ನತಾಶಾ ಜತೆ ಡಿವೋರ್ಸ್‌ ಆಗುವುದು ಹಾರ್ದಿಕ್ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ದುಡಿದಿದ್ದನ್ನೆಲ್ಲ ಯಾರ ಹೆಸರಿನಲ್ಲಿಟ್ಟಿದ್ದಾರೆ ನೋಡಿ VIDEO
ಕನ್ನಡ ಸುದ್ದಿ  /  ಮನರಂಜನೆ  /  ನತಾಶಾ ಜತೆ ಡಿವೋರ್ಸ್‌ ಆಗುವುದು ಹಾರ್ದಿಕ್ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ದುಡಿದಿದ್ದನ್ನೆಲ್ಲ ಯಾರ ಹೆಸರಿನಲ್ಲಿಟ್ಟಿದ್ದಾರೆ ನೋಡಿ Video

ನತಾಶಾ ಜತೆ ಡಿವೋರ್ಸ್‌ ಆಗುವುದು ಹಾರ್ದಿಕ್ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ದುಡಿದಿದ್ದನ್ನೆಲ್ಲ ಯಾರ ಹೆಸರಿನಲ್ಲಿಟ್ಟಿದ್ದಾರೆ ನೋಡಿ VIDEO

ನತಾಶಾ ಜತೆಗೆ ಡಿವೋರ್ಸ್‌ ನೀಡುವುದು ಪಕ್ಕಾ ಎಂಬ ವಿಚಾರ ಟೀಮ್‌ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ಈ ಮಾತಿಗೆ ಪುಷ್ಠಿ ನೀಡುತ್ತಿದೆ ವೈರಲ್‌ ಆಗುತ್ತಿರುವ ಈ ವಿಡಿಯೋ.

ನತಾಶಾ ಜತೆ ಡಿವೋರ್ಸ್‌ ಆಗುವುದು ಹಾರ್ದಿಕ್ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ದುಡಿದಿದ್ದನ್ನೆಲ್ಲ ಯಾರ ಹೆಸರಿನಲ್ಲಿಟ್ಟಿದ್ದಾರೆ ನೋಡಿ
ನತಾಶಾ ಜತೆ ಡಿವೋರ್ಸ್‌ ಆಗುವುದು ಹಾರ್ದಿಕ್ ಪಾಂಡ್ಯಗೆ ಮೊದಲೇ ಗೊತ್ತಿತ್ತಾ? ದುಡಿದಿದ್ದನ್ನೆಲ್ಲ ಯಾರ ಹೆಸರಿನಲ್ಲಿಟ್ಟಿದ್ದಾರೆ ನೋಡಿ

Natasa-Hardik Divorce: ಸಾಕಷ್ಟು ಊಹಾಪೋಹಗಳ ನಂತರ, ನಟಿ, ಮಾಡೆಲ್‌ ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಪ್ರತ್ಯೇಕತೆಯನ್ನು ಖಚಿತಪಡಿಸಿದ್ದಾರೆ. ದಂಪತಿ ಗುರುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಪರಸ್ಪರ ದೂರವಾಗಲು ನಿರ್ಧರಿಸಿದ್ದಾರೆ.

ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ಮುಂಬೈ ತೊರೆದ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಬಿಡುಗಡೆ ಆಗಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ Reddit ಸೈಟ್‌ನಲ್ಲಿ ಈ ಸ್ಟಾರ್ ಜೋಡಿ ನಡುವೆ ಡಿವೋರ್ಸ್‌ ಆಗಲಿದೆ ಎಂಬ ಸುದ್ದಿ ವೈರಲ್‌ ಆಗಿತ್ತು. ಒಂದು ವೇಳೆ ಈ ಜೋಡಿ ಡಿವೋರ್ಸ್‌ ಪಡೆದಿದ್ದೇ ನಿಜವಾದರೆ, ಆಗ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ 70 ಪ್ರತಿಶತವನ್ನು ನತಾಶಾಗೆ ವಿಚ್ಛೇದನದ ಪರಿಹಾರವಾಗಿ ನೀಡಬೇಕಾಗುತ್ತದೆ ಎಂದೂ ಹೇಳಲಾಗಿತ್ತು.

ಹಳೇ ವಿಡಿಯೋ ವೈರಲ್..

ಇದೀಗ ಹಾರ್ದಿಕ್ ವಿಚ್ಛೇದನದ ಹೇಳಿಕೆ ಅಧಿಕೃತವಾಗಿ ಹೊರಬಂದ ಬಳಿಕ, ಹಾರ್ದಿಕ್‌ ಈ ಹಿಂದೆ ನೀಡಿದ್ದ ಸಂದರ್ಶನದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಭಾರತೀಯ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ, ತನ್ನ ಎಲ್ಲಾ ಆಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ತಾಯಿ ಜತೆಗೆ ಹೇಗೆ ಹಂಚಿಕೊಳ್ಳುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಕ್ರಿಕೆಟಿಗ ತನ್ನ ಎಲ್ಲಾ ಆಸ್ತಿ ತನ್ನ ತಾಯಿಯ ಹೆಸರಿನಲ್ಲಿ ಏಕೆ ಇದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.

ವಿಡೀಯೊದಲ್ಲಿ, "ನಿಮ್ಮ ಎಲ್ಲಾ ಖಾತೆಗಳಲ್ಲಿ ನಾನು ಪಾಲುದಾರನಾಗಿರುತ್ತೇನೆ" ಎಂದು ಅಪ್ಪ, ಅಮ್ಮ, ಅಣ್ಣನ ಜತೆಗೆ ಜಾಯಿಂಟ್‌ ಖಾತೆಯನ್ನು ಹೊಂದಿದ್ದಾರೆ. ಕಾರುಗಳಿಂದ ಹಿಡಿದು ಮನೆಗಳವರೆಗೆ... ಎಲ್ಲದರಲ್ಲಿಯೂ ಪಾಲುದಾರಿಕೆ ಇದೆ ಎಂದೂ ಆ ವಿಡಿಯೋದಲ್ಲಿ ಹೇಳಿದ್ದಾರೆ ಹಾರ್ದಿಕ್. ಇಲ್ಲಿದೆ ನೋಡಿ ವೈರಲ್‌ ವಿಡಿಯೋದಲ್ಲಿ ಹಾರ್ದಿಕ್‌ ಹೇಳಿದ ಪೂರ್ತಿ ಮಾತು.

ಎಲ್ಲರ ಅಕೌಂಟ್‌ ಜಾಯಿಂಟ್..

"ಎಲ್ಲ ಅಕೌಂಟ್‌ಗಳಲ್ಲಿಯೂ ನಾನು ಪಾರ್ಟನರ್.‌ ನನ್ನ ಅಪ್ಪನ ಅಕೌಂಟ್‌ನಲ್ಲಿಯೂ ಅಮ್ಮನ ಹೆಸರಿದೆ. ಅಣ್ಣನ ಅಕೌಂಟ್‌ನಲ್ಲಿ ನನ್ನ ಹೆಸರಿದೆ. ಅಮ್ಮನ ಅಕೌಂಟ್‌ನಲ್ಲಿಯೂ ಕೂಡ ಇದೆ. ಕಾರು ಖರೀದಿಸಲಿ, ಮನೆ ಖರೀದಿಸಲಿ ಎಲ್ಲದರಲ್ಲೂ ಜಾಯಿಂಟ್‌ ಇದೆ. ನನ್ನ ಹೆಸರಿನಲ್ಲಿ ನಾನು ಏನನ್ನೂ ಖರೀದಿಸುವುದಿಲ್ಲ. ಖರೀದಿಸಿದರೂ ಅದು ಉಳಿದವರಿಗೂ ಸೇರುತ್ತದೆ. ಹಾಗಾಗಿ ಶೇ 50 ಪ್ರತಿಶತ ಯಾರಿಗೂ ಕೊಡುವ ಪ್ರಮೇಯವೇ ಬರುವುದೇ ಇಲ್ಲ. ಅಮ್ಮನ ಹೆಸರಿನಲ್ಲಿದ್ದರೆ, ಅದು ಎಲ್ಲೂ ಹೋಗುವುದಿಲ್ಲ" ಎಂದು ಮುಗುಳ್ನಕ್ಕಿದ್ದಾರೆ.

ಡಿವೋರ್ಸ್‌ ಪೋಸ್ಟ್‌ನಲ್ಲೇನಿದೆ?

ಇನ್ನು ಗುರುವಾರ ಡಿವೋರ್ಸ್‌ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಹಾರ್ದಿಕ್-ಮತ್ತು ನತಾಶಾ. "ನಾಲ್ಕು ವರ್ಷಗಳ ಒಟ್ಟಿಗೆ ನಂತರ, ನಾವು ಬೇರೆಯಾಗಲು ಪರಸ್ಪರ ನಿರ್ಧರಿಸಿದ್ದೇವೆ. ನಾವು ಒಟ್ಟಾಗಿ ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ನಮ್ಮೆಲ್ಲವನ್ನೂ ನೀಡಿದ್ದೇವೆ ಮತ್ತು ಇದು ನಮ್ಮಿಬ್ಬರಿಗೂ ಉತ್ತಮವಾಗಿದೆ ಎಂದು ನಾವು ನಂಬುತ್ತೇವೆ. ನಾವು ಒಟ್ಟಿಗೆ ಅನುಭವಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟ ಮತ್ತು ನಾವು ಬೆಳೆಸಿದ ಕುಟುಂಬವನ್ನು ಗಮನಿಸಿದರೆ ಇದು ನಮಗೆ ಕಷ್ಟಕರವಾದ ನಿರ್ಧಾರವಾಗಿತ್ತು"

"ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿರುವ ಅಗಸ್ತ್ಯನಿಂದ ನಾವು ಸುಖೀ. ಮತ್ತು ಹೆತ್ತವರಾದ ನಾವು ಅವನ ಸಂತೋಷಕ್ಕಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮಗೆ ನಮ್ಮ ಖಾಸಗಿ ಗೌಪ್ಯತೆಯನ್ನು ನೀಡುವಂತೆ ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ" ಎಂದಿದ್ದಾರೆ.