ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು; ವಿಜಯ್‌ ಸೆಕೆಂಡ್‌, ವಿರಾಟ್ ಕೊಹ್ಲಿಗೆ ಐದನೇ ಸ್ಥಾನ
ಕನ್ನಡ ಸುದ್ದಿ  /  ಮನರಂಜನೆ  /  ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು; ವಿಜಯ್‌ ಸೆಕೆಂಡ್‌, ವಿರಾಟ್ ಕೊಹ್ಲಿಗೆ ಐದನೇ ಸ್ಥಾನ

ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು; ವಿಜಯ್‌ ಸೆಕೆಂಡ್‌, ವಿರಾಟ್ ಕೊಹ್ಲಿಗೆ ಐದನೇ ಸ್ಥಾನ

ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್‌ ನಟರದ್ದೇ ಸಿಂಹಪಾಲು. ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ನಟ ವಿಜಯ್‌ ಎರಡನೇ ಸ್ಥಾನ ಪಡೆದಿದ್ದಾರೆ. ಕ್ರಿಕೆಟಿಗ ವಿರಾಟ್‌ ಕೊಹ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಹಾಗಿದ್ದರೆ ಅಗ್ರಸ್ಥಾನದಲ್ಲಿರುವ ನಟ ಯಾರು ಎಂಬುದನ್ನು ನೋಡೋಣ.

ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು; ಕೊಹ್ಲಿಗೆ ಐದನೇ ಸ್ಥಾನ
ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು; ಕೊಹ್ಲಿಗೆ ಐದನೇ ಸ್ಥಾನ

ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಗಳಿಕೆ ಕೂಡಾ ದೊಡ್ಡ ಸಂಖ್ಯೆಯಲ್ಲಿರುತ್ತದೆ. ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಆದಾಯ ಹೊಂದಿರುವ ಹಲವಾರು ಸೆಲೆಬ್ರಿಟಿಗಳಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳಿಗೂ ಪೈಪೋಟಿ ನೀಡುವಂತೆ ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಹೆಚ್ಚಳ ಕಾಣುವ ಜನಪ್ರಿಯ ಸ್ಟಾರ್‌ಗಳು ನಮ್ಮಲ್ಲಿದ್ದಾರೆ. ಭಾರತದಲ್ಲಿ, ಚಲನಚಿತ್ರದಲ್ಲಿ ಮಿಂಚುವ ತಾರೆಯರ ಜೊತೆಗೆ ಕ್ರಿಕೆಟ್‌ ಸೇರಿದಂತೆ ಕ್ರೀಡಾ ಕ್ಷೇತ್ರದ ಐಕಾನ್‌ಗಳು ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ. ಇದೇ ವೇಳೆ ಕೋಟಿಗಟ್ಟಲೆ ತೆರಿಗೆಯನ್ನೂ ಪಾವತಿಸುತ್ತಾರೆ. ಹಾಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಎಂಬುದನ್ನು ನೋಡೋಣ.

ಕಳೆದ ವರ್ಷವೊಂದರಲ್ಲೇ ಈ ಸೆಲೆಬ್ರಿಟಿ ಬರೋಬ್ಬರಿ 92 ಕೋಟಿ ರೂಪಾಯಿ ತೆರಿಗೆಯಾಗಿ ಪಾವತಿಸಿದ್ದಾರೆ. ಹಾಗಿದ್ದರೆ ಅವರ ಆದಾಯ ಅಥವಾ ಗಳಿಕೆ ಎಷ್ಟಿರಬಹುದು ಎಂಬುದನ್ನು ನೀವೇ ಊಹಿಸಿ.

ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ

ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಪಟ್ಟಿಯನ್ನು ಫಾರ್ಚೂನ್ ಇಂಡಿಯಾ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 2023-24ರ ಹಣಕಾಸು ವರ್ಷದಲ್ಲಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಹೆಸರಿದೆ. ಬರೋಬ್ಬರಿ 92 ಕೋಟಿ ರೂ. ತೆರಿಗೆ ಪಾವತಿಸುವ ಮೂಲಕ ಬಾಲಿವುಡ್‌ ನಟ ಶಾರುಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿರಾಟ್‌ ಕೊಹ್ಲಿಯನ್ನೇ ಕಿಂಗ್‌ ಖಾನ್‌ ಹಿಂದಿಕ್ಕಿದ್ದಾರೆ.

ಶಾರುಖ್ ಖಾನ್‌ 2023ರಲ್ಲಿ ಮೂರು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದರು. ಹೀಗಾಗಿ ವಿವಿಧ ಮೂಲಗಳಿಂದ ಅವರ ಆದಾಯ ಹೆಚ್ಚಾಗಿದೆ. ಶಾರುಖ್ ನಂತರದ ಮುಂದಿನ ಹೆಸರು ದಕ್ಷಿಣ ಭಾರತದ ತಮಿಳು ಸ್ಟಾರ್ ವಿಜಯ್. ತಲಪತಿ ವಿಜಯ್‌ ಎಂದೇ ಜನಪ್ರಿಯರಾಗಿರುವ ವಿಜಯ್‌, 2023-24ರಲ್ಲಿ 80 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ನಂತರದ ಸ್ಥಾನಗಳಲ್ಲಿ ಸಲ್ಮಾನ್ ಖಾನ್ (75 ಕೋಟಿ ರೂ.), ಅಮಿತಾಭ್ ಬಚ್ಚನ್ (71 ಕೋಟಿ ರೂ.) ಸ್ಥಾನ ಪಡೆದಿದ್ದಾರೆ.

ಕ್ರಿಕೆಟಿಗರ ಪೈಕಿ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ 66 ಕೋಟಿ ರೂ. ತೆರಿಗೆ ಪಾವತಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಒಟ್ಟಾರೆಯಾಗಿ ಭಾರತೀಯರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. 20 ಕೋಟಿ ತೆರಿಗೆ ಪಾವತಿಸುವ ಮೂಲಕ ಕರೀನಾ ಕಪೂರ್ ಟಾಪ್ 10ಪಟ್ಟಿಯಿಂದ ಹೊರಗುಳಿದಿದ್ದಾರೆ.

ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಟಾಪ್‌ 3 ಸೆಲೆಬ್ರಿಟಿಗಳು
ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ಟಾಪ್‌ 3 ಸೆಲೆಬ್ರಿಟಿಗಳು

ಶಾರುಖ್ ಖಾನ್ ಅಗ್ರಸ್ಥಾನ ಪಡೆದಿದ್ದು ಹೇಗೆ?

2023-24ರ ಅವಧಿಯು ಶಾರುಳ್‌ ಮತ್ತು ವಿಜಯ್‌ ಪಾಲಿಗೆ ಬ್ಲಾಕ್‌ಬಸ್ಟರ್ ವರ್ಷವಾಗಿದೆ. ಶಾರುಖ್ ಖಾನ್ 2023ರ ಜನವರಿಯಲ್ಲಿ ಪಠಾಣ್ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಿದರು. ಇದು ವಿಶ್ವಾದ್ಯಂತ 1000 ಕೋಟಿ ರೂ. ಗಳಿಸಿತು. ಜವಾನ್ ಚಿತ್ರದ ಮೂಲಕ 1150 ಕೋಟಿ ಗಳಿಸಿದರು. ವರ್ಷದ ಕೊನೆಯ ಚಿತ್ರ 'ಡಂಕಿ' ಹೇಳಿಕೊಳ್ಳುವಂಥಾ ಯಶಸ್ಸನ್ನು ಗಳಿಸಲಿಲ್ಲ. ಆದರೂ 400 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು. ಅವರ ಲಾಭದ ಪಾಲು ಮತ್ತು ಗಳಿಕೆಯು ಶಾರುಖ್ ಅವರನ್ನು ಸುಮಾರು ಒಂದು ದಶಕದ ನಂತರ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿತು.

2023-24ರ ಹಣಕಾಸು ವರ್ಷದಲ್ಲಿ ಈ ವ್ಯಕ್ತಿಗಳು ಮುಂಗಡ ತೆರಿಗೆ ಪಾವತಿಗಳನ್ನು ಬಳಸಿಕೊಂಡು, ಈ ಅಂಕಿ-ಅಂಶಗಳನ್ನು ಲೆಕ್ಕಹಾಕಲಾಗಿದೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ.

Whats_app_banner