Bigg Boss Kannada 11 TRP: ಟಿಆರ್‌ಪಿಯಲ್ಲಿ ಕಿಚ್ಚ ವರ್ಸಸ್‌ ಕಿಚ್ಚ! ಬಿಗ್‌ ಬಾಸ್‌ಗೆ ಟಕ್ಕರ್‌ ಕೊಟ್ಟ ಸರಿಗಮಪ ಶೋ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11 Trp: ಟಿಆರ್‌ಪಿಯಲ್ಲಿ ಕಿಚ್ಚ ವರ್ಸಸ್‌ ಕಿಚ್ಚ! ಬಿಗ್‌ ಬಾಸ್‌ಗೆ ಟಕ್ಕರ್‌ ಕೊಟ್ಟ ಸರಿಗಮಪ ಶೋ

Bigg Boss Kannada 11 TRP: ಟಿಆರ್‌ಪಿಯಲ್ಲಿ ಕಿಚ್ಚ ವರ್ಸಸ್‌ ಕಿಚ್ಚ! ಬಿಗ್‌ ಬಾಸ್‌ಗೆ ಟಕ್ಕರ್‌ ಕೊಟ್ಟ ಸರಿಗಮಪ ಶೋ

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಸರಿಗಮಪ ಶೋ, ಇದೀಗ ದಾಖಲೆಯ ಟಿಆರ್‌ಪಿ ಪಡೆದುಕೊಂಡು ಮುನ್ನಡೆಯುತ್ತಿದೆ. ಕಿಚ್ಚ ಸುದೀಪ್‌ ಭಾಗವಹಿಸಿದ್ದ ಸರಿಗಮಪ ಶೋ ಬರೋಬ್ಬರಿ 15.4 ಟಿಆರ್‌ಪಿ ಪಡೆದು ಮುನ್ನುಗ್ಗಿದರೆ, ಅದೇ ಸುದೀಪ್‌ ನಿರೂಪಣೆಯ ಬಿಗ್‌ ಬಾಸ್‌ ವಾರಾಂತ್ಯದ ಸಂಚಿಕೆಗಳು ಎರಡನೇ ಸ್ಥಾನದಲ್ಲಿವೆ.

ಟಿಆರ್‌ಪಿಯಲ್ಲಿ ಕಿಚ್ಚ ವರ್ಸಸ್‌ ಕಿಚ್ಚ!
ಟಿಆರ್‌ಪಿಯಲ್ಲಿ ಕಿಚ್ಚ ವರ್ಸಸ್‌ ಕಿಚ್ಚ!

Bigg Boss Kannada 11 TRP: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್‌ ಬಾಸ್‌ ಕನ್ನಡ, ಟಿಆರ್‌ಪಿಯಲ್ಲಿಯೂ ಮುಂದಡಿ ಇರಿಸಿದೆ. ಕಳೆದ ಸೀಸನ್‌ 10ಕ್ಕೆ ಸಿಕ್ಕ ದಾಖಲೆಯ ಟಿಆರ್‌ಪಿಯನ್ನೂ ಈ ಸಲದ 11ನೇ ಸೀಸನ್‌ ಮುರಿದು ಮುಂದೆ ಸಾಗಿದೆ. ಈ ನಡುವೆ ನಾನ್‌ ಫಿಕ್ಷನ್‌ ಶೋಗಳ ಪೈಕಿ ಈ ಓಟಕ್ಕೆ ಯಾರೂ ಬ್ರೇಕ್‌ ಹಾಕುವವರೇ ಇಲ್ಲ ಎನ್ನುತ್ತಿರುವಾಗಲೇ ಜೀ ಕನ್ನಡದ ಸರಿಗಮಪ ಸಿಂಗಿಂಗ್‌ ಶೋ ಬಿಗ್‌ಬಾಸ್‌ಗೆ ಟಕ್ಕರ್‌ ನೀಡಿದೆ. ಕಳೆದೊಂದು ತಿಂಗಳ ಹಿಂದೆ ಆರಂಭವಾಗಿರುವ ಸರಿಗಮಪ ಶೋ ಇದೀಗ ನಾನ್‌ ಫಿಕ್ಷನ್‌ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬಿಗ್‌ಬಾಸ್‌ ಇದೆ.

ಕಳೆದ ಎರಡು ವಾರಗಳ ಹಿಂದೆ ಅಂದರೆ, ಜನವರಿ 4 ಮತ್ತು 5ರಂದು ಜೀ ಕನ್ನಡದಲ್ಲಿ ಸರಿಗಮಪ ಶೋಗೆ ಕಿಚ್ಚ ಸುದೀಪ್‌ ಎಂಟ್ರಿ ಕೊಟ್ಟಿದ್ದರು. ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸರಿಗಮಪ ಶೋನಲ್ಲಿ ಮಹಾವೇದಿಕೆ ಹೆಸರಲ್ಲಿ ವಿಶೇಷ ಸಂಚಿಕೆ ಪ್ರಸಾರ ಕಂಡಿತ್ತು. ಕಿಚ್ಚ ಸುದೀಪ್‌ ಮಾತ್ರವಲ್ಲದೆ, ಪತ್ನಿ ಪ್ರಿಯಾ, ಮಗಳು ಸಾನ್ವಿ ಸಹ ಭಾಗವಹಿಸಿದ್ದರು. ಬರೋಬ್ಬರಿ ಎರಡು ದಿನದ ವಾರಾಂತ್ಯದ ಏಪಿಸೋಡ್‌ಗೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಡು, ಕುಣಿತ, ನೆನಪು, ಸೇರಿ ಭಾವುಕ ಕ್ಷಣಗಳಿಗೆ ಸರಿಗಮಪ ಶೋ ಸಾಕ್ಷಿಯಾಗಿತ್ತು.

ಕಿಚ್ಚ ವರ್ಸಸ್‌ ಕಿಚ್ಚ

ಟಿಆರ್‌ಪಿಯಲ್ಲಿ ಸರಿಗಮಪ ಟಾಪ್‌ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಅಂದರೆ, ಈ ಮೂಲಕ ಕಿಚ್ಚನ ಎದುರು ಕಿಚ್ಚನೇ ಗೆದ್ದು ಬೀಗಿದ್ದಾರೆ! ಹೌದು, ಶನಿವಾರ ಭಾನುವಾರದ ಸರಿಗಮಪ ಶೋನಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದರೆ, ಅದೇ ದಿನದ ಬಿಗ್‌ ಬಾಸ್‌ ಶೋನ ವಾರಾಂತ್ಯದಲ್ಲಿ ಸುದೀಪ್‌ ಎದುರಾಗಿದ್ದರು. ಎರಡರಲ್ಲೂ ಸುದೀಪ್‌ ಹೈಲೈಟ್‌ ಆಗಿದ್ದರಿಂದ, ಯಾವ ಶೋಗೆ ಟಿಆರ್‌ಪಿ ಅಧಿಕ ಬರಲಿದೆ ಎಂದೇ ಚರ್ಚೆ ನಡೆದಿತ್ತು. ಅದರಂತೆ, ಅದಕ್ಕೀಗ ಉತ್ತರ ಸಿಕ್ಕಿದೆ. ಜನವರಿ 4 ಮತ್ತು 5ರ ವಾರಾಂತ್ಯದ ನಾನ್‌ ಫಿಕ್ಷನ್‌ ಕಿಂಗ್‌ ಯಾರು ಎಂಬುದು ಹೊರಬಿದ್ದಿದೆ. ಸರಿಗಮಪ ಶೋ ಬರೋಬ್ಬರಿ 15.4 ಟಿಆರ್‌ಪಿ ಪಡೆದುಕೊಂಡು ಹೊಸ ದಾಖಲೆ ಬರೆದಿದೆ.

ಹಾಗಾದರೆ ಬಿಗ್‌ಬಾಸ್‌ಗೆ ಸಿಕ್ಕ ನಂಬರ್‌ ಎಷ್ಟು?

ಅದೇ ರೀತಿ ಬಿಗ್‌ ಬಾಸ್‌ ಟಿಆರ್‌ಪಿ ನೋಡುವುದಾದರೆ, ಸೋಮವಾರದಿಂದ ಶುಕ್ರವಾರದ ವರೆಗಿನ 5 ದಿನದ ಏಪಿಸೋಡ್‌ಗಳಿಗೆ 8.9 ಟಿಆರ್‌ಪಿ ಸಿಕ್ಕಿದೆ. ಅದರಲ್ಲೂ ವಾರಾಂತ್ಯದ ಮೊದಲ ದಿನವಾದ ಶನಿವಾರ ಬರೋಬ್ಬರಿ 10.0 ಟಿಆರ್‌ಪಿ ಸಿಕ್ಕರೆ, ಭಾನುವಾರದ ಏಪಿಸೋಡ್‌ಗೆ 9.9 ಟಿಆರ್‌ಪಿ ಪ್ರಾಪ್ತವಾಗಿದೆ. ಈ ಮೂಲಕ ವಾರಾಂತ್ಯದಲ್ಲಿ ಸರಿಗಮಪ ಶೋ ಮುಂದಡಿ ಇರಿಸಿದೆ. ಅದಕ್ಕೂ ಹಿಂದಿನ ವಾರವೂ ಸರಿಗಮಪ ಶೋ ಹೆಚ್ಚು ಟಿಆರ್‌ಪಿ ಪಡೆದುಕೊಂಡಿತ್ತು.

 

Whats_app_banner