ಕನ್ನಡ ಸುದ್ದಿ  /  Entertainment  /  Bollywood News Tamannaah Bhatia Marriage Vijay Verma Gossip Vijay Opened Up About His Marriage Plans Pcp

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜತೆ ವಿಜಯ್‌ ವರ್ಮಾ ವಿವಾಹ ಯಾವಾಗ; ಕೊನೆಗೂ ಮೌನ ಮುರಿದ ದಹಾದ್‌ ನಟ

Tamannaah Bhatia Vijay Verma marriage: ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾರಿಬ್ಬರು ಡೇಟಿಂಗ್‌ ಮಾಡುತ್ತಿರುವ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಇವರಿಬ್ಬರು ಯಾವಾಗ ವಿವಾಹವಾಗುತ್ತಾರೆ? ಈ ಕುರಿತ ಪ್ರಶ್ನೆಗೆ ದಹಾದ್‌ ನಟ ವಿಜಯ ವರ್ಮಾ ಇತ್ತೀಚೆಗೆ ಉತ್ತರಿಸಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜತೆ ವಿಜಯ್‌ ವರ್ಮಾ ವಿವಾಹ ಯಾವಾಗ; ಕೊನೆಗೂ ಮೌನ ಮುರಿದ ನಟ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜತೆ ವಿಜಯ್‌ ವರ್ಮಾ ವಿವಾಹ ಯಾವಾಗ; ಕೊನೆಗೂ ಮೌನ ಮುರಿದ ನಟ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸದ್ಯದಲ್ಲಿಯೇ ವಿಜಯ್‌ ವರ್ಮಾ ಜತೆ ವಿವಾಹವಾಗಲಿದ್ದಾರೆ ಎಂಬ ಗುಸುಗುಸು ಕಳೆದ ಹಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ತಮನ್ನಾ ಭಾಟಿಯಾ ವಿವಾಹವಾಗುತ್ತಾರೆ ಎನ್ನುವ ಸಂಗತಿ ಸಾಕಷ್ಟು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಕಷ್ಟವಾಗಬಹುದು. ಆದರೆ, ಇವರಿಬ್ಬರು ಶೀಘ್ರದಲ್ಲಿ ಮದುವೆಯಾಗುವುದು ನಿಜವೇ ಎನ್ನುವ ಪ್ರಶ್ನೆಗೆ ಸ್ವತಃ ವಿಜಯ್‌ ವರ್ಮಾ ಅವರು ಉತ್ತರಿಸಿದ್ದಾರೆ.

ವಿಜಯ್‌ ವರ್ಮಾ ಮತ್ತು ತಮನ್ನಾ ಭಾಟಿಯಾ ಕಳೆದ ಹಲವು ತಿಂಗಳಿನಿಂದ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಕುಚ್‌ ಕುಚ್‌ ಸಂಬಂಧವಿದೆ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ. "ನೀವು ಶೀಘ್ರದಲ್ಲಿ ಮದುವೆಯಾಗ್ತಿರಿ ಅಂತೇ, ಹೌದಾ?" ಎಂಬ ಪ್ರಶ್ನೆಗೆ ವಿಜಯ್‌ ವರ್ಮಾ "ತಮನ್ನಾ ಭಾಟಿಯಾ ಜತೆ ಶೀಘ್ರದಲ್ಲಿ ನಾನು ಮದುವೆಯಾಗ್ತಿನಾ ಎಂಬ ಪ್ರಶ್ನೆ ನನ್ನ ಅಮ್ಮ ಕೇಳಿದರೂ ಉತ್ತರಿಸಲು ನನ್ನಿಂದ ಈಗ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಇದನ್ನೂ ಓದಿ: Pooja Gandhi Marriage: ಪೂಜಾ ಗಾಂಧಿಗೆ ನಾಳೆ ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮುಂಗಾರು ಮಳೆ ಚೆಲುವೆ

ಮದುವೆ ಪ್ರಶ್ನೆಗೆ ದಹಾದ್‌ ನಟ ಜಾಣತನದಿಂದ ಉತ್ತರಿಸಿದ್ದಾರೆ. "ಮೊದಲನೆಯದಾಗಿ ಯಾವುದೇ ಹುಡುಗಿ ನನ್ನ ಜತೆ ಮದುವೆಯಾಗಲು ಬಯಸುವುದು ಕಷ್ಟ. ಇಂತಹ ಪ್ರಶ್ನೆಗೆ ನನ್ನ ತಾಯಿಗೂ ಉತ್ತರಿಸಲು ಸಾಧ್ಯವಿಲ್ಲ. ಯಾರಿಗೂ ಈಗ ಉತ್ತರಿಸೋದು ಕಷ್ಟ" ಎಂದು ಅವರು ಹೇಳಿದ್ದಾರೆ.

ನನ್ನ ಮದುವೆ ವಿಷಯವನ್ನು ಅಮ್ಮ ಆಗಾಗ ಕೇಳುತ್ತಿರುತ್ತಾರೆ ಎಂದು ವಿಜಯ್‌ ವರ್ಮಾ ಒಪ್ಪಿಕೊಂಡಿದ್ದಾರೆ. ಈಗ ಜೀವನದಲ್ಲಿ ಚೆನ್ನಾಗಿದ್ದೇನೆ, ಹೀಗಾಗಿ, ಇಂತಹ ಪ್ರಶ್ನೆಗಳನ್ನು ಮುಂದೂಡಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಓದಿದ್ದೀರಾ?: ಇಷ್ಟದೇವತೆಯ ಕಂಡು ಜೀವ ಹೂವಾಗಿದೆ ಎಂದ ಸಂಜು; ಕಿರುತೆರೆ ಜೋಡಿ ಸಂಜು-ಮೇಘಾ ಮದುವೆ ಆಲ್ಬಂ ಇಲ್ಲಿದೆ ನೋಡಿ

ಈ ಹಿಂದಿನ ವರದಿಗಳ ಪ್ರಕಾರ ತಮನ್ನಾ ಭಾಟಿಯಾ ಅವರಿಗೆ ಮದುವೆ ಕುರಿತು ಕುಟುಂಬದಲ್ಲಿ ಒತ್ತಡವಿದೆ ಎಂದು ಹೇಳಲಾಗಿತ್ತು. ಹೀಗಾಗಿ, ವಿಜಯ್‌ ವರ್ಮಾ ಜತೆ ಬೇಗ ವಿವಾಹವಾಗಲಿದ್ದಾರೆ ಎಂದು ಹೇಳಲಾಗಿತ್ತು. ಇವರಿಬ್ಬರು ಮದುವೆ ಕುರಿತು ಸೀರಿಯಸ್‌ ಆಗಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಭೋಲಾ ಶಂಕರ್‌ ಬಳಿಕ ತಮನ್ನಾ ಅವರು ಯಾವುದೇ ಹೊಸ ಪ್ರಾಜೆಕ್ಟ್‌ ಒಪ್ಪಿಕೊಂಡಿಲ್ಲ. ಇದು ಕೂಡ ಇವರಿಬ್ಬರು ಸದ್ಯದಲ್ಲಿಯೇ ವಿವಾಹವಾಗುವ ಸೂಚನೆ ಎನ್ನಲಾಗಿತ್ತು.

ಮದುವೆ ಕುರಿತು ತಮನ್ನಾ ಮಾತು

ಇಂಡಿಯಾ ಟುಡೇ ಜತೆಗಿನ ಸಂದರ್ಶನದಲ್ಲೂ ತಮನ್ನಾ ಭಾಟಿಯಾ ಅವರು ಮದುವೆ ಕುರಿತು ಮಾತನಾಡಿದ್ದರು. "ನಮಗೆ ಯಾವಾಗ ಮದುವೆಯಾಗಬೇಕೆಂದು ಅನಿಸುತ್ತದೆಯೋ ಆಗ ಮದುವೆಯಾಗಬೇಕು. ಮದುವೆ ಎನ್ನುವುದು ದೊಡ್ಡ ಜವಾಬ್ದಾರಿ. ಇದು ಪಾರ್ಟಿ ಮಾಡಿದಂತೆ ಅಲ್ಲ. ಇದಕ್ಕೆ ಸಾಕಷ್ಟು ಕೆಲಸ ಬೇಕು. ಮದುವೆ ಮಕ್ಕಳು ಇತ್ಯಾದಿ ಜವಾಬ್ದಾರಿ ತೆಗೆದುಕೊಳ್ಳಲು ರೆಡಿಯಾಗಬೇಕಾಗುತ್ತದೆ. ಎಲ್ಲರೂ ಮದುವೆಯಾಗುತ್ತಾರೆ, ಅದಕ್ಕೆ ನಾನೂ ಮದುವೆಯಾಗಬೇಕು ಎನ್ನುವ ರೀತಿ ಇದು ಇರಬಾರದು" ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ