ಛಾವಾ ಟ್ರೈಲರ್: ಛತ್ರಪತಿ ಸಂಭಾಜಿ ಪಾತ್ರದಲ್ಲಿ ಸಿಂಹದೊಂದಿಗೆ ಸೆಣಸಾಡಿದ ವಿಕ್ಕಿ ಕೌಶಲ್, ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಛಾವಾ ಟ್ರೈಲರ್: ಛತ್ರಪತಿ ಸಂಭಾಜಿ ಪಾತ್ರದಲ್ಲಿ ಸಿಂಹದೊಂದಿಗೆ ಸೆಣಸಾಡಿದ ವಿಕ್ಕಿ ಕೌಶಲ್, ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮೋಡಿ

ಛಾವಾ ಟ್ರೈಲರ್: ಛತ್ರಪತಿ ಸಂಭಾಜಿ ಪಾತ್ರದಲ್ಲಿ ಸಿಂಹದೊಂದಿಗೆ ಸೆಣಸಾಡಿದ ವಿಕ್ಕಿ ಕೌಶಲ್, ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮೋಡಿ

Chhaava trailer: ಬಹುನಿರೀಕ್ಷಿತ ಛಾವಾ ಸಿನಿಮಾದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಇದಾಗಿದ್ದು, ಇತಿಹಾಸದ ಕಡೆಗೆ ಇಣುಕುನೋಟ ಬೀರುವ ಸುಳಿವು ನೀಡಿದೆ. ಛತ್ರಪತಿ ಸಂಭಾಜಿ ಪಾತ್ರದಲ್ಲಿ ಸಿಂಹದೊಂದಿಗೆ ಸೆಣಸಾಡಿದ ವಿಕ್ಕಿ ಕೌಶಲ್, ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮೋಡಿ ಛಾವಾ ಟ್ರೈಲರ್‌ನಲ್ಲಿದೆ.

ಛಾವಾ ಟ್ರೈಲರ್: ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸುತ್ತಿರುವ ವಿಕ್ಕಿ ಕೌಶಲ್ ಸಿಜಿಐ ಸಿಂಹದೊಂದಿಗೆ ಹೋರಾಡುತ್ತಿರುವ ದೃಶ್ಯ ಟ್ರೈಲರ್‌ನಲ್ಲಿದೆ.
ಛಾವಾ ಟ್ರೈಲರ್: ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸುತ್ತಿರುವ ವಿಕ್ಕಿ ಕೌಶಲ್ ಸಿಜಿಐ ಸಿಂಹದೊಂದಿಗೆ ಹೋರಾಡುತ್ತಿರುವ ದೃಶ್ಯ ಟ್ರೈಲರ್‌ನಲ್ಲಿದೆ.

Chhaava trailer: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಸಿನಿಮಾದ ಬಹು ನಿರೀಕ್ಷಿತ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಭಾರತೀಯ ಇತಿಹಾಸ ಪ್ರಸಿದ್ಧ ರಾಜ ಛತ್ರಪತಿ ಸಂಭಾಜಿ ಮಹಾರಾಜನ ಕಥೆಯನ್ನು ಹೊಂದಿರುವ ಈ ಸಿನಿಮಾ ಬಹಳ ನಿರೀಕ್ಷೆಯನ್ನು ಹುಟ್ಟಿಸಿದೆ. ಛತ್ರಪತಿ ಸಂಭಾಜಿ ಮಹಾರಾಜನ ಭವ್ಯವಾದ ಪಾತ್ರದಲ್ಲಿ ವಿಕ್ಕಿ ಕೌಶಲ್‌ ಅಭಿನಯದ ಕಿರುನೋಟವನ್ನು ಟ್ರೈಲರ್ ತೋರಿಸಿದೆ. ತಾಯ್ನೆಲಕ್ಕಾಗಿ ಹೋರಾಟ ನಡೆಸುವ ಧೈರ್ಯ, ಶೌರ್ಯ, ಸಾಹಸ ತೋರಿಸುವ ಛತ್ರಪತಿ ಸಂಭಾಜಿಯಾಗಿ ವಿಕ್ಕಿ ಕೌಶಲ್‌ ಸಿಂಹದೊಂದಿಗೆ ಸೆಣಸುವ ಮೈನವಿರೇಳಿಸುವ ದೃಶ್ಯವೂ ಗಮನಸೆಳೆಯುತ್ತದೆ. ಟ್ರೈಲರ್‌ನಲ್ಲಿ ಸಮರ ಸನ್ನಿವೇಶದ ಚಿತ್ರಣ ನೀಡುತ್ತಿದ್ದು, ಪ್ರೇಕ್ಷಕರು ಸಿನಿಮಾದಿಂದ ಏನು ನಿರೀಕ್ಷಿಸಬಹುದು ಎಂಬುದರ ಸುಳಿವು ನೀಡುತ್ತದೆ.

ಬಿಡುಗಡೆಯಾಯಿತು ಛಾವಾ ಟ್ರೈಲರ್

ಚಿತ್ರದ ನಿರ್ಮಾಪಕರು ಮುಂಬೈನಲ್ಲಿ ಛಾವಾ ಟ್ರೈಲರ್‌ ಅನ್ನು ಬುಧವಾರ ಬಿಡುಗಡೆ ಮಾಡಿದರು. ಕಾಲಿನ ಗಾಯದ ನಡುವೆಯೂ ರಶ್ಮಿಕಾ ಮಂದಣ್ಣ ಅವರು ಛಾವಾ ಟ್ರೈಲರ್‌ ಕಾರ್ಯಕ್ರಮಕ್ಕಾಗಿ ಮುಂಬೈಗೆ ಪ್ರಯಾಣಿಸಿದ್ದರು. ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿಯತ್ತ ಕುಂಟುತ್ತಾ ಸಾಗಿದ್ದು ಕಂಡುಬಂತು.

ಟ್ರೇಲರ್ ಛತ್ರಪತಿ ಸಂಭಾಜಿ ಮಹಾರಾಜರ ಬಹುಮುಖಿ ಜೀವನದ ಒಂದು ನೋಟವನ್ನು ನೀಡುವ ಮಾಂಟೇಜ್‌ನೊಂದಿಗೆ ಪ್ರಾರಂಭವಾಗುತ್ತದೆ. ದೃಶ್ಯಗಳು ಸಂಭಾಜಿ ಮಹಾರಾಜನ ಸೇನಾ ಕಾರ್ಯಾಚರಣೆ, ಮದುವೆ, ಮತ್ತು ವೈಯಕ್ತಿಕ ಬದುಕಿನ ಕಿರುಪರಿಚಯ ನೀಡುವಂತೆ ಇದೆ. ಇಲ್ಲಿದೆ ನೋಡಿ ಛಾವಾ ಟ್ರೈಲರ್‌

ಪ್ರತೀಕಾರದ ಜ್ವಾಲೆಯಿಂದ ಉತ್ತೇಜಿತವಾದ ನಿರೂಪಣೆಯು ಛಾವಾ ಸಿನಿಮಾದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಸುಳಿವನ್ನು ಟ್ರೈಲರ್ ನೀಡಿದೆ. ಛತ್ರಪತಿ ಸಂಭಾಜಿಯನ್ನು ಹೇಗಾದರೂ ಮುಗಿಸಬೇಕು ಎಂಬ ಔರಂಗಜೇಬನ ಶಪಥ, ಮರಾಠರು ಮತ್ತು ಮೊಘಲ ನಡುವಿನ ಸಮರ ನಿರೂಪಣೆಯ ಚಿತ್ರವು ಆಕ್ಷನ್ ಚಿತ್ರವಾಗಿ ಮೂಡಿಬರುವ ಸುಳಿವನ್ನು ಛಾವಾ ಟ್ರೈಲರ್ ನೀಡಿದೆ.

ಛಾವಾ ಟ್ರೈಲರ್ ಬಹಳಷ್ಟು ಆಕ್ಷನ್‌ ಸೀಕ್ವೆನ್ಸ್‌ಗಳಿಂದ ತುಂಬಿದೆ. ಸಮರಾಂಗಣದಲ್ಲಿ ನೂರಾರು ಸೈನಿಕರನ್ನು ಒಂಟಿಯಾಗಿ ಎದುರಿಸುವ ಸಮರವೀರ ಛತ್ರಪತಿ ಸಂಭಾಜಿಯಾಗಿ ವಿಕ್ಕಿ ಕೌಶಲ್ ಅವರ ನಿರ್ಭೀತ ಯೋಧನ ಮನೋಭಾವವನ್ನು ಅದು ಬಿಂಬಿಸಿದೆ. ಕಿರು ಚಿತ್ರದಂತೆ ಭಾಸವಾಗುವ ಟ್ರೈಲರ್‌ನ ಕೊನೆಗೆ ಸಿಂಹದೊಂದಿಗೆ ಸಂಭಾಜಿ ಸೆಣಸಾಟದೊಂದಿಗೆ ದೃಶ್ಯ ಕೊನೆಯಾಗುತ್ತದೆ.

ಫೆ.14 ರಂದು ತೆರೆಕಾಣದಲಿದೆ ಬಹುನಿರೀಕ್ಷಿತ ಛಾವಾ ಸಿನಿಮಾ

ಲಕ್ಷ್ಮಣ್ ಉಟೇಕರ್ ನಿರ್ದೇಶನ ಛಾವಾ ಸಿನಿಮಾವನ್ನು ದಿನೇಶ್ ವಿಜನ್ ಅವರು ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಛಾವಾ ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜ ಕಥೆಯನ್ನು ಒಳಗೊಂಡಿದೆ. ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್‌, ಮಹಾರಾಣಿ ಯೇಸುಬಾಯಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಔರಂಗಜೇಬ್‌ನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದಾರೆ. ಇದು ಐತಿಹಾಸಿಕ ಕಥೆಯ ಚಿತ್ರವಾದ ಕಾರಣ ಒಂದು ರೀತಿಯ ನಾಟಕೀಯತೆಯನ್ನು ಒಳಗೊಂಡಿರಲಿದೆ. "1681 ರ ಛತ್ರಪತಿ ಪಟ್ಟಾಭಿಷೇಕವು ಪೌರಾಣಿಕ ಆಳ್ವಿಕೆಯ ಆರಂಭವನ್ನು ಗುರುತಿಸಿದ ಧೈರ್ಯಶಾಲಿ ಯೋಧನ ಮನ ಕಲಕುವ ಕಥೆ"ಯಾಗಿ ಛಾವಾ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ.

ಶಿವಾಜಿ ಸಾವಂತ್ ಅವರು ಬರೆದ ಮರಾಠಿ ಕಾದಂಬರಿ ಛಾವಾದ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಫೆಬ್ರವರಿ 15ರಂದು ದೇಶಾದ್ಯಂತ ತೆರೆಕಾಣಲಿದೆ.

Whats_app_banner