ಕನ್ನಡ ಸುದ್ದಿ  /  ಮನರಂಜನೆ  /  ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

ಮುಂಬೈನ ಅಟಲ್‌ ಸೇತು ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆಯ ಪೋಸ್ಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ನೆಟ್ಟಿಗರು ಮಾತ್ರ ನಟಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ. ಟ್ರೋಲ್‌ಗೆ ಹೀಗಿದೆ ಕಾರಣ.

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು
ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Rashmika Mandanna gets Trolled: ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ ಅಂಗಳದಲ್ಲಿಯೇ ಹೆಚ್ಚು ಮನ್ನಣೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತ ತೆಲುಗುನಲ್ಲಿಯೂ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಟನೆ ಮಾತ್ರವಲ್ಲದೆ ಜಾಹೀರಾತು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ. ಸ್ಟಾರ್‌ ನಟಿಯಾಗಿ ಬೆಳೆದಿರುವ ರಶ್ಮಿಕಾಗೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಅದಕ್ಕೆ ಕಾರಣ; ರಶ್ಮಿಕಾ ಹಂಚಿಕೊಂಡ ಇತ್ತೀಚಿನ ವಿಡಿಯೋ.

ಟ್ರೆಂಡಿಂಗ್​ ಸುದ್ದಿ

ಸೋಷಿಯಲ್‌ ಮೀಡಿಯಾದಲ್ಲಿ ನಟಿ ರಶ್ಮಿಕಾ ಮಂದಣ್ಣ, ಮುಂಬೈನ ನೂತನ ಅಟಲ್‌ ಸೇತು ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದರು. ಈ ಅಟಲ್ ಸೇತುವನ್ನು ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಸೇತುವೆಯ ಪ್ರಯಾಣದ ಬಗ್ಗೆ ನಟಿ ರಶ್ಮಿಕಾ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. "ಇದು ಮಹಾನಗರಿ ಮುಂಬೈ ಸಾರಿಗೆ ಜಾಲದ ದಿಕ್ಕನ್ನೇ ಬದಲಿಸುವ ಮಾರ್ಗ. ಗೇಮ್‌ಚೇಂಜರ್‌ ಎಂದೇ ಹೇಳಬಹುದು ಎಂದಿದ್ದರು. ಹೀಗೆ ಆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ, ಮೋದಿಯಿಂದಲೂ ಮೆಚ್ಚುಗೆ ಸಿಕ್ಕಿದೆ.

ರಶ್ಮಿಕಾ ಪೋಸ್ಟ್‌ಗೆ ಪಿಎಂ ಪ್ರತಿಕ್ರಿಯೆ

ರಶ್ಮಿಕಾ ಮಂದಣ್ಣ ಪೋಸ್ಟ್‌ ಶೇರ್‌ ಮಾಡುತ್ತಿದ್ದಂತೆ, ಅದೇ ಪೋಸ್ಟ್‌ ಅನ್ನು ಮರು ಟ್ವಿಟ್‌ ಮಾಡಿದ ಪಿಎಂ, ಖಂಡಿತವಾಗಿ ಹೌದು! ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ" ಎಂದು ಒಂದೇ ಸಾಲಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪಿಎಂ ಮೋದಿ ಹೀಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ, ಕಾಮೆಂಟ್‌ ವಿಭಾಗದಲ್ಲಿ ಬಗೆಬಗೆ ಉತ್ತರಗಳು ಸಂದಾಯವಾಗಿವೆ. ನಟಿ ರಶ್ಮಿಕಾ ಮಂದಣ್ಣ ಅವರನ್ನು ನೆಟ್ಟಿಗರು ಹಿಗ್ಗಾ ಮುಗ್ಗಾ ಟ್ರೋಲ್‌ ಮಾಡುತ್ತಿದ್ದಾರೆ.

ನಟಿಯನ್ನು ಟ್ರೋಲ್‌ ಮಾಡಿದ ನೆಟ್ಟಿಗರು

ಕೆಲವರು "ನಿಮ್ಮ ರಾಜಕೀಯ ಪ್ರಚಾರಕ್ಕಾಗಿ ನಟಿಯನ್ನು ನೇಮಿಸಿಕೊಳ್ಳಲು 10 ಕೋಟಿ ಖರ್ಚು ಮಾಡಲಾಗುತ್ತಿದೆ" ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. "ವ್ಹಾ ರಶ್ಮಿಕಾ.. ನೀವು ತುಂಬ ಅದೃಷ್ಟವಂತೆ. ಪ್ರಧಾನಿ ಅವರು ನಿಮ್ಮ ಟ್ವಿಟ್‌ಗೆ ಆ ಕ್ಷಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪುರದ ಸಹೋದರಿಯರು ಮತ್ತು ಪ್ರಜ್ವಲ್‌ ರೇವಣ್ಣ ಕೇಸ್‌ನ ಸಂತ್ರಸ್ತೆಯರು ಇನ್ನೂ ಕಾಯುತ್ತಿದ್ದಾರೆ" ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

"ರಶ್ಮಿಕಾ ಮಂದಣ್ಣ ಅವರ ಪ್ರಚಾರದ ಟ್ವೀಟ್ ಅನ್ನು ಉಲ್ಲೇಖಿಸಿದ ನರೇಂದ್ರ ಮೋದಿ ಅವರು ಅದನ್ನು ಬಿಜೆಪಿ ಪ್ರಾಯೋಜಿಸಿರುವುದನ್ನು ಖಚಿತಪಡಿಸುತ್ತದೆ. ಆದರೆ ದೊಡ್ಡ ಪ್ರಶ್ನೆ ಏನೆಂದರೆ- ಇದಕ್ಕಾಗಿ ರಶ್ಮಿಕಾಗೆ ಎಷ್ಟು ಸಂಭಾವನೆ ನೀಡಲಾಗಿದೆ ಅಥವಾ ED, CBI ಮತ್ತು IT ಬಳಸಿ ನಟಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆಯೇ?" ಎಂದೂ ಹೇಳುತ್ತಿದ್ದಾರೆ. ಇನ್ನೊಬ್ಬ ಬಳಕೆದಾರ "ಶ್ರೀಮಂತ ಜನರು (ಅವಳಂತೆ) ಸಾಮಾನ್ಯವಾಗಿ ಬಡವರ ಮೂಲಭೂತ ಅಗತ್ಯಗಳು ಮತ್ತು ಹೋರಾಟಗಳ ಬಗ್ಗೆ ತಿಳಿದಿರುವುದಿಲ್ಲ. ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ, ಆದರೆ ಬಡವರು ಮೂಲಭೂತ ಅವಶ್ಯಕತೆಗಳಿಗೆ ಆದ್ಯತೆ ನೀಡುತ್ತಾರೆ" ಎನ್ನುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಈ ರಸ್ತೆಯಲ್ಲಿ ಈ ಮೊದಲು ಎರಡು ಗಂಟೆಗಳ ಕಾಲ ಕ್ರಮಿಸಬೇಕಿತ್ತು. ಆದರೆ ಇದೀಗ ಕೇವಲ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಈ ಸೇತುವೆ ನಿರ್ಮಾಣಕ್ಕೂ ಮೊದಲು, ಇದು ಅಸಾಧಯ ಎಂದವರೇ ಹೆಚ್ಚು ಮಂದಿ. ಆದರೆ, ಈಗ ಅದು ಸಾಕಾರಗೊಂಡಿದೆ. ಇಂದು ನಾವು ನವ ಮುಂಬೈನಿಂದ ಮುಂಬೈ ಮತ್ತು ಗೋವಾದಿಂದ ಮುಂಬೈ ಮತ್ತು ಬೆಂಗಳೂರಿನಿಂದ ಮುಂಬೈ ಎಲ್ಲ ಕಡೆಗೂ ಸುಲಭವಾಗಿ ಪ್ರಯಾಣಿಸಬಹುದು, ಇಂತಹ ಸೌಕರ್ಯದ ಕುರಿತು ಹೆಮ್ಮೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತ ಬಹಳಷ್ಟು ಬದಲಾಗಿದೆ" ಎಂದು ರಶ್ಮಿಕಾ ಹೇಳಿಕೊಂಡಿದ್ದರು.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024