ಕನ್ನಡ ಸುದ್ದಿ  /  ಮನರಂಜನೆ  /  Ott News: ಕೊಲೆ ಪ್ರಕರಣ ಭೇದಿಸಲು ಬಂದ ನವಾಜುದ್ದೀನ್‌ ಸಿದ್ಧೀಕಿ; ಒಟಿಟಿ ಅಂಗಳ ಪ್ರವೇಶಿಸಿದ ರೌತು ಕಾ ರಾಜ್ ಸಿನಿಮಾ, ವೀಕ್ಷಣೆ ಎಲ್ಲಿ?

OTT News: ಕೊಲೆ ಪ್ರಕರಣ ಭೇದಿಸಲು ಬಂದ ನವಾಜುದ್ದೀನ್‌ ಸಿದ್ಧೀಕಿ; ಒಟಿಟಿ ಅಂಗಳ ಪ್ರವೇಶಿಸಿದ ರೌತು ಕಾ ರಾಜ್ ಸಿನಿಮಾ, ವೀಕ್ಷಣೆ ಎಲ್ಲಿ?

ಮರ್ಡರ್‌ ಮಿಸ್ಟರಿ ಹಿನ್ನೆಲೆಯ ರೌತು ಕಾ ರಾಜ್ ಚಿತ್ರವು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

Rautu Ka Raaz OTT: ಕೊಲೆ ಪ್ರಕರಣ ಭೇದಿಸಲು ಬಂದ ನವಾಜುದ್ದೀನ್‌ ಸಿದ್ಧೀಕಿ; ಒಟಿಟಿ ಅಂಗಳ ಪ್ರವೇಶಿಸಿದ ರೌತು ಕಾ ರಾಜ್ ಸಿನಿಮಾ
Rautu Ka Raaz OTT: ಕೊಲೆ ಪ್ರಕರಣ ಭೇದಿಸಲು ಬಂದ ನವಾಜುದ್ದೀನ್‌ ಸಿದ್ಧೀಕಿ; ಒಟಿಟಿ ಅಂಗಳ ಪ್ರವೇಶಿಸಿದ ರೌತು ಕಾ ರಾಜ್ ಸಿನಿಮಾ

Rautu Ka Raaz OTT: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅಭಿನಯದ ರೌತು ಕಾ ರಾಜ್ ಚಿತ್ರವು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಜೀ5 OTTಯಲ್ಲಿ ಸ್ಟ್ರೀಮ್ ಆಗುತ್ತಿರುವ, ರೌತು ಕಾ ರಾಜ್ ಚಿತ್ರವನ್ನು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದು. ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಚಿತ್ರವನ್ನು ಆನಂದ್ ಸುರಪುರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ದೀಪಕ್ ನೇಗಿ ಎಂಬ ಪೊಲೀಸ್ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಕಾಣಿಸಿಕೊಂಡಿದ್ದಾರೆ. ಈ ಕಥೆಯು ಉತ್ತರಾಖಂಡದ ರೌತು ಕಿ ಬೇಲಿ ಎಂಬ ಹಳ್ಳಿಯಲ್ಲಿ ನಡೆಯುತ್ತದೆ.

ಮರ್ಡರ್‌ ಮಿಸ್ಟರಿ ಹಿನ್ನೆಲೆಯ ಸಿನಿಮಾ..

ಹದಿನೈದು ವರ್ಷಗಳಿಂದ ಯಾವುದೇ ಅಪರಾಧಗಳು ನಡೆದಿಲ್ಲದ ರೌತು ಕಿ ಬೇಲಿ ಗ್ರಾಮದಲ್ಲಿ ಒಂದು ಕೊಲೆ ನಡೆಯುತ್ತದೆ. ಅಂಧರ ಶಾಲೆಯಲ್ಲಿ ವಾರ್ಡನ್ ಅನುಮಾನಾಸ್ಪದ ಸಾವು ಸಂಚಲನ ಸೃಷ್ಟಿಸುತ್ತದೆ. ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿ ದೀಪಕ್ ನೇಗಿ (ನವಾಜುದ್ದೀನ್ ಸಿದ್ದಿಕಿ) ಮತ್ತು ಇನ್‌ಸ್ಪೆಕ್ಟರ್‌ ಡಿಮ್ರಿ (ರಾಜೇಶ್ ಕುಮಾರ್) ಈ ಪ್ರಕರಣವನ್ನು ಹೇಗೆ ಬೇಧಿಸುತ್ತಾರೆ? ವಾರ್ಡನ್ ಕೊಂದವರು ಯಾರು? ನಿಜವಾದ ಆರೋಪಿಗಳನ್ನು ಹಿಡಿಯಲು ದೀಪಕ್ ಮತ್ತು ಡಿಮ್ರಿ ಎದುರಿಸಿದ ಅಡೆತಡೆಗಳೇನು ಎಂಬುದೇ ಈ ಸಿನಿಮಾದ ಹೈಲೈಟ್‌. ಮರ್ಡರ್ ಮಿಸ್ಟರಿ ಜತೆಗೆ ಕಾಮಿಡಿಯೂ ಈ ಸಿನಿಮಾದಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಕ್ರೈಂ ಇನ್ವೆಸ್ಟಿಗೇಷನ್‌ ಥ್ರಿಲ್ಲರ್ ಸಿನಿಮಾದಲ್ಲಿ ರಾಜೇಶ್ ಕುಮಾರ್, ಅತುಲ್ ತಿವಾರಿ ಮತ್ತು ನಾರಾಯಣಿ ಶಾಸ್ತ್ರಿ ಜೊತೆಗೆ ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೌತು ಕಾ ರಾಜ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನವಾಜುದ್ದೀನ್ ಸಿದ್ದಿಕಿ ಅವರ ನಟನೆ ಮತ್ತು ಕಾಮಿಡಿ ಟೈಮಿಂಗ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಚಿತ್ರಕ್ಕೆ ಒಟಿಟಿ ಪ್ರೇಕ್ಷಕರಿಂದ ಪಾಸಿಟಿವ್ ಟಾಕ್ ಸಿಗುತ್ತಿದೆ. ನವಾಜುದ್ದೀನ್ ಸಿದ್ದಿಕಿ ಅಭಿನಯದ ಹಡ್ಡಿ ಚಿತ್ರವು ಕಳೆದ ವರ್ಷ G5 TT ನಲ್ಲಿ ನೇರವಾಗಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ನವಾಜುದ್ದೀನ್ ಸಿದ್ದಿಕಿ ಒಟಿಟಿಯಲ್ಲಿ ರೌತು ಕಿ ರಾಜ್‌ ಮೂಲಕ ಮತ್ತೊಂದು ಹಿಟ್‌ ಪಡೆದಿದ್ದಾರೆ.

ಸೈಂಧವ್ ಜೊತೆ ಟಾಲಿವುಡ್‌ಗೆ...

ನವಾಜುದ್ದೀನ್ ಸಿದ್ದಿಕಿ ಈ ವರ್ಷ ಸೌತ್‌ ಕಡೆಗೆ ಆಗಮಿಸಿದ್ದರು. ವೆಂಕಟೇಶ್ ದಗ್ಗುಬಾಟಿ ನಟನೆಯ ಸೈಂಧವ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈ ಆಕ್ಷನ್‌ ಚಿತ್ರದಲ್ಲಿ ಖಳನಾಯಕನಾಗಿ ನವಾಜುದ್ದೀನ್‌ ನಟಿಸಿದ್ದರು. ಆದರೆ ಕಥೆಯಲ್ಲಿ ಹೊಸತನ ಇಲ್ಲದ ಕಾರಣ ಈ ಸಿನಿಮಾ ಕಮರ್ಷಿಯಲ್ ಆಗಿ ಯಶ್‌ ಕಾಣಲಿಲ್ಲ. ಸದ್ಯ ನವಾಜುದ್ದೀನ್ ಸಿದ್ದಿಕಿ ಹಿಂದಿಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.