ಕನ್ನಡ ಸುದ್ದಿ  /  ಮನರಂಜನೆ  /  ಮಲ್ಲಿಕಾ ಶೆರಾವತ್‌ ಕೆಟ್ಟ ಚುಂಬನಗಾರ್ತಿ ಅಂದಿದ್ರು ಇಮ್ರಾನ್‌ ಹಶ್ಮಿ; ಜಾಕ್ವೆಲಿನ್ ಫರ್ನಾಂಡಿಸ್‌ರದ್ದು ಬೆಸ್ಟ್‌ ಕಿಸ್‌ ಅಂತೆ

ಮಲ್ಲಿಕಾ ಶೆರಾವತ್‌ ಕೆಟ್ಟ ಚುಂಬನಗಾರ್ತಿ ಅಂದಿದ್ರು ಇಮ್ರಾನ್‌ ಹಶ್ಮಿ; ಜಾಕ್ವೆಲಿನ್ ಫರ್ನಾಂಡಿಸ್‌ರದ್ದು ಬೆಸ್ಟ್‌ ಕಿಸ್‌ ಅಂತೆ

ಇಮ್ರಾನ್‌ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್‌ ಅವರು 20 ವರ್ಷಗಳ ಮುನಿಸಿನ ಬಳಿಕ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾದರು. ಮಲ್ಲಿಕಾ ಶೆರಾವತ್‌ ಜತೆಗಿನ ಚುಂಬನವು ಅತ್ಯಂತ ಕೆಟ್ಟ ಕಿಸ್‌ ಎಂದು ಈ ಹಿಂದೆ ಇಮ್ರಾನ್‌ ಹಶ್ಮಿ ಹೇಳಿದ್ದರು.

ಮಲ್ಲಿಕಾ ಶೆರಾವತ್‌ ಮತ್ತು ಇಮ್ರಾನ್‌ ಹಶ್ಮಿ
ಮಲ್ಲಿಕಾ ಶೆರಾವತ್‌ ಮತ್ತು ಇಮ್ರಾನ್‌ ಹಶ್ಮಿ

ಮರ್ಡರ್‌ ಎಂಬ ಸಿನಿಮಾದ ಬಗ್ಗೆ ಬಹುತೇಕರಿಗೆ ತಿಳಿದಿರಬಹುದು. ಆ ಸಿನಿಮಾದಲ್ಲಿ ಇಮ್ರಾನ್‌ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್‌ ಚುಂಬನ ಪ್ರೇಕ್ಷಕರ ಹೃದಯದಲ್ಲಿ ಸಂಚಲನ ಉಂಟುಮಾಡಿತ್ತು. ಮರ್ಡನ್‌ ಸಿನಿಮಾ 2004ರಲ್ಲಿ ತೆರೆ ಕಂಡಿತ್ತು. ಇದಾಗಿ 20 ವರ್ಷಗಳ ಬಳಿಕ ಇಮ್ರಾನ್‌ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್‌ ಅವರು ಮತ್ತೊಮ್ಮೆ ನಿನ್ನೆ ರಾತ್ರಿ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾದರು. ಮರ್ಡರ್‌ ಸಿನಿಮಾದ ಪ್ರೊಡ್ಯುಸರ್‌ ಆನಂದ್‌ ಪಂಡಿತ್‌ ಮಗಳ ಮದುವೆಯ ರಿಸೆಪ್ಷನ್‌ ಮುಂಬೈನಲ್ಲಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಈ ಮರ್ಡರ್‌ ಕಿಸ್‌ ಜೋಡಿ ಕೂಡ ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಇಮ್ರಾನ್‌ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್‌ ಹಳೆಯ ದ್ವೇಷ ಮರೆತು ಅಪ್ಪಿಕೊಂಡು ಪೋಸ್‌ ನೀಡಿದ್ದರು. ಹಿಂದೊಮ್ಮೆ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಮಲ್ಲಿಕಾ ಬಗ್ಗೆ ಇಮ್ರಾನ್‌ ಹಶ್ಮಿ ತಿರಸ್ಕಾರದ ಮಾತುಗಳನ್ನಾಡಿದ್ದರು ಎನ್ನುವುದು ನಿಮಗೆ ಗೊತ್ತೆ? ನಿನ್ನೆ ಇಬ್ಬರನ್ನು ಒಟ್ಟಿಗೆ ನೋಡಿದ ಬಳಿಕ ಈ ಘಟನೆ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಇಮ್ರಾನ್‌ ಹಶ್ಮಿ ಏನು ಹೇಳಿದ್ದರು?

ಕಾಫಿ ವಿದ್‌ ಕರಣ್‌ 2014ರ ಕಾರ್ಯಕ್ರಮ ನೋಡಿದ್ದವರಿಗೆ ಈ ಘಟನೆ ನೆನಪಿರಬಹುದು. ಕರಣ್‌ ಜೋಹರ್‌ ಅವರು ಕೇಳಿದ ಕಿಸ್‌ ಪ್ರಶ್ನೆಗೆ ಹಶ್ಮಿ ಉತ್ತರಿಸಿದ್ದರು. ಪರದೆ ಮೇಲೆ ಇಮ್ರಾನ್‌ ಹಶ್ಮಿಯ ಅತ್ಯಂತ ಜನಪ್ರಿಯ ಕಿಸ್‌ ಇದಾಗಿದೆ. ಆದರೆ, ಇಮ್ರಾನ್‌ ಹಶ್ಮಿಯ ಪ್ರಕಾರ ಇದು ಅತ್ಯಂತ ಕೆಟ್ಟ ಕಿಸ್‌. "ಮಲ್ಲಿಕಾ ಶೆರಾವತ್‌ಗೆ ನಾನು ನೀಡಿರುವ ಕಿಸ್‌ ಪರದೆ ಮೇಲೆ ನಾನು ನೀಡಿರುವ ಅತ್ಯಂತ ವರ್ಸ್ಟ್‌ ಕಿಸ್‌" ಎಂದು ಅವರು ಹೇಳಿದ್ದರು. ಹಾಗಾದರೆ ನಿಮ್ಮ ಬೆಸ್ಟ್‌ ಕಿಸ್‌ ಯಾವುದು? ಎಂದು ಕರಣ್‌ ಕೇಳಿದ್ದರು. ಅದಕ್ಕೆ "ಮರ್ಡರ್‌ 2ನಲ್ಲಿ (2011) ಜಾಕ್ವೆಲಿನ್‌ ಫೆರ್ನಾಂಡಿಸ್‌ ಜತೆ ಸಾಕಷ್ಟು ಕಿಸ್‌ ಸೀನ್‌ ಇತ್ತು. ಅವು ಅತ್ಯುತ್ತಮವಾಗಿದ್ದವು" ಎಂದು ಅವರು ಹೇಳಿದ್ದರು. "ಆದರೆ, ಕೆಟ್ಟ ಕಿಸ್‌ ಅದು ಮಲ್ಲಿಕಾ ಶೆರಾವತ್‌ ಜತೆಗಿನದ್ದು" ಎಂದು ಹೇಳಿದ್ದರು.

20 ವರ್ಷದ ಹಿಂದಿನ ಸಿನಿಮಾ

ಇಮ್ರಾನ್‌ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್‌ ನಟನೆಯ ಮರ್ಡರ್‌ ಸಿನಿಮಾವು 20 ವರ್ಷದ ಹಿಂದೆ ಬಿಡುಗಡೆಯಾಗಿ ಹಿಟ್‌ ಆಗಿತ್ತು. ಹೀಗಿದ್ದರೂ ಇವರಿಬ್ಬರು ಜತೆಯಾಗಿರಲಿಲ್ಲ. 2021ರಲ್ಲಿ ಸಂದರ್ಶನವೊಂದರಲ್ಲಿ ಮಲ್ಲಿಕಾ ಅವರು "ನಾನು ಸಿನಿಮಾ ಸೆಟ್‌ನಲ್ಲೇ ಇಮ್ರಾನ್‌ ಜತೆ ಫೈಟಿಂಗ್‌ ಮಾಡುತ್ತಿದ್ದೆ. ಆತನ ಜತೆ ಮಾತನಾಡುತ್ತ ಇರಲಿಲ್ಲ" ಎಂದು ಹೇಳಿದ್ದರು. ಲವ್‌ ಲಾಫ್‌ ಲೈವ್‌ ಶೋನಲ್ಲಿ ಮಂದಿರಾ ಬೇಡಿ ಕೇಳಿದ ಪ್ರಶ್ನೆಗೆ ಮಲ್ಲಿಕಾ ಶೆರಾವತ್‌ ಉತ್ತರಿಸಿದ್ದರು. "ಮರ್ಡರ್‌ ಸಿನಿಮಾದಲ್ಲಿ ತಮಾಷೆಯ ಫೈಟ್‌ ಇರುತ್ತಿತ್ತು. ಆಗ ನಾವು ಪರಸ್ಪರ ಕೋಪ ಮಾಡಿದ್ದೇವು. ಒಬ್ಬರೊಬ್ಬರು ಮಾತನಾಡುತ್ತ ಇರಲಿಲ್ಲ. ಈಗ ನೆನಪಿಸಿಕೊಂಡರೆ ಅದು ಮಕ್ಕಳಾಟದಂತೆ ಕಾಣಿಸುತ್ತದೆ. ಸಿನಿಮಾದ ಶೂಟಿಂಗ್‌ ಆದ ಬಳಿಕ ಪ್ರಮೋಷನ್‌ ಸಮಯದಲ್ಲಿ ಅಥವಾ ಬೇರೆ ಯಾವುದೋ ಸಮಯದಲ್ಲಿ ನಮ್ಮಿಬ್ಬರ ನಡುವೆ ತಪ್ಪು ಅಭಿಪ್ರಾಯ ಮೂಡಿತು. ಆಮೇಲೆ ನಾವಿಬ್ಬರು ಮಾತುಬಿಟ್ಟೆವು" ಎಂದು ಮಲ್ಲಿಕಾ ಶೆರಾವತ್‌ ನೆನಪಿಸಿಕೊಂಡಿದ್ದಾರೆ. ಅದಾದ ಬಳಿಕ ಇವರಿಬ್ಬರು ಪರಸ್ಪರ ಸಂಪರ್ಕದಲ್ಲಿ ಇರಲಿಲ್ಲ. 20 ವರ್ಷಗಳ ಬಳಿಕ ನಿನ್ನೆ ಮರ್ಡರ್‌ ಸಿನಿಮಾದ ಪ್ರೊಡ್ಯುಸರ್‌ ಮಗಳ ಮದುವೆಯಲ್ಲಿ ಮತ್ತೆ ಇವರಿಬ್ಬರು ಒಂದಾಗಿದ್ದಾರೆ.

IPL_Entry_Point