ಛಾವಾ ಟ್ರೈಲರ್‌: ಪಾತ್ರಗಳಿಗೆ ಜೀವತುಂಬಿದ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ, ಪಕ್ಕಾ ಯೇಸುರಾಣಿಯಾಗಿ ಕಂಗೊಳಿಸಿದ್ದಾರೆ ರಶ್ಮಿಕಾ ಮಂದಣ್ಣ
ಕನ್ನಡ ಸುದ್ದಿ  /  ಮನರಂಜನೆ  /  ಛಾವಾ ಟ್ರೈಲರ್‌: ಪಾತ್ರಗಳಿಗೆ ಜೀವತುಂಬಿದ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ, ಪಕ್ಕಾ ಯೇಸುರಾಣಿಯಾಗಿ ಕಂಗೊಳಿಸಿದ್ದಾರೆ ರಶ್ಮಿಕಾ ಮಂದಣ್ಣ

ಛಾವಾ ಟ್ರೈಲರ್‌: ಪಾತ್ರಗಳಿಗೆ ಜೀವತುಂಬಿದ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ, ಪಕ್ಕಾ ಯೇಸುರಾಣಿಯಾಗಿ ಕಂಗೊಳಿಸಿದ್ದಾರೆ ರಶ್ಮಿಕಾ ಮಂದಣ್ಣ

Chhaava Trailer: ಐತಿಹಾಸಿಕ ಸಿನಿಮಾ ಛಾವಾದ ಟ್ರೈಲರ್‌ ಗಮನಿಸಿದರೆ, ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಪಕ್ಕಾ ಯೇಸುರಾಣಿಯಾಗಿ ಕಂಗೊಳಿಸಿದ್ದಾರೆ.

ಛಾವಾ ಟ್ರೈಲರ್‌: ಪಾತ್ರಗಳಿಗೆ ಜೀವತುಂಬಿದ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ, ಪಕ್ಕಾ ಯೇಸುರಾಣಿಯಾಗಿ ರಶ್ಮಿಕಾ ಮಂದಣ್ಣ ಕಂಗೊಳಿಸಿದ್ದಾರೆ
ಛಾವಾ ಟ್ರೈಲರ್‌: ಪಾತ್ರಗಳಿಗೆ ಜೀವತುಂಬಿದ ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ, ಪಕ್ಕಾ ಯೇಸುರಾಣಿಯಾಗಿ ರಶ್ಮಿಕಾ ಮಂದಣ್ಣ ಕಂಗೊಳಿಸಿದ್ದಾರೆ

Chhaava Trailer: ಛಾವಾ ಸಿನಿಮಾ ಟ್ರೈಲರ್ ನೋಡ್ತಾ ಇದ್ರೆ, ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸಿರುವ ವಿಕ್ಕಿ ಕೌಶಲ್ ತಾನೇ ಸಂಭಾಜಿ ಎಂಬಂತೆ ನಟಿಸಿದ್ದಾರೆ. ಒಂದು ರೀತಿ ಓತಿಕ್ಯಾತದಂತೆ ಪಾತ್ರಕ್ಕೆ ಜೀವತುಂಬಿದ್ದಾರೆ. ಐತಿಹಾಸಿಕ ಸಿನಿಮಾ ಆದ ಕಾರಣ ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಹಿರಂಗವಾದ ಕೂಡಲೇ ಅವರ ಅಭಿಮಾನಿಗಳು, ಛತ್ರಪತಿ ಸಂಭಾಜಿ ಪಾತ್ರದಲ್ಲಿ ಅವರು ಹೇಗೆ ಕಾಣುವರೋ ಎಂಬ ಕುತೂಹಲದಲ್ಲಿದ್ದರು. ಆ ಕುತೂಹಲವನ್ನು ಛಾವಾ ಟ್ರೈಲರ್ ತಣಿಸಿದೆ. ಇದೇ ವೇಳೆ, ವಿಕ್ಕಿ ಕೌಶಲ್ ಅವರ ಸಹನಟಿ ರಶ್ಮಿಕಾ ಮಂದಣ್ಣ ಅವರು ಛಾವಾದಲ್ಲಿ ಮಹಾರಾಣಿ ಯೇಸುಬಾಯಿ ಆಗಿ ಕಾಣಿಸಿಕೊಂಡಿದ್ದಾರೆ. ಪುಷ್ಪಾ 2 ಸಿನಿಮಾದ ಶ್ರೀವಲ್ಲಿಯ ಪಾತ್ರದ ಛಾಯೆಯಿಂದ ಹೊರಬರುವುದಕ್ಕೆ ಛಾವಾ ಸಿನಿಮಾದ ಮಹಾರಾಣಿ ಯೇಸುಬಾಯಿ ಪಾತ್ರ ಅವರಿಗೆ ನೆರವಾಗುವ ಸಾಧ್ಯತೆ ಇದೆ. ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ಅವರಿಗೆ ಸರಿಯಾಗಿ ಹೊಂದಿಕೆಯಾಗುತ್ತಿದ್ದು, ಛಾವಾ ಟ್ರೈಲರ್‌ನಲ್ಲಿ ಪಕ್ಕಾ ರಾಣಿಯಂತೆ ಕಂಗೊಳಿಸಿದ್ದಾರೆ.

ಛಾವಾ ಟ್ರೈಲರ್ ಇಲ್ಲಿದೆ ನೋಡಿ

ಮೂರು ನಿಮಿಷದ ಟ್ರೈಲರ್‌ ನಟ ವಿಕ್ಕಿ ಕೌಶಲ್ ಅವರ ನಟನೆಯನ್ನು ಮೆಚ್ಚುವಂತೆ ಮಾಡುತ್ತದೆ. ಅವರು ಛತ್ರಪತಿ ಸಂಭಾಜಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದು, ತಾನೇ ಸಂಭಾಜಿ ಎಂಬಂತೆ ನಟಿಸಿದ್ದಾರೆ. ಛತ್ರಪತಿಯ ಠೀವಿ, ಪ್ರಭಾವಿ ಡೈಲಾಗ್‌ ಡೆಲಿವರಿಯಿಂದ ಹಿಡಿದು ಮೈನವಿರೇಳಿಸುವ ಸಾಹಸ, ಆಕ್ಷನ್ ಸೀಕ್ವೆನ್ಸ್‌ಗಳು ಟ್ರೈಲರ್‌ನಲ್ಲಿದೆ. ವಿಕ್ಕಿ ಕೌಶಲ್‌ ಅವರು ಡೈಲಾಗ್ ಡೆಲಿವರಿ ಗಮನಿಸಿದರೆ, ಐತಿಹಾಸಿಕ ಚಿತ್ರಗಳ ಸಂಭಾಷಣೆಗೆ ಪೂರಕವಾದ ಡೈಲಾಗ್ ಡೆಲಿವರಿ ಗಮನಸೆಳೆದಿದೆ.

ಟ್ರೈಲರ್‌ನಲ್ಲಿ ಕೆಲವು ಸೆಕೆಂಡ್‌ಗಳ ನೃತ್ಯದ ಸೀಕ್ವೆನ್ಸ್‌

ಛಾವಾ ಟ್ರೈಲರ್‌ ಮೂರು ನಿಮಿಷ ಇದ್ದು, ನೃತ್ಯ ಸಂಗೀತದ ಸೀಕ್ವೆನ್ಸ್ ಕೆಲವು ಸೆಕೆಂಡ್ ಮಾತ್ರ ಅನ್ನೋದು ಸ್ವಲ್ಪ ನಿರಾಸೆ ಮೂಡಿಸುವಂಥದ್ದು. ಟ್ರೈಲರ್‌ನಲ್ಲಿ ಹಾಡು, ಸಂಗೀತ, ನೃತ್ಯವನ್ನು ನಿರೀಕ್ಷಿಸುವ ಅಭಿಮಾನಿಗಳಿಗೆ ನಿರಾಸೆ ಮೂಡಿಸುವುದಾದರೂ, ಟ್ರೈಲರ್ ಕೊನೆಗೆ ಸಾಹಸಮಯ ದೃಶ್ಯ ಕೊಂಚ ಕುತೂಹಲ ಕೆರಳಿಸುವಂತಿದೆ. ಕಾಡಿನ ರಾಜ ಸಿಂಹದ ಜತೆಗೆ ನಾಡಿನ ರಾಜ ಛತ್ರಪತಿ ಸಂಭಾಜಿ ನೇರ ಸೆಣಸಾಟದ ದೃಶ್ಯ ಟ್ರೈಲರ್‌ನಲ್ಲಿರುವುದು ಗಮನಸೆಳೆದಿದೆ.

ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ

ಛತ್ರಪತಿ ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಸಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಇಬ್ಬರ ನಡುವಿನ ಕೆಮಿಸ್ಟ್ರಿ ಕೂಡ ತುಂಬ ಚೆನ್ನಾಗಿ ಹೊಂದಿಕೆಯಾಗಿದೆ. ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್‌ ಜತೆಗೆ ತೆರೆ ಹಂಚಿಕೊಂಡ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಟ್ರೋಲ್‌ಗೆ ಒಳಗಾಗಿದ್ದರು. ಆದರೆ ಈ ಬಾರಿ ಸ್ವಲ್ಪ ಪರಿಶ್ರಮವಹಿಸಿ ಕಳೆದ ಸಲದ ನೂನ್ಯತೆಗಳನ್ನು ಸರಿಪಡಿಸಿಕೊಂಡಂತೆ ಡೈಲಾಗ್ ಡೆಲಿವರಿಯಲ್ಲೂ ಪರಿಣತಿ ತೋರಿದ್ದಾರೆ. ಮಹಾರಾಣಿಯ ಪಾತ್ರಕ್ಕೆ ಹೊಂದಿಕೆಯಾಗುವಂತೆ ರಶ್ಮಿಕಾ ಕಂಡುಬಂದಿರುವುದು ಪ್ಲಸ್ ಪಾಯಿಂಟ್‌.

ಅಮಿತಾಭ್ ಬಚ್ಚನ್‌ ನೆನಪಿಸುವಂತಿದೆ ಅಕ್ಷಯ್ ಖನ್ನಾ ಪಾತ್ರ

ಛಾವಾ ಸಿನಿಮಾದಲ್ಲಿ ಔರಂಗಜೇಬನ ಪಾತ್ರ ಮಾಡುತ್ತಿರುವ ಅಕ್ಷಯ್ ಖನ್ನಾ ಅವರ ವೇಷ ಭೂಷಣ ಥಟ್ಟಂತ ನೋಡಿದರೆ ಒಂದು ಕ್ಷಣ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಅವರನ್ನು ನೆನಪಿಸುವಂತೆ ಇದೆ. ಮೊಘಲ ದೊರೆಯ ಲುಕ್‌ ಕೊಡುವುದಕ್ಕಾಗಿ ಅವರ ಪಾತ್ರ ಅಲಂಕಾರ ಆಕರ್ಷಕವಾಗಿ ಮೂಡಿಬಂದಿದೆ. ಮರಾಠಿ ಕಾದಂಬರಿ ಛಾವಾ ಕಥೆಯನ್ನು ಆಧರಿಸಿದ ಛಾವಾ ಸಿನಿಮಾ ಫೆಬ್ರವರಿ 14 ರಂದು ತೆರೆಕಾಣಲಿದೆ. ಅದಕ್ಕೂ ಮೊದಲೇ ಚಿತ್ರದ ಬಗ್ಗೆ ಕುತೂಹಲ ಕೆರಳಿಸುವಲ್ಲಿ ಛಾವಾ ಟ್ರೈಲರ್ ಯಶಸ್ವಿಯಾಗಿದೆ.

Whats_app_banner