Child Adoption: ಪರಿಣಿತಿ ಚೋಪ್ರಾಗೆ ಒಂದು ಮಗು ಸಾಕಾಗಲ್ವಂತೆ, ಅಷ್ಟೊಂದು ಹೆರಲಾರೆ, ದತ್ತು ತೆಗೆದುಕೊಳ್ಳುವೆ ಎಂದ ಬಾಲಿವುಡ್‌ ನಟಿ
ಕನ್ನಡ ಸುದ್ದಿ  /  ಮನರಂಜನೆ  /  Child Adoption: ಪರಿಣಿತಿ ಚೋಪ್ರಾಗೆ ಒಂದು ಮಗು ಸಾಕಾಗಲ್ವಂತೆ, ಅಷ್ಟೊಂದು ಹೆರಲಾರೆ, ದತ್ತು ತೆಗೆದುಕೊಳ್ಳುವೆ ಎಂದ ಬಾಲಿವುಡ್‌ ನಟಿ

Child Adoption: ಪರಿಣಿತಿ ಚೋಪ್ರಾಗೆ ಒಂದು ಮಗು ಸಾಕಾಗಲ್ವಂತೆ, ಅಷ್ಟೊಂದು ಹೆರಲಾರೆ, ದತ್ತು ತೆಗೆದುಕೊಳ್ಳುವೆ ಎಂದ ಬಾಲಿವುಡ್‌ ನಟಿ

Parineeti Chopra: ಕಳೆದ ತಿಂಗಳು ಆಮ್‌ ಆದ್ಮಿ ನಾಯಕ ರಾಘವ್‌ ಚಡ್ಡಾರನ್ನು ವಿವಾಹವಾಗಿದ್ದ ಪರಿಣಿತಿ ಚೋಪ್ರಾ ಇಂದು ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರು ಮಗು ದತ್ತು ತೆಗೆದುಕೊಳ್ಳುವ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಇಂದು ಪರಿಣಿತಿ ಚೋಪ್ರಾರ 35ನೇ ವರ್ಷದ ಹುಟ್ಟುಹಬ್ಬ
ಇಂದು ಪರಿಣಿತಿ ಚೋಪ್ರಾರ 35ನೇ ವರ್ಷದ ಹುಟ್ಟುಹಬ್ಬ

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾರಿಗೆ ಇಂದು ಒಂದು ವರ್ಷ ಹೆಚ್ಚಾಗಿದೆ. ಇವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ರಾಘವ್‌ ಚಡ್ಡಾರನ್ನು ವಿವಾಹವಾಗಿದ್ದ ಇವರು ಭವಿಷ್ಯದಲ್ಲಿ ಮಕ್ಕಳನ್ನು ಹೊಂದುವ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ದತ್ತು ತೆಗೆದುಕೊಳ್ಳುವ ಕುರಿತು ಪರಿಣಿತಿ ಮಾತು

ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಧ್ಯಮ ಸಂದರ್ಶನದಲ್ಲಿ ದತ್ತು ತೆಗೆದುಕೊಳ್ಳುವ ಕುರಿತು ಪರಿಣಿತಿ ಮುಕ್ತವಾಗಿ ಮಾತನಾಡಿದ್ದಾರೆ. "ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ" ಎಂದು ಅವರು ಹೇಳಿದ್ದಾರೆ.

ಇದೇ ಸಂಭಾಷಣೆಯಲ್ಲಿ ತನ್ನ ಗಂಡು ಹೇಗಿರಬೇಕು ಎಂದೂ ಹೇಳಿದ್ದಾರೆ. "ನನಗೆ ಮೂರು ಅವಶ್ಯಕತೆಗಳಿವೆ. ನನ್ನನ್ನು ಮೊದಲು ಆಕರ್ಷಿಸುವ ವಿಷಯ ಹಾಸ್ಯಪ್ರಜ್ಞೆ. ನಾನು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದ್ದೇನೆ ಎಂದು ನಂಬಿದ್ದೇನೆ ಹೀಗಾಗಿ, ಅವನು ನನ್ನನ್ನು ನಗಿಸಿದರೆ ನಾನು ಅವನ್ನತ್ತ ಆಕರ್ಷಿತಳಾಗುವೆ. ಎರಡನೆಯಾಗಿ, ನಾನು ನಾನಾಗಿರಲು ಬಿಡಬೇಕು. ಜನರು ನನಗೆ ಏನು ಮಾಡಬೇಕು ಎಂದು ಹೇಳುವುದು ಇಷ್ಟವಾಗುವುದಿಲ್ಲ. ನಾನು ಹೇಗಿರಬೇಕು, ಹೇಗೆ ಕುಳಿತುಕೊಳ್ಳಬೇಕು, ಏನು ಧರಿಸಬೇಕು ಎಂದು ಯಾರಾದರೂ ಹೇಳಿದರೆ ಅವರಿಗೆ ಕಪಾಳಮೋಕ್ಷ ಮಾಡಲು ಬಯಸುವೆ. ಅವನು ನನ್ನನ್ನು ಬದಲಾಯಿಸಲು ಪ್ರಯತ್ನಿಸಬಾರದು. ಮೂರನೆಯದಾಗಿ ಆತ ತುಂಬ ಉತ್ತಮ ಸ್ಮೆಲ್‌ ಹೊಂದಿರಬೇಕು. ಆತ, ಉತ್ತಮ ಸುಗಂಧ ದ್ರವ್ಯ ಹಾಕದೆ ಇದ್ದರೆ ಆತ ನನ್ನಿಂದ ದೂರ ಹೋಗಬಹುದು" ಎಂದು ಹೇಳಿದ್ದಾರೆ.

ಪರಿಣಿತಿ ಚೋಪ್ರಾರ ವಿವಾಹ

ಪರಿಣಿತಿ ಚೋಪ್ತಾ ಮತ್ತು ಆಮ್‌ ಆದ್ಮಿ ನಾಯಕ ರಾಘವ್‌ ಚಡ್ಡಾ ಅವರು ಸೆಪ್ಟೆಂಬರ್‌ 24ರಂದು ಕುಟುಂಬ ಮತ್ತು ಆತ್ಮೀಯ ಸ್ನೇಹಿತರು ಭಾಗವಹಿಸಿದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿವಾಹ ಫೋಟೋಗಳನ್ನು ಪರಿಣಿತಿ ಚೋಪ್ರಾ ಹಂಚಿಕೊಂಡಿದ್ದರು.

ಪರಿಣಿತಿ ಚೋಪ್ರಾ ಅವರು ಅಕ್ಷಯ್‌ ಕುಮಾರ್‌ ನಟಿಸಿದ ಮಿಷನ್‌ ರಂಗರಾಜ್‌ ಚಿತ್ರದಲ್ಲಿ ನಟಿಸಿದ್ದರು. ಮಿಷನ್‌ ರಂಗರಾಜ್‌: ದಿ ಭಾರತ್‌ ರಿಸ್ಕ್ಯೂ ಚಿತ್ರವು ಅಕ್ಟೋಬರ್‌ 6ರಂದು ಬಿಡುಗಡೆಯಾಗಿತ್ತು. ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರವನ್ನು ಟಿನು ಸುರೇಶ್‌ ದೇಸಾಯಿ ನಿರ್ದೇಶಿಸಿದ್ದರು.

ಪರಿಣಿತಿ ಚಿತ್ರ ನಟಿಸಿರುವ ಮುಂದಿನ ಚಿತ್ರ ಇಮ್ತಿಯಾಜ್‌ ಆಲಿಯವರ ಚಾಮ್ಕಿಲಾ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅಮರ್‌ಜೋತ್‌ ಕೌರ್‌ ಮತ್ತು ಅಮರ್‌ ಸಿಂಗ್‌ ಚಾಮ್ಕಿಲಾ ಎಂಬ ಪಂಜಾಬ್‌ನ ಇಬ್ಬರು ಜನಪ್ರಿಯ ಹಾಡುಗಾರರ ಕುರಿತಾದ ಸಿನಿಮಾ ಇದಾಗಿದೆ.

ಮಾಲ್ಡೀವ್ಸ್‌ಗೆ ತೆರಳಿದ್ದ ಪರಿಣಿತಿ ಚೋಪ್ರಾ

ಪರಿಣಿತಿ ಚೋಪ್ರಾ ಅವರು ಮಾಲ್ಡೀವ್ಸ್‌ನ ಇನ್‌ಫಿನಿಟಿ ಈಜುಕೊಳದಲ್ಲಿ ಕುಳಿತ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಈಜುಕೊಳದ ಆಚೆಗೆ ಸುಂದರ ಸಮುದ್ರ ಕಾಣಿಸುತ್ತದೆ. ಹಿಂಬದಿಯಿಂದ ತೆಗೆದ ಈ ಚಿತ್ರದಲ್ಲಿ ಪರಿಣಿತಿಯ ಮುದ್ದಾದ ನಗು ಗಮನ ಸೆಳೆಯುತ್ತದೆ. ಈ ಫೋಟೋಗೆ . "ಇದು ಹನಿಮೂನ್‌ ಫೋಟೋ ಅಲ್ಲ, ಇದು ನನ್ನ ನಾದಿನಿ ತೆಗೆದ ಫೋಟೋ" ಎಂದು ಪರಿಣಿತಿ ಚೋಪ್ರಾ ಕ್ಯಾಪ್ಷನ್‌ ಬರೆದಿದ್ದರು. ಈ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Whats_app_banner