ಸೀತಾರೆ ಜಮೀನ್ ಪರ್ ಟ್ರೈಲರ್‌ ಬಿಡುಗಡೆ: ತಾರೆ ಜಮೀನ್‌ ಪರ್‌ನಂತಹ ಮತ್ತೊಂದು ಚಿತ್ರದೊಂದಿಗೆ ಆಗಮಿಸಿದ ಅಮೀರ್‌ ಖಾನ್‌
ಕನ್ನಡ ಸುದ್ದಿ  /  ಮನರಂಜನೆ  /  ಸೀತಾರೆ ಜಮೀನ್ ಪರ್ ಟ್ರೈಲರ್‌ ಬಿಡುಗಡೆ: ತಾರೆ ಜಮೀನ್‌ ಪರ್‌ನಂತಹ ಮತ್ತೊಂದು ಚಿತ್ರದೊಂದಿಗೆ ಆಗಮಿಸಿದ ಅಮೀರ್‌ ಖಾನ್‌

ಸೀತಾರೆ ಜಮೀನ್ ಪರ್ ಟ್ರೈಲರ್‌ ಬಿಡುಗಡೆ: ತಾರೆ ಜಮೀನ್‌ ಪರ್‌ನಂತಹ ಮತ್ತೊಂದು ಚಿತ್ರದೊಂದಿಗೆ ಆಗಮಿಸಿದ ಅಮೀರ್‌ ಖಾನ್‌

ಅಮೀರ್‌ ಖಾನ್‌ ನಟನೆ-ನಿರ್ದೇಶನದ ತಾರೆ ಜಮೀನ್‌ ಪರ್‌ ಎಲ್ಲರಿಗೂ ನೆನಪಿರಬಹುದು. ಇದೀಗ ಅಂತಹದ್ದೇ ಸಂತೋಷ, ಖುಷಿ ಮತ್ತು ಭಾವುಕತೆಯ ಸಿನಿಮಾದ ಮೂಲಕ ಅಮೀರ್‌ ಖಾನ್‌ಆಗಮಿಸುತ್ತಿದ್ದಾರೆ. ಸೀತಾರೆ ಜಮೀನ್ ಪರ್ ಟ್ರೈಲರ್‌ ಬಿಡುಗಡೆಯಾಗಿದ್ದು, ಅಮೀರ್‌ ಖಾನ್‌ ಅಭಿಮಾನಿಗಳು ಖುಷಿಗೊಂಡಿದ್ದಾರೆ.

ಸೀತಾರೆ ಜಮೀನ್ ಪರ್ ಟ್ರೈಲರ್‌ ಬಿಡುಗಡೆ: ತಾರೆ ಜಮೀನ್‌ ಪರ್‌ನಂತಹ ಮತ್ತೊಂದು ಚಿತ್ರದೊಂದಿಗೆ ಆಗಮಿಸಿದ ಅಮೀರ್‌ ಖಾನ್‌
ಸೀತಾರೆ ಜಮೀನ್ ಪರ್ ಟ್ರೈಲರ್‌ ಬಿಡುಗಡೆ: ತಾರೆ ಜಮೀನ್‌ ಪರ್‌ನಂತಹ ಮತ್ತೊಂದು ಚಿತ್ರದೊಂದಿಗೆ ಆಗಮಿಸಿದ ಅಮೀರ್‌ ಖಾನ್‌

'ಸೀತಾರೆ ಜಮೀನ್ ಪರ್' ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೈಲರ್‌ ನೋಡಿದರೆ ತಾರೆ ಜಮೀನ್‌ ಪರ್‌ ನೆನಪಿಗೆ ಬರಬಹುದು. ತಾರೇ ಜಮೀನ್‌ ಪರ್‌ನಲ್ಲಿ ಡಿಸ್ಲೆಕ್ಸಿಯಾ ತೊಂದರೆ ಇರುವ ಮಗುವಿನ ಜತೆ ಅಮೀರ್‌ ಖಾನ್‌‌ರ ಭಾವುಕ ಪ್ರಯಾಣ ಇತ್ತು. ಇದರಲ್ಲಿ ಮಾನಸಿಕವಾಗಿ ತೊಂದರೆಯಲ್ಲಿರುವ ವ್ಯಕ್ತಿಗಳಿಗೆ ಬಾಸ್ಕೆಟ್‌ ಬಾಲ್‌ ತರಬೇತಿ ನೀಡುವ ತರಬೇತುದಾರನ ಪಾತ್ರದಲ್ಲಿ ‌ ಗಮನ ಸೆಳೆಯುತ್ತಾರೆ. ಸಬ್ ಕಾ ಅಪ್ನಾ ಅಪ್ನಾ ನಾರ್ಮಲ್" ಎನ್ನುವುದು ಟ್ರೈಲರ್‌ನಲ್ಲಿ ಗಮನ ಸೆಳೆಯುವ ಪ್ರಮುಖ ಅಂಶ. ನಟ-ನಿರ್ಮಾಪಕ ಅಮೀರ್‌ ಖಾನ್‌ ಅವರ ಫೀಲ್‌ ಗುಡ್‌ ಸಿನಿಮಾದ ಕುರಿತು ಪ್ರೇಕ್ಷಕರಲ್ಲಿ ಈ ಟ್ರೈಲರ್‌ ಕುತೂಹಲ ಹೆಚ್ಚಿಸಿದೆ.

ಸೀತಾರೆ ಜಮೀನ್ ಪರ್ ಟ್ರೈಲರ್‌

ತನ್ನ ತಾಯಿ ಮತ್ತು ಹೆಂಡತಿಯ ಪ್ರೀತಿಯೊಂದಿಗೆ ಮುಗ್ಧನಂತೆ ಕಾಣುವ ಒಬ್ಬ ತರಬೇತುದಾರನ ಕಥೆಯನ್ನು ಸೀತಾರೆ ಜಮೀನ್ ಪರ್ ಟ್ರೈಲರ್‌ ತೋರಿಸಿದೆ. ಮಾನಸಿಕ ಸವಾಲು ಎದುರಿಸುತ್ತಿರುವ ಈ ಟ್ರೈನರ್‌ ತನ್ನಂತೆಯೇ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಾನೆ. ಅಅಮೀರ್‌ ಖಾನ್‌ ಅವರ '3 ಈಡಿಯಟ್ಸ್' ಮತ್ತು 'ತಾರೆ ಜಮೀನ್ ಪರ್'ನಂತಹ ಚಿತ್ರಗಳನ್ನು ಈ ಟ್ರೈಲರ್‌ ನೆನಪಿಸುತ್ತದೆ.

'ಸೀತಾರೆ ಜಮೀನ್ ಪರ್' ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಟ್ರೇಲರ್‌ನಲ್ಲಿ ತೋರಿಸಿರುವಂತೆ ಈ ಚಿತ್ರವನ್ನು ಸರಿಯಾದ ರೀತಿ ಚಿತ್ರೀಕರಿಸಿದರೆ, ಈ ಸಿನಿಮಾದ ಸಂಪೂರ್ಣ ಕಥೆ ಇಷ್ಟೇ ಉತ್ತಮವಾಗಿದ್ದರೆ, ಗಜನಿ ಖ್ಯಾತಿಯ ನಟ ಆಮಿರ್ ಈ ಚಿತ್ರದ ಮೂಲಕ ಮತ್ತೆ ಸೂಪರ್‌ಹಿಟ್‌ ಯಶಸ್ಸು ಪಡೆಯಬಹುದು. ಲಾಲ್ ಸಿಂಗ್ ಚಡ್ಡಾದಂತಹ ಸಿನಿಮಾಗಳ ಸೋಲಿನ ನಂತರ ಅಮೀರ್‌ ಖಾನ್‌ ಈ ಚಿತ್ರದ ಮೂಲಕ ಕಂಬ್ಯಾಕ್‌ ಮಾಡಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಅಮೀರ್‌ ಖಾನ್‌ ಅವರು ಕೊನೆಯದಾಗಿ ಕಾಜೋಲ್ ಅವರ 'ಸಲಾಮ್ ವೆಂಕಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರು ಸೀತಾರೆ ಜಮೀನ್ ಪರ್' ಚಿತ್ರದ ಮೂಲಕ ಬಾಲಿವುಡ್‌ಗೆ ಮರಳುತ್ತಿರುವ ಏಕೈಕ ನಟನಲ್ಲ. ಜೆನೆಲಿಯಾ ಡಿ'ಸೋಜಾ ದೇಶ್ಮುಖ್ ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಲಿದ್ದಾರೆ. ಈ ಚಿತ್ರದಲ್ಲಿ ತಾರೆ ಜಮೀನ್ ಪರ್ ಚಿತ್ರದ ದರ್ಶೀಲ್ ಸಫಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಟ್ರೈಲರ್‌ನಲ್ಲಿ ಅವರ ಪಾತ್ರವನ್ನು ತೋರಿಸಿಲ್ಲ. ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ವರ್ಮಾಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಆರ್.ಎಸ್. ಪ್ರಸನ್ನ (ಶುಭ್ ಮಂಗಲ್ ಸಾವಧಾನ್ ಖ್ಯಾತಿಯ) ನಿರ್ದೇಶನದ ಈ ಚಿತ್ರ ಜೂನ್‌ 20ರಂದು ಬಿಡುಗಡೆಯಾಗಲಿದೆ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in