ಸಂಜಯ್‌ ದತ್‌ನ ಘನಂದಾರಿ ಕೆಲಸ ಹೊಗಳೋ ಸಮಾಜ, ಈ ವಿಚಾರದಲ್ಲಿ ಹೆಣ್ಣಿನ ಬಗ್ಗೆ ಮೂಗು ಮುರಿಯುವುದೇಕೆ? ದೀಪಾ ಹಿರೇಗುತ್ತಿ ಬರಹ
ಕನ್ನಡ ಸುದ್ದಿ  /  ಮನರಂಜನೆ  /  ಸಂಜಯ್‌ ದತ್‌ನ ಘನಂದಾರಿ ಕೆಲಸ ಹೊಗಳೋ ಸಮಾಜ, ಈ ವಿಚಾರದಲ್ಲಿ ಹೆಣ್ಣಿನ ಬಗ್ಗೆ ಮೂಗು ಮುರಿಯುವುದೇಕೆ? ದೀಪಾ ಹಿರೇಗುತ್ತಿ ಬರಹ

ಸಂಜಯ್‌ ದತ್‌ನ ಘನಂದಾರಿ ಕೆಲಸ ಹೊಗಳೋ ಸಮಾಜ, ಈ ವಿಚಾರದಲ್ಲಿ ಹೆಣ್ಣಿನ ಬಗ್ಗೆ ಮೂಗು ಮುರಿಯುವುದೇಕೆ? ದೀಪಾ ಹಿರೇಗುತ್ತಿ ಬರಹ

ಹುಡುಗನೋ ಹುಡುಗಿಯೋ ಹನ್ನೆರಡರ ವಯಸ್ಸಿನಲ್ಲಿಯೇ ಡೇಟಿಂಗ್‌ ಹೋಗುವುದು ತಪ್ಪಲ್ಲವೇ ಎಂದು ಯೋಚಿಸುವ ಬದಲು ಹುಡುಗನಾದರೆ ಸರಿ ಹುಡುಗಿಯಾದರೆ ತಪ್ಪು ಎನ್ನುವ ಮನಸ್ಥಿತಿಯೇ ಹೆಣ್ಣುಮಕ್ಕಳ ಇಂದಿನ ಪರಿಸ್ಥಿತಿಗೆ ಕಾರಣ. ನಿಜಕ್ಕೂ ಬೇಸರದ ವಿಷಯ. - ದೀಪಾ ಹಿರೇಗುತ್ತಿ ಬರಹ

ದೀಪಾ ಹಿರೇಗುತ್ತಿ ಬರಹ
ದೀಪಾ ಹಿರೇಗುತ್ತಿ ಬರಹ

Sanjay Dutt Controversy: ಬಾಲಿವುಡ್‌ ನಟ ಸಂಜಯ್‌ ದತ್‌ ನಟನೆ ಬದಿಗಿಟ್ಟರೆ, ಹೆಚ್ಚು ಸುದ್ದಿಯಾಗಿದ್ದು ತಮ್ಮ ವೈಯಕ್ತಿಕ ಕಾಂಟ್ರವರ್ಸಿಗಳಿಂದ. ಡ್ರಗ್ಸ್‌, ಶಸ್ತ್ರಾಸ್ತ್ರ ಕಾಯಿದೆಯ ಉಲ್ಲಂಘನೆ, ಬಾಂಬ್‌ ಸ್ಫೋಟ, ಎರಡ್ಮೂರು ಮದುವೆ... ಒಂದಾ ಎರಡಾ ಹೀಗೆ ಹತ್ತು ಹಲವು ವಿವಾದಗಳ ನಡುವೆ ಸಿಲುಕಿರುವ ನಟ, ಇಂದಿಗೂ ಕೋರ್ಟ್‌ ಕಚೇರಿ ಅಲೆಯುವ ಕೆಲಸ ತಪ್ಪಿಲ್ಲ. ಇದೀಗ ಬರಹಗಾರ್ತಿ ದೀಪಾ ಹಿರೇಗುತ್ತಿ, ಇಂತಿಪ್ಪ ಸಂಜಯ್‌ ದತ್‌ ಅವರ ಈ ಹಿಂದಿನ ಸ್ಟೇಟ್‌ಮೆಂಟ್‌ವೊಂದರ ಹಿನ್ನೆಲೆಯ ಬಗ್ಗೆ ಸೋಷಿಯಲ್‌ ಮೀಡಿಯಾ ಪುಟದಲ್ಲಿ ಬರಹವೊಂದನ್ನು ಪ್ರಕಟಿಸಿದ್ದಾರೆ. ಹೀಗಿದೆ..

ಹೀಗಿದೆ ಬರಹ

ಇತ್ತೀಚೆಗೆ ಒಂದು ಸಂದರ್ಶನ ನೋಡುತ್ತಿದ್ದೆ. ಅದರಲ್ಲಿ ಸಂಜಯ್‌ ದತ್‌ಗೆ ಮೊದಲ ಬಾರಿ ಡೇಟ್‌ ಮಾಡಿದ್ದು ಎಷ್ಟನೇ ವಯಸ್ಸಿನಲ್ಲಿ ಎಂದು ಕೇಳಲಾಗುತ್ತದೆ. ಆಗ ಆತ ಹನ್ನೆರಡನೇ ವಯಸ್ಸಿನಲ್ಲಿ ಅನ್ನುತ್ತಾರೆ. ಹುಡುಗಿಯ ವಯಸ್ಸು ಎಷ್ಟಾಗಿತ್ತು ಎಂದಾಗ ಇಪ್ಪತ್ತು ಎನ್ನುತ್ತಾರೆ ಸಂಜಯ್‌ ದತ್.‌ ಎಲ್ಲರೂ ಜೋರಾಗಿ ನಗುತ್ತಾರೆ. ಆಮೇಲೆ ಸುಮ್ಮನೆ ಕಾಮೆಂಟ್‌ಗಳನ್ನು ನೋಡಿದೆ, ಸಂಜು ಬಾಬಾ ರಾಕ್ಸ್!‌ ಬಾಬಾ ಕಾ ಜಲ್ವಾ ಹೈ! ಸಂಜು ಬಾಬಾ ಫಾರ್‌ ಎ ರೀಸನ್!‌ ಇಂಥ ಪ್ರಶ್ನೆಗೂ ಉತ್ರ ಕೊಡೋ ಗಟ್ಸ್‌ ಸಂಜು ಬಾಬಾ ಬಿಟ್ರೆ ಬೇರೆಯವರಿಗೆ ಇಲ್ಲ! ಈ ರೀತಿಯ ಕಾಮೆಂಟುಗಳನ್ನು ಹಾಕಿದ್ದರು.

ಬಹಳಷ್ಟು ಜನ ಗಹಗಹಿಸಿ ನಗುವ ಎಮೋಜಿಗಳನ್ನು ಹಾಕಿದ್ದರು. ನನ್ನ ಪ್ರಶ್ನೆ ಅದಲ್ಲ. ಅದೇ ಒಬ್ಬಳು ನಟಿ ಅಥವಾ ಇನ್ಯಾರೋ ಮಹಿಳೆ ತಾನು ಇಪ್ಪತ್ತು ವಯಸ್ಸಿರುವಾಗ ಹನ್ನೆರಡು ವರ್ಷದ ಹುಡುಗನ ಜತೆ ಅಥವಾ ಹನ್ನೆರಡು ವಯಸ್ಸಿನಲ್ಲಿ ಇಪ್ಪತ್ತು ವರ್ಷದವನ ಜತೆ ಡೇಟಿಂಗ್‌ ಹೋಗಿದ್ದೆ ಎಂದು ಅಕಾಸ್ಮಾತ್‌ ಏನಾದರೂ ಬಾಯಿತಪ್ಪಿ ಹೇಳಿಬಿಟ್ಟಿದ್ದರೆ ಏನಾಗುತ್ತಿತ್ತು! ಇಂಟರ್‌ನೆಟ್‌ಗೆ ಬೆಂಕಿ ಬೀಳುತ್ತಿತ್ತು! ಸ್ಲ#ಟ್‌, ವೇ#ಶ್ಯೆ, ಹಾದ#ಗಿತ್ತಿ ಇಂತಹ ಎಂತೆಂತಹ ಶಬ್ದಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಬೀಳುತ್ತಿದ್ದವು.

ಗಂಡಸರಿಗೆ ಏನೂ ಹೇಳುವುದಿಲ್ಲ ಜನರು ಎಂದು ಸಂಜಯ್‌ ದತ್‌ಗೂ ಗೊತ್ತು! ಎರಡು ಮೂರು ಮದುವೆಯಾದ ಗಂಡಸರನ್ನು ಹೇಗೆ ಮೆನ್‌ಟೇನ್‌ ಮಾಡ್ತಾನೆ ನೋಡಿ ಎಂದೋ ಅಥವಾ ಹೆಂಗೆ ನಮ್ಮಣ್ಣ ಎಂದೋ ಅವನ ಪುರುಷತ್ವವನ್ನು ಹೊಗಳುವ ಇದೇ ಸಮಾಜ ವಿಧವೆಯೋ ವಿಚ್ಛೇದಿತೆಯೋ ಕಾನೂನು ಪ್ರಕಾರವಾಗಿ ಮದುವೆಯಾದರೂ ಅವಳನ್ನು ಸುಮ್ಮನೆ ಮಕ್ಕಳನ್ನು ನೋಡಿಕೊಂಡು ಇರುವುದು ಬಿಟ್ಟು ಮತ್ತೆ ಮದುವೆ ಏಕೆ ಬೇಕಿತ್ತು ಎಂದು ಮೂಗು ಮುರಿಯುತ್ತದೆ!

ಬಹುಶಃ ಇದೇ ಕಾರಣಕ್ಕೇ  ಸಂಜಯ್‌ ದತ್ ನಂತವರು ಬಿಂದಾಸ್‌ ಆಗಿ ತಮ್ಮ ಅಫೇರುಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಮತ್ತು ಅದನ್ನು ಸಮಾಜ ಸಹಜವಾಗಿ ಸ್ವೀಕರಿಸುತ್ತದೆ. ಹುಡುಗನೋ ಹುಡುಗಿಯೋ ಹನ್ನೆರಡರ ವಯಸ್ಸಿನಲ್ಲಿಯೇ ಡೇಟಿಂಗ್‌ ಹೋಗುವುದು ತಪ್ಪಲ್ಲವೇ ಎಂದು ಯೋಚಿಸುವ ಬದಲು ಹುಡುಗನಾದರೆ ಸರಿ ಹುಡುಗಿಯಾದರೆ ತಪ್ಪು ಎನ್ನುವ ಮನಸ್ಥಿತಿಯೇ ಹೆಣ್ಣುಮಕ್ಕಳ ಇಂದಿನ ಪರಿಸ್ಥಿತಿಗೆ ಕಾರಣ. ನಿಜಕ್ಕೂ ಬೇಸರದ ವಿಷಯ.

ದೀಪಾ ಹಿರೇಗುತ್ತಿ ಫೇಸ್‌ಬುಕ್‌ ಪೋಸ್ಟ್‌