ಕನ್ನಡ ಸುದ್ದಿ  /  Entertainment  /  Bollywood News Taapsee Pannu, Mathias Boe To Marry In March In Sikh-christian Wedding Says Report Pcp

Taapsee Pannu: ಮುಂದಿನ ತಿಂಗಳು ತಾಪ್ಸಿ ಪನ್ನು ಮದುವೆಯಂತೆ, ಬ್ಯಾಂಡ್ಮಿಟನ್‌ ಆಟಗಾರನ ಕೈಹಿಡಿಯಲಿದ್ದಾರೆ ಡಂಕಿ ನಟಿ

Taapsee Pannu Marriage: ಬಾಲಿವುಡ್‌ ನಟಿ ತಾಪ್ಸಿ ಪನ್ನು ತನ್ನ ಗೆಳೆಯ ಮತ್ತು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರನ್ನು ವಿವಾಹವಾಗಲು ಸಜ್ಜಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಶೀಘ್ರದಲ್ಲಿಯೇ ಅಂದರೆ ಮುಂದಿನ ತಿಂಗಳೇ ಇವರ ಮದುವೆಯೆಂದು ಹೇಳಲಾಗುತ್ತಿದೆ.

ಹಲವು ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಿಯಾಸ್‌ ಬೋ ಡೇಟಿಂಗ್‌ನಲ್ಲಿದ್ದಾರೆ
ಹಲವು ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಿಯಾಸ್‌ ಬೋ ಡೇಟಿಂಗ್‌ನಲ್ಲಿದ್ದಾರೆ

ಬೆಂಗಳೂರು: ಡಂಕಿ, ಹಸೀನ್‌ ದಿಲ್‌ರುಬಾ, ತಪ್ಪಡ್‌, ಜುಡ್ವಾ 2, ಬಾದ್ಲಾ, ಕಾಂಚನ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ತಾಪ್ಸೆ ಪನ್ನು ಮುಂದಿನ ತಿಂಗಳು ವಿವಾಹವಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಶೀಘ್ರದಲ್ಲಿಯೇ ಇವರು ತನ್ನ ಗೆಳೆಯ ಮತ್ತು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋರನ್ನು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಇಂಡಿಯಾ ಟುಡೇಗೂ ಇವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ತಿಂಗಳು ನೀವು ವಿವಾಹವಾಗಲಿದ್ದೀರ ಎಂಬ ಪ್ರಶ್ನೆಗೆ ಇಂಡಿಯಾ ಟುಡೇಗೆ ತಾಪ್ಸಿ ಪನ್ನು ಹೀಗೆ ಉತ್ತರಿಸಿದ್ದಾರೆ. "ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಎಂದಿಗೂ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಮತ್ತು ಮುಂದೆಯೂ ನೀಡುವುದಿಲ್ಲ" ಎಂದು ಹೇಳಿದ್ದಾರೆ.

ಎನ್‌ಡಿಟಿವಿ ವರದಿ ಪ್ರಕಾರ ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ ಅವರ ವಿವಾಹವು ಸಿಖ್‌ ಕ್ರಿಶ್ಚಿಯನ್‌ ಪದ್ಧತಿಯಲ್ಲಿ ನಡೆಯಲಿದೆ. ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಇವರಿಬ್ಬರು ಶೀಘ್ರದಲ್ಲಿ ಸಿಖ್ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಶ್ರೀಮಂತ ಸಂಪ್ರದಾಯದ ಪ್ರಕಾರ ವಿವಾಹವಾಗಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಪ್ಸಿ ಪನ್ನು ಸುಮಾರು ಒಂದು ದಶಕದಿಂದ ಡ್ಯಾನಿಶ್ ಬ್ಯಾಡ್ಮಿಂಟನ್ ತರಬೇತುದಾರ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸಂದರ್ಶನಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಆಗಾಗ್ಗೆ ಮಾತನಾಡಿದ್ದಾರೆ.

ಜನವರಿ 2023 ರಲ್ಲಿ ತಾಪ್ಸಿ ಪನ್ನು ತನ್ನ ಮದುವೆಯ ದಿನದ ಬಗ್ಗೆ ಹೀಗೆ ಹೇಳಿದ್ದರು. ವಿವಾಹ ಎನ್ನುವುದು ರುಚಿಕರ ಒಂದು ದಿನದ ವ್ಯವಹಾರ. ನನ್ನ ವೃತ್ತಿಪರ ಜೀವನದಲ್ಲಿ ಸಾಕಷ್ಟು ನಾಟಕವಿದೆ. ವೈಯಕ್ತಿಕ ಜೀವನದಲ್ಲಿಯೂ ನಾಟಕವಿರಲು ನಾನು ಬಯಸುವುದಿಲ್ಲ. ಮದುವೆಯಲ್ಲಿ ಯಾವ ರೀತಿಯ ತಡರಾತ್ರಿಯ ಆಚರಣೆ ಬಯಸುವುದಿಲ್ಲ ಎಂದು ಅವರು ಹೇಳಿದ್ದರು. ಈ ರೀತಿ ತನ್ನ ಮದುವೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದರು.

ಮದುವೆ ದಿನದಂದು ವಧುವಿನ ಅಲಂಕಾರದ ಬಗ್ಗೆಯೂ ತಾಪ್ಸಿ ಪನ್ನು ಮಾತನಾಡಿದ್ದರು. "ವಿಶಾಲವಾದ ಕೇಶ ವಿನ್ಯಾಸ ಬಯಸುವುದಿಲ್ಲ. ದಪ್ಪ ಮೇಕಪ್‌ ಪದರ ಹಾಕಿಕೊಂಡಿರುವ ವಧುವನ್ನು ನೋಡಿದಾಗ ನನಗೆ ಇಷ್ಟವಾಗುವುದಿಲ್ಲ. ನೆನಪು ಕೇವಲ ಆ ಕ್ಷಣಕ್ಕೆ ಮಾತ್ರವಲ್ಲ, ಅದು ಎಂದೆಂದಿಗೂ ಇರುತ್ತವೆ. ಹೀಗಾಗಿ, ಮದುವೆ ದಿನ ದಪ್ಪ ಮೇಕಪ್‌ ಮಾಡಿಕೊಂಡ ಚಿತ್ರಗಳನ್ನು ಬಯಸುವುದಿಲ್ಲ. ಏಕೆಂದರೆ, ಈ ರೀತಿ ಮೇಕಪ್‌ ಮಾಡಿಕೊಂಡರೆ ನಮ್ಮ ಗುರುತೇ ನಮಗೆ ಸಿಗುವುದಿಲ್ಲ ಎಂದು ಅವರು ಹೇಳಿದ್ದರು.

IPL_Entry_Point