ಭಾರತದ ಮೊದಲ ಅಸ್ಥಿಮಜ್ಜೆ ದಾನಿ ಸಲ್ಮಾನ್ ಖಾನ್ ಎನ್ನುವುದು ನಿಮಗೆ ಗೊತ್ತೆ? ಪುಟಾಣಿ ಬಾಲಕಿಯ ಜೀವ ಉಳಿಸಿದ ಸಲ್ಲು
Salman Khan Donate bone marrow: ಭಾರತದ ಮೊದಲ ಅಸ್ಥಿಮಜ್ಜೆ ದಾನಿ ಸಲ್ಮಾನ್ ಖಾನ್ ಎನ್ನುವ ಸಂಗತಿ ನಿಮಗೆ ತಿಳಿದಿರುವುದೇ? ತುರ್ತು ಅಸ್ಥಿಮಜ್ಜೆ ಕಸಿ ಅಗತ್ಯವಿರುವ ಮಗುವಿಗೆ ಕೆಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಸಹಾಯ ಮಾಡಿದ್ದರು.
First bone marrow donor in India: ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಕೆಲಸಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ವರ್ಷದ ಆರಂಭದಲ್ಲಿ ಇವರ ಮನೆಯ ಹೊರಗೆ ಆಗುಂತಕರು ಬಂದೂಕಿನಿಂದ ಶೂಟ್ ಮಾಡಿದ್ದರು. 2010ರಲ್ಲಿ ಅಗತ್ಯವಿದ್ದರೆ ತನ್ನ ಅಸ್ಥಿಮಜ್ಜೆ (ಬೋನ್ ಮಾರೋ) ದಾನ ಮಾಡುವುದಾಗಿ Marrow Donor Registry India (ಎಂಡಿಆರ್‌ಐ)ಗೆ ವಾಗ್ದಾನ ನೀಡಿದ್ದರು. ಕೆಲವೇ ದಿನಗಳಲ್ಲಿ ಇವರು ತನ್ನ ಮೂಳೆ ಮಜ್ಜೆಯನ್ನು ದಾನ ಮಾಡುವ ಮೂಲಕ ಗಮನ ಸೆಳೆದಿದ್ದರು. ಎಂಡಿಆರ್‌ಐ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದ ಡಾ. ಸುನಿಲ್ ಪರೇಖ್ ಈ ವಿವರವನ್ನು ಖಚಿತಪಡಿಸಿದ್ದರು.
ಜನರಿಗೆ ಉಪಯೋಗವಾದ ಇಂತಹ ಕಾರ್ಯ ಮಾಡಿದ್ದಕ್ಕೆ ಸಲ್ಮಾನ್ ಖಾನ್ ಅವರಿಗೆ ಧನ್ಯವಾದಗಳು. ಕೆಲವು ವರ್ಷಗಳ ಹಿಂದೆ ಅಸ್ಥಿಮಜ್ಜೆ ಕಸಿ ಅಗತ್ಯವಿರುವ ಪೂಜಾ ಎಂಬ ಪುಟ್ಟ ಹುಡುಗಿಯ ಬಗ್ಗೆ ಸಲ್ಮಾನ್ ಓದಿದ್ದರು. ತಮ್ಮ ಇಡೀ ಫುಟ್ಬಾಲ್ ತಂಡದೊಂದಿಗೆ ಅಸ್ಥಿ ಮಜ್ಜೆ ದಾನ ಮಾಡಲು ಆಗಮಿಸಿದ್ದರು. ಕೊನೆಯ ಕ್ಷಣದಲ್ಲಿ ತಂಡದ ಇತರರು ದಾನ ಮಾಡಲು ಹಿಂದೆ ಸರಿದರು. ಸಲ್ಮಾನ್ ಮತ್ತು ಅರ್ಬಾಜ್ (ಸಲ್ಮಾನ್ ಸಹೋದರ ಮತ್ತು ನಟ ಅರ್ಬಾಜ್ ಖಾನ್) ಮಾತ್ರ ದಾನ ಮಾಡಿದರು. ಈ ಮೂಲಕ ಭಾರತದ ಮೊದಲ ಅಸ್ಥಿಮಜ್ಜೆ ದಾನಿ ಎಂಬ ಖ್ಯಾತಿಗೆ ಸಲ್ಮಾನ್ ಖಾನ್ ಪಾತ್ರರಾದರು.
ಅಸ್ಥಿಮಜ್ಜೆ ದಾನದ ಸಮಸ್ಯೆಯ ಕುರಿತು ಸಲ್ಮಾನ್ ಖಾನ್ ಹೀಗೆ ಹೇಳಿದ್ದಾರೆ. "ನಮ್ಮಲ್ಲಿ ಪ್ರಸ್ತುತ ಕೇವಲ 5000 ದಾನಿಗಳಿದ್ದಾರೆ. ಇದು ಕೇವಲ ಅರಿವಿನ ಕೊರತೆಯಲ್ಲ; ನಮ್ಮ ವರ್ತನೆಯೇ ಸಮಸ್ಯೆಯಾಗಿದೆ. ಈ ರೀತಿ ದಾನ ಮಾಡದೆ ಇದ್ದರೆ ರೋಗಿಗಳು ಜೀವ ಕಳೆದುಕೊಳ್ಳುವಂತಾಗಲು ನಾವು ಜವಾಬ್ದಾರಿಯಾಗುತ್ತೇವೆ. ಅಸ್ಥಿಮಜ್ಜೆ ದಾನ ಮಾಡಿ ಜೀವ ಉಳಿಸಿ. ಇದು ರಕ್ತದ ಪರೀಕ್ಷೆಯಂತೆ ಇರುತ್ತದೆ. ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೆಲವು ಜನರು ರಕ್ತ ಪರೀಕ್ಷೆ ಮಾಡಿಕೊಳ್ಳಲು ಭಯಪಡುತ್ತಾರೆ ಎಂದು ನನಗೆ ತಿಳಿದಿದೆ. ಇದು ಸ್ವಲ್ಪ ಧೈರ್ಯಶಾಲಿಯಾಗುವ ಮತ್ತು ಪರಿವರ್ತನೆಯಾಗುವ ಸಮಯ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಒಳ್ಳೆಯ ವ್ಯಕ್ತಿ
2022ರಲ್ಲಿ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ, ನಟ ಸುನಿಲ್ ಶೆಟ್ಟಿ ಸಲ್ಮಾನ್ ಬಗ್ಗೆ ಹೊಗಳಿದ್ದರು. "ಸಲ್ಮಾನ್ ಖಾನ್ ತುಂಬಾ ಒಳ್ಳೆಯ ವ್ಯಕ್ತಿ. ಅದೇ ಕಾರಣದಿಂದ ಆತ ಈ ರೀತಿ ಒಳ್ಳೆಯ ಕೆಲಸ ಮಾಡುತ್ತಾನೆ. ನಾನು ಈ ಸಮಾಜಕ್ಕೆ ಏನು ಮಾಡಿದೆ? ಏನು ಮಾಡಲಿಲ್ಲ ಎಂದು ಯೋಚಿಸುತ್ತಾರೆ. ಸಲ್ಮಾನ್ ಖಾನ್ ಹಲವು ವರ್ಷಗಳ ಹಿಂದೆ ತಮ್ಮ ಮೂಳೆ ಮಜ್ಜೆಯನ್ನು ಯಾರಿಗೋ ದಾನ ಮಾಡಿದರು. ಈಗಲೂ ಅವನು ಸಮಾಜದಲ್ಲಿ ಬದಲಾವಣೆಯನ್ನು ಬಯಸುವ ವ್ಯಕ್ತಿ. ಅದಕ್ಕಾಗಿಐಏ ದೇವರು ಅವನಿಗೆ ದಯೆ ತೋರಿಸುತ್ತಾನೆ. ಅವನು ದೇವರ ಅಚ್ಚುಮೆಚ್ಚಿನ ಮಗ" ಎಂದು ಸಲ್ಮಾನ್ ಖಾನ್‌ರನ್ನು ಸುನಿಲ್ ಶೆಟ್ಟಿ ಶ್ಲಾಘಿಸಿದ್ದರು.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತನ್ನನ್ನು ಮತ್ತು ತನ್ನ ಕುಟುಂಬ ಸದಸ್ಯರನ್ನು ಕೊಲ್ಲುವ ಉದ್ದೇಶದಿಂದ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ತನ್ನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಿವಾಸದ ಮುಂದೆ ಗುಂಡು ಹಾರಿಸಿದೆ ಎಂದು ಸಲ್ಮಾನ್ ಖಾನ್ ಮುಂಬೈ ಪೊಲೀಸರಿಗೆ ತಿಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯದಲ್ಲಿ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ಗಾಗಿ ಈ ಹೇಳಿಕೆಯನ್ನು ಸಲ್ಮಾನ್ ಅಧಿಕೃತವಾಗಿ ತಿಳಿಸಿದ್ದರು.