ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ ಇವಳು; ಮಗಳ ಫೋಟೋ ಹಂಚಿಕೊಂಡು ಹೆಸರು ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ ರಣ್‌ವೀರ್‌ ಸಿಂಗ್‌
ಕನ್ನಡ ಸುದ್ದಿ  /  ಮನರಂಜನೆ  /  ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ ಇವಳು; ಮಗಳ ಫೋಟೋ ಹಂಚಿಕೊಂಡು ಹೆಸರು ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ ರಣ್‌ವೀರ್‌ ಸಿಂಗ್‌

ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ ಇವಳು; ಮಗಳ ಫೋಟೋ ಹಂಚಿಕೊಂಡು ಹೆಸರು ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ ರಣ್‌ವೀರ್‌ ಸಿಂಗ್‌

ಬಾಲಿವುಡ್‌ ಜೋಡಿ ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌ ದೀಪಾವಳಿ ವಿಶೇಷವಾಗಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮಗಳಿಗೆ ದುವಾ ರಣವೀರ್‌ ಸಿಂಗ್‌ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಆ ಪದದ ಅರ್ಥವೇನು ಎಂಬುದನ್ನೂ ವಿವರಿಸಿದ್ದಾರೆ.

ಮಗಳು ದುವಾ ರಣವೀರ್‌ ಸಿಂಗ್‌ ಫೋಟೋ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ ರಣ್‌ವೀರ್‌ ಸಿಂಗ್‌
ಮಗಳು ದುವಾ ರಣವೀರ್‌ ಸಿಂಗ್‌ ಫೋಟೋ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ ರಣ್‌ವೀರ್‌ ಸಿಂಗ್‌ (PC: deepikapadukone)

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಸಿನಿಮಾಗಳಿಂದ ದೂರ ಉಳಿದು ಮಗಳ ಕಾಳಜಿ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಿಕಾ ರಣವೀರ್‌ ಮಗಳನ್ನು ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದರು. ಮಗು ಹುಟ್ಟಿದ ನಂತರ ಈ ಜೋಡಿ ಎಲ್ಲೂ ಮಗಳ ಫೋಟೋ ರಿವೀಲ್‌ ಮಾಡಿರಲಿಲ್ಲ. ಈಗ ಮಗುವಿನ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಮಗಳ ಹೆಸರನ್ನೂ ರಿವೀಲ್‌ ಮಾಡಿದ್ದಾರೆ.

ಮಗುವಿನ ಕಾಲುಗಳ ಫೋಟೋ ಹಂಚಿಕೊಂಡ ದಂಪತಿ

ಅಂದಹಾಗೆ ದೀಪಿಕಾ ಹಾಗೂ ರಣವೀರ್‌ ಮಗಳ ಪೂರ್ತಿ ಫೋಟೋವನ್ನು ರಿವೀಲ್‌ ಮಾಡಿಲ್ಲ. ಪಿಂಕ್‌ ಬಣ್ಣದ ಬಟ್ಟೆ ಧರಿಸಿದ ಮಗುವಿನ ಕಾಲುಗಳನಷ್ಟೇ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್‌ ಎಂದು ಹೆಸರಿಟ್ಟಿರುವುದಾಗಿ ಹೇಳಿದ್ಧಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗುವಿನ ಫೋಟೋ ರಿವೀಲ್‌ ಮಾಡಿರುವ ದೀಪ್‌ವೀರ್‌, ದುವಾ ಪಡುಕೋಣೆ ಸಿಂಗ್‌, ದುವಾ ಎಂದರೆ ಪ್ರಾರ್ಥನೆ, ಏಕೆಂದರೆ ಅವಳು ನಮ್ಮ ಪ್ರಾರ್ಥನೆಗೆ ಸಿಕ್ಕ ಉತ್ತರ. ನಮ್ಮ ಹೃದಯದಲ್ಲಿ ಪ್ರೇಮ, ಕೃತಜ್ಞತೆಯಿಂದ ತುಂಬಿ ಹೋಗಿದೆ. ದೀಪಿಕಾ ಹಾಗೂ ರಣವೀರ್‌ ಎಂಬ ಕ್ಯಾಪ್ಷನ್‌ ಬರೆದಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಹಾಗೂ ಬಾಲಿವುಡ್‌ ಸೆಲೆಬ್ರಿಟಿಗಳು ಕೂಡಾ ಕಾಮೆಂಟ್‌ ಮಾಡುತ್ತಿದ್ದಾರೆ.

ಮಗುವಿನ ಹೆಸರು ಚೆನ್ನಾಗಿದೆ ಎಂದ ಕರಣ್‌ ಜೋಹರ್

ಅಮ್ಮನಂತೆ ಮಗಳು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದರೆ , ಒಬ್ಬರು ದೀಪಾವಳಿಗೆ ವಿಶ್‌ ಮಾಡಿದ್ದಾರೆ, ನಿಮ್ಮ ಮನೆಯ ಪುಟ್ಟ ಲಕ್ಷ್ಮೀ ದುವಾ ಎಂದು ಒಬ್ಬರು ಹೇಳಿದರೆ, ಹೆಸರು ಚೆನ್ನಾಗಿದೆ, ಮಗುವಿನ ಮೇಲೆ ನಮ್ಮೆಲ್ಲರ ಆಶೀರ್ವಾದ ಇದೆ ಎಂದಿದ್ದಾರೆ. ಕಾಮೆಂಟ್‌ ಬಾಕ್ಸ್‌ ತುಂಬಾ ಲವ್‌ ಎಮೋಜಿಗಳು ತುಂಬಿ ಹೋಗಿವೆ. ಈ ಫೋಟೋಗೆ 3 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಲೈಕ್‌ ಮಾಡಿದ್ದಾರೆ. ಭೂಮಿ ಪೆಡ್ನೇಕರ್‌, ಕರಣ್‌ ಜೋಹರ್‌, ವಿಜಯ್‌ ಯೇಸುದಾಸ್‌ ಕಾಮೆಂಟ್‌ ಮಾಡಿ ಮಗುವಿನ ಹೆಸರು ಬಹಳ ಮುದ್ದಾಗಿದೆ ಎಂದಿದ್ದಾರೆ.‌

2018 ರಲ್ಲಿ ಮದುವೆಯಾಗಿದ್ದ ದೀಪ್‌ ವೀರ್‌

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಇಬ್ಬರೂ ರಾಮ್‌ ಲೀಲಾ, ಬಾಜಿರಾವ್‌ ಮಸ್ತಾನಿ, 83 ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ರಾಮ್‌ ಲೀಲಾ ಸಿನಿಮಾ ಚಿತ್ರೀಕರಣದಲ್ಲಿ ಈ ಜೋಡಿ ನಡುವೆ ಲವ್‌ ಆಗಿದೆ. ಕೆಲವು ವರ್ಷಗಳ ಕಾಲ ರಿಲೇಶನ್‌ನಲ್ಲಿದ್ದ ಈ ಜೋಡಿ 2018ರಲ್ಲಿ ಮದುವೆ ಆದರು. ಆದಷ್ಟು ಬೇಗ ಗುಡ್‌ ನ್ಯೂಸ್‌ ಕೊಡಿ ಎಂದು ಅಭಿಮಾನಿಗಳು ಕೂಡಾ ಕೇಳುತ್ತಿದ್ದರು. ಆದರೆ ಮದುವೆಗೂ ಮುನ್ನ ಸಹಿ ಹಾಕಿದ್ದ ಸಿನಿಮಾಗಳಲ್ಲಿ ದೀಪಿಕಾ ನಟಿಸಬೇಕಿದ್ದರಿಂದ ಮಗುವಿನ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದಿದ್ದರು. ಇದೇ ವರ್ಷ ಫೆಬ್ರವರಿಯಲ್ಲಿ ದೀಪಿಕಾ ಹಾಗೂ ರಣವೀರ್‌ ತಾವು ಅಪ್ಪ-ಅಮ್ಮ ಆಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು. ನವೆಂಬರ್‌ 1 ರಂದು ತೆರೆ ಕಂಡ ರೋಹಿತ್‌ ಶೆಟ್ಟಿ ಅಭಿನಯದ ಸಿಂಗಂ ಅಗೇನ್‌ ಚಿತ್ರದಲ್ಲಿ ಕೂಡಾ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ನಟಿಸಿದ್ದಾರೆ.

Whats_app_banner