ಕನ್ನಡ ಸುದ್ದಿ  /  ಮನರಂಜನೆ  /  ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಇವ್ರಿಗೆ ರಾಮಾಯಣದ ಸೀತೆಯಾಗುವ ಅರ್ಹತೆ ಇಲ್ವಂತೆ; ಸಹಜ ಸುಂದರಿ ಮೇಲೆ ಏಕೆ ಕೋಪ, ಇಲ್ಲಿದೆ ವಿವರ

ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಇವ್ರಿಗೆ ರಾಮಾಯಣದ ಸೀತೆಯಾಗುವ ಅರ್ಹತೆ ಇಲ್ವಂತೆ; ಸಹಜ ಸುಂದರಿ ಮೇಲೆ ಏಕೆ ಕೋಪ, ಇಲ್ಲಿದೆ ವಿವರ

ಸಹಜ ಸುಂದರಿ ಸಾಯಿ ಪಲ್ಲವಿ ನಿತೀಶ್‌ ಕುಮಾರ್‌ ತಿವಾರಿಯ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ಕಾಶ್ಮೀರ ಫೈಲ್ಸ್‌ ಸಿನಿಮಾದ ಸಂದರ್ಭದಲ್ಲಿ ಸಾಯಿ ಪಲ್ಲವಿ ನೀಡಿರುವ ಹೇಳಿಕೆಯಿಂದಾಗಿ ಈಗ ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ ಆರಂಭವಾಗಿದೆ.

ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಸಹಜ ಸುಂದರಿ ಮೇಲೆ ಏಕೆ ಕೋಪ
ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಸಹಜ ಸುಂದರಿ ಮೇಲೆ ಏಕೆ ಕೋಪ

ಬೆಂಗಳೂರು: ಸಾಯಿ ಪಲ್ಲವಿ ಎಂದರೆ ಎಲ್ಲರಿಗೂ ಇಷ್ಟ. ಸಹಜ ಅಭಿನಯ, ಸಹಜ ಸೌಂದರ್ಯದಿಂದ ಮನೆಮಾತಾಗಿರುವ ನಟಿ. ಇದೀಗ ಬಾಲಿವುಡ್‌ನಲ್ಲಿ ಸಾಯಿ ಪಲ್ಲವಿ ವಿರುದ್ಧ ಒಂದಿಷ್ಟು ಜನರು ಬೈಕಾಟ್‌ ಚಳವಳಿ ಆರಂಭಿಸಿದ್ದಾರೆ. ನಿರ್ದೇಶಕ ನಿತೀಶ್‌ ತಿವಾರಿಯ ಮುಂಬರುವ ಸಿನಿಮಾ "ರಾಮಾಯಣ"ದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಮಿಂಚಲಿದ್ದಾರೆ. ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ನಟನೆಯ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಲಾರ್ಡ್‌ ರಾಮ ಮತ್ತು ಸೀತಾ ದೇವಿಯ ಚಿತ್ರಗಳು ಹೊಸ ವಿವಾದಕ್ಕೆ ನಾಂದಿ ಹಾಡಿವೆ.

ಟ್ರೆಂಡಿಂಗ್​ ಸುದ್ದಿ

ಸಾಯಿ ಪಲ್ಲವಿ ಮತ್ತು ರಣಬೀರ್‌ ಕಪೂರ್‌ ಸೀತೆ ಮತ್ತು ರಾಮನಾಗಿ ನಟಿಸುತ್ತಿರುವ ಸಿನಿಮಾವಿದು. ಈ ಜೋಡಿಯನ್ನು ನೋಡಿ ಸಾಕಷ್ಟು ಜನರು ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರ ಪ್ರಕಾರ ರಾಮನ ಪಾತ್ರಕ್ಕೆ ರಣಬೀರ್‌ ಕಪೂರ್‌ ಸೂಕ್ತ ವ್ಯಕ್ತಿ. ಆದರೆ, ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ. ಕೆಲವರ ಆಬ್ಜೆಕ್ಷನ್‌ ಇರುವುದು ಬೇರೆಯದ್ದೇ ಕಾರಣಕ್ಕೆ. 2022ರಲ್ಲಿ ಸಾಯಿ ಪಲ್ಲವಿ ಕಾಶ್ಮಿರ ಪೈಲ್‌ ಸಿನಿಮಾದ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಿಂದೂ ದ್ವೇಷಿ ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಬಾರದು ಎಂದು ಇವರೆಲ್ಲರ ಅಭಿಪ್ರಾಯ. ಇದೇ ಕಾರಣಕ್ಕೆ ಬೈಕಾಟ್‌ ಸಾಯಿ ಪಲ್ಲವಿ ಆರಂಭವಾಗಿದೆ.

ಸಾಯಿ ಪಲ್ಲವಿ ಅಂದು ಏನು ಹೇಳಿದ್ದರು?

ವಿರಾಟ ಪರ್ವಮ್‌ ಸಿನಿಮಾದ ಪ್ರಚಾರದ ಸಮಯದಲ್ಲಿ ಸಾಯಿ ಪಲ್ಲವಿ ಅವರು ಕಾಶ್ಮೀರ ಫೈಲ್ಸ್ , ಕಾಶ್ಮೀರ ಪಂಡಿತರ ವಲಸೆ ಮತ್ತು ಗೋವು ರಕ್ಷಣೆಯ ಕುರಿತು ತನ್ನ ಅಭಿಪ್ರಾಯವ್ಯಕ್ತಪಡಿಸಿದ್ದರು. ಈಗಲೂ ಹಸುಗಳನ್ನು ಸಾಗಿಸುವ ಮುಸ್ಲಿಂ ಚಾಲಕರನ್ನು ಜೈಶ್ರೀರಾಮ್‌ ಎಂದು ಹೇಳಿ ಥಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ನಡೆಯುವ ಇಂತಹ ಘಟನೆಗಳಿಗೂ ಕಾಶ್ಮೀರ ಪಂಡಿತರಿಗೆ ಆಗುವ ತೊಂದರೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದರು.

ಇವರ ಅಭಿಪ್ರಾಯವು ಒಂದಿಷ್ಟು ಜನರ ಭಾವನೆಗಳಿಗೆ ಘಾಸಿ ಉಂಟುಮಾಡಿತ್ತು. ಅವರೆಲ್ಲರೂ ಈಗ "ಹಿಂದೂ ದ್ವೇಷಿ ಸಾಯಿ ಪಲ್ಲವಿಯು ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡಬಾರದು" ಎಂದು ಬೈಕಾಆಟ್‌ ಮಾಡುತ್ತಿದ್ದಾರೆ. ಈಗಾಗಲೇ ಸಾಯಿ ಪಲ್ಲವಿ ತನ್ನ ಅಭಿಪ್ರಾಯದ ಕುರಿತು ಮತ್ತು ನಿಲುವಿನ ಕುರಿತು ಸ್ಪಷ್ಟಪಡಿಸಿದ್ದಾರೆ.

ಸಾಯಿ ಪಲ್ಲವಿ ಭಾರತೀಯ ನಟಿಯಾಗಿದ್ದು, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇದೀಗ ರಾಮಾಯಣದ ಮೂಲಕ ಬಾಲಿವುಡ್‌ನಲ್ಲಿ ನಟಿಸುತ್ತಿದ್ದಾರೆ. ನಾಲ್ಕು ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌, ಎರಡು ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿರುವ ಇವರು ಫೋರ್ಬ್ಸ್‌ ನಿಯತಕಾಲಿಕೆಯ 30 ವರ್ಷದೊಳಗಿನ 30 ಬೆಸ್ಟ್‌ ನಟಿಯರ ಸ್ಥಾನ ಪಡೆದಿದ್ದಾರೆ. 2015ರಲ್ಲಿ ಪ್ರೇಮಮ್‌ ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಇದು ಆ ಸಮಯದಲ್ಲಿ ಮಲಯಾಳಂನ ಅತ್ಯಧಿಕ ಗಳಿಕೆಯ ಎರಡನೇ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು. ಇವರು ನಟಿಸಿದ ತೆಲುಗಿನ ಫಿದಾ ಸಿನಿಮಾವು ದೊಡ್ಡಮಟ್ಟದ ಯಶಸ್ಸು ಗಳಿಸಿತು.

ಸಾಯಿ ಪಲ್ಲವಿ ಸಿನಿಮಾಗಳು

ಸಾಯಿ ಪಲ್ಲವಿ ಅಮರನ್‌, ತಾಂಡೇಲ್‌, ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗಾರ್ಗಿ, ವಿರಾಟ ಪರ್ವಂ, ಶ್ಯಾಮ್‌ ಸಿಂಗ್‌ ರಾಯ್‌, ಲವ್‌ ಸ್ಟೋರಿ, ಪಾವ ಕಾಧಿಗಲ್‌, ಎನ್‌ಜಿಕೆ, ಐತ್ರಾನ್‌, ಮಾರಿ 2, ಪಡಿ ಪಡಿ ಲೆಚ್ಚಿ ಮನಸು, ಕಾನಮ್‌, ದಿಯಾ, ಮಿಡಲ್‌ ಕ್ಲಾಸ್‌ ಅಭಯ್‌, ಫಿದಾ, ಕಾಲಿ, ಪ್ರೇಮಮ್‌ ಧಾಮ್‌ ಧೂಮ್‌, ಕಸ್ತೂರಿ ಮಾನ್‌ ಮುಂತಾದ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ.

IPL_Entry_Point