Chhaava Box Office Prediction: 2025ಕ್ಕೆ ಹೊಸ ದಾಖಲೆ ಬರೆದ ಸಿನಿಮಾ; ವಿಕ್ಕಿ ಕೌಶಲ್‌ಗೆ ‘ಛಾವಾ’ ಸಿನಿಮಾ ಮೂಲಕ ಸಿಕ್ಕಿದೆ ಗೆಲುವು
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ ‘ಛಾವಾ’ ಇಂದು ಫೆಬ್ರವರಿ 14, 2025ರಂದು ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣ ತೋರುತ್ತಿದೆ.

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ ‘ಛಾವಾ’ ಇಂದು ಫೆಬ್ರವರಿ 14, 2025ರಂದು ಬಿಡುಗಡೆಯಾಗಿದೆ. ಮರಾಠ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದು. ಈ ಸಿನಿಮಾ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ತುಂಬಾ ನಿರೀಕ್ಷೆ ಮೂಡಿಸಿದ ಸಿನಿಮಾ ಇದು. ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೂಡ ತುಂಬಾ ಉತ್ತಮವಾಗಿತ್ತು, ಅದೇ ರೀತಿ ಬಾಕ್ಸ್ ಆಫೀಸ್‌ನಲ್ಲಿಯೂ ‘ಛಾವಾ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣ ತೋರುತ್ತಿದೆ. ಸಿನಿಮಾ ವೀಕ್ಷಿಸಿದ ಎಲ್ಲರೂ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದು, ಟ್ವಿಟರ್‍ನಲ್ಲಿಯೂ ಸಿನಿಮಾ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಈ ಕಾರಣದಿಂದಲೂ ಸಿನಿಮಾ ಇನ್ನಷ್ಟು ಹಿಟ್ ಆಗುವ ಸಾಧ್ಯತೆ ಇದೆ. ವಿಕ್ಕಿ ಕೌಶಲ್‌ಗೆ ‘ಛಾವಾ’ ಸಿನಿಮಾ ಮೂಲಕ ಗೆಲುವು ಸಿಕ್ಕಿದೆ.
‘ಛಾವಾ’ ಸಿನಿಮಾದ ಮೊದಲ ದಿನದ ಅಂದಾಜು ಆದಾಯ
'ಛಾವಾ' ಚಿತ್ರವು ತನ್ನ ಮೊದಲ ದಿನದ ಮುಂಗಡ ಬುಕಿಂಗ್‌ನಲ್ಲಿ ಭಾರತದಾದ್ಯಂತ ಸುಮಾರು 5 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. 13.79 ಕೋಟಿ ರೂಪಾಯಿಯ ಮುಂಗಡ ಟಿಕೆಟ್ ಬುಕಿಂಗ್ ಆಗಿದೆ ಎಂಬ ಮಾಹಿತಿ ಇದೆ. ಈ ಚಿತ್ರವು ಇಂದು (ಫೆ 14) ಬಾಕ್ಸ್ ಆಫೀಸ್‌ನಲ್ಲಿ 20 ಕೋಟಿ ರೂಪಾಯಿ ಗಡಿಯನ್ನು ಸುಲಭವಾಗಿ ದಾಟಬಹುದು ಎಂದು ಅಂದಾಜಿಸಲಾಗಿದೆ. 22 ಕೋಟಿ ರೂಪಾಯಿ ಕಲೆಕ್ಷನ್ ಆದರೂ ಅದರಲ್ಲಿ ಆಶ್ಚರ್ಯಪಡುವ ಸಂಗತಿ ಇಲ್ಲ ಎಂದು ಹೇಳಲಾಗುತ್ತಿದೆ. 2025ರಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಇದುವರೆಗಿನ ಅತಿದೊಡ್ಡ ಆರಂಭಿಕ ಚಿತ್ರವಾಗಲಿದ್ದು, ಸ್ಕೈ ಫೋರ್ಸ್ ಸಿನಿಮಾದ ಕಲೆಕ್ಷನ್‌ಅನ್ನು ಮೀರಿಸಲಿದೆ. ಮೂಲಗಳ ಪ್ರಕಾರ, ಮಧ್ಯಾಹ್ನದ ಹೊತ್ತಿಗೆ, 'ಛಾವಾ' ಭಾರತದಾದ್ಯಂತ 6 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆಯಂತೆ.
ಸಂಭಾಜಿ ಮಹಾರಾಜ್ ಯಾರು?
ಛತ್ರಪತಿ ಶಿವಾಜಿಯ ಮಗ, ಮರಾಠ ಸಾಮ್ರಾಜ್ಯದ ಎರಡನೇ ದೊರೆಯಾಗಿ ಆಳ್ವಿಕೆ ನಡೆಸಿದವರೇ ಸಂಭಾಜಿ. ಮೇ 14, 1657 ರಂದು ಪುಣೆ ಬಳಿಯ ಪುರಂದರಗಡದಲ್ಲಿ ಸಂಭಾಜಿ ಜನನವಾಗುತ್ತದೆ. ಛತ್ರಪತಿ ಶಿವಾಜಿಯ ಮೊದಲ ಪತ್ನಿ ಸಾಯಿಬಾಯಿ ಸಂಭಾಜಿಯ ತಾಯಿ. ಸಾಯಿಬಾಯಿಯ ಮರಣದ ನಂತರ ಜೀಜಾಬಾಯಿ ಸಂಭಾಜಿಯವರನ್ನು ಬೆಳೆಸುತ್ತಾರೆ. ಜೀಜಾಬಾಯಿ ಶಿವಾಜಿಯ ತಾಯಿ.
ಚಿತ್ರತಂಡ
ಲಕ್ಷ್ಮಣ್ ಉಟೇಕರ್ ನಿರ್ದೇಶನ ಛಾವಾ ಸಿನಿಮಾವನ್ನು ದಿನೇಶ್ ವಿಜನ್ ಅವರು ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಛಾವಾ ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜ ಕಥೆಯನ್ನು ಒಳಗೊಂಡಿದೆ. ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್, ಮಹಾರಾಣಿ ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಔರಂಗಜೇಬ್‌ನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದಾರೆ. ಇದು ಐತಿಹಾಸಿಕ ಕಥೆಯ ಚಿತ್ರವಾದ ಕಾರಣ ಹಲವರಿಗೆ ಈ ಸಿನಿಮಾವನ್ನು ನೋಡಲೇಬೇಕು ಎಂಬ ಬಯಕೆಯಾಗಿದೆ.
