ಕನ್ನಡ ಸುದ್ದಿ  /  ಮನರಂಜನೆ  /  Mirzapur 3: ಸಹ ನಟಿ ಜತೆಗಿನ ಸಂಭೋಗ ದೃಶ್ಯದ ಬಗ್ಗೆ ಅಳುಕಿಲ್ಲದೇ ಮಾತನಾಡಿದ ತಮನ್ನಾ ಭಾಟಿಯಾ ಪ್ರಿಯಕರ ವಿಜಯ್‌ ವರ್ಮಾ

Mirzapur 3: ಸಹ ನಟಿ ಜತೆಗಿನ ಸಂಭೋಗ ದೃಶ್ಯದ ಬಗ್ಗೆ ಅಳುಕಿಲ್ಲದೇ ಮಾತನಾಡಿದ ತಮನ್ನಾ ಭಾಟಿಯಾ ಪ್ರಿಯಕರ ವಿಜಯ್‌ ವರ್ಮಾ

ಮಿರ್ಜಾಪುರ್‌ ಸೀಸನ್‌ 3 ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇದೆ. ಅಮೆಜಾನ್‌ ಪ್ರೈಂನಲ್ಲಿ ಇದೇ ಜುಲೈ 5ರಿಂದ ಈ ಸರಣಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ನಡುವೆ ಸೀಸನ್‌ 2ರಲ್ಲಿನ ಶ್ವೇತಾ ತ್ರಿಪಾಠಿ ಜತೆಗಿನ ಆಪ್ತ ದೃಶ್ಯಗಳ ಬಗ್ಗೆ ತಮನ್ನಾ ಭಾಟಿಯಾ ಪ್ರಿಯಕರ ವಿಜಯ್‌ ವರ್ಮಾ ಮಾತನಾಡಿದ್ದಾರೆ.

Mirzapur 3: ಸಹ ನಟಿ ಜತೆಗಿನ ಸಂಭೋಗ ದೃಶ್ಯ! ಅಳುಕಿಲ್ಲದೇ ಮಾತನಾಡಿದ ತಮನ್ನಾ ಭಾಟಿಯಾ ಪ್ರಿಯಕರ ವಿಜಯ್‌ ವರ್ಮಾ
Mirzapur 3: ಸಹ ನಟಿ ಜತೆಗಿನ ಸಂಭೋಗ ದೃಶ್ಯ! ಅಳುಕಿಲ್ಲದೇ ಮಾತನಾಡಿದ ತಮನ್ನಾ ಭಾಟಿಯಾ ಪ್ರಿಯಕರ ವಿಜಯ್‌ ವರ್ಮಾ

Mirzapur 3: ಈಗಾಗಲೇ ಎರಡು ಸೀಸನ್‌ಗಳಿಂದ ಗಮನ ಸೆಳೆದಿರುವ ಮಿರ್ಜಾಪುರ್‌ ವೆಬ್‌ಸಿರೀಸ್‌, ಇದೀಗ ಮೂರನೇ ಸಿರೀಸ್‌ ಹೊರತರುತ್ತಿದೆ. ಈ ಬಹುನಿರೀಕ್ಷಿತ ವೆಬ್ ಸರಣಿ ಜುಲೈ 5 ರಂದು ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್‌ ಮೂಲಕ ಕುತೂಹಲಕ್ಕೆ ಒಗ್ಗರಣೆ ಹಾಕಿದೆ ಈ ಸಿರೀಸ್‌. ಸೀಸನ್ 3ರಲ್ಲಿ, ಮಿರ್ಜಾಪುರದ ಗದ್ದುಗೆ ಏರುವವರಾರು? ಎಂಬ ಕುತೂಹಲ ಎಲ್ಲರಲ್ಲೂ ಇದೆ. ರಕ್ತಪಾತದ ಹೊಸ ಅಧ್ಯಾಯವೂ ಈ ಸಿರೀಸ್‌ನಲ್ಲಿ ಮುಂದುವರಿದಿದೆ. ಈ ನಡುವೆ ಇದೇ ಸಿರೀಸ್‌ನಲ್ಲಿ ಆಪ್ತ ದೃಶ್ಯಗಳೂ ಹೈಲೈಟ್.

ಅದೇ ರೀತಿ ಮಿರ್ಜಾಫುರ್‌ ಸೀಸನ್‌ 2ರಲ್ಲಿ ಗುಲ್ಲು (ಶ್ವೇತಾ ತ್ರಿಪಾಠಿ) ಮತ್ತೆ ಚೋಟೂ (ವಿಜಯ್‌ ವರ್ಮಾ) ನಡುವಿನ ಆಪ್ತ ದೃಶ್ಯಗಳೂ ನೋಡುಗರ ಕಣ್ಣರಳಿಸಿದ್ದವು. ಆ ದೃಶ್ಯಗಳು ಮೂಡಿಬಂದ ಬಗೆ ಹೇಗೆ, ಚಿತ್ರೀಕರಣದ ಕ್ಷಣಗಳು ಹೇಗಿರುತ್ತಿದ್ದವು, ಆ ದೃಶ್ಯಕ್ಕಾಗಿ ಕಲಾವಿದರು ಹೇಗೆ ತಯಾರಾಗುತ್ತಿದ್ದರು ಎಂಬ ಬಗ್ಗೆ ಮಿರ್ಜಾಪುರ್‌ ಸೀಸನ್‌ 3 ಬಿಡುಗಡೆಯ ಈ ಸಂದರ್ಭದಲ್ಲಿ ನಟ ವಿಜಯ್‌ ವರ್ಮಾ ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಿಮ್ಮ ಭಾವನೆಗಳನ್ನು ದೃಶ್ಯದಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ

"ಸಿನಿಮಾಗಳಲ್ಲಿ ಡಾನ್ಸ್‌ ಮತ್ತು ಫೈಟ್‌ಗಳಿಗೆ ಹೇಗೆ ಕೋರಿಯೋಗ್ರಾಫಿ ಮಾಡಲಾಗುತ್ತದೆಯೂ ಇಂಟಿಮೇಟ್‌ ಸೀನ್‌ಗಳನ್ನೂ ಹಾಗೇ ಶೂಟ್‌ ಮಾಡಲಾಗುತ್ತದೆ. ಇಲ್ಲಿ ಆ ದೃಶ್ಯದ ನಿರ್ದೇಶಕರಿಗೂ, ನಾನು ಮತ್ತು ನನ್ನ ಪಾರ್ಟನರ್‌ಗೂ ತಯಾರಿ ಅಗತ್ಯ ಇದ್ದೇ ಇರುತ್ತದೆ. ಇಂಟಿಮೇಟ್‌ ದೃಶ್ಯದ ಸಂದರ್ಭದಲ್ಲಿ ಏನನ್ನು ಮುಟ್ಟಬೇಕು, ಏನನ್ನು ಮುಟ್ಟಬಾರದು ಎಂದು ಎಲ್ಲವನ್ನೂ ವಿವರಿಸಿರುತ್ತಾರೆ. ಸೇಫ್‌ ಝೋನ್‌ನಲ್ಲಿಯೇ ನಾವು ರೊಮ್ಯಾಂಟಿಕ್‌ ಸೀನ್‌ಗಳನ್ನು ಮಾಡಬೇಕಾಗುತ್ತದೆ. ಸಂಭೋಗದ ರೀತಿಯ ಸೀನ್‌ಗಳಲ್ಲಿ ನಿಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ"

ಇಂಟಿಮೇಟ್‌ ಸೀನ್‌ಗಳಿಗಾಗಿಯೇ ವಿಶೇಷ ವಾತವರಣ

"ಇಂಟಿಮೇಟ್‌ ದೃಶ್ಯಗಳು ಚೆನ್ನಾಗಿ ಬರಬೇಕೆಂಬ ಉದ್ದೇಶದಿಂದಲೇ, ಇಡೀ ಸೆಟ್‌ನಲ್ಲಿ ಹೆಚ್ಚು ಜನರು ಇರುವುದಿಲ್ಲ. ಪಾರ್ಟನರ್‌ ಜತೆಗೆ ಹೆಚ್ಚು ಹೊತ್ತು ಸಮಯ ಕಳೆಯಲು ನಿರ್ದೇಶಕರು ಹೇಳುತ್ತಾರೆ. ಇಬ್ಬರ ನಡುವೆ ಆತ್ಮೀಯ ಭಾವ ಕ್ರಿಯೇಟ್‌ ಮಾಡುತ್ತಾರೆ. ಅಲ್ಲಿ ನಾವು ಎಷ್ಟು ಹೊತ್ತು ಮಾತನಾಡುತ್ತ, ಸಮಯ ಕಳೆಯುತ್ತೇವೋ ಅದು ಶೂಟಿಂಗ್‌ ಸಮಯದಲ್ಲಿ ತುಂಬ ಸಹಕಾರಿಯಾಗುತ್ತದೆ. ನಮ್ಮಿಬ್ಬರ ಪೇರ್‌ ಸಹ ಅಷ್ಟೇ ನೈಜವಾಗಿಯೇ ಮೂಡಿಬರುತ್ತದೆ"

ಹುಡುಗನಾದವನು ಮನುಷ್ಯನಾಗ್ತಾನೆ..

"ಇಂಥ ದೃಶ್ಯಗಳಿಂದ ಕಲಿಕೆಗೆ ಅವಕಾಶ ಸಿಗುತ್ತದೆ. ನಮ್ಮ ಪಾರ್ಟನರ್‌ನಿಂದ ಕಲಿಯಲು ಸಾಕಷ್ಟು ವಿಷಯಗಳು ಸಿಗುತ್ತವೆ. ಪ್ರತಿ ವಿಷಯವನ್ನೂ ನೀವಿಲ್ಲಿ ಡಿಸ್ಕವರ್‌ ಮಾಡುತ್ತ ಹೋಗುತ್ತೀರಿ. ಬೇರೆ ಬೇರೆ ಎನರ್ಜಿಗಳು ಆ ಸನ್ನಿವೇಶಗಳಲ್ಲಿ ಒಂದಾಗುತ್ತವೆ. ಹುಡುಗನ ಮನಸ್ಥಿತಿಯಿಂದ ಮನುಷ್ಯನಾಗಿ ಬದಲಾಗುತ್ತೇವೆ. ಅದೇ ರೀತಿಯೇ ನನ್ನ ಮತ್ತು ಶ್ವೇತಾ ತ್ರಿಪಾಠಿಯ ಆಪ್ತ ದೃಶ್ಯಗಳು ಮೂಡಿಬಂದಿವೆ. ಇದು ಒಬ್ಬ ಹುಡುಗಿಯನ್ನು ತುಂಬಾ ಪ್ರೀತಿಸುವ ರೊಮ್ಯಾಂಟಿಕ್‌ ಹುಡುಗನ ಸ್ಟೋರಿ ಲೈನ್ ಎಂದಿದ್ದಾರೆ ವಿಜಯ್‌ ವರ್ಮ"