1000 ಕೋಟಿ ಸನಿಹದಲ್ಲಿ ಜವಾನ್; ರಿಲಾಕ್ಸ್ ಮೂಡ್ನಲ್ಲಿ ಅಟ್ಲಿ, ಮಗನೊಂದಿಗೆ ಕಾಡಿನಲ್ಲಿ ಸುತ್ತಾಟ
ಇಷ್ಟು ದಿನಗಳ ಕಾಲ ಜವಾನ್ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್, ಸಕ್ಸಸ್ ಮೀಟ್ನಲ್ಲಿ ಬ್ಯುಸಿ ಆಗಿದ್ದ ಅಟ್ಲಿ, ಈಗ ಫ್ಯಾಮಿಲಿಯೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ 4 ತಿಂಗಳ ಕಾಲ ಅಟ್ಲಿ ಯಾವ ಹೊಸ ಸಿನಿಮಾವನ್ನೂ ಒಪ್ಪಿಕೊಳ್ಳುವುದಿಲ್ಲವಂತೆ.
ಕಾಲಿವುಡ್ನಲ್ಲಿ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ತಮಿಳು ನಿರ್ದೇಶಕ ಅಟ್ಲಿ ಈಗ ಬಾಲಿವುಡ್ನಲ್ಲಿ ಕೂಡಾ ಬೇಡಿಕೆಯ ನಿರ್ದೇಶಕನಾಗಿದ್ದಾರೆ. ಶಾರುಖ್ ಖಾನ್ಗಾಗಿ 8 ತಿಂಗಳು ಕುಳಿತು ಸ್ಕ್ರಿಪ್ಟ್ ಬರೆದು ಜವಾನ್ ಸಿನಿಮಾ ನಿರ್ದೇಶನ ಮಾಡಿದ್ದ ಅಟ್ಲಿ ಬಾಲಿವುಡ್ ಮೊದಲ ಹೆಜ್ಜೆಯಲ್ಲೇ ಗೆದ್ದಿದ್ದಾರೆ.
ಸೆಪ್ಟೆಂಬರ್ 7 ರಂದು ತೆರೆ ಕಂಡಿದ್ದ ಸಿನಿಮಾ
ಸೆಪ್ಟೆಂಬರ್ 7ರಂದು ತೆರೆ ಕಂಡ ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾ ಇದುವರೆಗೂ ವರ್ಲ್ಡ್ ವೈಡ್ 945 ಕೋಟಿ ರೂಪಾಯಿ ಲಾಭ ಮಾಡಿದೆ. 300 ಕೋಟಿ ರೂಪಾಯಿ ಖರ್ಚು ಮಾಡಿ ತೆಗೆಯಲಾದ ಸಿನಿಮಾ ಅದಕ್ಕಿಂತ ಮೂರರಷ್ಟು ಲಾಭ ಮಾಡಿದೆ. ಶೀಘ್ರದಲ್ಲೇ ಸಿನಿಮಾ 1000 ಕೋಟಿ ಸಂಗ್ರಹಿಸಲಿದೆ. ಜವಾನ್ ಚಿತ್ರದಲ್ಲಿ ಅಟ್ಲಿ ಮಾತ್ರವಲ್ಲದೆ ನಯನತಾರಾ, ವಿಜಯ್ ಸೇತುಪತಿಯಂಥ ದಕ್ಷಿಣ ಕಲಾವಿದರು ಕೂಡಾ ಕಮಾಲ್ ಮಾಡಿದ್ದರು. ಈ ಖುಷಿಯಲ್ಲಿ ಅಟ್ಲಿ ತಮ್ಮ ಸಿನಿಮಾವನ್ನು ಮುಂದಿನ ಆಸ್ಕರ್ ಕಣಕ್ಕೆ ಇಳಿಸಲು ಪ್ಲಾನ್ ಮಾಡಿದ್ದು ಈ ಕುರಿತಾಗಿ ಶಾರುಖ್ ಖಾನ್ ಜೊತೆ ಕೂಡಾ ಮಾತನಾಡಿದ್ದಾರೆ ಎನ್ನಲಾಗಿದೆ.
ಇಷ್ಟು ದಿನಗಳ ಕಾಲ ಜವಾನ್ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್, ಸಕ್ಸಸ್ ಮೀಟ್ನಲ್ಲಿ ಬ್ಯುಸಿ ಆಗಿದ್ದ ಅಟ್ಲಿ, ಈಗ ಫ್ಯಾಮಿಲಿಯೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ 4 ತಿಂಗಳ ಕಾಲ ಅಟ್ಲಿ ಯಾವ ಹೊಸ ಸಿನಿಮಾವನ್ನೂ ಒಪ್ಪಿಕೊಳ್ಳುವುದಿಲ್ಲವಂತೆ. ಸುಮಾರು 2-3 ವರ್ಷಗಳ ಕಾಲ ಅಟ್ಲಿ 'ಜವಾನ್' ಚಿತ್ರಕ್ಕೆ ಸಂಪೂರ್ಣ ತೊಡಗಿಸಿಕೊಂಡಿದ್ದರಿಂದ ಮುಂದಿನ 4 ತಿಂಗಳ ಕಾಲ ಕುಟುಂಬಸ್ಥರು , ಸ್ನೇಹಿತರೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರಂತೆ.
ಮಗ, ಪತ್ನಿಯೊಂದಿಗೆ ಕಾಡಿನಲ್ಲಿ ಸುತ್ತಾಟ
ನಿರ್ದೇಶಕ ಅಟ್ಲಿ ತಮ್ಮ 9 ತಿಂಗಳ ಮಗ ಮೀರ್ನನ್ನು ಎತ್ತುಕೊಂಡಿದ್ದು ಮಗುವಿಗೆ ಆನೆಯನ್ನು ತೋರಿಸುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ''ನನ್ನ ಹಾರ್ಟ್'' ಎಂದು ಅಟ್ಲಿ ಲವ್ ಎಮೋಜಿಯೊಂದಿಗೆ ಕ್ಯಾಪ್ಷನ್ ನೀಡಿದ್ದಾರೆ. ಶುಕ್ರವಾರ ಹಂಚಿಕೊಂಡಿರುವ ಫೋಟೋಗೆ ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಬಾಲಿವುಡ್ ನಂತರ ಅಟ್ಲಿ ಈಗ ತೆಲುಗಿನಲ್ಲಿ ಕೂಡಾ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಅಟ್ಲಿ ಅಲ್ಲು ಅರ್ಜುನ್ ಜೊತೆ ಮಾತನಾಡಿದ್ದು ಸ್ಟೈಲಿಷ್ ಸ್ಟಾರ್ ಕೂಡಾ ಅಟ್ಲಿ ಜೊತೆ ಸಿನಿಮಾ ಮಾಡಲು ಒಪ್ಪಿದ್ಧಾರಂತೆ. ಎಲ್ಲಾ ಓಕೆ ಆದರೆ ಮುಂದಿನ ವರ್ಷ ಅಟ್ಲಿ- ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಬರುವ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.