ಕನ್ನಡ ಸುದ್ದಿ  /  Entertainment  /  Bollywood News Taapsee Pannu Marries Mathias Boe In Udaipur In An Intimate Weddings, Report Pcp

Taapsee Pannu: ಉದಯಪುರದಲ್ಲಿ ಮಥಿಯಾಸ್ ಬೋ ಜತೆ ತಾಪ್ಸಿ ಪನ್ನು ಶುಭವಿವಾಹ; ದಶಕದ ಡೇಟಿಂಗ್‌ಗೆ ಮದುವೆಯ ಮುದ್ರೆ

Taapsee Pannu and Mathias Boe Marriage: ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತು ಬ್ಯಾಂಡ್ಮಿಟನ್‌ ಆಟಗಾರ ಕೆಲವು ದಿನಗಳ ಹಿಂದೆ ಉದಯಪುರದಲ್ಲಿ ವಿವಾಹವಾಗಿದ್ದಾರೆ. ಮಾರ್ಚ್‌ 23ರಂದು ಇವರ ವಿವಾಹ ಸಮಾರಂಭ ನಡೆದಿದೆ ಎಂದು ವರದಿಗಳು ತಿಳಿಸಿವೆ.

Taapsee Pannu: ಉದಯಪುರದಲ್ಲಿ ಮಥಿಯಾಸ್ ಬೋ ಜತೆ ತಾಪ್ಸಿ ಪನ್ನು ಶುಭವಿವಾಹ
Taapsee Pannu: ಉದಯಪುರದಲ್ಲಿ ಮಥಿಯಾಸ್ ಬೋ ಜತೆ ತಾಪ್ಸಿ ಪನ್ನು ಶುಭವಿವಾಹ

ಬಾಲಿವುಡ್‌ ನಟಿ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಉದಯಪುರದಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಮಥಿಯಾಸ್ ಬೋಯ್ ಅವರ ಜತೆ ವಿವಾಹವಾಗಿದ್ದಾರೆ. ಈ ಶುಭವಿವಾಹ ಕಾರ್ಯಕ್ರಮದಲ್ಲಿ ತಾಪ್ಸಿ ಅವರ ಆತ್ಮೀಯರು, ಕುಟುಂಬದವರು ಮಾತ್ರ ಪಾಲ್ಗೊಂಡಿದ್ದರು. ನ್ಯೂಸ್‌18 ಈ ಕುರಿತು ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ. "ಮಾರ್ಚ್‌ 20ರಂದು ವಿವಾಹಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ. ಮಾರ್ಚ್‌ 23ರಂದು ವಿವಾಹವಾಗಿದೆ. ಯಾವುದೇ ಮಾಧ್ಯಮದ ಗಮನಕ್ಕೆ ಬಾರದಂತೆ ಖಚಿತಪಡಿಸಿಕೊಂಡು ವಿವಾಹವಾಗಿದ್ದಾರೆ. ಮದುವೆ ಕಾರ್ಯಕ್ರಮ ತೀರ ಖಾಸಗಿಯಾಗಿ ನಡೆದಿದೆ. ಹತ್ತಿರದ ಬಂಧುಗಳು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು" ಎಂದು ಮೂಲಗಳು ಮಾಹಿತಿ ನೀಡಿವೆ.

ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಬಾಲಿವುಡ್‌ ಸೆಲೆಬ್ರೆಟಿಗಳೂ ಭಾಗವಹಿಸಿಲ್ಲ. ತಪ್ಪಡ್‌ ಸಿನಿಮಾದಲ್ಲಿ ಸಹನಟನಾಗಿದ್ದ ಪಾವೈಲ್‌ ಗುಲಾಟಿ ಮದುವೆಗೆ ಆಗಮಿಸಿದ್ದರು. ಅನುರಾಗ್‌ ಕಶ್ಯಪ್‌ ಕೂಡ ಮದುವೆಗೆ ಆಗಮಿಸಿದ್ದರು. ಇವರು ತಾಪ್ಸಿ ಜತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಇವರು ದೊಬಾರಾ ಮತ್ತು ಮನ್ಮರ್ಜಿಯನ್‌ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವರದಿಗಳ ಪ್ರಕಾರ ಕನ್ನಿಕಾ ಧಿಲೊನ್‌ ಮತ್ತು ಆಕೆಯ ಪತಿ ಹಿಮಾಂಶು ಶರ್ಮಾ ಕೂಡ ತಾಪ್ಸಿ ಪನ್ನು ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗೆ ಕನ್ನಿಕಾ ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕನ್ನಿಕಾ ಅವರು ತನ್ನ ಮತ್ತು ಪತಿಯ ಫೋಟೋವನ್ನು ಹಂಚಿಕೊಂಡಿದ್ದರು. ಕನ್ನಿಕಾ ಅವರು ಗುಲಾಬಿ ಮತ್ತು ಬೆಳ್ಳಿ ಬಣ್ಣದ ಫೋಟೋ ಹಂಚಿಕೊಂಡಿದ್ದರು. ಆಕೆಯ ಪತಿ ನೀಲಿ ಮತ್ತು ಬಿಳಿ ಕುರ್ತಾ, ಪೈಜಾಮ ಮತ್ತು ಜಾಕೆಟ್‌ ಧರಿಸಿದ್ದರು. ಸ್ಮೈಲ್‌ ವಿದ್‌ ಕನಿಕಾ, ಮೇರೆ ಯಾರ್‌ ಕೀ ಶಾದಿ ಎಂದು ಹ್ಯಾಷ್‌ಟ್ಯಾಗ್‌ ನೀಡಿದ್ದರು. ಈ ಮೂಲಕ ಯಾರದ್ದೋ ವಿವಾಹ ಕಾರ್ಯಕ್ರಮಕ್ಕೆ ಹೋಗಿರುವ ಸೂಚನೆ ನೀಡಿದ್ದರು. ಇವರು ತಾಪ್ಸಿ ಪನ್ನು ವಿವಾಹಕ್ಕೆ ಹೋಗಿದ್ದರು

ಪಾವೈಲ್‌ ಅವರು ಇನ್‌ಸ್ಟಾಗ್ರಾಂನಲ್ಲಿ ತಾಪ್ಸಿ ಅವರ ಸಹೋದರಿ ಶಗುನ್‌ ಪನ್ನು ಮತ್ತು ಅವರ ಸೋದರ ಸಂಬಂಧಿ ಇವಾನಿಯಾ ಪನ್ನು ಅವರ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅಭಿಲಾಷ್ ಥಪ್ಲಿಯಾಲ್ ಮತ್ತು ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಇದ್ದರು. "ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ನಾವು ಎಲ್ಲಿದ್ದೇವೆ ಎಂದು ನಮಗೆ ತಿಳಿದಿಲ್ಲ!" ಎಂದು ಅಭಿಲಾಸ್‌ ಕಾಮೆಂಟ್‌ ಮಾಡಿದ್ದರು. ಯಾರೋ ಒಬ್ಬರು ಮಥಿಯಾಸ್‌ ಮದುವೆ ಎಂದು ಕಾಮೆಂಟ್‌ ಮಾಡಿದ್ದರು.

ತಾಪ್ಸಿ ಪನ್ನು ಮದುವೆ ಕುರಿತು ಹಲವು ತಿಂಗಳಿಗಳಿಂದ ವದಂತಿ ಆರಂಭವಾಗಿತ್ತು. ಆದರೆ, ಈ ಕುರಿತು ತಾಪ್ಸಿ ಪನ್ನು ಉತ್ತರಿಸಲು ನಿರಾಕರಿಸುತ್ತ ಬಂದಿದ್ದರು. ಳೆದ ಹತ್ತು ವರ್ಷಗಳಿಂದ ಬ್ಯಾಂಡ್ಮಿಟನ್‌ ತಾರೆ ಮಥಿಯಾಸ್‌ ಜತೆ ತಾಪ್ಸಿ ಪನ್ನು ಡೇಟಿಂಗ್‌ನಲ್ಲಿದ್ದಾರೆ. "ಮದುವೆಗೆ ನಾನು ರೆಡಿಯಾದಾಗ, ನಾನು ನನ್ನದೇ ರೀತಿಯಲ್ಲಿ ಮದುವೆಯ ಕುರಿತು ಘೋಷಿಸುವೆ" ಎಂದು ಹೇಳಿದ್ದರು. ತಾಪ್ಸಿ ಪನ್ನು ಇತ್ತೀಚೆಗೆ ಡಂಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಸೀನ್‌ ದಿಲ್‌ರುಬಾ, ತಪ್ಪಡ್‌, ಜಾದ್ವಾ 2, ಬಾದ್ಲಾ, ಪಿಂಕ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಸದಾ ಭೇಟಿ ನೀಡಿ

IPL_Entry_Point