ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಮಕ್ಕಳು, ಸೀರಿಯಲ್‌ನಲ್ಲಿ ಚಿಣ್ಣರ ಕಲರವ, ನಿಮಗೆ ಯಾವ ಪುಟಾಣಿ ಇಷ್ಟ?
ಕನ್ನಡ ಸುದ್ದಿ  /  ಮನರಂಜನೆ  /  ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಮಕ್ಕಳು, ಸೀರಿಯಲ್‌ನಲ್ಲಿ ಚಿಣ್ಣರ ಕಲರವ, ನಿಮಗೆ ಯಾವ ಪುಟಾಣಿ ಇಷ್ಟ?

ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಮಕ್ಕಳು, ಸೀರಿಯಲ್‌ನಲ್ಲಿ ಚಿಣ್ಣರ ಕಲರವ, ನಿಮಗೆ ಯಾವ ಪುಟಾಣಿ ಇಷ್ಟ?

ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆಯಲ್ಲಿ ಸೀತಾರಾಮ ಸೀರಿಯಲ್‌ನ ಪುಟಾಣಿ ಸಿಹಿ, ಗಿಚ್ಚಿ ಗಿಲಿಗಿಲಿಯ ಪುಟಾಣಿ ವಂಶಿಕಾ ಅಂಜನಿ ಕಶ್ಯಪ, ನಮ್ಮ ಲಚ್ಚಿಯ ಸಾಂಘವಿ ಕೆ.ಕೆ., ಶ್ರೀ ದಿಶಾ, ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ನಿಹಾರ್‌ ಗೌಡ ಸೇರಿದಂತೆ ಹಲವು ಪುಟಾಣಿಗಳು ಮಿಂಚಿದ್ದಾರೆ, ಮಿಂಚುತ್ತಿದ್ದಾರೆ.

ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಮಕ್ಕಳು
ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಮಕ್ಕಳು

ಮಕ್ಕಳ ದಿನಾಚರಣೆ ವಿಶೇಷ: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ ಅಥವಾ ರಿಯಾಲಿಟಿ ಶೋನಲ್ಲಿ ಪುಟಾಣಿ ಮಕ್ಕಳು ನಟಿಸಿ, ಭಾಗವಹಿಸಿ ಪ್ರೇಕ್ಷಕರ ಮನಸ್ಸು ಗೆದ್ದುಬಿಡುತ್ತಾರೆ. ಮಕ್ಕಳ ಅಳು,ನಗುವಿನ ನಟನೆ ನೋಡಿ ಮನೆಯಲ್ಲಿ ಕುಳಿತು ಟಿವಿ ನೋಡುವ ಪ್ರೇಕ್ಷಕರು ತಾವೂ ಅಳುತ್ತಾರೆ. ಸೀರಿಯಲ್‌ನಲ್ಲಿ ಮಕ್ಕಳ ನಟನೆ ಕುರಿತು ಕಾನೂನು ಕಟ್ಟುನಿಟ್ಟಾಗಿರುವುದರಿಂದ ಕೆಲವೇ ಕೆಲವು ಬಾಲ ಕಲಾವಿದರು ಸೀರಿಯಲ್‌ಗಳಲ್ಲಿ ಕಾಣಿಸುತ್ತಿದ್ದಾರೆ. ಈ ವರ್ಷ ಕನ್ನಡ ಕಿರುತೆರೆಯಲ್ಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ ಪುಟಾಣಿಗಳ ಕುರಿತು ತಿಳಿದುಕೊಳ್ಳೋಣ. ಇದು ಮಕ್ಕಳ ದಿನಾಚರಣೆ ವಿಶೇಷ.

ಸೀತಾರಾಮ ಸೀರಿಯಲ್‌ನ ಪುಟಾಣಿ ಸಿಹಿ

ಸದ್ಯ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ಮಗು ಸಿಹಿ. ಸೀತಾರಾಮ ಸೀರಿಯಲ್‌ನಲ್ಲಿ ಸಿಹಿ ಎಂಬ ಪಾತ್ರ ಪ್ರಮುಖವಾದದ್ದು. ಈ ಪಾತ್ರಕ್ಕೆ ಇತ್ತೀಚೆಗೆ ಅಂತ್ಯ ಹಾಡಲಾಗಿತ್ತು. ಅಂದಹಾಗೆ ಈ ಸಿಹಿ ಪಾತ್ರದಲ್ಲಿ ನಟಿಸುತ್ತಿದ್ದ ಮಗುವಿನ ಹೆಸರು ಬೇಬಿ ರಿತು. ನೇಪಾಳ ಮೂಲದ ಈಕೆ ಶಿಕ್ಷಣ ಮತ್ತು ನಟನೆಯನ್ನು ಜತೆಜತೆಯಾಗಿ ಮಾಡುತ್ತಿದ್ದಳು. ಧಾರಾವಾಹಿ ಆರಂಭದಿಂದಲೂ ಈಕೆ ಲವಲವಿಕೆಯಿಂದ ನಟಿಸುತ್ತಿದ್ದಳು. ನಮ್ಮ ಮನೆ ನಡೆಯುತ್ತಿರುವುದೇ ಈಕೆಯ ನಟನೆಯಿಂದ ಎಂದು ಈಕೆಯ ತಾಯಿಯೂ ಹೇಳಿದ್ದರು.

ವಂಶಿಕಾ ಅಂಜನಿ ಕಶ್ಯಪ

ಕಿರುತೆರೆಯಲ್ಲಿ ಪ್ರೇಕ್ಷಕರ ಗಮನ ಸೆಳೆದ ಇನ್ನೊಬ್ಬಳು ಪುಟಾಣಿ ವಂಶಿಕಾ ಅಂಜನಿ ಕಶ್ಯಪ. ಈಕೆ ಮಾಸ್ಟರ್‌ ಆನಂದ್‌ ಮಗಳು. ನನ್ನಮ್ಮ ಸೂಪರ್‌ಸ್ಟಾರ್‌, ಗಿಚ್ಚಿ ಗಿಲಿಗಿಲಿ ಮೂಲಕ ಎಲ್ಲರ ಗಮನ ಸೆಳೆದಿದ್ದಳು, ವಸಿಷ್ಠ ಸಿಂಹ ನಟನೆಯ ಲವ್‌ಲೀ ಸಿನಿಮಾದಲ್ಲಿಯೂ ನಟಿಸಿದ್ದಳು.

ಸಾಂಘವಿ ಕೆ.ಕೆ

ಸ್ಟಾರ್‌ ಸುವರ್ಣ ವಾಹಿನಿಯ ʼನಮ್ಮ ಲಚ್ಚಿʼ ಧಾರಾವಾಹಿಯ ಲಕ್ಷ್ಮೀನಾರಾಯಣ ಅಲಿಯಾಸ್‌ ಲಚ್ಚಿ ಕೂಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ಮತ್ತೊಬ್ಬಳು ಪೋರಿ. ಸಾಂಘವಿ ಕೆ.ಕೆ. ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೊ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಶಿವಮೊಗ್ಗದ ಸಾಗರ ಮೂಲದ ಈ ಮುದ್ದಾದ ಹುಡುಗಿ ಸದ್ಯ ಪೋಷಕರೊಂದಿಗೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನೆಲೆಸಿದ್ದಾಳೆ.

ಶ್ರೀ ದಿಶಾ

ನಮ್ಮ ಲಚ್ಚಿ ಸೀರಿಯಲ್‌ನ ಇನ್ನೊಬ್ಬಳು ಪುಟಾಣಿ ಶ್ರೀ ದಿಶಾ ಕೂಡ ತನ್ನ ಮುಗ್ಧ ನಟನೆಯಿದ ಸೀರಿಯಲ್‌ ಪ್ರೇಕ್ಷಕರ ಹೃದಯ ಗೆದ್ದಿದ್ದಾಳೆ. ಪಟಪಟನೆ ಈಕೆ ಡೈಲಾಗ್‌ ಹೇಳುತ್ತಿದ್ರೆ ಎಲ್ಲರಿಗೂ ಅಚ್ಚರಿ.

ನಿಹಾರ್‌ ಗೌಡ

ಸೀರಿಯಲ್‌ನಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಎನ್ನುವ ಸಂದರ್ಭದಲ್ಲಿ ಗುಂಡಣ್ಣನಾಗಿ ನಿಹಾರ್‌ ಗೌಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾನೆ. ಅಂದಹಾಗೆ ಈತ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಬಾಲನಟ. 10 ವರ್ಷದ ನಿಹಾರ್‌ ಗೌಡ, ಚೈಲ್ಡ್‌ ಮಾಡೆಲ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಮಿಸ್ಟರ್‌ ಇನಸ್ಪೈಯರ್ಡ್‌ ಲಿಟಲ್‌ ಚಾಂಪ್‌ ಬೆಂಗಳೂರು 2020, ಎಲೈಟ್‌ ಸ್ಟಾರ್‌ ಮಿಸ್ಟರ್‌ ಪ್ರಿನ್ಸ್‌ ಕರ್ನಾಟಕ 2021 ಸೇರಿ ಅನೇಕ ಪ್ರಶಸ್ತಿಗಳನ್ನು ನಿಹಾರ್‌ ಗೆದ್ದಿದ್ದಾರೆ. ನಿಹಾರ್‌ ಗೌಡ, ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ. ವಸಂತ್‌ ಕುಮಾರ್‌ ನಿರ್ದೇಶನದ ನೋಡದ ಪುಟಗಳು ಎಂಬ ಚಿತ್ರದಲ್ಲಿ ನಿಹಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅನುರಾಗ್‌

ಭೂಮಿಗೆ ಬಂದ ಭಗವಂತ ಸೀರಿಯಲ್‌ನ ಅನುರಾಗ್‌ ಕೂಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದನು.

ಧೀರಜ್‌

ಹೂಮಳೆ, ನನ್ನಮ್ಮ ಸೂಪರ್‌ಸ್ಟಾರ್‌, ಸೀತಾರಾಮ ಸೀರಿಯಲ್‌ಗಳಲ್ಲಿ ಬಾಲನಟನಾಗಿ ಕಿರುತೆರ ಪ್ರೇಕ್ಷಕರ ಮನಗೆದ್ದ ಇನ್ನೊಬ್ಬ ಪ್ರತಿಭಾನ್ವಿತ ಬಾಲಕ ಧೀರಜ್‌.

Whats_app_banner