ಈ ವಾರ ಬಿಡುಗಡೆಯಾಗಲಿರುವ ಕನ್ನಡ ಹಾಗೂ ಇನ್ನಿತರ ಭಾಷೆಯ ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ
ಕನ್ನಡ ಸುದ್ದಿ  /  ಮನರಂಜನೆ  /  ಈ ವಾರ ಬಿಡುಗಡೆಯಾಗಲಿರುವ ಕನ್ನಡ ಹಾಗೂ ಇನ್ನಿತರ ಭಾಷೆಯ ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ

ಈ ವಾರ ಬಿಡುಗಡೆಯಾಗಲಿರುವ ಕನ್ನಡ ಹಾಗೂ ಇನ್ನಿತರ ಭಾಷೆಯ ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ

ಕನ್ನಡ ಚಿತ್ರರಂಗದಲ್ಲಿ ವಾರದಿಂದ ವಾರಕ್ಕೆ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಈ ವಾರ ಯಾವ ಸಿನಿಮಾಗಳು ಬಿಡುಗಡೆಯಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ
ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ

ಕನ್ನಡ ಚಿತ್ರರಂಗದಲ್ಲಿ ವಾರದಿಂದ ವಾರಕ್ಕೆ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಆದರೆ, ಯಾವ ಸಿನಿಮಾಗಳೂ ಸಹ ಹೆಚ್ಚು ಸದ್ದು ಮಾಡುತ್ತಿಲ್ಲ. ಸ್ಟಾರ್ ನಾಯಕರ ಸಿನಿಮಾ ಮಾತ್ರವಲ್ಲ ಅದರೊಟ್ಟಿಗೆ ಸಾಕಷ್ಟು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದರೊಟ್ಟಿಗೆ ಧಾರಾವಾಹಿಯಲ್ಲಿ ಭಾಗಿಯಾದ ಕಲಾವಿದರು ಸಾಕಷ್ಟು ಜನ ಸಿನಿರಂಗಕ್ಕೆ ಪ್ರವೇಶಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಧಾರಾವಾಹಿ ಕಲಾವಿದರು ಅಭಿನಯಿಸಿದ ಸಿನಿಮಾಗಳು ಸಹ ಬಿಡುಗಡೆಯಾಗಿವೆ. ಹಾಗಾದರೆ ಈ ವಾರ ಯಾವೆಲ್ಲ ಸಿನಿಮಾಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ನಿಮಗಿರಬಹುದು. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಈ ವಾರ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳ ಪಟ್ಟಿ

  1. ಬರ್ಗೆಟ್ ಬಸ್ಯಾ ಸಿನಿಮಾ
    ಬರ್ಗೆಟ್ ಬಸ್ಯಾ ಸಿನಿಮಾ ಸಿನಿಮಾ ಈ ವಾರ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಹೊಸ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹಾಸ್ಯದ ಸ್ಪರ್ಷವಿರುವ ಸಿನಿಮಾ ಇದಾಗಿದೆ. ಬರ್ಗೆಟ್ ಬಸ್ಯಾ ಸಿನಿಮಾವನ್ನು ರಿಶ್ ಹಿರೇಮಠ್ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ನಾಯಕಿ ಸಂಗೀತ ಎನ್ ಸ್ವಾಮಿ. ಅದ್ವಿಕಾ ಸ್ಮಿತಾ ಹೂಗಾರ್, ಪುನೀತ್ ಚಂದ್ರ, ರಘುವಾರ್ಯ ಎಂ.ಕೆ, ಮಹೇಶ್ ಕುಮಾರ್ ಅಧೋನಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸಿದ್ಧಾರ್ಥ ಕಾಮತ್ ಸಂಗೀತ, ಶ್ಯಾಮ್ ಸಾಲ್ವಿನ್ ಛಾಯಾಗ್ರಹಣ ಹಾಗೂ ಸಿದ್ದು ದಳವಾಯಿ ಸಂಕಲನ ಸಿನಿಮಾಗಿದೆ. ನಾಗಾರ್ಜುನ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. (ಮಾರ್ಚ್ 21)
  2. ನಾರಾಯಣ ನಾರಾಯಣ
    ಕಾಮಿಡಿ ನಟ, ಮಜಾ ಟಾಕಿಸ್ ಖ್ಯಾತಿಯ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಒಂದು ಹಳ್ಳಿಯು ಎಮ್ಮೆಯನ್ನು ಬಲಿ ನೀಡುವ ಮತ್ತು ಗುಪ್ತ ನಿಧಿಯನ್ನು ಹುಡುಕುವ ಪ್ರಯತ್ನ ನಡೆಯುತ್ತಿರುತ್ತದೆ. ಅನೇಕ ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾ ಮಾಡಿದ್ದಾರೆ. (ಮಾರ್ಚ್ 21)
  3. ಪಾರಿತೋಷಕ ಸಿನಿಮಾ
    ಶಿವಮೊಗ್ಗ ಹಾಗೂ ಚಿತ್ರದುರ್ಗ ಮೂಲದ ಉತ್ಸಾಹಿ ಯುವಕರ ತಂಡ ನಿರ್ಮಾಣ ಮಾಡಿರುವ ಸಿನಿಮಾ ಇದು. ಮಾ. 14ರಂದು ಈ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಹೇಳಾಗಿತ್ತು ಆದರೆ ದಿನಾಂಕವನ್ನು ಮುಂದೂಡಲಾಗಿದೆ. ಮಾರ್ಚ್ 21ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಅಜ್ಜಿಯ ಟ್ರಂಕ್ ಎಗರಿಸಿದ ಹರೀಶ; ಜಾಹ್ನವಿಗೆ ಮಾತ್ರೆ ಕೊಟ್ಟು ಮಲಗಿಸಿದ ಜಯಂತ: ಲಕ್ಷ್ಮೀ ನಿವಾಸ ಧಾರಾವಾಹಿ

ಇನ್ನಿತರ ಭಾಷೆಯ ಸಿನಿಮಾಗಳು
ಬೈದಾ
ಇನ್ ಗಲಿಯೋಮೆ
ಪಿಂಟು ಕಿ ಪಪ್ಪಿ
ತುಮ್ಕೊ ಮೇರಿ ಕಸಮ್
ಈ ಎಲ್ಲ ಹಿಂದಿ ಸಿನಿಮಾಗಳು ಬಿಡುಗಡೆಯಾಗಲಿವೆ

ಅಸ್ತ್ರಮ್ - ದಿ ಸೀಕ್ರೆಟ್ ಎಂಬ ತಮಿಳು ಸಿನಿಮಾ ಕೂಡ ಬಿಡುಗಡೆಯಾಲಿದೆ. ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಆಗಿದ್ದು, ಇದು ನಿಗೂಢ ಆತ್ಮಹತ್ಯೆಗಳ ಸರಣಿಗಳನ್ನು ಹೊಂದಿದೆ. ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟುಪಡುವವರಿಗೆ ಈ ಸಿನಿಮಾ ತುಂಬಾ ಕುತೂಹಲ ಮೂಡಿಸಿದೆ. ಇನ್ಸ್ಪೆಕ್ಟರ್ ಅಕಿಲನ್ ಎಲ್ಲಾ ಕೊಲೆ ಪ್ರಕರಣವನ್ನು ಪತ್ತೆಹಚ್ಚಲು ಹರಸಾಹಸ ಪಡುತ್ತಾರೆ. ಕೊಲೆಯಾದ ಎಲ್ಲರನ್ನೂ ಒಂದೇ ರೀತಿ ಇರಿದು ಕೊಲ್ಲಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಹೀಗೆಯೇ ಕಥೆ ಸಾಗುತ್ತದೆ. ಸಿನಿಮಾದ ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವ ಸಿನಿಮಾ ಇದಾಗಿದೆ.

Suma Gaonkar

eMail
Whats_app_banner