ಕನ್ನಡ ಸುದ್ದಿ  /  Entertainment  /  Bollywood News Taapsee Pannu Wedding Rumours I Want To Get Married And Whenever It Happens Says Dunki Actress Pcp

Taapsee Pannu: ಮದುವೆಯಾಗೋದು ತಪ್ಪಾ, ಈ ವದಂತಿ ಏಕೆ? ಬ್ಯಾಂಡ್ಮಿಟನ್‌ ಆಟಗಾರನ ಜತೆ ಮದುವೆ ಪ್ರಶ್ನೆಗೆ ತಾಪ್ಸಿ ಪನ್ನು ಪ್ರತಿಕ್ರಿಯೆ

Taapsee Pannu wedding rumours: ಮಥಿಯಾಸ್ ಬೋ ಜತೆ ತಾಪ್ಸಿ ಪನ್ನು ವಿವಾಹ ನಡೆಯಲಿದೆ ಎಂಬ ವದಂತಿ ಕಳೆದ ಹಲವು ದಿನಗಳಿಂದ ಇದೆ. ಈ ಕುರಿತಾದ ಪ್ರಶ್ನೆಗೆ ಡಂಕಿ ನಟಿ ತಾಪ್ಸಿ ಪನ್ನು "ಸರಿಯಾದ ಸಮಯದಲ್ಲಿ ತಿಳಿಸುವುದಾಗಿ" ಉತ್ತರಿಸಿದ್ದಾರೆ.

Taapsee Pannu: ಬ್ಯಾಂಡ್ಮಿಟನ್‌ ಆಟಗಾರನ ಜತೆ  ಮದುವೆ ವದಂತಿಗೆ ತಾಪ್ಸಿ ಪನ್ನುಪ್ರತಿಕ್ರಿಯೆ
Taapsee Pannu: ಬ್ಯಾಂಡ್ಮಿಟನ್‌ ಆಟಗಾರನ ಜತೆ ಮದುವೆ ವದಂತಿಗೆ ತಾಪ್ಸಿ ಪನ್ನುಪ್ರತಿಕ್ರಿಯೆ

Taapsee Pannu Wedding:ಬಾಲಿವುಡ್‌ ನಟಿ ತಾಪ್ಸಿ ಪನ್ನು ಅವರು ಮಥಿಯಾಸ್‌ ಬೋ ಜತೆ ಮಾರ್ಚ್‌ ತಿಂಗಳ ಕೊನೆಗೆ ವಿವಾಹವಾಗಲಿದ್ದಾರೆ ಎಂಬ ವದಂತಿಗಳಿವೆ. ಝೂಮ್‌ಗೆ ನೀಡಿದ ಸಂದರ್ಶನದಲ್ಲಿ ಇದೀಗ ಈ ವದಂತಿ ಕುರಿತು ತಾಪ್ಸಿ ಪನ್ನು ಸ್ಪಷ್ಟನೆ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬ್ಯಾಂಡ್ಮಿಟನ್‌ ತಾರೆ ಮಥಿಯಾಸ್‌ ಜತೆ ತಾಪ್ಸಿ ಪನ್ನು ಡೇಟಿಂಗ್‌ನಲ್ಲಿದ್ದಾರೆ. "ಮದುವೆಗೆ ನಾನು ರೆಡಿಯಾದಾಗ, ನಾನು ನನ್ನದೇ ರೀತಿಯಲ್ಲಿ ಮದುವೆಯ ಕುರಿತು ಘೋಷಿಸುವೆ" ಎಂದು ಹೇಳಿದ್ದಾರೆ.

ತಾಪ್ಸಿ ಪನ್ನು ಮತ್ತು ಮಥಿಯಾಸ್‌ ವಿವಾಹದ ವದಂತಿ

ತಾಪ್ಸಿ ಪನ್ನು ಇತ್ತೀಚೆಗೆ ಡಂಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಸೀನ್‌ ದಿಲ್‌ರುಬಾ, ತಪ್ಪಡ್‌, ಜಾದ್ವಾ 2, ಬಾದ್ಲಾ, ಪಿಂಕ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. "ನಾನು ಒಂದು ದಿನ ವಿವಾಹವಾಗಲೇ ಬೇಕು. ನಿಮಗೆ ಆಗ ಸುದ್ದಿ ತಿಳಿಸುವೆ. ಸರಿಯಾದ ಸ್ಥಳ, ಕ್ಷಣ ಕಂಡುಕೊಂಡ ಕ್ಷಣ ನಾನು ಮದುವೆ ಕುರಿತು ಘೋಷಿಸುವೆ. ಮದುವೆ ಕುರಿತು ನಾನು ನನ್ನೊಳಗೆ ಮಾತನಾಡಬೇಕು. ಮದುವೆ ವಿಚಾರ ಸಂದರ್ಭ ಬಂದಾಗ ಹೇಳುವೆ. ಮದುವೆಯಾಗುವುದು ತಪ್ಪೇ? ಅದು ಜೀವನದ ಒಂದು ಭಾಗ. ಇದು ಎಲ್ಲರೂ ಒಪ್ಪಿರುವಂತಹ ವಿಚಾರ. ನಾನು ಯಾರಿಗೂ ಮೋಸ ಮಾಡುತ್ತಿಲ್ಲ. ನಾನೇನೂ ಕಾನೂನುಬಾಹಿರ ವಿಚಾರ ಮಾಡುತ್ತಿಲ್ಲ. ಹೀಗಿದ್ದಾಗ, ಈ ವದಂತಿ ಏಕೆ?" ಎಂದು ತಾಪ್ಸಿ ಪನ್ನು ಪ್ರಶ್ನಿಸಿದ್ದಾರೆ.

"ನಾನು ಸಿಂಗಲ್‌ ಆಗಿದ್ದೇನೆ. ಜನರಿಗೆ ನಾನು ಮದುವೆಯಾಗುವುದು ಇಷ್ಟವಿಲ್ಲವೇ? ನಾನು ನನ್ನ ಸಂಬಂಧದ ಕುರಿತು ಪ್ರಾಮಾಣಿಕಳಾಗಿದ್ದೇನೆ. ಇದರಲ್ಲಿ ಅಡಗಿಸಿಡುವಂತದ್ದು ಏನೂ ಇಲ್ಲ. ಯಾವಾಗ ಮದುವೆ ಆಗಬೇಕೋ, ಆಗ ಎಲ್ಲರಿಗೂ ತಿಳಿಯುತ್ತದೆ" ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೂ ಮದುವೆ ಕುರಿತಾದ ಪ್ರಶ್ನೆಗೆ ತಾಪ್ಸಿ ಪನ್ನು ಇದೇ ರೀತಿ ಉತ್ತರಿಸಿದ್ದರು. ಮುಂದಿನ ತಿಂಗಳು ನೀವು ವಿವಾಹವಾಗಲಿದ್ದೀರ ಎಂಬ ಪ್ರಶ್ನೆಗೆ ಇಂಡಿಯಾ ಟುಡೇಗೆ ತಾಪ್ಸಿ ಪನ್ನು ಹೀಗೆ ಉತ್ತರಿಸಿದ್ದಾರೆ. "ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಎಂದಿಗೂ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಮತ್ತು ಮುಂದೆಯೂ ನೀಡುವುದಿಲ್ಲ" ಎಂದು ಹೇಳಿದ್ದರು.

ತಾಪ್ಸಿ ಪನ್ನು ಮತ್ತು ಮಥಿಯಾಸ್‌ ಬೋ ವಿವಾಹ

ಎನ್‌ಡಿಟಿವಿ ವರದಿ ಪ್ರಕಾರ ತಾಪ್ಸಿ ಪನ್ನು ಮತ್ತು ಮಥಿಯಾಸ್‌ ಬೋ ಅವರ ವಿವಾಹ ಮಾರ್ಚ್‌ ಅಂತ್ಯಕ್ಕೆ ಉದಯಪುರದಲ್ಲಿ ನಡೆಯಲಿದೆ. ಕುಟುಂಬದ ಸಿಮೀತ ಜನರ ನಡುವೆ ಈ ವಿವಾಹ ಕಾರ್ಯಕ್ರಮ ನಡೆಯಲಿದೆ. ಯಾವುದೇ ಬಾಲಿವುಡ್‌ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗುತ್ತಿಲ್ಲ. ಸಿಖ್‌ ಮತ್ತು ಕ್ರಿಶ್ಚಿಯನ್‌ ಸಂಸ್ಕೃತಿಗೆ ಅನುಗುಣವಾಗಿ ವಿವಾಹ ನಡೆಯಲಿದೆ. ಇವರಿಬ್ಬರು ಶೀಘ್ರದಲ್ಲಿ ಸಿಖ್ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಶ್ರೀಮಂತ ಸಂಪ್ರದಾಯದ ಪ್ರಕಾರ ವಿವಾಹವಾಗಲಿದ್ದಾರೆ ಎಂದು ಎನ್‌ಡಿಟಿವಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.

IPL_Entry_Point