ಸಲ್ಮಾನ್‌ ಖಾನ್‌ ಈದ್‌ ಸಿನಿಮಾಗಳು ಗಳಿಸಿದ್ದೆಷ್ಟು ಕೋಟಿ? ಇಲ್ಲಿದೆ ನೋಡಿ 12 ಸಿನಿಮಾಗಳ ಬಾಕ್ಸ್‌ ಆಫೀಸ್ ಕಲೆಕ್ಷನ್‌ ಲೆಕ್ಕ
ಕನ್ನಡ ಸುದ್ದಿ  /  ಮನರಂಜನೆ  /  ಸಲ್ಮಾನ್‌ ಖಾನ್‌ ಈದ್‌ ಸಿನಿಮಾಗಳು ಗಳಿಸಿದ್ದೆಷ್ಟು ಕೋಟಿ? ಇಲ್ಲಿದೆ ನೋಡಿ 12 ಸಿನಿಮಾಗಳ ಬಾಕ್ಸ್‌ ಆಫೀಸ್ ಕಲೆಕ್ಷನ್‌ ಲೆಕ್ಕ

ಸಲ್ಮಾನ್‌ ಖಾನ್‌ ಈದ್‌ ಸಿನಿಮಾಗಳು ಗಳಿಸಿದ್ದೆಷ್ಟು ಕೋಟಿ? ಇಲ್ಲಿದೆ ನೋಡಿ 12 ಸಿನಿಮಾಗಳ ಬಾಕ್ಸ್‌ ಆಫೀಸ್ ಕಲೆಕ್ಷನ್‌ ಲೆಕ್ಕ

Salman Khan Eid Movies list: ಈ ವರ್ಷದ ಈದ್‌ ಹಬ್ಬಕ್ಕೆ ಸಿಕಂದರ್‌ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಹಾಡುಗಳು ವೈರಲ್‌ ಆಗುತ್ತಿವೆ. ಈ ಸಂದರ್ಭದಲ್ಲಿ ಸಲ್ಮಾನ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ಈದ್‌ ಸಿನಿಮಾಗಳೂ ಮತ್ತು ಅವುಗಳ ಬಾಕ್ಸ್‌ ಆಫೀಸ್‌ ಗಳಿಕೆ ಬಗ್ಗೆ ತಿಳಿದುಕೊಳ್ಳೋಣ.

ಸಲ್ಮಾನ್‌ ಖಾನ್‌ ಈದ್‌ ಸಿನಿಮಾಗಳು ಗಳಿಸಿದ್ದೆಷ್ಟು ಕೋಟಿ? ಇಲ್ಲಿದೆ ನೋಡಿ 12 ಸಿನಿಮಾಗಳ ಲೆಕ್ಕ
ಸಲ್ಮಾನ್‌ ಖಾನ್‌ ಈದ್‌ ಸಿನಿಮಾಗಳು ಗಳಿಸಿದ್ದೆಷ್ಟು ಕೋಟಿ? ಇಲ್ಲಿದೆ ನೋಡಿ 12 ಸಿನಿಮಾಗಳ ಲೆಕ್ಕ

Salman Khan Eid Movies list: ಧಾರ್ಮಿಕ ಹಬ್ಬಗಳು ಸಂಭ್ರಮ, ಸಡಗರ ತರುತ್ತವೆ. ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಈದ್‌ ಹಬ್ಬ ನಿಜವಾದ ಸಡಗರ ತರುತ್ತದೆ. ಯಾಕೆಂದರೆ, ಈದ್‌ ಹಬ್ಬದ ಸಮಯದಲ್ಲಿ ಪ್ರತಿವರ್ಷ ತನ್ನ ಒಂದೊಂದು ಸಿನಿಮಾ ಬಿಡುಗಡೆ ಮಾಡುವ ಅಭ್ಯಾಸವನ್ನ ಸಲ್ಮಾನ್‌ ಖಾನ್‌ ಹಲವು ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಈದ್‌ ರಿಲೀಸ್‌ಗೆ ತುಸು ತೊಂದರೆಯಾಗಿತ್ತು. 2009ರ ಈದ್‌ ಹಬ್ಬದಂದು ವಾಂಟೆಂಡ್‌ ಸಿನಿಮಾ ಬಿಡುಗಡೆ ಮಾಡಿದ್ರು. ಈ ವರ್ಷದ ಈದ್‌ ಹಬ್ಬಕ್ಕೆ ಸಿಕಂದರ್‌ ರಿಲೀಸ್‌ ಮಾಡುತ್ತಿದ್ದಾರೆ. ಇದರ ನಡುವೆ ಇನ್ನೂ ಹತ್ತು ಸಿನಿಮಾಗಳು ಈದ್‌ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿದೆ.

ಈ ವರ್ಷದ ಈದ್‌ ಹಬ್ಬಕ್ಕೆ ಸಿಕಂದರ್‌ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಹಾಡುಗಳು ವೈರಲ್‌ ಆಗುತ್ತಿವೆ. ಈ ಸಂದರ್ಭದಲ್ಲಿ ಸಲ್ಮಾನ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ಈದ್‌ ಸಿನಿಮಾಗಳೂ ಮತ್ತು ಅವುಗಳ ಬಾಕ್ಸ್‌ ಆಫೀಸ್‌ ಗಳಿಕೆ ಬಗ್ಗೆ ತಿಳಿದುಕೊಳ್ಳೋಣ.

ವಾಂಟೆಡ್‌

ಇದು 2009ರಲ್ಲಿ ಈದ್‌ ಹಬ್ಬದಂದು ಬಿಡುಗಡೆಯಾದ ಸಿನಿಮಾ. ಜಾಗತಿಕ ಬಾಕ್ಸ್‌ನಲ್ಲಿ 93 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ದಬಾಂಗ್‌

2010ರ ಸಿನಿಮಾ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 219 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು.

ಬಾಡಿಗಾರ್ಡ್‌

2011ರ ಸಿನಿಮಾ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 234 ಕೋಟಿ ರೂಪಾಯಿ ಸಂಪಾದಿಸಿತ್ತು.

ಏಕ್ತಾ ಟೈಗರ್‌

2012ರ ಸಿನಿಮಾ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 308 ಕೋಟಿ ರೂಪಾಯಿ ಸಂಪಾದಿಸಿತ್ತು.

ಕಿಕ್‌

2014ರ ಸಿನಿಮಾ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 351 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು.

ಭಜರಂಗಿ ಭಾಯ್‌ಜಾನ್‌

2015ರ ಸಿನಿಮಾ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 604 ಕೋಟಿ ರೂಪಾಯಿ ಸಂಪಾದಿಸಿತ್ತು.

ಸುಲ್ತಾನ್‌

2016ರ ಸಿನಿಮಾ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 577 ಕೋಟಿ ರೂಪಾಯಿ ಸಂಪಾದಿಸಿತ್ತು.

ಟ್ಯೂಬ್‌ಲೈಟ್‌

2017ರ ಸಿನಿಮಾ. 207 ಕೋಟಿ ಗಳಿಸಿತ್ತು.

ರೇಸ್‌ 3

2018ರ ಈ ಸಿನಿಮಾ 305 ಕೋಟಿ ಗಳಿಸಿತ್ತು.

ಭಾರತ್‌

2019ರ ಸಿನಿಮಾ. 308 ಕೋಟಿ ರೂಪಾಯಿ ಗಳಿಸಿತ್ತು.

ರಾಧೆ

2021ರಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ 2022ರಲ್ಲಿಈದ್‌ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿ 18.33 ಕೋಟಿ ರೂಪಾಯಿ ಗಳಿಸಿತ್ತು.

ಕಿಸಿ ಕಾ ಬಾಯ್‌ ಕಿಸಿ ಕಾ ಜಾನ್‌

2023ರಲ್ಲಿ ಈದ್‌ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಸಿನಿಮಾ 125 ಕೋಟಿ ರೂಪಾಯಿ ಗಳಿಸಿತ್ತು.

ಸಿಕಂದರ್‌ ಸಿನಿಮಾ ಈ ಈದ್‌ ಹಬ್ಬಕ್ಕೆ ಬಿಡುಗಡೆ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಬಹು ನಿರೀಕ್ಷಿತ ಸಿಕಂದರ್‌ ಸಿನಿಮಾ ಈ ಈದ್‌ ಹಬ್ಬಕ್ಕೆ ಬಿಡುಗಡೆಯಾಗಲಿದೆ. ತಮಿಳಿನ ಖ್ಯಾತ ನಿರ್ದೇಶಕ ಎಆರ್‌ ಮುರುಗದಾಸ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಸಿಕಂದರ್‌ ಸಿನಿಮಾವನ್ನು ಸಾಜಿದ್‌ ನಾಡಿಯಾಡ್‌ವಾಲಾ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಬಾಹುಬಲಿ ಸಿನಿಮಾ ಖ್ಯಾತಿನ ನಟ ಸತ್ಯರಾಜ್ ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ನಾಯಕಿಯರಾಗಿ ನಟಿಸಿದ್ದು, ಈ ಚಿತ್ರವು 2025ರ ಈದ್‌(ಮಾರ್ಚ್‌) ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in