ಕನ್ನಡ ಸುದ್ದಿ  /  Entertainment  /  Bollywood News Swatantrya Veer Savarkar Movie Trailer Released, It Not Nonviolence Freedom Story Pcp

Savarkar trailer: ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾದ ಟ್ರೇಲರ್‌ ಬಿಡುಗಡೆ; ಇದು ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದ ಕಥೆಯಲ್ಲ

Swatantrya Veer Savarkar Movie: ರಣದೀಪ್‌ ಹೂಡಾ ನಿರ್ದೇಶನ ಮತ್ತು ನಟನೆಯ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕೇವಲ ಬಯೋಪಿಕ್‌ ಆಗಿರದೆ ಸಾವರ್ಕರ್‌ ಕುರಿತು ಹೆಚ್ಚಿನ ವಿವರ ನೀಡುವ ಪ್ರಯತ್ನವನ್ನು ಟ್ರೇಲರ್‌ನಲ್ಲಿ ಕಾಣಬಹುದು. ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ ಮಾರ್ಚ್‌ 22ರಂದು ಬಿಡುಗಡೆಯಾಗಲಿದೆ.

Savarkar trailer: ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾದ ಟ್ರೇಲರ್‌ ಬಿಡುಗಡೆ
Savarkar trailer: ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾದ ಟ್ರೇಲರ್‌ ಬಿಡುಗಡೆ

ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಣದೀಪ್‌ ಹೂಡಾ ನಿರ್ದೇಶನದ ಈ ಸಿನಿಮಾದಲ್ಲಿ ಸ್ವತಃ ಇವರೇ ಸಾವರ್ಕರ್‌ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕೇವಲ ಬಯೋಪಿಕ್‌ ಆಗಿರದೆ ವೀರ ಸಾವರ್ಕರ್‌ರನ್ನು ಧೈರ್ಯಶಾಲಿ ಎಂದು ಉಲ್ಲೇಖಿಸುವುದನ್ನು ಟ್ರೇಲರ್‌ನಲ್ಲಿ ಗಮನಿಸಬಹುದು. ಸ್ವತಂತ್ರ ಭಾರತಕ್ಕಾಗಿ ಸಶಸ್ತ್ರ ಕ್ರಾಂತಿ, ಆಕರ್ಷಕ ದೃಶ್ಯಗಳು, ಗಮನಸೆಳೆಯುವ ಸಂಭಾಷಣೆಗಳು ಈ ಟ್ರೇಲರ್‌ನಲ್ಲಿವೆ.

ಈ ಟ್ರೇಲರ್‌ ವೀರ ಸಾವರ್ಕರ್‌ ಕಾಲಾಪಾನಿ ಜೈಲಿನಲ್ಲಿರುವ ದೃಶ್ಯದೊಂದಿಗೆ ಆರಂಭವಾಗುತ್ತದೆ. "ಹಮ್ ಸಬ್ನೆ ಪಧಾ ಹೈ ಕಿ ಭಾರತ್ ಕೋ ಆಜಾದಿ ಅಹಿಂಸಾ ಸೆ ಮಿಲಿ ಹೈ ಲೇಕಿನ್ ಯೇ ವೋ ಕಹಾನಿ ನಹಿ ಹೈ (ಭಾರತವು ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ಗಳಿಸಿತು ಎಂದು ನಾವೆಲ್ಲರೂ ಓದಿದ್ದೇವೆ, ಆದರೆ ಇದು ಆ ಕಥೆಯಲ್ಲ) ಎಂಬ ಧ್ವನಿ ಕೇಳಿಸುತ್ತದೆ. ಈ ಸಿನಿಮಾವು ವೀರ ಸಾವರ್ಕರ್‌ ಅವರ ಹೋರಾಟ ಮತ್ತು ಬದುಕಿನ ಕಥೆಗಳನ್ನು ಹೊಂದಿರಲಿದೆ.

ಈ ಟ್ರೇಲರ್‌ನಲ್ಲಿ ಹಲವು ಅಂಶಗಳನ್ನು ಗಮನಿಸಬಹುದು. ಮಹಾತ್ಮ ಗಾಂಧೀಜಿ ಮತ್ತು ವೀರ ಸಾವರ್ಕರ್‌ ಭೇಟಿಯಾದ ಐತಿಹಾಸಿಕ ಕ್ಷಣವನ್ನೂ ಇದರಲ್ಲಿ ನೀಡಲಾಗಿದೆ. ಸ್ವಾತಂತ್ರ್ಯ ಹೋರಾಟದ ಕಡೆ ಈ ಇಬ್ಬರು ನಾಯಕರ ನಡುವೆ ಇರುವ ಸೈದ್ಧಾಂತಿಕ ಭಿನ್ನತೆಗಳಿದ್ದರೂ ಗುರಿ ಒಂದೇ ಆಗಿರುವುದನ್ನು ಟ್ರೇಲರ್‌ ಧ್ವನಿಸುತ್ತದೆ. ಭಾರತೀಯ ಸಶಸ್ತ್ರ ಕ್ರಾಂತಿಯ ಕುರಿತೂ ಟ್ರೇಲರ್‌ ಬೆಳಕು ಚೆಲ್ಲುತ್ತದೆ. ಹುತಾತ್ಮರಾದ ಬಾಲಗಂಗಾಧರ ತಿಲಕ್, ಮದನ್‌ಲಾಲ್ ಧಿಂಗ್ರಾ, ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆಯೂ ತಿಳಿಸುತ್ತದೆ. ಜತೆಗೆ, ಆ ಕಾಲದ ರಾಜಕೀಯ ವ್ಯವಸ್ಥೆಯನ್ನು ಲೇವಡಿ ಮಾಡಲಾಗುತ್ತದೆ.

ಈ ಸಿನಿಮಾಕ್ಕಾಗಿ ನನ್ನನ್ನು ಸಂಪರ್ಕಿಸಿದ ಸಂದರ್ಭದಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಬಗ್ಗೆ ನನಗೆ ಅಷ್ಟೊಂದು ವಿಷ್ಯ ಗೊತ್ತಿರಲಿಲ್ಲ ಎಂದು ರಣದೀಪ್‌ ಹೂಡಾ ಇತ್ತೀಚೆಗೆ ಹೇಳಿದ್ದರು. "ಸಾವರ್ಕರ್‌ ಬಗ್ಗೆ ವಿವರವಾಗಿ ಓದಿದ ಬಳಿಕ ನನಗೆ ಆಶ್ವರ್ಯವಾಯಿತು. ಭಾರತೀಯನಾಗಿ ನನಗೆ ಇವರ ಬಗ್ಗೆ ಇಷ್ಟೊಂದು ವಿವರ ತಿಳಿಯದೆ ಇರುವುದಕ್ಕೆ ಖೇದವಾಯಿತು. ಸಾವರ್ಕರ್‌ ಅವರ ಅಚಲ ಮನೋಭಾವ ಮತ್ತು ದೇಶದ ಬಗೆಗೆ ಇರುವ ಅವರ ಅಚಲ ಬದ್ಧತೆಗೆ ಸಾಟಿಯಿಲ್ಲ ಎಂದು ಅವರು ಹೇಳಿದ್ದರು.

ಕಾಲಾಪಾನಿ ಅನುಭವ

ಈ ಸಿನಿಮಾಕ್ಕೆ ಸಿದ್ಧತೆ ನಡೆಸಿದ ಕುರಿತು ರಣದೀಪ್‌ ಹೂಡ ಇತ್ತೀಚೆಗೆ ಹೇಳಿದ್ದರು. ವೀರ ಸಾವರ್ಕರ್‌ ಅವರನ್ನು ಬಂಧಿಸಿದ್ದ ಕಾಲಾಪಾನಿ ಜೈಲಿಗೆ ಇವರು ಭೇಟಿ ನೀಡಿದ್ದರು. ಈ ಜೈಲಿನೊಳಗೆ ತಮ್ಮನ್ನು ತಾವು ಲಾಕ್‌ ಮಾಡಿದ್ದರು. "ಸಾವರ್ಕರ್‌ ಸುಮಾರು 50 ವರ್ಷ ಬಂಧನದಲ್ಲಿದ್ದ ಈ ಜೈಲಿನಲ್ಲಿ ನನಗೆ 20 ನಿಮಿಷ ಕುಳಿತುಕೊಳ್ಳಲು ಆಗಿರಲಿಲ್ಲ" ಎಂದು ಅವರು ಹೇಳಿದ್ದರು. ಸ್ವಾತಂತ್ರ್ಯ ವೀರ ಸಾವರ್ಕರ್‌ ಸಿನಿಮಾದಲ್ಲಿ ಅಂಕಿತಾ ಲೋಖಂಡೆ ಕೂಡ ನಟಿಸಿದ್ದಾರೆ. ಅನಂತ್‌ ಪಂಡಿತ್‌ ಮೋಷನ್‌ ಪಿಕ್ಚರ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ ಮಾರ್ಚ್‌ 22ರಂದು ಬಿಡುಗಡೆಯಾಗಲಿದೆ.

IPL_Entry_Point