Raid 2 song: ನಶಾ ಹಾಡಿನ ಮೂಲಕ ಅಭಿಮಾನಿಗಳಿಗೆ ನಶೆ ಹಿಡಿಸಿದ ತಮನ್ನಾ ಭಾಟಿಯಾ; ರೈಡ್ 2 ಹಾಡು ಇಲ್ಲಿದೆ ನೋಡಿ
Raid 2 song: ರೈಡ್ 2 ಸಿನಿಮಾದ ನಶಾ ಹಾಡು ಬಿಡುಗಡೆಯಾಗಿದೆ. ಈ ಸಾಂಗ್‌ನಲ್ಲಿ ತಮನ್ನಾ ಹಾಟ್‌ನೆಸ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಆದರೆ, ಕೆಲವರು ಇದು ಸ್ತ್ರೀ 2 ಸಿನಿಮಾದ ಆಜ್ ಕಿ ರಾತ್‌ನಷ್ಟು ಉತ್ತಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Raid 2 song: ಅಜಯ್ ದೇವಗನ್ ಮತ್ತು ರಿತೇಶ್ ದೇಶ್ ಮುಖ್ ನಟನೆಯ ರೈಡ್ 2 ಸಿನಿಮಾದಲ್ಲಿ ತಮನ್ನಾ ಭಾಟಿಯಾ ವಿಶೇಷ ಡ್ಯಾನ್ಸ್ ಪ್ರದರ್ಶಿಸಿದ್ದಾರೆ. ಇದೀಗ ರೈಡ್ 2 ಸಿನಿಮಾದ ನಶಾ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ತಮನ್ನಾ ತಮ್ಮ ಅಭಿಮಾನಿಗಳಿಗಾಗಿ ಆಕರ್ಷಕ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಹಾಡಿನಲ್ಲಿ ಎಲ್ಲರೂ ಬಾಟಲ್ ಹಿಡಿದು ಕುಡಿಯುತ್ತಿದ್ದಾರೆ. ಅವರ ನಡುವೆ ತಮನ್ನಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇಂದು ಇಂಟರ್‌ನೆಟ್‌ನಲ್ಲಿ ನಶಾ ಹಾಡು ನಶೆ ಎಬ್ಬಿಸಿದೆ. ಆದರೆ, ಕೆಲವರ ಪ್ರಕಾರ ಈ ಹಾಡು ತಮನ್ನಾ ಅವರ ಈ ಹಿಂದಿನ ಸ್ತ್ರೀ 2 ಸಿನಿಮಾದ ಆಜ್ ಕಿ ರಾತ್‌ನಷ್ಟು ಕಿಕ್ ನೀಡುತ್ತಿಲ್ಲ ಎಂದಿದ್ದಾರೆ.
ತಮನ್ನಾ ಭಾಟಿಯಾ ಶುಕ್ರವಾರ ಮಧ್ಯಾಹ್ನ ತಮ್ಮ ಯೂಟ್ಯೂಬ್‌ನಲ್ಲಿ ತಮ್ಮ ರೈಡ್ 2 ಹಾಡನ್ನು ಹಂಚಿಕೊಂಡಿದ್ದಾರೆ. ಈ ಹಾಡಿನಲ್ಲಿ ತಮನ್ನಾ ತನ್ನ ಸಿಜ್ಲಿಂಗ್ ಚಲನೆಗಳೊಂದಿಗೆ ಗ್ಲಾಮರ್ ಸೇರಿದೆ. ಇವರ ಬೆಲ್ಲಿ ಡ್ಯಾನ್ಸ್‌ಗೆ ಫ್ಯಾನ್ಸ್ ಖುಷಿಗೊಂಡಿದ್ದಾರೆ. ಈ ಹಾಡಿಗೆ ಜಾನಿ ಸಾಹಿತ್ಯ ಬರೆದಿದ್ದು, ಜಾಸ್ಮಿನ್ ಸ್ಯಾಂಡ್ಲಾಸ್, ಸಚೇತ್ ಟಂಡನ್, ದಿವ್ಯಾ ಕುಮಾರ್ ಮತ್ತು ಸುಮೊಂತೊ ಮುಖರ್ಜಿ ಧ್ವನಿ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ತಮನ್ನಾ ಭಾಟಿಯಾ ಅವರು ಬ್ಲಾಕ್‌ಬಸ್ಟರ್ ಐಟಂ ಡ್ಯಾನ್ಸ್ ನೀಡಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. 2023ರಲ್ಲಿ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಹಿಟ್ ಹಾಡಾದ ಕಾವಾಲಾದಲ್ಲಿ ಕಾಣಿಸಿಕೊಂಡರು. ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಈ ಹಾಡಿನ ಹುಕ್ ಸ್ಟೆಪ್ ವೈರಲ್ ಆಗಿತ್ತು. ಸಚಿನ್-ಜಿಗರ್ ಸಂಯೋಜಿಸಿದ ಆಜ್ ಕಿ ರಾತ್ ಐಟಂ ಡ್ಯಾನ್ಸ್ ಇನ್ನಷ್ಟು ಫೇಮಸ್ ಆಗಿತ್ತು.
ಇದೀಗ ಬಿಡುಗಡೆಯಾದ ರೈಡ್ 2ನ ನಶಾ ಹಾಡಿಗೆ ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. "ಅವಳ ನೃತ್ಯ ನಮ್ಮನ್ನು ಕೊಲ್ಲುವಂತೆ ಇದೆ" "ನೀವು ಹಂಸದಂತೆ ನರ್ತಿಸುವಿರಿ. ಈ ಹಾಡು ಅದ್ಭುತವಾಗಿದೆ", "ಈಕೆಯನ್ನು ನೋಡಿದಾಗ ನಾನು ಪರವಶಗೊಳ್ಳುವೆ. ಅವಳ ಸೌಂದರ್ಯ, ಡ್ಯಾನ್ಸ್.. ಅಬ್ಬಾಬ್ಬಾ..." ... ಹೀಗೆ ಈ ಹಾಡು ಮತ್ತು ಡ್ಯಾನ್ಸ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಆದರೆ, ಕೆಲವರಿಗೆ ಈ ಡ್ಯಾನ್ಸ್ ಅತ್ಯುತ್ತಮ ಎನಿಸಿಲ್ಲ. ತಮನ್ನಾ ಅವರ ಈ ಹಿಂದಿನ ಆಜ್ ಕಿ ರಾತ್‌ನಷ್ಟು ಅದ್ಭುತವಾಗಿಲ್ಲ ಎಂದಿದ್ದಾರೆ. "ಈ ಡ್ಯಾನ್ಸ್‌ನ ನೋಟ ಮತ್ತು ಈಕೆಯ ಚಲನೆ ಆಜ್ ಕಿ ರಾತ್ ಅನ್ನು ಹೋಲುತ್ತದೆ", "ತಮನ್ನಾ ಎಂದಿನಂತೆ ಸುಂದರವಾಗಿದ್ದಾರೆ. ಆದರೆ, ಈ ಹಾಡು ಕಸದಂತೆ ಇದೆ. ಆಜ್ ಕಿ ರಾತ್ ಅದ್ಭುತವಾಗಿತ್ತು", "ಆಜ್ ಕಿ ರಾತ್ ಅನ್ನು ಮೀರಿಸುವ ಯಾವುದೇ ಡ್ಯಾನ್ಸ್ ಇಲ್ಲ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ರೈಡ್ 2 ಸಿನಿಮಾದ ಬಗ್ಗೆ
ರೈಡ್ 2 ಸಿನಿಮಾದ ಮೊದಲ ಹಾಡು ನಶಾ. ರಾಜ್ ಕುಮಾರ್ ಗುಪ್ತಾ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ಅಜಯ್ ದೇವಗನ್ ಐಆರ್‌ಎಸ್ ಅಧಿಕಾರಿ ಅಮಯ್ ಪಟ್ನಾಯಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಿತೇಶ್ ದೇಶ್ ಮುಖ್ ಖಳನಾಯಕನಾಗಿ ನಟಿಸಿದ್ದಾರೆ. ಇಲಿಯಾನಾ ಡಿಕ್ರೂಜ್ ಬದಲಿಗೆ ಅಜಯ್ ಪತ್ನಿಯಾಗಿ ವಾಣಿ ಕಪೂರ್ ನಟಿಸಿದ್ದಾರೆ. ಈ ಚಿತ್ರವು ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
