Rashmika Mandanna: ಛಾವಾ ಚಿತ್ರದಲ್ಲಿ ಸಂಭಾಜಿ ಮಹಾರಾಜನ ಪತ್ನಿ ಮಹಾರಾಣಿ ಯೇಸುಬಾಯಿ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ ಮಿಂಚು
Rashmika Mandanna: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಸಂಭಾಜಿ ಮಹಾರಾಜ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

Rashmika Mandanna: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ (Chhaava Movie) ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಐತಿಹಾಸಿಕ ಹಿನ್ನೆಲೆಯ ಈ ಸಿನಿಮಾ ಮರಾಠಾ ದೊರೆ ಛತ್ರವತಿ ಶಿವಾಜಿ ಮಹಾರಾಜ್ ಅವರ ಹಿರಿ ಮಗ ಸಂಭಾಜಿ ಮಹಾರಾಜ್ ಅವರನ್ನು ಆಧರಿಸಿದೆ. ಈಗ ಇದೇ ಛಾವಾ ಸಿನಿಮಾ ತಂಡದಿಂದ, ಈ ಚಿತ್ರದಲ್ಲಿ ಮಹಾರಾಣಿ ಯೇಸುಬಾಯಿ (Maharani Yesubai) ಪಾತ್ರದಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನಾವರಣಗೊಂಡಿದೆ.
ಮಂಗಳವಾರ ಛಾವಾ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಛತ್ರಪತಿ ಸಂಭಾಜಿಯವರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಛಾವಾ ಸಿನಿಮಾದಲ್ಲಿ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ನಟಿಸಿದ್ದಾರೆ.
ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ
ಈ ಮೊದಲು ಸಂಭಾಜಿ ಮಹಾರಾಜ್ ಪಾತ್ರಧಾರಿ ವಿಕ್ಕಿ ಕೌಶಾಲ್ ಅವರ ಸರಣಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ರಶ್ಮಿಕಾ ಮಂದಣ್ಣ ಅವರ ಎರಡು ವಿಶೇಷ ಲುಕ್ ರಿಲೀಸ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ನಿರ್ಮಾಣ ಸಂಸ್ಥೆ, "ಪ್ರತಿಯೊಬ್ಬ ಮಹಾನ್ ರಾಜನ ಹಿಂದೆ, ಶಕ್ತಿಯ ರೂಪದಲ್ಲಿ ಓರ್ವ ರಾಣಿ ಇದ್ದೇ ಇರುತ್ತಾಳೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿಯಾಗಿ ಕಾಣಿಸಲಿದ್ದಾರೆ. #ChhaavaTrailer ನಾಳೆ (ಜ.22) ಬಿಡುಗಡೆಯಾಗಲಿದೆ! ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಛಾವಾ ಸಿನಿಮಾ ಬಿಡುಗಡೆಯಾಗಲಿದೆ" ಎಂದಿದೆ.
ಛಾವಾ ಚಿತ್ರದಲ್ಲಿ ಇದೇ ಮೊದಲ ಸಲ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಾಲ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿ ಮಹಾರಾಜರ ಶೌರ್ಯ ಮತ್ತು ಪರಾಕ್ರಮವನ್ನು ಎತ್ತಿ ತೋರಿಸಲಿದೆ. ಅದ್ಯಾವ ಮಟ್ಟಿಗೆ ಎಂದರೆ ಇತ್ತೀಚೆಗಷ್ಟೇ ಪಂಚಭೂತಗಳಷ್ಟೇ ಶಕ್ತಿಶಾಲಿ ಎಂಬಂತೆ ಸಂಭಾಜಿಯವರ ನಾಲ್ಕು ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.
ಫೆಬ್ರವರಿ 14ರಂದು ತೆರೆಗೆ
ಇನ್ನು ಛಾವಾ ಸಿನಿಮಾ ವಿಕ್ಕಿ ಕೌಶಾಲ್‌ಗೂ ಹೊಸ ಅನುಭವ. ಅವರ ಮೊದಲ ಐತಿಹಾಸಿಕ ಚಿತ್ರವೂ ಹೌದು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಚಿತ್ರದ ಪೋಸ್ಟರ್‌ಗಳೇ ಹೇಳುತ್ತವೆ. ಅಂದಹಾಗೆ, ಛಾವಾ ಚಿತ್ರವು ಶಿವಾಜಿ ಸಾವಂತ್ ಬರೆದ ಅದೇ ಶೀರ್ಷಿಕೆಯ ಮರಾಠಿ ಪುಸ್ತಕವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಛಾವಾ ಸಿನಿಮಾವನ್ನು ನಿರ್ಮಿಸಿದೆ. ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಫೆಬ್ರವರಿ 14 (Chhaava Release Date) ರಂದು ಈ ಸಿನಿಮಾ ತೆರೆಗೆ ಬರಲಿದೆ.
