Uorfi Javed: ಅರೆಬರೆ ಬಟ್ಟೆ ತೊಡುವ ಉರ್ಫಿಯಿಂದ ಭಾರತದ ಪ್ರತಿಷ್ಠೆ ಹಾಳು ಎಂದ ವ್ಯಕ್ತಿ; ನಿಮ್ಮಪ್ಪಂದೇನಾದ್ರು ಗಂಟು ಹೋಯ್ತಾ ಎಂದ ನಟಿ VIDEO
ಕನ್ನಡ ಸುದ್ದಿ  /  ಮನರಂಜನೆ  /  Uorfi Javed: ಅರೆಬರೆ ಬಟ್ಟೆ ತೊಡುವ ಉರ್ಫಿಯಿಂದ ಭಾರತದ ಪ್ರತಿಷ್ಠೆ ಹಾಳು ಎಂದ ವ್ಯಕ್ತಿ; ನಿಮ್ಮಪ್ಪಂದೇನಾದ್ರು ಗಂಟು ಹೋಯ್ತಾ ಎಂದ ನಟಿ Video

Uorfi Javed: ಅರೆಬರೆ ಬಟ್ಟೆ ತೊಡುವ ಉರ್ಫಿಯಿಂದ ಭಾರತದ ಪ್ರತಿಷ್ಠೆ ಹಾಳು ಎಂದ ವ್ಯಕ್ತಿ; ನಿಮ್ಮಪ್ಪಂದೇನಾದ್ರು ಗಂಟು ಹೋಯ್ತಾ ಎಂದ ನಟಿ VIDEO

Uorfi Javed latest news: ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು ಎಂದ ಅಪರಿಚಿತ ವ್ಯಕ್ತಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ಉರ್ಫಿ ಜಾವೇದ್ ಕ್ಲಾಸ್​ ತೆಗೆದುಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಅಪರಿಚಿತ ವ್ಯಕ್ತಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ಉರ್ಫಿ ಜಾವೇದ್ ಕ್ಲಾಸ್
ಅಪರಿಚಿತ ವ್ಯಕ್ತಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ಉರ್ಫಿ ಜಾವೇದ್ ಕ್ಲಾಸ್

ಯಾವಾಗಲೂ ವಿಭಿನ್ನ ಹಾಗೂ ಅರೆಬರೆ ಬಟ್ಟೆ ತೊಟ್ಟು ಫೇಮಸ್​ ಆಗಿರುವ ಕಿರುತರೆ ನಟಿ, ಹಿಂದಿ ಬಿಗ್​ಬಾಸ್​ ಮಾಜಿ ಸ್ಫರ್ಧಿ ಉರ್ಫಿ ಜಾವೇದ್​​ ಮತ್ತೊಮ್ಮೆ ಸಾರ್ವಜನಿಕವಾಗಿ ಕಿಡಿಕಾರಿದ್ದಾರೆ. ಉರ್ಫಿಯನ್ನ ಕೆಣಕುವಂತೆ ಮಾಡಿದ್ದು ಒಬ್ಬ ವ್ಯಕ್ತಿ.

ಸೋಮವಾರ (ಜುಲೈ 24) ಮುಂಬೈ ವಿಮಾನ ನಿಲ್ದಾಣದಲ್ಲಿ ಉರ್ಫಿ ಜಾವೇದ್​ ಕಾಣಿಸಿಕೊಂಡಿದ್ದರು. ಹಸಿರು ಬಣ್ಣದ ಬ್ಯಾಕ್​ಲೆಸ್​ ಗೌನ್​ ಧರಿಸಿದ್ದರು. ಆಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ವೇಳೆ ಎದುರು ಬಂದ ಮಧ್ಯವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು. ಇಂಡಿಯಾ ಕಾ ನಾಮ್ ಖರಾಬ್ ಮತ್ ಕರೋ (ಭಾರತದ ಹೆಸರನ್ನು ಹಾಳು ಮಾಡಬೇಡಿ) ಎಂದು ಹೇಳಿದ್ದಾರೆ.

ಇದರಿಂದ ಕೆಂಡಾಮಂಡಲವಾದ ಉರ್ಫಿ , "ಆಪ್ಕೇ ಬಾಪ್ ಕಾ ಕುಚ್ ಜಾ ರಹಾ ಹೈಂ? ನಹೀ ಜಾ ರಹಾ ಹೈ ನ ಆಪ್ಕೇ ಬಾಪ್ ಕಾ? ಜಾವೋ ಅಪ್ನಾ ಕಾಮ್ ಕರೋ" (ನಿಮ್ಮ ಅಪ್ಪಂದು ಏನಾದ್ರೂ ಗಂಟು ಹೋಗ್ತಾ ಇದ್ಯಾ, ಇಲ್ಲ ಅಲ್ವಾ? ಹೋಗಿ ನಿಮ್​ ಕೆಸಲ ಎಷ್ಟಿದೆ ಅಷ್ಟು ನೋಡಿಕೊಳ್ಳಿ) ಎಂದು ರೇಗಾಡಿದ್ದಾರೆ.

ಉರ್ಫಿ ಜೊತೆಗಿದ್ದ ಆಕೆಯ ಸ್ನೇಹಿತೆ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಉರ್ಫಿಯನ್ನು ಎಂದಿನಂತೆ ಪಾಪಾರಾಜಿಗಳು ಸುತ್ತುವರೆದಿದ್ದು, ಘಟನೆಯ ವಿಡಿಯೋ ವೈರಲ್​ ಆಗಿದೆ.

ಈ ಹಿಂದೆ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದ ಪಾಪರಾಜಿಯೊಬ್ಬರಿಗೆ ಉರ್ಫಿ ಜಾವೇದ್​​ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದರು. ಇತ್ತೀಚೆಗಷ್ಟೇ ಉರ್ಫಿ ವಿಮಾನದೊಳಗೆ ತಮಗಾದ ಕಿರುಕುಳವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.

ಮುಂಬೈನಿಂದ ಗೋವಾಗೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವಾಗ ಕುಡುಕ ಪುರುಷರ ಗುಂಪು ತಮಗೆ ಟೀಸ್​ ಮಾಡಿದ್ದನು ಹೇಳಿಕೊಂಡು ಕಿಡಿಕಾರಿದ್ದರು. ಮಹಿಳೆ ಸಾರ್ವಜನಿಕ ವ್ಯಕ್ತಿ ಹೌದು, ಆದ್ರೆ ಸಾರ್ವಜನಿಕ ಆಸ್ತಿ ಅಲ್ಲ ಎಂದಿದ್ದರು.

ನಿನ್ನೆಯಷ್ಟೆ ಉರ್ಫಿ ಹೊಸ ಮೇಕಪ್‌ ಐಟಮ್‌ ಬಳಸಲು ಶುರು ಮಾಡಿ ಉರ್ಫಿ ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದರ ಬಗ್ಗೆ ಹೇಳಿಕೊಂಡು ಅಭಿಮಾನಿಗಳಿಗೆ ಸಲಹೆ ನೀಡಿದ್ದರು. ಅಂಡರ್ ಐ ಫಿಲ್ಲರ್‌ಗಳನ್ನು ಆರಿಸಿಕೊಳ್ಳುವಾಗ ತುಂಬಾ ಎಚ್ಚರವಾಗಿರಿ. ಇದನ್ನು ಬಳಸಿ ನನ್ನ ಕಣ್ಣುಗಳ ಕೆಳಗೆ ಊದಿಕೊಂಡಿದೆ ಎಂದು ಹೇಳಿದ್ದಾರೆ.

Whats_app_banner