Rashmika Mandanna: ಏಟಾಗಿದ್ದು ಕಾಲಿಗಾ ಅಥವಾ ತಲೆಗಾ? ಮತ್ತೆ ಕನ್ನಡಿಗರನ್ನು ಕೆಣಕಿದ ‘ಹೈದರಾಬಾದ್ ಪೋರಿ’ ರಶ್ಮಿಕಾ ಮಂದಣ್ಣ
Rashmika Mandanna: ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಸಿನಿಮಾ ಮೂಲಕ ಗುರುತಿಸಿಕೊಂಡವರು ನಟಿ ರಶ್ಮಿಕಾ ಮಂದಣ್ಣ. ಈಗ ಇದೇ ನಟಿ ವೇದಿಕೆ ಮೇಲೆ ತಾನು ಹೈದರಾಬಾದ್‌ನವಳು ಎನ್ನುವ ಮೂಲಕ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Rashmika Mandanna: ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ "ಛಾವಾ" ಸಿನಿಮಾ ಇಂದು (ಫೆ. 14) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನವೇ ಒಂದಷ್ಟು ದಾಖಲೆಗಳನ್ನು ಈ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆಗಳಿವೆ. ಅದಾಗ್ಯೂ, ಇದೇ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಇದೀಗ ಮತ್ತೆ ಪರೋಕ್ಷವಾಗಿ ಕನ್ನಡಿಗರನ್ನು ಕೆಣಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಆಹಾರವಾಗುತ್ತಿದ್ದಾರೆ.
ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಬಂದು ಸದ್ಯ ಟಾಲಿವುಡ್‌ನಲ್ಲಿಯೇ ಹೆಚ್ಚು ಗುರುತಿಸಿಕೊಂಡು, ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ ರಶ್ಮಿಕಾ ಮಂದಣ್ಣ. ನ್ಯಾಶನಲ್ ಕ್ರಶ್ ಎಂಬ ಪಟ್ಟ ಪಡೆದ ಈ ನಟಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಈ ನಟಿಯನ್ನು ದ್ವೇಷಿಸುವವರ ಸಂಖ್ಯೆಯೂ ದೊಡ್ಡದಿದೆ. ಅದಕ್ಕೆ ಕಾರಣ; ಈ ಹಿಂದಿನ ಹಲವು ಘಟನೆಗಳು. ಇದೀಗ ಇದೇ ನಟಿ ಮತ್ತೆ ಕನ್ನಡಿಗರನ್ನು ಕೆಣಕಿದ್ದಾರೆ. ಛಾವಾ ಸಿನಿಮಾ ಪ್ರಚಾರದ ವೇಳೆ "ನಾನು ಹೈದರಾಬಾದ್ ಮೂಲದವಳು" ಎಂದಿದ್ದಾರೆ.
ತಮ್ಮ ಮೂಲ ಕರ್ನಾಟಕದ ಕೊಡಗು ಎಂಬುದನ್ನೂ ಹೇಳದೆ, ಟಾಲಿವುಡ್‌ನಲ್ಲಿ ಬಿಜಿಯಾಗಿದ್ದಕ್ಕೆ ಹೈದರಾಬಾದ್‌ನವಳು ಎಂದಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಟ್ರೋಲ್ ಆಗುತ್ತಿದ್ದಾರೆ. ಅದ್ಯಾವಾಗ ರಶ್ಮಿಕಾ ಹೈದಾರಾಬಾದ್‌ನವರಾದರು ಎಂದು ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ವಿಜಯ್ ದೇವರಕೊಂಡ ಜತೆಗೆ ಮದುವೆಗೂ ಮುನ್ನವೇ ಮುತ್ತಿನ ನಗರಿಯ ಹುಡುಗಿಯಾಗಿದ್ದಾರೆ" ಎಂದೂ ಜರಿಯುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮುಂಬೈನಲ್ಲಿ ಛಾವಾ ಸಿನಿಮಾದ ಪ್ರಚಾರದ ನಿಮಿತ್ತ ವೇದಿಕೆ ಮೇಲೆರಿದ್ದ ರಶ್ಮಿಕಾ ಮಂದಣ್ಣ, ಮೈಕ್ ಕೈಗೆತ್ತಿಕೊಂಡು, "ನಾನು ಹೈದರಾಬಾದ್ ಮೂಲದವಳು. ನಾನು ಇಲ್ಲಿಗೆ ಒಬ್ಬಳೇ ಬಂದೆ. ಇದೀಗ ನಾನು ನಿಮ್ಮೆಲ್ಲರ ಕುಟುಂಬದಲ್ಲಿ ಒಬ್ಬಳಾಗಿದ್ದೇನೆ.. ಥ್ಯಾಂಕ್ಯು" ಎಂಬ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಟಿಯ ಈ ಮಾತುಗಳನ್ನು ಕೇಳಿಸಿಕೊಂಡ ಕನ್ನಡಿಗರು, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಟೀಕಿಸಿ ಕಾಮೆಂಟ್ ಮಾಡಿದ್ದಾರೆ.
- ರಶ್ಮಿಕಾ ಮಂದಣ್ಣಗಿಂತ ದೀಪಿಕಾ ಪಡುಕೋಣೆ ಶಿಲ್ಪಾ ಶೆಟ್ಟಿ ಎಷ್ಟೋ ಪಾಲು ಉತ್ತಮ. ಅವರೆಲ್ಲ ನಾನು ಕನ್ನಡತಿ ಎಂದು ಹೆಮ್ಮೆಯಿಂದ ಹೇಳುತ್ತಾರೆ.
- ನೀವು ಕರ್ನಾಟಕದ ಕೊಡಗಿನವರು.. ತಮ್ಮ ಬೇರುಗಳನ್ನು ಮರೆತ ವ್ಯಕ್ತಿ ಎಂದಿಗೂ ಯಶಸ್ವಿಯಾಗುವುದಿಲ್ಲ.
- ಪ್ರೀತಿಗಾಗಿ ಊರನ್ನೇ ಬದಲಿಸಿಕೊಂಡ್ರಾ?
- ಕಾಲಿನ ಇಂಜುರಿ ಆಗಿದ್ದಕ್ಕೆ, ಬುದ್ಧಿ ಭ್ರಮಣೆ ಆಗಿರಬೇಕು ಎಂದು ಬಗೆಬಗೆ ಕಾಮೆಂಟ್ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ವಿಭಾಗ