ಮೊಮ್ಮಗಳು ಇವಾರಾಳನ್ನು ಆಥಿಯಾ 2.0 ಎಂದು ಕರೆದ ಸುನಿಲ್ ಶೆಟ್ಟಿ, ಅವಳೇ ನಮ್ಮ ಸರ್ವಸ್ವ ಎಂದ ಬಾಲಿವುಡ್ ನಟ
ಕನ್ನಡ ಸುದ್ದಿ  /  ಮನರಂಜನೆ  /  ಮೊಮ್ಮಗಳು ಇವಾರಾಳನ್ನು ಆಥಿಯಾ 2.0 ಎಂದು ಕರೆದ ಸುನಿಲ್ ಶೆಟ್ಟಿ, ಅವಳೇ ನಮ್ಮ ಸರ್ವಸ್ವ ಎಂದ ಬಾಲಿವುಡ್ ನಟ

ಮೊಮ್ಮಗಳು ಇವಾರಾಳನ್ನು ಆಥಿಯಾ 2.0 ಎಂದು ಕರೆದ ಸುನಿಲ್ ಶೆಟ್ಟಿ, ಅವಳೇ ನಮ್ಮ ಸರ್ವಸ್ವ ಎಂದ ಬಾಲಿವುಡ್ ನಟ

ಮೊಮ್ಮಗಳು ಇವಾರಾ ಜನಿಸಿದ ಮೇಲೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ತುಂಬಾನೇ ಬದಲಾಗಿದ್ದಾರೆ. ಆಗಾಗ ಮೊಮ್ಮಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ ಈ ನಟ. ಇದೀಗ ಇವಾರಾಳನ್ನು ಆಥಿಯಾ 2.0 ಎಂದು ಕರೆದಿದ್ದಾರೆ.

ಮೊಮ್ಮಗಳು ಇವಾರಾಳನ್ನು ಆಥಿಯಾ 2.0 ಎಂದು ಕರೆದ ಬಾಲಿವುಡ್ ನಟ ಸುನಿಲ್ ಶೆಟ್ಟಿ
ಮೊಮ್ಮಗಳು ಇವಾರಾಳನ್ನು ಆಥಿಯಾ 2.0 ಎಂದು ಕರೆದ ಬಾಲಿವುಡ್ ನಟ ಸುನಿಲ್ ಶೆಟ್ಟಿ

ಮೊಮ್ಮಗಳು ಹುಟ್ಟಿದ ಮೇಲೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಮಾರ್ಚ್‌ನಲ್ಲಿ ಕ್ರಿಕೆಟರ್ ಕೆಎಲ್‌ ರಾಹುಲ್‌, ಸುನಿಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಮಗಳನ್ನು ಬರ ಮಾಡಿಕೊಂಡಿದ್ದರು. ಅಂದಿನಿಂದ ಇವರ ಕುಟುಂಬದ ಪ್ರತಿಯೊಬ್ಬರು ಮನೆಗೆ ಆಗಮಿಸಿದ ಪುಟಾಣಿ ದೇವತೆ ಜೊತೆ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಮೊಮ್ಮಗಳು ಹುಟ್ಟಿದ ಮೇಲೆ ಸುನೀಲ್ ಶೆಟ್ಟಿ ಆದ್ಯತೆಗಳು ಬದಲಾಗಿವೆ. ಈ ಬಗ್ಗೆ ಇತ್ತೀಚೆಗೆ ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸುನಿಲ್ ಶೆಟ್ಟಿ ‘ತಾನು ಹಾಗೂ ಪತ್ನಿ ಮಾನಾ ಶೆಟ್ಟಿ ತಮ್ಮ ಜೀವನಕ್ಕೆ ಬಂದ ಹೊಸ ಪಾತ್ರಕ್ಕಾಗಿ ಸಮಯವನ್ನು ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಮಾತ್ರವಲ್ಲ ಇದು ಪ್ರಪಂಚದಲ್ಲೇ ಅತ್ಯಂತ ಸುಂದರ ಭಾವನೆ ಎಂದು ಕೂಡ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ವೇಳೆ ಮೊಮ್ಮಗಳನ್ನು ಮಗಳಿಗೆ ಹೋಲಿಸಿ ಮಾತನಾಡಿದ್ದಾರೆ.

ಇವಾರಾ ಆಥಿಯಾ 2.0

ನಾದಾನಿಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಸುನೀಲ್, ಇವಾರಾ ಜೊತೆ ಹೆಚ್ಚು ಸಮಯ ಕಳೆಯಲು ಆದ್ಯತೆ ನೀಡಲು ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದರು. ಹಿಂದೆ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದಾಗಿ ತನ್ನ ಸ್ವಂತ ಮಕ್ಕಳಾದ ಅತಿಯಾ ಮತ್ತು ಅಹಾನ್ ಜೊತೆ ಕಳೆಯಲು ಸಾಧ್ಯವಾಗದ ಎಲ್ಲಾ ಕ್ಷಣಗಳನ್ನೂ ನಾನು ಈಗ ನನ್ನ ಮೊಮ್ಮಗಳಾದ ಇವಾರಾ ಜೊತೆ ಕಳೆಯಲು ನಿರ್ಧಾರ ಮಾಡಿದ್ದೇನೆ ಎಂದು ಸುನಿಲ್‌ ಶೆಟ್ಟಿ ಹೇಳಿದ್ದಾರೆ.

‘ಸದ್ಯ ನನ್ನ ಜೀವನ ತುಂಬಾ ಒತ್ತಡದಿಂದ ಕೂಡಿಲ್ಲ. ಜೀವನ ಯಾವಾಗಲೂ ಹೀಗೆಯೇ ಇತ್ತು. ನಾನು ಕೆಲಸ ಮಾಡುತ್ತೇನೆ ಮತ್ತು ಮನೆಗೆ ಹಿಂತಿರುಗುತ್ತೇನೆ. ಆದರೆ ಈಗ ಮನೆಗೆ ಬೇಗ ಹೋಗಬೇಕು ಎನ್ನುವ ಉತ್ಸಾಹ ಹೆಚ್ಚುತ್ತಿದೆ. ಮನೆಗೆ ಹಿಂತಿರುಗಿ ಮಾನಾ ಮತ್ತು ಮಗುವಿನೊಂದಿಗೆ ಸಮಯ ಕಳೆಯಲು ಎದುರು ನೋಡುತ್ತೇನೆ. ನನ್ನ ಜೀವನದ ದೊಡ್ಡ ಉತ್ಸಾಹವೆಂದರೆ ಆ ಮಗು. ಈಗ ನಾನು ನನ್ನ ಮೊಮ್ಮಗಳೊಂದಿಗೆ ಎಲ್ಲವನ್ನೂ ಮಾಡಲು ಬಯಸುತ್ತೇನೆ. ಬಹುಶಃ ನಾನು ಆಗ ಸಿನಿಮಾ, ವ್ಯವಹಾರ ಎಂದು ಬ್ಯುಸಿ ಇದ್ದ ಕಾರಣ ಮಗಳು ಅಥಿಯಾ ಮತ್ತು ಮಗ ಅಹಾನ್ ಜೊತೆ ಹೆಚ್ಚು ಕಳೆಯಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನನ್ನ ಕೆಲಸಗಳಿಗಿಂತ ಹೆಚ್ಚಿನದ್ದನ್ನು ಮಾಡಬೇಕಾಗಿದೆ. ನನಗೆ ಇವಾರಾ ಆಥಿಯಾ 2.0 ಎಂದು ಹೇಳಿದ್ದಾರೆ.

ಸುನೀಲ್ ಶೆಟ್ಟಿ ಮುಂದಿನ ಸಿನಿಮಾಗಳು

ಸುನಿಲ್ ಶೆಟ್ಟಿ ಸದ್ಯ ಹೆರಾ ಫೆರಾ 3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರದ ಮೂಲಕ 25 ವರ್ಷಗಳ ನಂತರ ನಟ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಸೇರಿದಂತೆ ಮೂಲ ತಾರಾಗಣದೊಂದಿಗೆ ಮತ್ತೆ ನಟಿಸಲಿದ್ದಾರೆ. ಅದರ ಸೌಂದರ್ಯವೆಂದರೆ 25 ವರ್ಷಗಳು ಕಳೆದಿವೆ ಎಂದು ಎಂದಿಗೂ ಅನಿಸಲಿಲ್ಲ. ನಾವು ವಿಭಿನ್ನವಾಗಿ ಕಾಣುತ್ತಿದ್ದೇವೆ ಮತ್ತು ಈಗ ವಿಭಿನ್ನ ಗೆಟಪ್‌ಗಳನ್ನು ಹೊಂದಿದ್ದೇವೆ, ಇಲ್ಲದಿದ್ದರೆ ನಾವು ಒಂದೇ ಆಗಿದ್ದೇವೆ. ಓಂ ಪುರಿಯನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರು ಹೆರಾ ಫೆರಿ 1 ರ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದರು‘ ಎಂದು ನಟ ಓಂಪುರಿಯನ್ನು ನೆನೆದಿದ್ದಾರೆ ಸುನಿಲ್ ಶೆಟ್ಟಿ. ಹೆರಾ ಫೆರಿ 3 2026 ರಲ್ಲಿ ಬಿಡುಗಡೆಯಾಗಲಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.