ಕನ್ನಡ ಸುದ್ದಿ  /  ಮನರಂಜನೆ  /  ಶಾರೂಖ್‌ ಖಾನ್‌ ಧರ್ಮಕ್ಕೆ ಗೌರವ ನೀಡುವೆ, ಇದರರ್ಥ ನಾನು ಮತಾಂತರಗೊಂಡಿದ್ದೇನೆ ಎಂದಲ್ಲ; ಗೌರಿ ಖಾನ್‌ ಖಡಕ್‌ ಮಾತು

ಶಾರೂಖ್‌ ಖಾನ್‌ ಧರ್ಮಕ್ಕೆ ಗೌರವ ನೀಡುವೆ, ಇದರರ್ಥ ನಾನು ಮತಾಂತರಗೊಂಡಿದ್ದೇನೆ ಎಂದಲ್ಲ; ಗೌರಿ ಖಾನ್‌ ಖಡಕ್‌ ಮಾತು

ಬಾಲಿವುಡ್‌ ನಟ ಶಾರೂಖ್‌ ಖಾನ್‌ ಮತ್ತು ಇಂಟೀರಿಯರ್‌ ಡಿಸೈನರ್‌ ಗೌರಿ ಅಕ್ಟೋಬರ್‌ 25, 1991ರಂದು ವಿವಾಹವಾಗಿದ್ದರು. ಇವರಿಗೆ ಆರ್ಯನ್‌ ಖಾನ್‌, ಸುಹಾನ ಖಾನ್‌ ಮತ್ತು ಅಬ್ರಾಹಂ ಖಾನ್‌ ಎಂಬ ಮೂವರು ಮಕ್ಕಳಿದ್ದಾರೆ.

ಶಾರೂಖ್‌ ಖಾನ್‌ ಮತ್ತು ಗೌರಿ ಖಾನ್‌
ಶಾರೂಖ್‌ ಖಾನ್‌ ಮತ್ತು ಗೌರಿ ಖಾನ್‌

ಬಾಲಿವುಡ್‌ ನಟ ಶಾರೂಖ್‌ ಖಾನ್‌ ಮತ್ತು ಆಕೆಯ ಪತ್ನಿ ಇಂಟೀರಿಯರ್‌ ಡಿಸೈನರ್‌ ಗೌರಿ ಖಾನ್‌ ಅವರು ವಿವಾಹವಾಗಿ ಮೂರು ವರ್ಷಗಳಾಗಿವೆ. ಆರಂಭದಲ್ಲಿ ಗೌರಿ ಹೆತ್ತವರು ಶಾರೂಖ್‌ ಖಾನ್‌ ಮುಸ್ಲಿಂ ಎಂಬ ಕಾರಣಕ್ಕೆ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ರ? ಕಾಫಿ ವಿತ್‌ ಕರಣ್‌ ಮೊದಲ ಸೀಸನ್‌ನಲ್ಲಿ ಗೌರಿ ಖಾನ್‌ "ವಿವಾಹದ ಬಳಿಕ ತಮ್ಮ ಧಾರ್ಮಿಕತೆ, ನಂಬಿಕೆ ಇತ್ಯಾದಿ ವಿಚಾರಗಳ ಕುರಿತು" ತಮ್ಮ ಅಭಿಪ್ರಾಯ, ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಕಾಫಿ ವಿದ್‌ ಕರಣ್‌ನಲ್ಲಿ "ನಾನು ಶಾರೂಖ್‌ ಖಾನ್‌ ಧರ್ಮಕ್ಕೆ ಗೌರವ ನೀಡುವೆ. ಇದೇ ಸಮಯದಲ್ಲಿ ಶಾರೂಖ್‌ ಖಾನ್‌ ಕೂಡ ನನ್ನ ಧರ್ಮಕ್ಕೆ ಗೌರವ ನೀಡುತ್ತಾನೆ" ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗೌರಿ ಹೇಳಿದ್ದೇನು?

ಕಾಫಿ ವಿತ್‌ ಕರಣ್‌ನಲ್ಲಿ ಗೌರಿ ಮಾತನಾಡಿರುವ ವಿಡಿಯೋ ಮತ್ತೆ ವೈರಲ್‌ ಆಗಿದೆ. ಈ ಎಪಿಸೋಡ್‌ನಲ್ಲಿ ಗೌರಿ ಖಾನ್‌ ಜತೆಗೆ ಹೃತೀಕ್‌ ರೋಷನ್‌ನ ಆಗಿನ ಪತ್ನಿ ಸುಸ್ಸಾನೆ ಖಾನ್‌ ಕೂಡ ಭಾಗವಹಿಸಿದ್ದರು. ಆ ಎಪಿಸೋಡ್‌ನಲ್ಲಿ ಗೌರಿ ಖಾನ್‌ ಹೀಗೆ ಹೇಳುತ್ತಾರೆ. "ಆರ್ಯನ್‌ (ಖಾನ್‌) ಶಾರೂಖ್‌ ಖಾನ್‌ರ ಧರ್ಮವನ್ನು ಫಾಲೋ ಮಾಡುವಂತೆ ಇದೆ. ನಾನು ಮುಸ್ಲಿಂ ಎಂದು ಅವನು ಆಗಾಗ ಹೇಳುತ್ತಾ ಇರುತ್ತಾನೆ. ಹೀಗಾಗಿ, ಈತ ಮುಸ್ಲಿಂ ಧರ್ಮವನ್ನು ಫಾಲೋ ಮಾಡಬಹುದು ಎಂದುಕೊಂಡಿದ್ದೇನೆ. ಇಂತಹ ಸಂದರ್ಭಗಳು ಸಾಮಾನ್ಯ" ಎಂದು ಅವರು ಹೇಳಿದ್ದಾರೆ.

ಶಾರೂಖ್‌ ಖಾನ್‌ ನನ್ನ ಧರ್ಮಕ್ಕೆ ಗೌರವ ನೀಡುತ್ತಾರೆ

"ಇದರಲ್ಲಿ ಒಂದು ಸಮತೋಲವಿದೆ. ನಾನು ಶಾರೂಖ್‌ ಖಾನ್‌ ಧರ್ಮಕ್ಕೆ ಗೌರವ ನೀಡುತ್ತೇನೆ. ಇದರ ಅರ್ಥ ನಾನು ಮುಸ್ಲಿಂ ಧರ್ಮಕ್ಕೆ ಕನ್ವರ್ಟ್‌ ಆಗಿದ್ದೇನೆ ಎಂದಲ್ಲ. ನಾನು ಮುಸ್ಲಿಂ ಆಗಿದ್ದೇನೆ ಎಂದಲ್ಲ. ನನಗೆ ಇವುಗಳಲ್ಲಿ ನಂಬಿಕೆ ಇಲ್ಲ. ನನ್ನ ಪ್ರಕಾರ ಪ್ರತಿಯೊಬ್ಬರೂ ಇಂಡಿವ್ಯೂಜಲ್‌ ವ್ಯಕ್ತಿಗಳಾಗಿದ್ದಾರೆ. ಎಲ್ಲರೂ ಅವರ ಧರ್ಮವನ್ನು ಅನುಸರಿಸುತ್ತಾರೆ. ಇಂತಹ ಸಮಯದಲ್ಲಿ ಯಾವುದೇ ಅಗೌರವ ಇರುವುದಿಲ್ಲ. ಶಾರೂಖ್‌ ಖಾನ್‌ ಕೂಡ ನನ್ನ ಧರ್ಮಕ್ಕೆ ಅಗೌರವ ನೀಡುವುದಿಲ್ಲ" ಎಂದು ಹೇಳಿದ್ದರು.

ಕೆಲವು ವರ್ಷಗಳ ಹಿಂದೆ ಶಾರೂಖ್‌ ಖಾನ್‌ ಡ್ಯಾನ್ಸ್‌ ಪ್ಲಸ್‌ 5 ಸೆಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೀಗೆ ಹೇಳಿದ್ದರು. "ನಾವು ಯಾವತ್ತಿಗೂ ಹಿಂದು-ಮುಸ್ಲಿಂ ವಿಷಯವನ್ನು ಚರ್ಚೆ ಮಾಡಿಲ್ಲ. ನನ್ನ ಪತ್ನಿ ಹಿಂದು. ನಾನು ಮುಸ್ಲಿಂ. ನಮ್ಮ ಮಕ್ಕಳು ಹಿಂದೂಸ್ತಾನದ ಮಕ್ಕಳು. ನನ್ನ ಮಗಳು ಸಣ್ಣವಳಿದ್ದಾಗ ಆಕೆಯ ಸ್ಕೂಲ್‌ನಲ್ಲಿ ಧರ್ಮದ ಕಾಲಂ ಭರ್ತಿ ಮಾಡಬೇಕಿತ್ತು. ನನ್ನ ಮಗಳು ನನ್ನ ಹತ್ರ ಬಂದು ಕೇಳಿದ್ದಳು. "ನಮ್ಮ ಧರ್ಮ ಯಾವುದು" ಎಂಬ ಪ್ರಶ್ನೆ ಕೇಳಿದ್ದಳು. ನಾನು ಸಿಂಪಲ್‌ ಆಗಿ ಆ ಕಾಲಂಲ್ಲಿ ನಾನು ಭಾರತೀಯ ಎಂದು ಬರೆದೆ. ನಮಗೆ ಯಾವುದೇ ಧರ್ಮವಿಲ್ಲ ಎಂದು ಶಾರೂಖ್‌ ಖಾನ್‌ ಹೇಳಿದ್ದರು.

ಶಾರೂಖ್‌ ಖಾನ್‌ ಮತ್ತು ಗೌರಿ ಖಾನ್‌ ಅಕ್ಟೋಬರ್‌ 25, 1991ರಲ್ಲಿ ವಿವಾಹವಾಗಿದ್ದರು. ಇವರಿಗೆ ಆರ್ಯನ್‌, ಸುಹಾನ ಮತ್ತು ಅಬ್ರಾಹಂ ಎಂಬ ಮೂವರು ಮಕ್ಕಳಿದ್ದಾರೆ. ಈ ಕುಟುಂಬ ಕಳೆದ ಕೆಲವು ದಿನಗಳಿಂದ ಐಪಿಎಲ್‌ನಲ್ಲಿ ಕೆಕೆಆರ್‌ ಗೆಲುವು ಪಡೆದ ಸಂಭ್ರಮದಲ್ಲಿದೆ. ಐಪಿಎಲ್‌ನಲ್ಲಿ ಗೆಲುವು ಪಡೆದ ಸಂದರ್ಭದಲ್ಲಿ ಶಾರೂಖ್‌ ಖಾನ್‌ ತನ್ನ ಪತ್ನಿಯನ್ನು ಆಲಂಗಿಸಿಕೊಂಡು ಖುಷಿವ್ಯಕ್ತಪಡಿಸಿದ್ದರು.

ಟಿ20 ವರ್ಲ್ಡ್‌ಕಪ್ 2024