OTT Comedy Movie: ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್‌ ಸಿನಿಮಾ; 8 ವರ್ಷಗಳಲ್ಲಿ 26 ಬಾರಿ ರಿಮೇಕ್‌ ಆದ ಚಿತ್ರವಿದು
ಕನ್ನಡ ಸುದ್ದಿ  /  ಮನರಂಜನೆ  /  Ott Comedy Movie: ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್‌ ಸಿನಿಮಾ; 8 ವರ್ಷಗಳಲ್ಲಿ 26 ಬಾರಿ ರಿಮೇಕ್‌ ಆದ ಚಿತ್ರವಿದು

OTT Comedy Movie: ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್‌ ಸಿನಿಮಾ; 8 ವರ್ಷಗಳಲ್ಲಿ 26 ಬಾರಿ ರಿಮೇಕ್‌ ಆದ ಚಿತ್ರವಿದು

Khel Khel Mein OTT: ಅಕ್ಷಯ್ ಕುಮಾರ್ ಅಭಿನಯದ ಖೇಲ್ ಖೇಲ್ ಮೇ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಪಾಸಿಟಿವ್‌ ಪ್ರತಿಕ್ರಿಯೆ ಸಿಗಲಿಲ್ಲ. ಸಿನಿಮಾದಲ್ಲಿನ ಹಾಸ್ಯ ದೃಶ್ಯಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಿದರೂ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಾಣಲಿಲ್ಲ. ಈಗ ಇದೇ ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ.

 ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್‌ ಸಿನಿಮಾ ಖೇಲ್ ಖೇಲ್ ಮೇ
ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್‌ ಸಿನಿಮಾ ಖೇಲ್ ಖೇಲ್ ಮೇ

OTT Comedy Movie: ಬಾಲಿವುಡ್‌ನ ಕಾಮಿಡಿ ಸಿನಿಮಾ ಈಗ ಒಟಿಟಿಗೆ ಪ್ರವೇಶಿಸುತ್ತಿದೆ. ಅಕ್ಷಯ್ ಕುಮಾರ್, ಫರ್ದೀನ್ ಖಾನ್, ತಾಪ್ಸಿ ಪನ್ನು ಮತ್ತು ವಾಣಿ ಕಪೂರ್ ಅಭಿನಯದ ಖೇಲ್ ಖೇಲ್ ಮೇ ಸಿನಿಮಾ ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಈ ಖೇಲ್ ಖೇಲ್ ಮೇ ಸಿನಿಮಾ ಇಟಾಲಿಯನ್ ಭಾಷೆಯ ಪರ್ಫೆಕ್ಟ್ ಸ್ಟ್ರೇಂಜರ್ಸ್‌ನ ಹಿಂದಿ ರಿಮೇಕ್ ಆಗಿದ್ದು, ಈ ಸಿನಿಮಾ ವಿಶ್ವದಾದ್ಯಂತ ಹೆಚ್ಚು ಬಾರಿ ರಿಮೇಕ್ ಆಗಿದೆ.

ಖೇಲ್ ಖೇಲ್ ಮೇ ಒಟಿಟಿ ಬಿಡುಗಡೆ ದಿನಾಂಕ

ಅಕ್ಷಯ್ ಕುಮಾರ್ ಅಭಿನಯದ ಖೇಲ್ ಖೇಲ್ ಮೇ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಪಾಸಿಟಿವ್‌ ಪ್ರತಿಕ್ರಿಯೆ ಸಿಗಲಿಲ್ಲ. ಸಿನಿಮಾದಲ್ಲಿನ ಹಾಸ್ಯ ದೃಶ್ಯಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಿದರೂ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಾಣಲಿಲ್ಲ. 100 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 56 ಕೋಟಿ ಮಾತ್ರ ಕಲೆಕ್ಷನ್ ಮಾಡುವಷ್ಟರಲ್ಲಿ ಸುಸ್ತು ಹೊಡೆದಿತ್ತು. ಇದೀಗ ಒಟಿಟಿಗೆ ಆಗಮಿಸುತ್ತಿದೆ.

ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಸುಮಾರು ಎರಡು ತಿಂಗಳ ನಂತರ, ಒಟಿಟಿ ಪ್ರವೇಶ ಅಧಿಕೃತಗೊಳಿಸಿದೆ. ಅಕ್ಟೋಬರ್ 9 ರಿಂದ Netflix OTTಯಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ. ಈ ಖೇಲ್ ಖೇಲ್ ಮೇ ಸಿನಿಮಾ, ಇಟಾಲಿಯನ್‌ ಮೂಲದ ಪರ್ಫೆಕ್ಟ್ ಸ್ಟ್ರೇಂಜರ್ಸ್ ಚಿತ್ರದ ರಿಮೇಕ್.‌ ಕೇವಲ 8 ವರ್ಷಗಳಲ್ಲಿ 26 ಬೇರೆ ಬೇರೆ ಭಾಷೆಗಳಿಗೆ ಈ ಸಿನಿಮಾ ರಿಮೇಕ್ ಆಗಿದೆ. ಹೀಗಿದ್ದರೂ ಈ ಸಿನಿಮಾ ಭಾರತೀಯ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿದೆ.

ಗಿನ್ನೆಸ್ ದಾಖಲೆ ಬರೆದಿದೆ ಮೂಲ ಸಿನಿಮಾ

ಈ ಖೇಲ್ ಖೇಲ್ ಮೇ ಸಿನಿಮಾ 2016ರಲ್ಲಿ ಇಟಾಲಿಯನ್ ಭಾಷೆಯಲ್ಲಿ ನಿರ್ಮಾಣವಾಗಿದೆ. ಇಟಾಲಿಯನ್‌ ಭಾಷೆಯಲ್ಲಿ ಪರ್ಫೆಟ್ಟಿ ಸ್ಕೋನೋಸಿಯುಟಿ ಎಂಬ ಈ ಸಿನಿಮಾಕ್ಕೆ ಇಂಗ್ಲಿಷ್‌ನಲ್ಲಿ ಪರ್ಫೆಕ್ಟ್ ಸ್ಟ್ರೇಂಜರ್ಸ್ ಎಂದರ್ಥ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ 26 ಬಾರಿ ರೀಮೇಕ್ ಆದ ಚಿತ್ರದ ಎಂದು ಅಧಿಕೃತವಾಗಿ ಘೋಷಿಸಿದೆ.

ಈ ಸಿನಿಮಾ ಈಗಾಗಲೇ ಫ್ರೆಂಚ್, ಕೊರಿಯನ್, ಮ್ಯಾಂಡರಿನ್, ರಷ್ಯನ್, ಅರೇಬಿಕ್, ರೊಮೇನಿಯನ್, ಹೀಬ್ರೂ, ಜರ್ಮನ್ ಸೇರಿ ಸಾಕಷ್ಟು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿದೆ. ಅಷ್ಟಕ್ಕೂ ಕಳೆದ ವರ್ಷ ತೆಲುಗಿನಲ್ಲಿ ತೆರೆಕಂಡ ರಿಚಿ ಗಾಡಿ ಪೆಲ್ಲಿ ಕೂಡ ಅದೇ ಸಾಲಿನಲ್ಲಿ ಸಾಗುತ್ತಿದೆ. ಆದರೆ ಇದು ಪರ್ಫೆಕ್ಟ್ ಸ್ಟ್ರೇಂಜರ್ಸ್ ರಿಮೇಕ್ ಎಂದು ಚಿತ್ರ ನಿರ್ಮಾಪಕರು ಎಲ್ಲಿಯೂ ಹೇಳಿಲ್ಲ.

Whats_app_banner