ಕನ್ನಡ ಸುದ್ದಿ  /  ಮನರಂಜನೆ  /  Yash On Ramayana: ರಾಮಾಯಣ ಚಿತ್ರದಲ್ಲಿ ನಟಿಸ್ತಿಲ್ವ ಯಶ್‌? ನಿರ್ಮಾಪಕರಾಗಿ ಅಖಾಡಕ್ಕಿಳಿದ ರಾಕಿಂಗ್‌ ಸ್ಟಾರ್!

Yash On Ramayana: ರಾಮಾಯಣ ಚಿತ್ರದಲ್ಲಿ ನಟಿಸ್ತಿಲ್ವ ಯಶ್‌? ನಿರ್ಮಾಪಕರಾಗಿ ಅಖಾಡಕ್ಕಿಳಿದ ರಾಕಿಂಗ್‌ ಸ್ಟಾರ್!

ಕಳೆದ ಕೆಲ ದಿನಗಳಿಂದ ರಾಮಾಯಣ ಸಿನಿಮಾ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಚಿತ್ರದಲ್ಲಿ ಯಶ್‌ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈಗ ಮತ್ತೊಂದು ಹೊಸ ವಿಚಾರ ಹೊರಬಿದ್ದಿದೆ. ಈ ಚಿತ್ರದ ಸಹ ನಿರ್ಮಾಪಕರಾಗಿ ಯಶ್‌ ಹಣ ಹೂಡಿಕೆ ಮಾಡಲಿದ್ದಾರೆ.

Yash On Ramayana: ರಾಮಾಯಣ ಚಿತ್ರದಲ್ಲಿ ನಟಿಸ್ತಿಲ್ಲ ಯಶ್‌, ಆದ್ರೆ ನಿರ್ಮಾಪಕರಾಗಿ ಬಂಡವಾಳ ಹೂಡಲಿದ್ದಾರೆ!
Yash On Ramayana: ರಾಮಾಯಣ ಚಿತ್ರದಲ್ಲಿ ನಟಿಸ್ತಿಲ್ಲ ಯಶ್‌, ಆದ್ರೆ ನಿರ್ಮಾಪಕರಾಗಿ ಬಂಡವಾಳ ಹೂಡಲಿದ್ದಾರೆ!

Yash: ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ರಾಮಾಯಣ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ತರುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡೋದಿಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ರಾಮಾಯಣ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದು,  ನ್ಯಾಯ ಸಲ್ಲಿಸಲು ಹೆಜ್ಜೆ ಇರಿಸಿದ್ದೇವೆ. ಭಾರತದ ಸಂಸ್ಕ್ರತಿ ಪರಂಪರೆಯನ್ನು ಜಗತ್ತಿಗೆ ತೋರಿಸಲು ಕಾತರದಿಂದ ಕಾದಿದ್ದೇನೆ. ಉತ್ಸುಕನಾಗಿದ್ದೇನೆ. ನಾನು ಯಶ್ ಅವರಲ್ಲಿಯೂ ಇದನ್ನು ಕಂಡಿದ್ದೇನೆ. ಅವರ ಪಯಣದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಯಶ್ ಅವರ ಪ್ಲಾನಿಂಗ್‌ ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ಅದೇ ರೀತಿಯಲ್ಲಿ ತೆರೆಗೆ ತರುತ್ತಿದ್ದೇವೆ" ಎಂದಿದ್ದಾರೆ

ಯಶ್‌ ಹೇಳುವುದೇನು?

"ಭಾರತೀಯ ಸಿನಿಮಾಗಳೂ ಜಾಗತಿಕ ಮಟ್ಟದಲ್ಲಿ ಮಿಂಚಬೇಕು. ಅದು ನನ್ನ ಬಹುದಿನಗಳ ಕನಸೂ ಹೌದು. ಆ ನಿಟ್ಟಿನಲ್ಲಿ ನನಗೆ ಸಿಕ್ಕ ತಂಡವೇ ಇದು. ಅತ್ಯುತ್ತಮ VFX ಸ್ಟುಡಿಯೋ ನಮ್ಮ ಜತೆಗಿದೆ. ಸಿನಿಮಾ ಕ್ಷೇತ್ರ ಬೇರೆ ಬೇರೆ ವಿಚಾರಗಳ ಚರ್ಚೆ ವೇಳೆ ರಾಮಾಯಣವೂ ನಮ್ಮೆದುರಾಯ್ತು. ನಮ್ಮ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದು. ಈ ಮಹಾಕಾವ್ಯ ದೃಶ್ಯರೂಪ ತಾಳುತ್ತಿದೆ. ಆ  ಅನುಭವವನ್ನು ಜಗತ್ತಿಗೆ ನೀಡಲು ಕಾತರರಾಗಿದ್ದೇವೆ ಎಂದರು ಸಹ ನಿರ್ಮಾಪಕ ಯಶ್.‌

ಫೋಕಸ್ ಸ್ಟುಡಿಯೋ ಜತೆ ಮಾನ್‌ಸ್ಟರ್‌ ಮೈಂಡ್ಸ್‌

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕಂಟೆಂಟ್‌ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.

ಯಶ್ ತಮ್ಮದೇ ಮಾನಸ್ಟರ್‌ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ 'ಟಾಕ್ಸಿಕ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ 'ಮಾನ್‌ಸ್ಟರ್‌ ಮೈಂಡ್' ಕ್ರಿಯೇಷನ್ಸ್ ಕೂಡ 'ಟಾಕ್ಸಿಕ್' ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ 'ರಾಮಾಯಣ' ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.

ರಾಮಾಯಣದಲ್ಲಿ ನಟಿಸ್ತಿಲ್ವ ಯಶ್

ರಾಮಾಯಣ ಸಿನಿಮಾದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆಯಾದರೂ, ಆ ಬಗ್ಗೆ ಈ ವರೆಗೂ ಅಧಿಕೃತ ಮಾಹಿತಿ ಮಾತ್ರ ಹೊರಬಿದ್ದಿಲ್ಲ. ಬದಲಿಗೆ ಈಗ ಇದೇ ರಾಮಾಯಣಕ್ಕೆ ನಿರ್ಮಾಪಕರಾಗಿ ಯಶ್‌ ಹಣ ಹೂಡಲಿದ್ದಾರೆ ಎಂಬ ವಿಚಾರ  ಬಹಿರಂಗವಾಗಿದೆ. ಈ ಬಹುಕೋಟಿ ಬಜೆಟ್‌ನ ಸಿನಿಮಾದಲ್ಲಿ ಯಶ್‌ ಇರ್ತಾರಾ? ಎಂಬುದಕ್ಕೆ ಮುಂದಿನ ದಿನಗಳಲ್ಲಿಯೇ ಉತ್ತರ ಸಿಗಲಿದೆ. 

IPL_Entry_Point