Sikandar Trailer: ಆಕ್ಷನ್‌ ಅಬ್ಬರ, ಭಾವನೆಗಳ ಸಾಗರ; ಭರ್ತಿ ಮನರಂಜನೆ ಹೊತ್ತು ಬಂದ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಟ್ರೇಲರ್‌
ಕನ್ನಡ ಸುದ್ದಿ  /  ಮನರಂಜನೆ  /  Sikandar Trailer: ಆಕ್ಷನ್‌ ಅಬ್ಬರ, ಭಾವನೆಗಳ ಸಾಗರ; ಭರ್ತಿ ಮನರಂಜನೆ ಹೊತ್ತು ಬಂದ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಟ್ರೇಲರ್‌

Sikandar Trailer: ಆಕ್ಷನ್‌ ಅಬ್ಬರ, ಭಾವನೆಗಳ ಸಾಗರ; ಭರ್ತಿ ಮನರಂಜನೆ ಹೊತ್ತು ಬಂದ ಸಲ್ಮಾನ್‌ ಖಾನ್‌ ʻಸಿಕಂದರ್‌ʼ ಟ್ರೇಲರ್‌

Sikandar Trailer: ಬಾಲಿವುಡ್‌ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿರುವ ಸಿಕಂದರ್‌ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಸಲ್ಮಾನ್‌ ಖಾನ್‌ ಮಾಸ್‌ ಅವತಾರದಲ್ಲಿ ಎದುರಾದರೆ, ರಶ್ಮಿಕಾ ಮಂದಣ್ಣ, ಕಿಶೋರ್‌ ಕುಮಾರ್‌ ಟ್ರೇಲರ್‌ನಲ್ಲಿ ಮಿಂಚುಹರಿಸಿದ್ದಾರೆ.

ಸಿಕಂದರ್‌ ಟ್ರೇಲರ್‌ ಬಿಡುಗಡೆ
ಸಿಕಂದರ್‌ ಟ್ರೇಲರ್‌ ಬಿಡುಗಡೆ

Sikandar Trailer: ಅಭಿಮಾನಿಗಳ ಕಾಯುವಿಕೆ ಕೊನೆಗೂ ಮುಗಿದಿದೆ. ಬಾಲಿವುಡ್‌ನ ಬಹುನಿರೀಕ್ಷಿತ 'ಸಿಕಂದರ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಸಲ್ಮಾನ್ ಖಾನ್ ಫ್ಯಾನ್ಸ್‌ ಅಕ್ಷರಶಃ ಸಂಭ್ರಮದಲ್ಲಿದ್ದಾರೆ. ಮಾಸ್‌ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿರುವ ಸಲ್ಮಾನ್‌ ಖಾನ್‌, ಇದೇ ಮಾರ್ಚ್‌ 30ರ ಈದ್‌ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಎಂಟ್ರಿಕೊಡಲಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿರುವ ಸಿಕಂದರ್‌ ಸಿನಿಮಾವನ್ನು ಗಜನಿ ಸಿನಿಮಾ ಖ್ಯಾತಿಯ ಎ.ಆರ್‌ ಮುರುಗದಾಸ್‌ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚುಹರಿಸಿದ್ದಾರೆ.

ಸೌತ್‌ನಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಸದ್ದು ಮಾಡಿರುವ ನಿರ್ದೇಶಕ ಮುರುಗದಾಸ್‌, ಸಿಕಂದರ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಾಜಿದ್‌ ನಾಡಿಯಾಡ್ವಾಲಾ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ರಾಜ್‌ಕೋಟ್‌ನ ರಾಜ ಎಂದೇ ಖ್ಯಾತಿ ಪಡೆದ ಸಿಕಂದರ್‌ನ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗಲಿದೆ. ರಶ್ಮಿಕಾ ಮಂದಣ್ಣ ಅವರಿಗಿಲ್ಲಿ ಸಾಯಿಶ್ರೀ ಹೆಸರಿನ ಪಾತ್ರ. ಇದರ ಜತೆಗೆ ಕನ್ನಡದ ಮತ್ತೋರ್ವ ಕಲಾವಿದ, ಬಹುಭಾಷಾ ನಟ ಕಿಶೋರ್‌ ಪೊಲೀಸ್‌ ಅಧಿಕಾರಿಯಾಗಿ ಕಂಡರೆ, ಬಾಹುಬಲಿ ಖ್ಯಾತಿಯ ಸತ್ಯರಾಜ್‌ ಸಹ ವಿಲನ್‌ ಆಗಿದ್ದಾರೆ. ಇಲ್ಲಿಗೆ ಮುಗಿದಿಲ್ಲ, ನಟಿ ಕಾಜಲ್‌ ಅಗರ್ವಾಲ್‌ ಮತ್ತು ಶರ್ಮನ್‌ ಜೋಶಿ ಸಹ ಟ್ರೇಲರ್‌ನಲ್ಲಿ ಕಂಡಿದ್ದಾರೆ.

ಏನಿದೆ ಟ್ರೇಲರ್‌ನಲ್ಲಿ?

ಟ್ರೇಲರ್‌ ಆರಂಭವಾಗುತ್ತಿದ್ದಂತೆ, "ಹೆಸರು ಸಂಜಯ್ ರಾಜ್‌ಕೋಟ್. ಆತನ ಐಡೆಂಟಿಟಿ ಎಂದರೆ ಕಿವಿಯಲ್ಲಿರುವ ಕಿವಿಯೋಲೆಗಳು. ಆತ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಮಹಾರಾಷ್ಟ್ರ ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ ಎಂಬ ಧ್ವನಿಯಿಂದ ಟ್ರೇಲರ್‌ ಶುರುವಾಗುತ್ತದೆ. ರಾಜ್‌ಕೋಟ್‌ನ ರಾಜಾ ಎಂದೂ ಬಿಂಬಿಸಲಾಗಿದೆ. ಸಿಕಂದರ್‌ ಪಕ್ಕಾ ಮಾಸ್‌ ಮನರಂಜನೆಯ ಕಮರ್ಷಿಯಲ್‌ ಸಿನಿಮಾ. ಇಲ್ಲಿ ಮೈನವಿರೇಳಿಸುವ ಆಕ್ಷನ್‌ ಇದೆ. ಭಾವನೆಗಳ ಜತೆಗೆ ಸಾಗುವ ಕಥೆಯಲ್ಲಿ ಕಚಗುಳಿ ಇಡುವ ಕಾಮಿಡಿಯೂ ಇದೆ. ಶತ್ರುಗಳ ತುಳಿದು ಹಾಕುವ ಸಿಕಂದರ್‌, ನಿರ್ಗತಿಕರು ಎದುರಾದರೆ, ಅವರ ಸೇವೆಗೂ ನಿಲ್ಲುವ ಗುಣದವನು.

ಫ್ಯಾನ್ಸ್‌ ಸಂಭ್ರಮ

ಸಿಕಂದರ್‌ ಟ್ರೇಲರ್‌ ರಿಲೀಸ್‌ ಆಗಿದ್ದೇ ತಡ, ಸಲ್ಮಾನ್‌ ಖಾನ್‌ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ನೋಡಲು ಕಾಯುತ್ತಿದ್ದೇವೆ ಎಂದು ಕೆಲವರು ಕಾಮೆಂಟ್‌ ಹಾಕುತ್ತಿದ್ದರೆ, "ಪಕ್ಕಾ ಪೈಸಾ ವಸೂಲ್‌" ಎಂದೂ ಕೆಲವರು ಕಮೆಂಟಿಸುತ್ತಿದ್ದಾರೆ. ಅಂದಹಾಗೆ ಸಿಕಂದರ್‌ ಸಿನಿಮಾ ಇದೇ ಮಾಸಾಂತ್ಯ, 30ರಂದು ವಿಶ್ವದಾದ್ಯಂತ ಈದ್‌ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.

ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಿಶೋರ್‌..

ಕನ್ನಡದ ನಟ ಕಿಶೋರ್‌ ಕುಮಾರ್‌ ಸಿಕಂದರ್‌ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಇವರ ಜತೆಗೆ ಪ್ರತೀಕ್‌ ಬಬ್ಬರ್ ಮತ್ತು ಸತ್ಯರಾಜ್‌ಗೂ ಇಲ್ಲಿ ನೆಗೆಟಿವ್‌ ಪಾತ್ರವಿದೆ. ನಾಯಕಿ ರಶ್ಮಿಕಾ ಮಂದಣ್ಣ ಈ ಹಿಂದಿನ ಸಿನಿಮಾಗಳಂತೆಯೇ ಇಲ್ಲಿಯೂ ಕಂಡಿದ್ದಾರೆ. 'ಅನಿಮಲ್' ಮತ್ತು 'ಪುಷ್ಪ 2' ಸಿನಿಮಾಗಳಲ್ಲಿ ರಶ್ಮಿಕಾ ನಿರ್ವಹಿಸಿದ ಪಾತ್ರಗಳಂತೆಯೇ, ಸಿಕಂದರ್‌ನಲ್ಲಿಯೂ ಅವರ ಪಾತ್ರ ಗೋಚರಿಸುತ್ತಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner