ಕನ್ನಡ ಸುದ್ದಿ  /  Entertainment  /  Ccl Match Held In Bangalore On March 4th Saturday

CCL in Bangalore: ಮಾ. 4ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್‌ ಮ್ಯಾಚ್‌.. ಕರ್ನಾಟಕ ಬುಲ್ಡೋಜರ್ಸ್‌ ಎದುರು ಆಡ್ತಿರೋ ತಂಡ ಯಾವುದು?

ಇದುವರೆಗೂ ಕರ್ನಾಟಕ ಬುಲ್ಡೋಜರ್ಸ್‌ ಎರಡು ಮ್ಯಾಚ್‌ಗಳು, ತೆಲುಗು ವಾರಿಯರ್ಸ್‌ ಎರಡು, ಭೋಜ್‌ಪುರಿ ದಬಾಂಗ್ಸ್‌ ಎರಡು, ಚೆನ್ನೈ ರೈನೋಸ್‌, ಮುಂಬೈ ಹೀರೋಸ್‌ ತಲಾ ಒಂದು ಪಂದ್ಯಗಳನ್ನು ಗೆದ್ದಿವೆ. ಎರಡು ಪಂದ್ಯಗಳನ್ನು ಗೆದ್ದ ತಂಡಗಳು ನಂಬರ್‌ ಒನ್‌ ಸ್ಥಾನಕ್ಕಾಗಿ ಭಾರೀ ಕಸರತ್ತು ನಡೆಸುತ್ತಿವೆ.

ಮಾರ್ಚ್‌ 4 ರಂದು ಚೆನ್ನೈ ರೈನೋಸ್‌ ಜೊತೆ ಕರ್ನಾಟಕ ಬುಲ್ಡೋಜರ್ಸ್‌ ಸೆಣಸಾಟ
ಮಾರ್ಚ್‌ 4 ರಂದು ಚೆನ್ನೈ ರೈನೋಸ್‌ ಜೊತೆ ಕರ್ನಾಟಕ ಬುಲ್ಡೋಜರ್ಸ್‌ ಸೆಣಸಾಟ

ಇತ್ತೀಚೆಗಷ್ಟೇ ಕೆಸಿಸಿ ಮೂರನೇ ಆವೃತ್ತಿ ಮುಗಿಸಿದ್ದ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಈಗಿ ಸಿಸಿಎಲ್‌ ಪಂದ್ಯಾವಳಿಯಲ್ಲಿ ಬ್ಯುಸಿ ಇದ್ದಾರೆ. ವಾರಾಂತ್ಯದಲ್ಲಿ ಈ ಮ್ಯಾಚ್‌ ನಡೆಯುತ್ತಿದ್ದು ಈ ಬಾರಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ವೀಕ್ಷಿಸಲು ಸಿನಿ ಹಾಗೂ ಕ್ರೀಡಾ ಪ್ರೇಮಿಗಳು ಕಾಯುತ್ತಿದ್ದಾರೆ.

ಮಾರ್ಚ್‌ 4, ಶನಿವಾರ ಈ ಮ್ಯಾಚ್‌ ನಡೆಯಲಿದೆ. ಇದಕ್ಕೂ ಮುನ್ನ ಪಂಜಾಬ್‌ನ ರಾಯಪುರ ಹಾಗೂ ರಾಜಸ್ಥಾನದ ಜೈಪುರದಲ್ಲಿ ಮ್ಯಾಚ್‌ ನಡೆದಿದ್ದುಇದೇ ಶನಿವಾರ ಸಿಲಿಕಾನ್‌ ಸಿಟಿಯಲ್ಲಿ ಮ್ಯಾಚ್‌ಗಳು ನಡೆಯುತ್ತಿದೆ. ಈ ರೋಚಕ ಪಂದ್ಯಾವಳಿಯನ್ನು ನೋಡಲು ಅಭಿಮಾನಿಗಳು ಈಗಾಗಲೇ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಶನಿವಾರ ತೆಲುಗು ವಾರಿಯರ್ಸ್‌ ಹಾಗೂ ಪಂಜಾಬ್‌ ದಿ ಶೇರ್‌ ತಂಡಗಳ ನಡುವೆ ಮಧ್ಯಾಹ್ನ 2:30 ರಿಂದ 6:30 ರವರೆಗೆ ಮ್ಯಾಚ್‌ ನಡೆಯಲಿದೆ. ಇದು ಸಿಸಿಎಲ್‌ ಪಂದ್ಯಾವಳಿಯ 9ನೇ ಮ್ಯಾಚ್‌ ಆಗಿದೆ. ನಂತರ ರಾತ್ರಿ 7:00 ರಿಂದ 11:00 ರವರೆಗೆ ದಿನದ ಎರಡನೇ ಪಂದ್ಯ (ಸೀಸನ್‌ನ 10ನೇ ಪಂದ್ಯ) ಚೆನ್ನೈ ರೈನೋಸ್‌ ಮತ್ತು ಕರ್ನಾಟಕ ಬುಲ್ಡೋಜರ್ಸ್‌ ನಡುವೆ ನಡೆಯಲಿದೆ. ಮುಂದಿನ ಪಂದ್ಯಗಳು ಕೇರಳದ ತ್ರಿವೇಂಡ್ರಂನಲ್ಲಿ ನಡೆಯಲಿದೆ.

ಇದುವರೆಗೂ ಕರ್ನಾಟಕ ಬುಲ್ಡೋಜರ್ಸ್‌ ಎರಡು ಮ್ಯಾಚ್‌ಗಳು, ತೆಲುಗು ವಾರಿಯರ್ಸ್‌ ಎರಡು, ಭೋಜ್‌ಪುರಿ ದಬಾಂಗ್ಸ್‌ ಎರಡು, ಚೆನ್ನೈ ರೈನೋಸ್‌, ಮುಂಬೈ ಹೀರೋಸ್‌ ತಲಾ ಒಂದು ಪಂದ್ಯಗಳನ್ನು ಗೆದ್ದಿವೆ. ಎರಡು ಪಂದ್ಯಗಳನ್ನು ಗೆದ್ದ ತಂಡಗಳು ನಂಬರ್‌ ಒನ್‌ ಸ್ಥಾನಕ್ಕಾಗಿ ಭಾರೀ ಕಸರತ್ತು ನಡೆಸುತ್ತಿವೆ. ಶನಿವಾರ ರಾತ್ರಿ ಚೆನ್ನೈ ರೈನೋಸ್‌ ಜೊತೆ ಕರ್ನಾಟಕ ಬುಲ್ಡೋಜರ್ಸ್‌ ಆಡಲಿದ್ದು ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕು. ಮಾರ್ಚ್‌ 19 ಭಾನುವಾರ ಹೈದರಾಬಾದ್‌ನಲ್ಲಿ ಫೈನಲ್‌ ಮ್ಯಾಚ್‌ ನಡೆಯಲಿದೆ.

ಫೆಬ್ರವರಿ 18ರಂದು ಆರಂಭವಾದ ಸಿಸಿಎಲ್‌

ಫೆಬ್ರವರಿ 18 ರಿಂದ ಪಂದ್ಯಗಳು ಆರಂಭವಾಗಿದೆ. ಮೊದಲ ದಿನ ಬೆಂಗಾಲ್ ಟೈಗರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಗೆಲುವು ಸಾಧಿಸಿದೆ. ಬೆಂಗಳೂರು, ಜೈಪುರ್‌, ಹೈದರಾಬಾದ್‌, ರಾಯ್‌ಪುರ್‌, ಜೋಧ್‌ಪುರ್‌ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ. ಮಾರ್ಚ್‌ 19 ರಂದು ಫೈನಲ್‌ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಿಸಿಎಲ್‌ ನಡೆದಿರಲಿಲ್ಲ. ಇದೀಗ ಸಿನಿಪ್ರಿಯರಿಗೆ ಕ್ರಿಕೆಟ್‌ ನೋಡುವ ಖುಷಿ ಒಂದೆಡೆ ಆದರೆ ತಮ್ಮ ಮೆಚ್ಚಿನ ನಟ-ನಟಿಯರನ್ನು ಒಂದೆಡೆ ನೋಡುವ ಭಾಗ್ಯ ಸಿಕ್ಕಿದೆ. ಈ ಬಾರಿ ಒಟ್ಟು 8 ತಂಡಗಳು 10 ಓವರ್‌ಗಳ ಸಿಸಿಎಲ್‌ ಆಡಲಿವೆ.

ತಂಡಗಳು ಹಾಗೂ ಕ್ಯಾಪ್ಟನ್‌ಗಳು

1. ಕರ್ನಾಟಕ ಬುಲ್ಡೋರ್ಜರ್ಸ್‌ - ಸುದೀಪ್

2. ಚೆನ್ನೈ ರಿನೋಸ್‌‌ - ಆರ್ಯ

3. ಕೇರಳ ಸ್ಟೈಕರ್ಸ್‌ - ಕುಂಚಕೋ ಬೊಬನ್‌

4. ಬೆಂಗಾಲ್‌ ಟೈಗರ್ಸ್‌ - ಜಿಶು ಸೇನ್‌ ಗುಪ್ತಾ

5. ಮುಂಬೈ ಹೀರೋಸ್‌ - ರಿತೇಶ್‌ ದೇಶ್‌ಮುಖ್‌

6. ಪಂಜಾಬ್‌ ಡೆ ಶೇರ್‌ - ಸೋನು ಸೂದ್‌

7. ತೆಲುಗು ವಾರಿಯರ್ಸ್‌ - ವೆಂಕಟೇಶ್‌ ದಗ್ಗುಬಾಟಿ

8. ಭೋಜ್‌ಪುರಿ ದಬಾಂಗ್ಸ್‌ - ಮನೋಜ್‌ ತಿವಾರಿ

ಕರ್ನಾಟಕ ಬುಲ್ಡೋಜರ್ಸ್‌ ತಂಡದಲ್ಲಿ ಈ ಬಾರಿ ಸುದೀಪ್‌ (ಕ್ಯಾಪ್ಟನ್‌), ಶಿವರಾಜ್‌ಕುಮಾರ್‌, ಗಣೇಶ್‌, ಪ್ರದೀಪ್‌ , ಸುನಿಲ್‌ ರಾವ್‌, ನಿರ್ದೇಶಕ ನಂದಕಿಶೋರ್‌, ಕರಣ್‌ ಆರ್ಯನ್‌, ಅರ್ಜುನ್‌ ಯೋಗಿ, ಪ್ರತಾಪ್‌ ನಾರಾಯಣ್‌, ತ್ರಿವಿಕ್ರಮ, ಜಯರಾಮ್‌ ಕಾರ್ತಿಕ್‌, ನಿರೂಪ್‌ ಭಂಡಾರಿ, ಡಾರ್ಲಿಂಗ್‌ ಕೃಷ್ಣ, ದಿಗಂತ್‌, ಪೆಟ್ರೋಲ್‌ ಪ್ರಸನ್ನ, ಚಂದನ್‌ ಕುಮಾರ್‌ ಹಾಗೂ ಇನ್ನಿತರರು ಆಡುತ್ತಿದ್ದಾರೆ. ಬ್ರಾಂಡ್‌ ಅಂಬಾಸಿಡರ್‌ ಆಗಿ ಸಪ್ತಮಿ ಗೌಡ ಹಾಗೂ ಶಾನ್ವಿ ಶ್ರೀ ವಾಸ್ತವ್‌ ಇದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ