ಕನ್ನಡ ಸುದ್ದಿ  /  Entertainment  /  Bollywood News Yodha Box Office Collection Day 1 Sidharth Malhotra Film Performs Well First Day Pcp

ಯೋಧ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ಕೆಲವು ಕೋಟಿ ಬಾಚಿಕೊಂಡ ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾ

Yodha box office collection day 1: ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ನಟನೆಯ ಯೋಧ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದಿನ ಅತ್ಯುತ್ತಮ ಗಳಿಕೆ ಮಾಡಿದೆ. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಸುಮಾರು 4 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಯೋಧ ಬಾಕ್ಸ್ ಆಫೀಸ್ ಕಲೆಕ್ಷನ್ ವರದಿ
ಯೋಧ ಬಾಕ್ಸ್ ಆಫೀಸ್ ಕಲೆಕ್ಷನ್ ವರದಿ

ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ  ಯೋಧ ಎಂಬ ಹಿಂದಿ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ ದಿನ  ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭ ಪಡೆದಿದೆ. ಸಕ್‌ನಿಲ್ಕ್‌.ಕಾಂ ಆರಂಭಿಕ ಅಂದಾಜು ವರದಿ ಪ್ರಕಾರ ಈ ಸಾಹಸಮಯ ಸಿನಿಮಾವು ಮೊದಲ ದಿನ 4.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾವನ್ನು ಚಿತ್ರವನ್ನು ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ನಿರ್ದೇಶಿಸಿದ್ದಾರೆ.

ಯೋಧ ಸಿನಿಮಾದಲ್ಲಿ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಹಸಭರಿತ ಥ್ರಿಲ್ಲರ್ ಚಿತ್ರದಲ್ಲಿ ಯೋಧಾ ಟಾಸ್ಕ್ ಫೋರ್ಸ್ ಎಂಬ ಘಟಕದ ಕಮಾಂಡಿಂಗ್ ಅಧಿಕಾರಿ ಅರುಣ್ ಕತ್ಯಾಲ್ ಅವರ ರಕ್ಷಣಾ ಕಾರ್ಯಾಚರಣೆಯ ಕಥೆ ಹೊಂದಿದೆ. ಈ ಚಿತ್ರವನ್ನು ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಶಶಾಂಕ್ ಖೈತಾನ್ ನಿರ್ಮಿಸಿದ್ದಾರೆ.

ಯೋಧ ಸಿನಿಮ ವಿಮರ್ಶೆ

ಹಿಂದೂಸ್ತಾನ್‌ ಟೈಮ್ಸ್‌ ಈಗಾಗಲೇ ಯೋಧ ಸಿನಿಮಾದ ವಿಮರ್ಶೆ ಪ್ರಕಟಿಸಿದೆ. "ಕಾಶ್ಮೀರ ಸಮಸ್ಯೆ, ಭಯೋತ್ಪಾದನೆಯ ವಿಚಾರವೇ ಸಿನಿಮಾದಲ್ಲಿದೆ. ನಾಯಕನು ರಾಕ್ಷಸನಂತೆ ಉಗ್ರರ ವಿರುದ್ಧ ಹೋರಾಡುತ್ತಾನೆ. ಬಳಿಕ ಈ ಚಿತ್ರ ಬೇರೆ ಕಡೆಗೆ ಹೊರಳುತ್ತದೆ. ವಿಮಾನದ ಹೈಜಾಕ್‌ ಕಥೆ ಆರಂಭವಾಗುತ್ತದೆ. ವಿಮಾನದೊಳಗೆ ಬಹುತೇಕ ಜನರು ಆಮ್ಲಜನಕದ ಮುಖವಾಡ ತೆಗೆಯಲು ಹೆಣಗಾಡುವಂತಹ ವಿವರವೂ ಇದೆ. ಏರೋನಾಟಿಕಲ್‌ ಸಿನಿಮಾವಾಗಿ ಗಮನಸೆಳೆಯುತ್ತದೆ". ಈ ಸಿನಿಮಾದ ಕುರಿತು ಮೊದಲ ದಿನ ಜನರು ಸಾಕಷ್ಟು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯೋಧ ಸಿನಿಮಾದ ಪ್ರಮೋಷನ್‌ಗಾಗಿ ಸಿದ್ಧಾರ್ಥ್ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಧ ಸಿನಿಮಾದ ಕುರಿತು ಮಾತನಾಡಿದ್ದರು. "ಯೋಧ ಸಂಪೂರ್ಣ ಕಾಲ್ಪನಿಕ ಕಥೆ. ಇದೊಂದು ತಂಡದ ಕಥೆ. ಈ ಚಿತ್ರದಲ್ಲಿ ಹಲವು ವಿಷಯಗಳಿವೆ. ನನ್ನ ಹಿಂದಿನ ಸಿನಿಮಾ ಶೇರ್‌ಷಾಗಿಂತ ಇದು ಭಿನ್ನವಾಗಿದೆ. ಇಲ್ಲಿ ನಾನು ಹೆಚ್ಚು ಶಕ್ತಿಯುತನಾಗಿದ್ದಾನೆ. ತೆಳ್ಳಗಾಗಿದ್ದೇನೆ. ವಿವಿಧ ರೀತಿಯ ಆಯುಧಗಳನ್ನು ಬಳಸುತ್ತೇನೆ. ಇದು ಕಮರ್ಷಿಯಲ್‌ ಮತ್ತು ಮನರಂಜನೆ ಗಮನದಲ್ಲಿಟ್ಟುಕೊಂಡು ತಯಾರಾದ ಚಿತ್ರ. ಇದು ಕಳೆದ ಒಂದು ದಶಕದಲ್ಲಿ ನಾನು ಮಾಡಿರುವ ಅತ್ಯುತ್ತಮ ಆಕ್ಷನ್‌ ಸಿನಿಮಾಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದ್ದರು.

ಬಾಲಿವುಡ್‌ನಲ್ಲಿ ಸುಮಾರು ದಿನಗಳ ಬಳಿಕ ಹೈಜಾಕ್‌ ಸಿನಿಮಾವೊಂದು ಬಂದಿದೆ. ಕೆಲವು ವರ್ಷಗಳ ಹಿಂದೆ ಸಾಕಷ್ಟು ಹೈಜಾಕ್‌ ಸಿನಿಮಾಗಳು ಬಂದಿರಬಹುದು. ಆದರೆ, ಈ ಚಿತ್ರದಲ್ಲಿ ಲವಲವಿಕೆಯ ಆಕ್ಷನ್‌ ಸೀನ್‌ಗಳು ಇವೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ದೇಶಕ ಸಾಗರ್‌ ಅಂಬ್ರೆ ಮತ್ತು ಪುಷ್ಕರ್‌ ಓಜಾ. ಅಮೆಜಾನ್‌ ಪ್ರೈಂ ಜತೆಯಾಗಿ ಹೊರತಂದ ಈ ಸಿನಿಮಾ ಆಕ್ಷನ್‌ಪ್ರಿಯರಿಗೆ ಇಷ್ಟವಾಗಬಹುದು.

IPL_Entry_Point