ತಮ್ಮದೇ ರಿವಾಲ್ವರ್‌ನಿಂದ ಹಾರಿದ ಗುಂಡು ಕಾಲಿಗೆ ತಗುಲಿ ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗಾಯ; ಆಸ್ಪತ್ರೆಗೆ ದಾಖಲು-bollywood news veteran actor govinda accidentally shoots himself while cleaning revolver admitted to hospital rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತಮ್ಮದೇ ರಿವಾಲ್ವರ್‌ನಿಂದ ಹಾರಿದ ಗುಂಡು ಕಾಲಿಗೆ ತಗುಲಿ ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗಾಯ; ಆಸ್ಪತ್ರೆಗೆ ದಾಖಲು

ತಮ್ಮದೇ ರಿವಾಲ್ವರ್‌ನಿಂದ ಹಾರಿದ ಗುಂಡು ಕಾಲಿಗೆ ತಗುಲಿ ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗಾಯ; ಆಸ್ಪತ್ರೆಗೆ ದಾಖಲು

ಹಿರಿಯ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಮಂಗಳವಾರ ಬೆಳಗ್ಗೆ ತಮ್ಮ ರಿವಾಲ್ವರ್‌ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ರಿವಾಲ್ವರ್‌ ಜಾರಿ ಕೆಳಗೆ ಬಿದ್ದು ಕಾಲಿಗೆ ಗುಂಡು ತಗುಲಿದೆ. ಕೂಡಲೇ ಕುಟುಂಬದವರು ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಮ್ಮದೇ ರಿವಾಲ್ವರ್‌ನಿಂದ ಹಾರಿದ ಗುಂಡು ಕಾಲಿಗೆ ತಗುಲಿ ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗಾಯ; ಆಸ್ಪತ್ರೆಗೆ ದಾಖಲು
ತಮ್ಮದೇ ರಿವಾಲ್ವರ್‌ನಿಂದ ಹಾರಿದ ಗುಂಡು ಕಾಲಿಗೆ ತಗುಲಿ ಬಾಲಿವುಡ್‌ ನಟ ಗೋವಿಂದ ಕಾಲಿಗೆ ಗಾಯ; ಆಸ್ಪತ್ರೆಗೆ ದಾಖಲು

ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದ್ದು ನಟ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹೊರಬಿದ್ದಿದೆ. ಅಭಿಮಾನಿಗಳು ಒಂದೆಡೆ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತ ಖುಷಿಯಲ್ಲಿದ್ದರೆ ಈಗ ಗೋವಿಂದ ಕಾಲಿಗೆ ಗುಂಡು ತಗುಲಿರುವ ವಿಚಾರ ತಿಳಿದು ಗಾಬರಿ ಆಗಿದ್ದಾರೆ.

ತಮ್ಮದೇ ರಿವಾಲ್ವರ್‌ನಿಂದ ತಗುಲಿದ ಗುಂಡು

ಮುಂಬೈನಲ್ಲಿರುವ ಗೋವಿಂದ ನಿವಾಸದಲ್ಲಿ ಈ ಘಟನೆ ನಡೆದಿದ್ದು ಕೂಡಲೇ ಗೋವಿಂದ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗೋವಿಂದ ಬಹಳ ವರ್ಷಗಳ ಹಿಂದೆಯೇ ಲೈಸನ್ಸ್‌ ಪಡೆದು ರಿವಾಲ್ವರ್‌ ಖರೀದಿಸಿದ್ದರು. ದೂರದ ಸ್ಥಳಗಳಿಗೆ ಪ್ರಯಾಣಿಸುವಾಗ ಅವರು ಸದಾ ತಮ್ಮೊಂದಿಗೆ ರಿಲ್ವಾಲ್ವರ್‌ ಕೊಂಡೊಯ್ಯುತ್ತಾರೆ. ಇಂದು ಗೋವಿಂದ ಕೋಲ್ಕೊತ್ತಾಗೆ ತೆರಳಬೇಕಿದ್ದು. ಆದ್ದರಿಂದ ತಮ್ಮ ರಿವಾಲ್ವರ್‌ ಸ್ವಚ್ಛಗೊಳಿಸುತ್ತಿದ್ದರು. ಈ ಸಮಯದಲ್ಲಿ ರಿವಾಲ್ವರ್‌ ಜಾರಿ ಬಿದ್ದು ಗುಂಡು ಹಾರಿದ್ದು ಗೋವಿಂದ ಕಾಲಿಗೆ ಪೆಟ್ಟಾಗಿದೆ. ಆಸ್ಪತ್ರೆಯಲ್ಲಿ ಗೋವಿಂದ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಕಾಲಿಗೆ ತಗುಲಿದ್ದ ಗುಂಡನ್ನು ಹೊರ ತೆಗೆಯಲಾಗಿದೆ. ಗೋವಿಂದ ಈಗ ಗುಣಮುಖರಾಗಿದ್ದಾರೆ ಎಂದು ಅವರ ಮ್ಯಾನೇಜರ್‌ ಶಶಿ ಸಿನ್ಹಾ ಮಾಹಿತಿ ನೀಡಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಹಿರಿಯ ನಟ ಗೋವಿಂದ

ಸದ್ಯ ಗೋವಿಂದ ಪ್ರಾಣಾಪಾಯದಿಂದ ಪಾರಾಗಿರುವ ಸುದ್ದಿ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿ ಬನ್ನಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಬಾಲಿವುಡ್‌ ಗಣ್ಯರು ಗೋವಿಂದ ಅವರು ಮೊದಲಿನಂತಾಗಲಿ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಹಾರೈಸುತ್ತಿದ್ದಾರೆ. ಆಪ್ತರು ಅವರನ್ನು ಕಾಣಲು ಖುದ್ದು ಆಸ್ಪತ್ರೆಗೆ ತೆರಳುತ್ತಿದ್ದಾರೆ.

ಗೋವಿಂದ 1986ರಲ್ಲಿ ತೆರೆ ಕಂಡ ಲವ್‌ 86 ಚಿತ್ರದ ಮೂಲಕ ಬಾಲಿವುಡ್‌ಗೆ ಬಂದರು. ಗೋವಿಂದ ಪೂರ್ತಿ ಹೆಸರು ಗೋವಿಂದ್‌ ಅರುಣ್‌ ಅಹುಜಾ. ಇದುವರೆಗೂ ಗೋವಿಂದ ಸುಮಾರು 165 ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಹಿಟ್‌ ಚಿತ್ರಗಳನ್ನು ಬಾಲಿವುಡ್‌ ಚಿತ್ರರಂಗಕ್ಕೆ ನೀಡಿದ್ದಾರೆ. ಮಾಧುರಿ ದೀಕ್ಷಿತ್‌, ದಿವ್ಯಾ ಭಾರತಿ, ಕರೀಷ್ಮಾ ಕಪೂರ್‌, ರವೀನಾ ಟಂಟನ್‌, ತಬು, ಮಮತಾ ಕುಲಕರ್ಣಿ ಸೇರಿ ಅನೇಕ ನಟಿಯರೊಂದಿಗೆ ಗೋವಿಂದ ನಟಿಸಿದ್ದಾರೆ. ಸುಮಾರು 5 ವರ್ಷಗಳಿಂದ ಗೋವಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 2019ರಲ್ಲಿ ತೆರೆ ಕಂಡ ರಂಗೀಲಾ ರಾಜ ಸಿನಿಮಾ ನಂತರ ಅವರು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ರಾಜಕೀಯದಲ್ಲೂ ಗೋವಿಂದ ಗುರುತಿಸಿಕೊಂಡಿದ್ದಾರೆ.

mysore-dasara_Entry_Point