Tulu Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ತುಳು ಸಿನಿಮಾಗಳು, ಎಂಚಿನ ಕಾಮಿಡಿ ಮಾರ್ರೆ
ಕನ್ನಡ ಸುದ್ದಿ  /  ಮನರಂಜನೆ  /  Tulu Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ತುಳು ಸಿನಿಮಾಗಳು, ಎಂಚಿನ ಕಾಮಿಡಿ ಮಾರ್ರೆ

Tulu Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ತುಳು ಸಿನಿಮಾಗಳು, ಎಂಚಿನ ಕಾಮಿಡಿ ಮಾರ್ರೆ

Tulu movies online: ಕೋಸ್ಟಲ್‌ವುಡ್‌ನ ಅನೇಕ ಜನಪ್ರಿಯ ಸಿನಿಮಾಗಳು ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ತುಳು ಸಿನಿಮಾ ಪ್ರಿಯರಿಗೆ ಪುಳಿಮುಂಚಿ, ಮಗನೇ ಮಹಿಷ, ತುಡರ್‌, ಗಮ್ಜಾಲ್‌ ಸೇರಿದಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ.

Tulu Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ತುಳು ಸಿನಿಮಾಗಳು
Tulu Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ತುಳು ಸಿನಿಮಾಗಳು

Tulu movies online: ಕೋಸ್ಟಲ್‌ವುಡ್‌ನ ಅನೇಕ ಜನಪ್ರಿಯ ಸಿನಿಮಾಗಳು ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ತುಳು ಸಿನಿಮಾ ಪ್ರಿಯರಿಗೆ ಪುಳಿಮುಂಚಿ, ಮಗನೇ ಮಹಿಷ, ತುಡರ್‌, ಗಮ್ಜಾಲ್‌ ಸೇರಿದಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ರೂಪೇಶ್‌ ಶೆಟ್ಟಿ, ಪೃಥ್ವಿ ಅಂಬಾರ್‌ ಮುಂತಾದ ಜನಪ್ರಿಯ ನಟರು, ಅರವಿಂದ ಬೋಳಾರ್‌, ನವೀನ್‌ ಡಿ ಪಡೀಲ್‌ ಮುಂತಾದ ಹಾಸ್ಯನಟರು ನಟಿಸಿರುವ ಚಿತ್ರಗಳು ಈ ಲಿಸ್ಟ್‌ನಲ್ಲಿವೆ.

ಪುಳಿಮುಂಚಿ

ತುಳುವಿನಲ್ಲಿ ಪುಳಿಮುಂಚಿ ಎಂಬ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ಈ ತುಳು ಸಿನಿಮಾ ಟಾಕೀಸ್‌ ಆಪ್‌ ಒಟಿಟಿಯಲ್ಲಿ ಟಾಪ್‌ 1 ಟ್ರೆಂಡಿಂಗ್‌ನಲ್ಲಿದೆ. ಹಾಸ್ಯ ನಟರಾದ ಅರವಿಂದ ಬೋಳಾರ್‌, ನವೀನ್‌ ಡಿ ಪಡೀಲ್‌, ಭೋಜರಾಜ ವಾಮಂಜೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮಗನೇ ಮಹಿಷ

ಇದು 2022ರಲ್ಲಿ ಬಿಡುಗಡೆಯಾದ ತುಳು ಹಾಸ್ಯ ಸಿನಿಮಾವಾಗಿದೆ. ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ಈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್ , ಜ್ಯೋತಿ ರೈ, ನವೀನ್ ಡಿ ಪಡೀಲ್ , ಅರವಿಂದ್ ಬೋಳಾರ್ ಮತ್ತು ಭೋಜರಾಜ್ ವಮಂಜೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತುಡರ್‌ ತುಳು ಸಿನಿಮಾ

ತುಡರ್‌ ತುಳು ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ವಿಲ್ಸನ್‌ ರೆಬೆಲ್ಲೊ ನಿರ್ಮಾಣದ ಈ ಸಿನಿಮಾದಲ್ಲಿ ಸಿದ್ಧಾರ್ಥ ಶೆಟ್ಟಿ, ದೀಕಷಾ ಭೀಷೆ, ಅರವಿಂದ ಬೋಳಾರ್‌, ಪ್ರಜ್ವಲ್‌ ಶೆಟ್ಟಿ, ಹರ್ಷಿತಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಗಮ್ಜಾಲ್‌

ರೂಪೇಶ್‌ ಶೆಟ್ಟಿ ನಟನೆಯಯ ಗಮ್ಜಾಲ್‌ ಸಿನಿಮಾ ಕೂಡ ಟಾಕೀಸ್‌ ಆಪ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಲಾಸ್ಟ್‌ ಬೆಂಚ್‌

ಲಾಸ್ಟ್‌ ಬೆಂಚ್‌ ತುಳು ಸಿನಿಮಾವು ಟಾಕೀಸ್ ಆ್ಯಪ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಎಎಸ್‌ ಪ್ರೊಡಕ್ಷನ್‌ ಲಾಂಛನದ ಈ ಸಿನಿಮಾವನ್ನು ಆಶಿಕಾ ಸುವರ್ಣ ನಿರ್ಮಾಣ ಮಾಡಿದ್ದಾರೆ. ಎಂ ಪಿ ಪ್ರಧಾನ್‌ ನಿರ್ದೇಶನದ ಈ ಚಿತ್ರ 2022ರಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಮಲ್ಟಿ ಸ್ಟಾರ್‌ಗಳು ಅಭಿನಯಿಸದ ಮೊದಲ ಕೋಸ್ಟಲ್‌ವುಡ್‌ ಸಿನಿಮಾ ಇದಾಗಿದೆ. ಬಿಗ್‌ಬಾಸ್‌ ಸ್ಪರ್ಧಿ ರೂಪೇಶ್‌ ಶೆಟ್ಟಿ, ಪೃಥ್ವಿ ಅಂಬಾರ್‌, ವಿನೀತ್‌ ಕುಮಾರ್‌ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ.

ರಾಜ್‌ ಸೌಂಡ್ಸ್‌ ಲೈಟ್ಸ್‌

ರಾಜ್‌ ಸೌಂಡ್ಸ್‌ ಲೈಟ್ಸ್‌ ತುಳು ಸಿನಿಮಾ ಸಿನಿಮಾವು ಟಾಕೀಸ್‌ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅರವಿಂದ್‌ ಬೋಳಾರ್‌ ಮುಂತಾದ ಹಾಸ್ಯನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಬೋಜರಾಜ್‌ ಎಂಬಿಬಿಎಸ್‌

ಬೋಜರಾಜ್‌ ವಾಮಂಜೂರು ನಾಯಕ ನಟರಾಗಿ ನಟಿಸಿರುವ ಹಾಸ್ಯ ಸಿನಿಮಾ ಇದಾಗಿದೆ. ದರ್ಬಾರ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ರಫೀಕ್‌ ದರ್ಬಾರ್‌ ಈ ಸಿನಿಮಾ ನಿರ್ಮಿಸಿದ್ದಾರೆ. ಇಸ್ಮಾಯಿಲ್‌ ಮೂಡುಶೆಡ್ಡೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಪರ್ವೇಜ್‌ ಬೆಳ್ಳಾರೆ, ಶರಣ್‌ ರಾಜ್‌ ಸುವರ್ಣ ಸಹ ನಿರ್ಮಾಪಕರು. ದೇವದಾಸ್‌ಕಾಪಿಕಾಡ್‌ ಮತ್ತು ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇಂಗ್ಲಿಷ್‌

ಇಂಗ್ಲಿಷ್‌ ಎಂಬ ತುಳು ಸಿನಿಮಾ ಕೂಡ ಟ್ರೆಂಡಿಂಗ್‌ನಲ್ಲಿದೆ. ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣ ಸಿನಿಮಾ ಇದಾಗಿದೆ. ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ಸಿನಿಮಾ ಇದಾಗಿದೆ.

ಅಪ್ಪೆ ಟೀಚರ್‌

ಕಿಶೋರ್ ಮೂಡಬಿದ್ರೆ ನಿರ್ದೇಶನದ ಈ ಸಿನಿಮಾ ಕೂಡ ಟ್ರೆಂಡಿಂಗ್‌ನಲ್ಲಿದೆ. ಸ್ವಯಂ ಪ್ರಭಾ ಮೂವೀಸ್ ಮತ್ತು ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಪ್ರಮುಖ ಪಾತ್ರಗಳಲ್ಲಿ ದೇವದಾಸ್ ಕಾಪಿಕಾಡ್ , ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು , ಅರವಿಂದ್ ಬೋಳಾರ್ , ಉಷಾ ಭಂಡಾರಿ, ಸತೀಶ್ ಬಂದಲೆ, ಉಮೇಶ್ ಮಿಜಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

2 ಎಕ್ರೆ

ವಿಸ್ಮಯ ವಿನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಡಿ. ಪಡೀಲ್‌, ಅರವಿಂದ್ ಬೋಳಾರ್‌, ಪೃಥ್ವಿ ಅಂಬಾರ್‌ ಮುಂತಾದವರು ನಟಿಸಿರುವ ಸಿನಿಮಾ ಇದಾಗಿದೆ. ಸಂಜೀವ ಎಂಬ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಒಂದೇ ದಿನ ಒಂದೇ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ ಆಧಾರಿತ ಹಾಸ್ಯ ಚಿತ್ರ ಇದಾಗಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in