ಕನ್ನಡ ಸುದ್ದಿ  /  ಮನರಂಜನೆ  /  Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

Tejasswi Prakash: ಹಿಂದಿ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ ಹೊಸ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಾಗಿಣಿ 7, ಸ್ವರಗಿಣಿ, ಖತ್ರೋನ್ ಕೆ ಕಿಲಾಡಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ತೇಜಸ್ವಿಯ ಡ್ರೆಸ್‌ಗಿಂತ ಉರ್ಫಿ ಜಾವೆದ್‌ ಉಡುಗೆ ಚೆನ್ನಾಗಿರುತ್ವೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌
ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಬೆಂಗಳೂರು: ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ ಧರಿಸಿದ ಉಡುಗೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ನಾಗಿಣಿ 7, ಸ್ವರಗಿಣಿ, ಖತ್ರೋನ್ ಕೆ ಕಿಲಾಡಿ ಮುಂತಾದ ಟಿವಿ ಶೋಗಳಲ್ಲಿ ನಟಿಸಿರುವ ತೇಜಸ್ವಿ ಪ್ರಕಾಶ್‌ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಇದ್ದಾರೆ. ಏನಮ್ಮ ತೇಜಸ್ವಿ, ಏನಾಗಿದೆ ನಿನಗೆ ಎಂದು ಹೊಸ ಉಡುಗೆ ತೊಟ್ಟ ತೇಜಸ್ವಿ ಪ್ರಕಾಶ್‌ರನ್ನು ನೆಟ್ಟಿಗರು ಟೀಕಿಸಿದ್ದಾರೆ. ಇದಕ್ಕಿಂತ ಉರ್ಫಿ ಜಾವೆದ್‌ ಧರಿಸುವ ಬಟ್ಟೆಗಳು ಚೆನ್ನಾಗಿರುತ್ತವೆ ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತೇಜಸ್ವಿ ಪ್ರಕಾಶ್‌ ಹೊಸ ಉಡುಗೆ

ತೇಜಸ್ವಿ ಪ್ರಕಾಶ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಿಳಿ ಶರ್ಟ್ ರೀತಿಯ ಟಾಪ್ ಮತ್ತು ಬ್ರೈಟ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಇದರ ವಿಡಿಯೋ ವೈರಲ್‌ಭಯಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿದೆ. ತೇಜಸ್ವಿ ಅವರು ಧರಿಸಿರುವ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ, ಆದರೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಉಡುಗೆಯನ್ನು ಇಷ್ಟಪಡಲಿಲ್ಲ. ಜನರು ಕಾಮೆಂಟ್ ಬಾಕ್ಸ್‌ನಲ್ಲಿ ನಟಿಯನ್ನು ಗೇಲಿ ಮಾಡಿದ್ದಾರೆ.

ನೆಟ್ಟಿಗರ ಕಾಮೆಂಟ್‌ ಹೀಗಿತ್ತು

ಈ ವಿಡಿಯೋದಲ್ಲಿ ಕಂಡ ತೇಜಸ್ವಿ ಪ್ರಕಾಶ್‌ರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡಲಾಗಿದೆ. "ತೇಜಸ್ವಿ ಪ್ರಕಾಶ್‌ರ ಡ್ರೆಸ್ಸಿಂಗ್‌ ಸೆನ್ಸ್‌ಗೆ ಏನಾಯಿತು ಎಂದು ಒಬ್ಬರು ಕೇಳಿದ್ದಾರೆ. "ಫ್ಯಾಷನ್‌ ಎಂಬುದೇ ಈಗ ಚಿತ್ರವಿಚಿತ್ರವಾಗಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ. "ಇದು ಯಾವುದಾದರೂ ಶೈಲಿಯಾ? ಇದಕ್ಕಿಂತ ಉರ್ಫಿ ಜಾವೇದ್‌ ಧರಿಸುವ ಉಡುಗೆ ಚೆನ್ನಾಗಿರುತ್ತದೆ" ಎಂದು ಇನ್ನೊಬ್ಬರು ಹೇಳಿದ್ದಾರೆ. ಕೆಲವೇ ಕೆಲವು ಜನರು ಮಾತ್ರ ಪಾಸಿಟಿವ್‌ ಕಾಮೆಂಟ್‌ ಹಾಕಿದ್ದಾರೆ. "ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 15 ರಲ್ಲಿ ತೇಜಸ್ವಿ ಪ್ರಕಾಶ್ ಭಾಗವಹಿಸಿದ್ದರು. ಆ ಸಮಯದಲ್ಲಿ ಬಿಗ್‌ಬಾಸ್‌ನಲ್ಲಿ ಗೆಲುವು ಪಡೆದಿದ್ದರು. ಈಗ ಇವರು ನಟ ಕರಣ್‌ ಕುಂದ್ರಾರನ್ನು ಪ್ರೀತಿಸುತ್ತಿದ್ದಾರೆ. ತೇಜಸ್ವಿ ಪ್ರಕಾಶ್ ಆಗಾಗ್ಗೆ ಗೆಳೆಯ ಕರಣ್ ಕುಂದ್ರಾ ಜೊತೆ ಕಾಣಿಸಿಕೊಳ್ಳುತ್ತಾರೆ. ಬಿಗ್ ಬಾಸ್‌ನಿಂದ ಹೊರಬಂದ ನಂತರ, ತೇಜಸ್ವಿ ಕರಣ್ ಕುಂದ್ರಾ ಅವರ 'ಲಾಕಪ್' ಮತ್ತು 'ಟೆಂಪ್ಟೇಶನ್ ಐಲ್ಯಾಂಡ್' ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಯಾರಿದು ತೇಜಸ್ವಿ ಪ್ರಕಾಶ್‌?

ತೇಜಸ್ವಿ ಪ್ರಕಾಶ್‌ ವಾಯಂಗಕರ್‌ ಅವರು ಹಿಂದಿ ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಮರಾಠಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ನಾಗಿಣಿ 6, ನಾಗಿಣಿ 7ನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಬಿಗ್‌ಬಾಸ್‌ 15ನಲ್ಲಿ ಭಾಗವಹಿಸಿ ಗೆಲುವಿನ ಕಿರೀಟ ಧರಿಸಿದ್ದರು. ಮನ್‌ ಕಸ್ತೂರಿ ರೇ ಎಂಬ ಮರಾಠಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ನಟನೆಗೆ "ಅತ್ಯುತ್ತಮ ನಟಿ" ಫಿಲ್ಮ್‌ಫೇರ್‌ ಮರಾಠಿ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡಿದ್ದರು.

IPL_Entry_Point