ರೋಹಿತ್ ಶೆಟ್ಟಿ ನಿರ್ದೇಶನ, ರವಿ ಬಸ್ರೂರು ಸಂಗೀತವಿರುವ ಸಿಂಗಂ ಅಗೇನ್ ಸಿನಿಮಾ ಹೇಗಿದೆ? ಟ್ವಿಟರ್ ರಿವ್ಯೂ
ರೋಹಿತ್ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿರುವ ಸಿಂಗಂ ಎಗೇನ್ ಬಿಡುಗಡೆ ಆಗಿದ್ದು ಟ್ವಿಟರ್‌ನಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಜಯ್ ದೇವಗನ್, ಕರೀನಾ ಕಪೂರ್ ಖಾನ್ , ರಣವೀರ್ ಸಿಂಗ್ , ಅಕ್ಷಯ್ ಕುಮಾರ್ , ದೀಪಿಕಾ ಪಡುಕೋಣೆ , ಟೈಗರ್ ಶ್ರಾಫ್ ಬಹುತಾರಾಗಣವಿರುವ ಈ ಚಿತ್ರಕ್ಕೆ ರವಿ ಬಸ್ರೂರು ಹಾಗೂ ತಮನ್ ಸಂಗೀತ ನೀಡಿದ್ದಾರೆ.
ಬಾಲಿವುಡ್ ಸಿಂಗಂ ಅಗೇನ್ ಸಿನಿಮಾ ಇಂದು (ನ. 1) ರಿಲೀಸ್ ಆಗಿದೆ. ರೋಹಿತ್ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಇದೇ ದಿನ ಭೂಲ್ ಭುಲಯ್ಯ 3 ಸಿನಿಮಾ ಕೂಡಾ ರಿಲೀಸ್ ಆಗಿದ್ದು ಎರಡೂ ಸಿನಿಮಾಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನೀಡುತ್ತಿವೆ.
ಸಿಂಗಮ್ ಅಗೇನ್ ಸಿನಿಮಾ ನೋಡಿ ಸಿನಿಪ್ರಿಯರು ಏನಂದ್ರು?
ಸೀಂಗ್ ಅಗೇನ್ ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ತಯಾರಾದಂಥ ಬೆಸ್ಟ ಕಾಪ್ ಸಿನಿಮಾ ಇದು. ಇಂಥ ಒಳ್ಳೆ ಸಿನಿಮಾ ಕೊಟ್ಟಿದ್ದಕ್ಕೆ ರೋಹಿತ್ ಶೆಟ್ಟಿ ಅವರಿಗೆ ಹ್ಯಾಟ್ಸ್ ಆಫ್ ಎಂದು ಸಿನಿಮಾ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ನೀಡುತ್ತಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ಧಾರೆ ಎಂದು @piyush_parmar_2 ಹೆಸರಿನ ಟ್ವಿಟರ್ ಯೂಸರ್ ಬರೆದುಕೊಂಡಿದ್ದಾರೆ.
ಸಿಂಗಂ ಅಗೇನ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎಂಟ್ರಿ ದೃಶ್ಯ ಸೂಪರ್, ನನಗೆ ಪದೇ ಪದೆ ಅದೇ ನೆನಪಿಗೆ ಬರುತ್ತಿದೆ ಎಂದು ಮತ್ತೊಬ್ಬರು ಯೂಸರ್ ಕಾಮೆಂಟ್ ಮಾಡಿದ್ದಾರೆ.
ಆಕ್ಷನ್ ದೃಶ್ಯಗಳು ಬೇರೆ ಲೆವೆಲ್‌ನಲ್ಲಿದೆ, ಸಿನಿಮಾ ಬಹಳ ಚೆನ್ನಾಗಿದೆ, ಸಿನಿಮಾವನ್ನು ಮತ್ತೊಮ್ಮೆ ನೋಡಲು ಬಹಳ ಎಕ್ಸೈಟ್ ಆಗಿದ್ದೇನೆ ಎಂದು @prisha_0505 ಯೂಸರ್ ರಿವ್ಯೂ ಬರೆದುಕೊಂಡಿದ್ದಾರೆ.
ಸಿನಿಮಾ ಆರಂಭದಿಂದ ಕೊನೆಯವರೆಗೆ ಸೀಟಿನಿಂದ ಕದಲದಂತೆ ಮಾಡುತ್ತದೆ, ಸಿಂಗಂ ಎಗೇನ್ ನಿಜಕ್ಕೂ ಮನರಂಜನೆ ನೀಡುವ ಸಿನಿಮಾ ಎಂದು @tishuuuuuu_07 ಚಿತ್ರವನ್ನು ಹೊಗಳಿದ್ದಾರೆ.
ಅಜಯ್ ದೇವ್ಗನ್ ಹಾಗೂ ರೋಹಿತ್ ಶೆಟ್ಟಿ ಕಾಂಬನೇಶನ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗೋದು ಪಕ್ಕಾ ಎಂದು @tinni8000 ಎಂಬ ಯೂಸರ್ ಹೇಳಿದ್ದಾರೆ.
ಒಟ್ಟಿನಲ್ಲಿ ಸಿಂಗಂ ಎಗೇನ್ ಸಿನಿಮಾ ಬಗ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ , ಜಿಯೋ ಸ್ಟುಡಿಯೋಸ್ ಮತ್ತು ದೇವಗನ್ ಫಿಲ್ಮ್ಸ್, ರೋಹಿತ್ ಶೆಟ್ಟಿ ಪಿಕ್ಚರ್ಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗಿದ್ದು ರೋಹಿತ್ ಶೆಟ್ಟಿ ಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಖಾನ್ , ರಣವೀರ್ ಸಿಂಗ್ , ಅಕ್ಷಯ್ ಕುಮಾರ್ , ದೀಪಿಕಾ ಪಡುಕೋಣೆ , ಟೈಗರ್ ಶ್ರಾಫ್ , ಅರ್ಜುನ್ ಕಪೂರ್, ಜಾಕಿ ಶ್ರಾಫ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು, ಎಸ್ ತಮನ್ ಜೊತೆ ಸೇರಿ ಸಂಗೀತ ನೀಡಿದ್ದಾರೆ.
2011 ರಲ್ಲಿ ರೋಹಿತ್ ಶೆಟ್ಟಿ ಮೊದಲ ಬಾರಿಗೆ ಸಿಂಗಂ ಸಿನಿಮಾ ನಿರ್ದೇಶನ ಮಾಡಿದ್ದರು, 2014 ರಲ್ಲಿ ಸಿಂಗಂ ರಿಟರ್ನ್ಸ್ ರಿಲೀಸ್ ಆಗಿತ್ತು.
ವಿಭಾಗ