Darshan Birthday: ನಟ ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ‘ಬ್ಲಾಕ್‌ ಹಾರ್ಟ್‌’ ಶುಭಾಶಯ, ಏನಿದರ ಅರ್ಥ?
ಕನ್ನಡ ಸುದ್ದಿ  /  ಮನರಂಜನೆ  /  Darshan Birthday: ನಟ ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ‘ಬ್ಲಾಕ್‌ ಹಾರ್ಟ್‌’ ಶುಭಾಶಯ, ಏನಿದರ ಅರ್ಥ?

Darshan Birthday: ನಟ ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ‘ಬ್ಲಾಕ್‌ ಹಾರ್ಟ್‌’ ಶುಭಾಶಯ, ಏನಿದರ ಅರ್ಥ?

ಸ್ಯಾಂಡಲ್‌ವುಡ್‌ ನಟ ದರ್ಶನ್‌ಗೆ ಇಂದು (ಫೆ. 16) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ನೆಚ್ಚಿನ ನಟನಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿವೆ. ಪತ್ನಿ ವಿಜಯಲಕ್ಷ್ಮೀ ದರ್ಶನ್‌ ಸಹ ವಿಶೇಷ ರೀತಿಯಲ್ಲಿ ಶುಭ ಕೋರಿದ್ದಾರೆ.

ನಟ ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ಶುಭಾಶಯ
ನಟ ದರ್ಶನ್‌ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ಶುಭಾಶಯ

Darshan Birthday: ಸ್ಯಾಂಡಲ್‌ವುಡ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷ ತಮ್ಮ ಅಭಿಮಾನಿಗಳ ಜತೆಗೆ ಗ್ರ್ಯಾಂಡ್‌ ಆಗಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ದರ್ಶನ್‌, ಈ ವರ್ಷ ಮಾತ್ರ ಅದರಿಂದ ದೂರ ಉಳಿದಿದ್ದಾರೆ. ಅದಕ್ಕೆ ಕಾರಣ ಕರುನಾಡಿನ ಜನಕ್ಕೂ ತಿಳಿದಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಪತ್ನಿ, ಪುತ್ರನಿಂದಲೂ ಶುಭಾಶಯ ಸಂದಾಯವಾಗಿದೆ.

ಫೆ. 16ರ 1977ರಲ್ಲಿ ಹುಟ್ಟಿದ ದರ್ಶನ್‌, ಇದೀಗ ತಮ್ಮ 48ನೇ ಬರ್ತ್‌ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡಿಕೊಳ್ಳುತ್ತಿದ್ದ ದರ್ಶನ್‌, ಈ ವರ್ಷ ಆ ಸಂಭ್ರಮದಿಂದ ದೂರ ಉಳಿದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ, ಜೈಲುವಾಸ ಅನುಭವಿಸಿ ಮರಳಿದ್ದಾರೆ. ಈ ಕಾರಣದಿಂದ ಈ ಸಲದ ಸಂಭ್ರಮದಿಂದ ದೂರ ಉಳಿದಿದ್ದಾರವರು.

ಈ ಸಲದ ಬರ್ತ್‌ಡೇ ಆಚರಣೆಯಿಂದ ನಾನು ದೂರ ಇರುವ ಬಗ್ಗೆಯೂ ನಟ ದರ್ಶನ್‌, ಕೆಲ ದಿನಗಳ ಹಿಂದಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಹುಟ್ಟುಹಬ್ಬದಂದು ಎಲ್ಲರನ್ನು ಭೇಟಿ ಮಾಡಿ, ಧನ್ಯವಾದ ಹೇಳಬೇಕೆಂದುಕೊಂಡಿದ್ದೆ. ಆದರೆ, ಅದು ಸಾಧ್ಯವಿಲ್ಲ ಎಂದಿದ್ದರು.

“ಹುಟ್ಟುಹಬ್ಬದಂದು ಎಲ್ಲರನ್ನೂ ಭೇಟಿ ಮಾಡಿ ಎಲ್ಲರಿಗೂ ಶುಭಾಶಯ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅದು ಸಾಧ್ಯವಿಲ್ಲ. ನನಗೆ ತುಂಬ ಹೊತ್ತು ನಿಂತುಕೊಳ್ಳಲು ಆಗಲ್ಲ. ಆಪರೇಷನ್‌ ಅಂತೂ ಮಾಡಿಸಿಕೊಳ್ಳಲೇಬೇಕು. ಒಪ್ಪಿಕೊಂಡ ಸಿನಿಮಾಗಳನ್ನೂ ಮುಗಿಸಿಕೊಡಬೇಕು” ಎಂದೂ ವಿಡಿಯೋದಲ್ಲಿ ಹೇಳಿಕೊಂಡಿದ್ದರು ದರ್ಶನ್‌. ಅದರಂತೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ದರ್ಶನ್.

ಪತಿಗೆ ವಿಜಯಲಕ್ಷ್ಮೀ ದರ್ಶನ್‌ ಶುಭಾಶಯ

ಇನ್ನು ಪತಿ ದರ್ಶನ್‌ ಬರ್ತ್‌ಡೇಗೆ, ಪತ್ನಿ ವಿಜಯಲಕ್ಷ್ಮೀ ದರ್ಶನ್‌ ಜತೆಗಿನ ಫೋಟೋ ಹಂಚಿಕೊಂಡು, ಶುಭಾಶಯ ರವಾನಿಸಿದ್ದಾರೆ. ಕಪ್ಪು ಬಣ್ಣದ ಬ್ಲಾಕ್‌ ಹಾರ್ಟ್‌ ಜತೆಗೆ ಕಪ್ಪು ಬಣ್ಣದ ವೃತ್ತಾಕಾರದ ಚುಕ್ಕಿಯೊಂದನ್ನು ಶೇರ್‌ ಮಾಡಿ, ನಮ್ಮ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ಎಂಬರ್ಥದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇತ್ತ ಮಗ ವಿನೀಶ್‌ ದರ್ಶನ್‌ ಸಹ, ಹ್ಯಾಪಿ ಬರ್ತ್‌ಡೇ ಬಾಸ್‌ ಎಂದು ಅಪ್ಪನಿಗೆ ಶುಭಾಶಯ ಹೇಳಿದ್ದಾರೆ.

ರಕ್ಷಿತಾ ಪ್ರೇಮ್‌ ಹೇಳಿದ್ದೇನು?

ನಟಿ ರಕ್ಷಿತಾ ಪ್ರೇಮ್‌ ಸಹ ದರ್ಶನ್‌ ಬಗ್ಗೆ ಸುದೀರ್ಘವಾಗಿ ಬರೆದುಕೊಂಡು, "ಇಂದು ವಿಶೇಷ ದಿನ...ಏಕೆ? ಏಕೆಂದರೆ ಇಂದು ನನ್ನ ಆತ್ಮೀಯ ಗೆಳೆಯನ ಹುಟ್ಟುಹಬ್ಬ.... ಅವನು ಯಾವಾಗಲೂ ನನಗೆ ಒಳ್ಳೆಯ ಸಮಯಗಳನ್ನು ವಿಶೇಷವಾಗಿಸಿದ್ದಾನೆ. ಕಠಿಣವಾದ ಸಮಯವನ್ನು ಸುಲಭಗೊಳಿಸಿದ್ದಾನೆ ..... ಅವನು ಇರುವ ಜೀವನ ಯಾವಾಗಲೂ ಅತ್ಯುತ್ತಮವಾಗಿರುತ್ತದೆ.... ನಿಮ್ಮ ಮುಂದೆ ಹಲವು ಸುಂದರ ವರ್ಷಗಳಿವೆ .. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿಮಗೆ ಶುಭ ಹಾರೈಸುತ್ತೇನೆ" ಎಂದಿದ್ದಾರೆ ರಕ್ಷಿತಾ.

ನಟ ಧನ್‌ವೀರ್‌ ಗೌಡ ಸಹ ಅಣ್ಣನ ಬಗ್ಗೆ ವಿಶೇಷ ಪೋಸ್ಟ್‌ ಮಾಡಿದ್ದಾರೆ. “ಸಂತೋಷ ಮತ್ತು ಯಶಸ್ಸು ಸದಾ ನಿಮ್ಮ ಜೊತೆಗಿರಲಿ. ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) #ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ” ಎಂದಿದ್ದಾರೆ.

Manjunath Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner