ಕನ್ನಡ ಸುದ್ದಿ  /  ಮನರಂಜನೆ  /  Twitter Blue Tick: ದರ್ಶನ್‌, ಸುದೀಪ್‌ ಸೇರಿದಂತೆ ಇನ್ನಿತರ ಸೆಲೆಬ್ರಿಟಿಗಳಿಗೆ ಟ್ವಿಟ್ಟರ್‌ ಶಾಕ್‌; ಅಪ್ಪು ಖಾತೆಯಿಂದಲೂ ಬ್ಲೂ ಟಿಕ್‌ ಮಾಯ

Twitter Blue Tick: ದರ್ಶನ್‌, ಸುದೀಪ್‌ ಸೇರಿದಂತೆ ಇನ್ನಿತರ ಸೆಲೆಬ್ರಿಟಿಗಳಿಗೆ ಟ್ವಿಟ್ಟರ್‌ ಶಾಕ್‌; ಅಪ್ಪು ಖಾತೆಯಿಂದಲೂ ಬ್ಲೂ ಟಿಕ್‌ ಮಾಯ

ಟ್ವಿಟ್ಟರ್‌ ಸಂಸ್ಥೆಯನ್ನು ಎಲಾನ್‌ ಮಸ್ಕ್‌ ಖರೀದಿಸಿದ ನಂತರ ಕೆಲವೊಂದು ನಿಯಮಗಳನ್ನು ಬದಲಿಸಿದ್ದು. ಅದರಲ್ಲಿ ಬ್ಲೂಟಿಕ್‌ ನಿಯಮ ಕೂಡಾ ಬದಲಾವಣೆ ಆಗಿದೆ. ಇದೀಗ ಬ್ಲೂಟಿಕ್‌ ಬೇಕೆಂದರೆ ಹಣ ಕಟ್ಟಬೇಕಿದೆ.

ಸೆಲೆಬ್ರಿಟಿಗಳ ಟ್ವಿಟ್ಟರ್‌ ಖಾತೆಯಿಂದ ಬ್ಲೂಟಿಕ್‌ ಮಾಯ
ಸೆಲೆಬ್ರಿಟಿಗಳ ಟ್ವಿಟ್ಟರ್‌ ಖಾತೆಯಿಂದ ಬ್ಲೂಟಿಕ್‌ ಮಾಯ

ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಬ್ಲೂಟಿಕ್‌ ಮುಂದುವರೆಯಬೇಕಾದರೆ ಹಣ ಕಟ್ಟಬೇಕು. ಒಂದು ವೇಳೆ ಸಬ್‌ಸ್ಕ್ರೈಬ್‌ ಮಾಡಿಕೊಳ್ಳದವರ ಖಾತೆಯ ಬ್ಲೂಟಿಕ್‌ ತೆಗೆಯುವುದಾಗಿ ಇತ್ತೀಚೆಗೆ ಟ್ವಿಟ್ಟರ್‌ ಸಂಸ್ಥೆ ಹೇಳಿತ್ತು. ಕೆಲವರು ಟ್ವಿಟ್ಟರ್‌ ಸೂಚನೆಗಳನ್ನು ಪಾಲಿಸಿದರೆ, ಇನ್ನೂ ಕೆಲವರು ಗಂಭೀರವಾಗಿ ಪರಿಗಣಿಸದ ಪರಿಣಾಮ ಅನೇಕ ಗಣ್ಯರ ಟ್ವಿಟ್ಟರ್‌ ಖಾತೆಯಲ್ಲಿ ಬ್ಲೂಟಿಕ್‌ ಮಾಯವಾಗಿದೆ.

ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರು ತಮ್ಮ ಟ್ವಿಟ್ಟರ್ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ. ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಆಲಿಯಾ ಭಟ್‌, ಸಲ್ಮಾನ್ ಖಾನ್‌, ಸ್ಯಾಂಡಲ್‌ವುಡ್‌ ಸ್ಟಾರ್‌ಗಳಾದ ಯಶ್‌, ದರ್ಶನ್‌, ಸುದೀಪ್‌, ರಮ್ಯಾ, ತೆಲುಗು ಸ್ಟಾರ್‌ಗಳಾದ ಸಮಂತಾ, ಪವನ್‌ ಕಲ್ಯಾಣ್‌, ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಉತ್ತರ ಪ್ರದೇಶ ಸಿಎಂ ಹೋಗಿ ಆದಿತ್ಯನಾಥ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಇನ್ನೂ ಅನೇಕ ಗಣ್ಯರ ಟ್ವಿಟ್ಟರ್‌ ಖಾತೆಯಿಂದ ಬ್ಲೂ ಟಿಕ್‌ ಮಾಯವಾಗಿದೆ. ಟ್ಟಿಟ್ಟರ್‌ ಸಂಸ್ಥೆಯ ನಡೆಯಿಂದ ಬ್ಲೂ ಟಿಕ್‌ ಕಳೆದುಕೊಂಡಿರುವ ಗಣ್ಯರು ಶಾಕ್‌ ಆಗಿದ್ದಾರೆ. ಕೆಲವರು ಮುನ್ನೆಚರಿಕೆ ವಹಿಸಿದ ಕಾರಣ ಅವರ ಬ್ಲೂಟಿಕ್‌ ಹಾಗೇ ಉಳಿದುಕೊಂಡಿದೆ.

ಟ್ವಿಟ್ಟರ್‌ ಸಂಸ್ಥೆಯನ್ನು ಎಲಾನ್‌ ಮಸ್ಕ್‌ ಖರೀದಿಸಿದ ನಂತರ ಕೆಲವೊಂದು ನಿಯಮಗಳನ್ನು ಬದಲಿಸಿದ್ದು. ಅದರಲ್ಲಿ ಬ್ಲೂಟಿಕ್‌ ನಿಯಮ ಕೂಡಾ ಬದಲಾವಣೆ ಆಗಿದೆ. ಇದೀಗ ಬ್ಲೂಟಿಕ್‌ ಬೇಕೆಂದರೆ ಹಣ ಕಟ್ಟಬೇಕು. ತಿಂಗಳಿಗೆ 900 ರೂಪಾಯಿ ಹಣ ಪಾವತಿಸಬೇಕು. ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕಿದೆ. ಬ್ಲೂಟಿಕ್‌ ಮಾಯವಾಗಿರುವುದರಿಂದ ಇದೀಗ ಯಾರದ್ದು ಅಸಲಿ ಖಾತೆ, ಯಾರ ಖಾತೆ ನಕಲಿ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ.

ಟ್ರೆಂಡಿಂಗ್​ ಸುದ್ದಿ

ಪುನೀತ್‌ ರಾಜ್‌ಕುಮಾರ್‌ ಟ್ವಿಟ್ಟರ್‌ ಖಾತೆ
ಪುನೀತ್‌ ರಾಜ್‌ಕುಮಾರ್‌ ಟ್ವಿಟ್ಟರ್‌ ಖಾತೆ

ಇಂದಿನ ಮನರಂಜನೆ ಸುದ್ದಿಗಳು

ಅಮೃತಧಾರೆ ಮೂಲಕ ಮತ್ತೆ ಕನ್ನಡಕ್ಕೆ ಬಂದ ಛಾಯಾಸಿಂಗ್‌; ರಾಜೇಶ್‌ ನಟರಂಗ ಜೊತೆ ಜಗಳಕ್ಕೆ ನಿಂತ ತುಂಟಾಟ ಸಿನಿಮಾ ನಟಿ

ಬಹಳ ದಿನಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಪ್ರತಿಭಾನ್ವಿತ ನಟಿ ಛಾಯಾಸಿಂಗ್‌ ಇದೀಗ ಮತ್ತೆ ವಾಪಸ್‌ ಬಂದಿದ್ದಾರೆ. ಈ ಬಾರಿ ಅವರು 'ಅಮೃತಧಾರೆ'ಯಾಗಿ ಮತ್ತೊಂದು ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ. ಛಾಯಾಸಿಂಗ್‌ ಕಿರುತೆರೆ ಮೂಲಕ ಮತ್ತೆ ಕನ್ನಡಕ್ಕೆ ವಾಪಸ್‌ ಬಂದಿದ್ದಾರೆ. ಅಮೃತಧಾರೆ ಎಂಬ ಹೊಸ ಧಾರಾವಾಹಿಯಲ್ಲಿ ಛಾಯಾ ನಟಿಸುತ್ತಿದ್ದಾರೆ. ಛಾಯಾ ಸಿಂಗ್‌ ಹೊಸ ಧಾರಾವಾಹಿಯ ಪೂರ್ತಿ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಯೂಟ್ಯೂಬರ್‌ಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಆರಾಧ್ಯಗೆ ಜಯ; ವಿಡಿಯೋಗಳನ್ನು ತೆಗೆಯುವಂತೆ ಕೋರ್ಟ್‌ ಸೂಚನೆ

ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ದೆಹಲಿ ಕೋರ್ಟ್‌ ಮೆಟ್ಟಿಲೇರಿದ್ದ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಪುತ್ರಿ ಆರಾಧ್ಯ ರೈ ಬಚ್ಚನ್‌ಗೆ ಗೆಲುವು ದೊರೆತಿದೆ. ಆರಾಧ್ಯ ಆರೋಗ್ಯ ಕುರಿತು ಸುಳ್ಳು ಮಾಹಿತಿ ಪ್ರಕಟಿಸದಂತೆ ಹೈ ಕೋರ್ಟ್‌ ಯೂಟ್ಯೂಬ್‌ ಚಾನೆಲ್‌ಗಳಿಗೆ ಎಚ್ಚರಿಸಿದೆ. ಪೂರ್ತಿ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ