಲಿ ಇವರು ತಮ್ಮ ಸಹಯೋಗದ ಯೋಜನೆಯೊಂದರ ಆರಂಭಿಕ ಮಾತುಕತೆಗೆ ಭೇಟಿಯಾಗಿದ್ದರಂತೆ. ಸುಮಾರು 4 ಕೋಟಿ ರೂಪಾಯಿಗೆ ತಮ್ಮ ಚಿತ್ರದಲ್ಲಿ ನಟಿಸಲು ಸನ್ನಿ ಡಿಯೋಲ್‌ ಒಪ್ಪಿದ್ದರೆಂದು ಸೋರವ್‌ ಗುಪ್ತಾ ಹೇಳಿದ್ದಾರೆ. ಆದರೆ, ಈ ಯೋಜನೆಗೆ ಸಂಬಂಧಪಟ್ಟಂತೆ ಸನ್ನಿ ಡಿಯೋಲ್‌ ಮೋಸ ಮಾಡಿದ್ದಾರೆ. ಸುಮಾರು 2.55 ಕೋಟಿ ಮೊತ್ತದ ವಂಚನೆ ನಡೆದಿದೆ. ಇವರಿಂದ ನನಗೆ 25 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಸೌರವ್‌ ಗುಪ್ತಾ ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಂಚನೆ ಹೇಗೆ?

ಸೋರವ್ ಗುಪ್ತಾ ಅವರು ಸನ್ನಿ ಡಿಯೋಲ್‌ಗೆ ಆರಂಭಿಕ ಮುಂಗಡ ಮೊತ್ತವಾಗಿ 1 ಕೋಟಿ ರೂಪಾಯಿ ಪಾವತಿಸಿದ್ದರು. ನಂತರ ಅಕ್ಟೋಬರ್‌ನಲ್ಲಿ ಮತ್ತೆ 1 ಕೋಟಿ ರೂಪಾಯಿ ನೀಡಿದ್ದರು. ಇಷ್ಟು ಹಣ ನೀಡಿದರೂ ನಿಗದಿತ ಸಿನಿಮಾ ಆರಂಭಕ್ಕೆ ಸನ್ನಿ ಡಿಯೋಲ್‌ ಯಾವುದೇ ಆಸಕ್ತಿ ತೋರಲಿಲ್ಲ. "ನಾವು ಮೊದಲು ಒಂದು ಕೋಟಿ ರೂಪಾಯಿ ನೀಡಿದ್ದೇವು. ಬಳಿಕ ಅಕ್ಟೋಬರ್‌ನಲ್ಲಿ ಮತ್ತೆ ಒಂದು ಕೋಟಿ ಕೇಳಿದರು. ಅದನ್ನೂ ನೀಡಿದ್ದೇವೆ" ಎಂದು ಗುಪ್ತಾ ಝೂಮ್‌ ವಾಹಿನಿಗೆ ಹೇಳಿದ್ದಾರೆ.

2022ರಲ್ಲಿ ಈ ಸಿನಿಮಾದ ನಿರ್ದೇಶಕರನ್ನು ಮತ್ತು ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡೋಣ ಎಂದು ಸನ್ನಿ ಹೇಳಿದರು. 2022ರಲ್ಲಿ ರಾಮ ಜನ್ಮ ಭೂಮಿಯೆಂಬ ಪ್ರಾಜೆಕ್ಟ್‌ ಮಾಡೋಣ . ರಾಮ ಜನ್ಮ ಭೂಮಿ ಸ್ಕ್ರಿಪ್ಟ್‌ ರೆಡಿ ಇದೆ. ನಿರ್ದೇಶಕರೂ ಇದ್ದಾರೆ. ಬಜೆಟ್‌ ಸುಮಾರು 40 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಸನ್ನಿ ಡಿಯೋಲ್‌ ಹೇಳಿದ್ರು. ಇನ್ನೊಬ್ಬರು ಪಾಲುದಾರರ ಜತೆ 50:50 ಮಾಡೋಣ ಅಂದ್ರು. ಇದಕ್ಕಾಗಿ ನಾವು ಫಿಲ್ಮಿಸ್ತಾನ್‌ ಸ್ಟುಡಿಯೋವನ್ನು ಬುಕ್‌ ಮಾಡಿದ್ದೇವೆ. ನಿರ್ದೇಶಕರು ಮತ್ತು ಇತರರಿಗೆ ಹಣ ನೀಡಿದ್ದೇವೆ ಎಂದು ಸನ್ನಿ ಡಿಯೋಲ್‌ ಹೇಳಿದ್ದರು.

ಮುಂದಿನ ಸಭೆಯಲ್ಲಿ ಈ ಸಿನಿಮಾ ನಿರ್ಮಿಸುವ ಭರವಸೆಯನ್ನು ಸನ್ನಿ ಡಿಯೋಲ್‌ ನೀಡಿದರು. ಆದರೆ, ಇದಾದ ಬಳಿಕ "ಈಗ ನನ್ನ ಫೀಸ್‌ ಹೆಚ್ಚಾಗಿದೆ" ಎಂದರು. ಲಾಭದಲ್ಲಿ ಎರಡು ಕೋಟಿ ಹೆಚ್ಚುವರಿ ಪಡೆಯುವ ಕುರಿತು ಒಪ್ಪಂದ ಮಾಡಿಕೊಂಡರು. ಆ ಸಮಯದಲ್ಲಿ ನನಗೆ 50 ಲಕ್ಷ ರೂಪಾಯಿ ನೀಡುವಂತೆ ಕೇಳಿದರು. ಮಗ ಕರಣ್‌ ಡಿಯೋಲ್‌ ಮದುವೆಗೆ ಹಣ ಬೇಕು, ಹೀಗಾಗಿ 50 ಲಕ್ಷ ರೂಪಾಯಿ ನೀಡಿ ಎಂದರು. ಸ್ಯಾಟ್‌ಲೈಟ್‌ ಮತ್ತು ಡಿಜಿಟಲ್‌ ಸೇಲ್ಸ್‌ನಿಂದ ಸಾಕಷ್ಟು ಆದಾಯ ತರುವ ಭರವಸೆಯನ್ನು ಆ ಸಂದರ್ಭದಲ್ಲಿ ನೀಡಿದರು. ಬೇರೇನೂ ಮಾಡಲಾಗದೆ 50 ಲಕ್ಷ ರೂಪಾಯಿ ನೀಡಲಾಯಿತು.

ಆಘಾತಕಾರಿ ವಿಷಯವೆಂದರೆ ಅಗ್ರಿಮೆಂಟ್‌ನ ಹಾರ್ಡ್‌ಕಾಪಿಯನ್ನು ಸನ್ನಿ ಡಿಯೋಲ್‌ ಬದಲಾಯಿಸಿದ್ದರು. ತನ್ನ ಸಂಭಾವನೆ 8 ಕೋಟಿ ರೂಪಾಯಿ ಎಂದು ಬರೆದಿದ್ದರು. ಇಷ್ಟು ಮಾತ್ರವಲ್ಲದೆ ಲಾಭದಲ್ಲಿಯೂ 2 ಕೋಟಿ ರೂಪಾಯಿ ಹೆಚ್ಚುವರಿ ನೀಡಬೇಕೆಂದು ಹೇಳಲಾಗಿತ್ತು. ಇದೇ ಅಗ್ರಿಮೆಂಟ್‌ನಲ್ಲಿ ಹೆಚ್ಚುವರಿಯಾಗಿ ಒಂದು ಕೋಟಿ ರೂಪಾಯಿ ಪಾವತಿಸಬೇಕೆಂದು ಬರೆಯಾಗಿತ್ತು. ಇದರಿಂದ ವಿಚಲಿತರಾದ ಗುಪ್ತ ನೇರವಾಗಿ ನಟನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ಸನ್ನಿ ಡಿಯೋಲ್‌ರನ್ನು ನಂಬಿ ಈ ಯೋಜನೆಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 25 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಗುಪ್ತಾ ಹೇಳಿದ್ದಾರೆ. ಇದೀಗ ಸೋರವ್‌ ಗುಪ್ತಾ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಟನ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ್ದಾರೆ. ಪೊಲೀಸರು ಸನ್ನಿ ಡಿಯೋಲ್‌ಗೆ ಏಪ್ರಿಲ್‌ 30ರಂದು ನೋಟಿಸ್‌ ಕಳುಹಿಸಲಾಗಿತ್ತು.

ಟಿ20 ವರ್ಲ್ಡ್‌ಕಪ್ 2024