Ganapath Review: ಲಾಜಿಕ್‌ ಇಲ್ಲದ ಸಿನಿಮಾ ಮಾಡಿದ್ರಾ ವಿಕಾಸ್‌ ಬಹ್ಲ್‌; ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರ ನೋಡಿ ಸಿನಿಪ್ರಿಯರು ಏನಂದ್ರು
ಕನ್ನಡ ಸುದ್ದಿ  /  ಮನರಂಜನೆ  /  Ganapath Review: ಲಾಜಿಕ್‌ ಇಲ್ಲದ ಸಿನಿಮಾ ಮಾಡಿದ್ರಾ ವಿಕಾಸ್‌ ಬಹ್ಲ್‌; ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರ ನೋಡಿ ಸಿನಿಪ್ರಿಯರು ಏನಂದ್ರು

Ganapath Review: ಲಾಜಿಕ್‌ ಇಲ್ಲದ ಸಿನಿಮಾ ಮಾಡಿದ್ರಾ ವಿಕಾಸ್‌ ಬಹ್ಲ್‌; ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರ ನೋಡಿ ಸಿನಿಪ್ರಿಯರು ಏನಂದ್ರು

Ganapath Review: ವಿಕಾಸ್‌ ಬಹ್ಲ್‌ ಆಕ್ಷನ್‌ ಕಟ್‌ ಹೇಳಿರುವ ಟೈಗರ್‌ ಶ್ರಾಫ್‌ ಅಭಿನಯದ ಗಣಪತ್‌ ಚಿತ್ರಕ್ಕೆ ಪಾಸಿಟಿವ್‌ಗಿಂತ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚು ಕೇಳಿಬಂದಿದೆ.

ಟೈಗರ್‌ ಶ್ರಾಫ್‌ ಅಭಿನಯದ ಗಣಪತ್‌ ಸಿನಿಮಾ ರಿವ್ಯೂ
ಟೈಗರ್‌ ಶ್ರಾಫ್‌ ಅಭಿನಯದ ಗಣಪತ್‌ ಸಿನಿಮಾ ರಿವ್ಯೂ (PC: Pooja Entertainment Facebook)

Ganapath Review: ಟೈಗರ್‌ ಶ್ರಾಫ್‌ ನಟನೆಯ ಬಾಲಿವುಡ್‌ ಬಹುನಿರೀಕ್ಷಿತ ಸಿನಿಮಾ 'ಗಣಪತ್‌' ರಿಲೀಸ್‌ ಆಗಿದೆ. ಟೈಗರ್‌ ಶ್ರಾಫ್‌ ಎಂದರೆ ಆಕ್ಷನ್‌ಗೆ ಫೇಮಸ್‌. ಅವರು ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಆಕ್ಷನ್‌ ಇದ್ಧೇ ಇರುತ್ತದೆ. ಗಣಪತ್‌ನಲ್ಲಿ ಕೂಡಾ ಭರಪೂರ ಆಕ್ಷನ್‌ ಇದೆ. ಸಿನಿಪ್ರಿಯರು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನು ಗಣಪತ್‌ ಕಥೆ?

ಸಿನಿಮಾ ದಳಪತ್‌ ( ಅಮಿತಾಬ್‌ ಬಚ್ಚನ್‌)ನಿಂದ ಆರಂಭವಾಗುತ್ತದೆ. ಶ್ರೀಮಂತರು ಹಾಗೂ ಬಡವರ ನಡುವೆ ದೊಡ್ಡ ಅಂತರ ಇರುವ ವೇಳೆ ಒಂದು ಯುದ್ಧ ನಡೆಯುತ್ತದೆ. ಇದರಲ್ಲಿ ಅನೇಕ ಜನರು ಸಾವನ್ನಪ್ಪುತ್ತಾರೆ. ಯುದ್ಧದ ನಂತರ ಶ್ರೀಮಂತರು ತಮ್ಮದೇ ಸಿಲ್ವರ್‌ ಸಿಟಿಯನ್ನು ಸ್ಥಾಪಿಸಿಕೊಳ್ಳುತ್ತಾರೆ. ಆದರೆ ಅದರಲ್ಲಿ ಬಡವರಿಗೆ ಪ್ರವೇಶವಿಲ್ಲ. ಸಿಲ್ವರ್‌ ಸಿಟಿಯಿಂದ ಬಡವನ್ನು ಹೊರ ಹಾಕಲಾಗುತ್ತದೆ. ಅಲ್ಲಿಂದ ಬಡವರ ನಡುವೆ ಜಗಳ ಆರಂಭವಾಗುತ್ತದೆ. ಸಣ್ಣ ಪುಟ್ಟ ವಿಚಾರಕ್ಕೂ ಕಚ್ಚಾಡಲು ಶುರು ಮಾಡುತ್ತಾರೆ. ಇದೆಲ್ಲವನ್ನೂ ಗಮನಿಸುವ ದಳಪತ್‌, ಒಂದು ಬಾಕ್ಸಿಂಗ್‌ ರಿಂಗ್‌ ರಚಿಸಿ, ನೀವು ಫೈಟ್‌ ಮಾಡುವುದಿದ್ದರೆ ಇಲ್ಲೇ ಮಾಡಬೇಕು ಎಂದು ಸೂಚಿಸುತ್ತಾನೆ.

ಸಿಲ್ವರ್‌ ಸಿಟಿಯಲ್ಲಿ ವಾಸಿಸುವ ದಲಾನಿಗೆ ಈ ವಿಚಾರ ತಿಳಿದು ಆತ ಬಡವರ ಬಾಕ್ಸಿಂಗ್‌ ನೋಡಲು ಬರುತ್ತಾನೆ. ಅವರನ್ನು ಸಿಲ್ವರ್‌ ಸಿಟಿಗೆ ಕರೆದೊಯ್ದು, ಬಾಕ್ಸಿಂಗ್‌ ಬೆಟ್ಟಿಂಗ್‌ ದಂಧೆ ಶುರು ಮಾಡುತ್ತಾನೆ. ಇದರಿಂದ ಬಡವರು ಇರುವುದನ್ನೆಲ್ಲಾ ಕಳೆದುಕೊಂಡು ಇನ್ನೂ ಸಮಸ್ಯೆ ಎದುರಿಸುತ್ತಾರೆ. ಪರಿಸ್ಥಿತಿ ಹೀಗೇ ಮುಂದುವರೆಯುವಾಗ ಗಣಪತ್‌ (ಟೈಗರ್‌ ಶ್ರಾಫ್‌) ಅಲ್ಲಿಗೆ ಬರುತ್ತಾನೆ. ಗಣಪತ್‌, ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುತ್ತಾನಾ? ಅವರ ಬೆಂಬಲವಾಗಿ ಯಾರು ನಿಲ್ಲುತ್ತಾರೆ ಅನ್ನೋದು ಚಿತ್ರದ ಕಥೆ.

ಕಥೆ ಅರ್ಥ ಮಾಡಿಕೊಳ್ಳುವುದು ಕಷ್ಟ

'ಗಣಪತ್‌' ಚಿತ್ರಕ್ಕೆ ಪಾಸಿಟಿವ್‌ಗಿಂತ ನೆಗೆಟಿವ್‌ ಕಾಮೆಂಟ್‌ಗಳು ಎದುರಾಗಿದೆ. ಈ ಸಿನಿಮಾದ ಕಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಥೆಯನ್ನು ಸಿನಿಮಾ ಮಾಡುವುದಕ್ಕಿಂದ ಒಂದು ಕಾಮಿಕ್‌ ಬುಕ್‌ ಮಾಡಿದ್ದರೆ ನಿಜವಾಗಲೂ ಫನ್‌ ಇರುತ್ತಿತ್ತು. ನಿರ್ದೇಶಕ ವಿಕಾಸ್‌ ಬಹ್ಲ್‌ ಸಿನಿಮಾವನ್ನು ಜನರಿಗೆ ಮುಟ್ಟಿಸುವಲ್ಲಿ ಸೋತಿದ್ದಾರೆ. ಕೆಲವೊಂದು ಕಡೆ ಅನಾವಶ್ಯಕ ದೃಶ್ಯಗಳಿವೆ. ಕೆಲವೆಡೆ ಲಾಜಿಕ್‌ ಇಲ್ಲ. ಒಟ್ಟಿನಲ್ಲಿ ಚಿತ್ರಕಥೆ ಬಹಳ ವೀಕ್‌ ಇದೆ. ಇದು ಭಾರತೀಯ ಕಥೆ, ಆದರೆ ಚಿತ್ರದಲ್ಲಿ ಒಂದೇ ಕಾಲೊನಿಯಲ್ಲಿ ಗ್ರೀಕರು, ಚೈನೀಸರು ವಾಸವಾಗಿರುವಂತೆ ತೋರಿಸಲಾಗಿದೆ. ಇದಕ್ಕೆ ಅರ್ಥವೇ ಇಲ್ಲ ಎಂದು ಸಿನಿಪ್ರಿಯರು ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಸಿಟಿವ್‌ ವಿಚಾರಗಳು

ಸಿನಿಮಾ ಬಗ್ಗೆ ನೆಗೆಟಿವ್‌ ಕಾಮೆಂಟ್‌ಗಳು ಎದುರಾದರೂ ಆಕ್ಷನ್‌ ಪ್ರಿಯರಿಗೆ ಇದು ಹೇಳಿ ಮಾಡಿಸಿದಂತ ಸಿನಿಮಾ. ಟೈಗರ್‌ ಶ್ರಾಫ್‌ ಇದ್ದಲ್ಲಿ ಅಲ್ಲಿ ಆಕ್ಷನ್‌ಗೆ ಕೊರತೆ ಇರುವುದಿಲ್ಲ. ಇನ್ನು ಬಿಜಿಎಂ , ಹಾಡುಗಳು ಪರವಾಗಿಲ್ಲ. ಕೃತಿ ಸನೊನ್‌ ಹಾಗೂ ಟೈಗರ್‌ ಶ್ರಾಫ್‌ ಕೆಮಿಸ್ಟ್ರಿ ವರ್ಕೌಟ್‌ ಆಗಿದೆ. ಚಿತ್ರಕಥೆ ಆವರೇಜ್‌ ಇದ್ದರೂ ನಾಯಕ, ನಾಯಕಿಗಿಂತ ಗಣಪತ್‌ ಚಿತ್ರಕ್ಕೆ ಅಮಿತಾಬ್‌ ಬಚ್ಚನ್‌ ಬೆನ್ನುಲುಬು ಎನ್ನಬಹುದು. ವಿಎಫ್‌ಎಕ್ಸ್‌ ಬಹಳ ಚೆನ್ನಾಗಿದೆ ಅನ್ನೋದು ಈ ಚಿತ್ರದ ಪ್ಲಸ್‌ ಪಾಯಿಂಟ್‌.

ಗಣಪತ್‌ ಚಿತ್ರವನ್ನು ಪೂಜಾ ಎಂಟರ್‌ಟೈನ್ಮೆಂಟ್‌ ಹಾಗೂ ಗುಡ್‌ ಕೋ ಪ್ರೊಡಕ್ಷನ್‌ ಬ್ಯಾನರ್‌ ಅಡಿ ವಸು ಭಗ್ನಾನಿ, ವಿಕಾಶ್‌ ಬಹ್ಲ್‌, ದೀಪ್ಶಿಕಾ ದೇಶ್‌ಮುಖ್‌, ಜಾಕಿ ಭಗ್ನಾನಿ ಜೊತೆ ಸೇರಿ ನಿರ್ಮಿಸಿದ್ದು ವಿಕಾಸ್‌ ಬಹ್ಲ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ಪಾರ್ಟ್‌ 2 ರಿಲೀಸ್‌ ಮಾಡಲಿದೆ.

Whats_app_banner