Bigg Boss Kannada 11: ಇಲ್ಲಿದೆ ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ; ಇನ್ನು ಕೆಲವೇ ವಾರದಲ್ಲಿ ಅಂತ್ಯವಾಗಲಿದೆ ಈ ರಿಯಾಲಿಟಿ ಶೋ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಇಲ್ಲಿದೆ ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ; ಇನ್ನು ಕೆಲವೇ ವಾರದಲ್ಲಿ ಅಂತ್ಯವಾಗಲಿದೆ ಈ ರಿಯಾಲಿಟಿ ಶೋ

Bigg Boss Kannada 11: ಇಲ್ಲಿದೆ ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ; ಇನ್ನು ಕೆಲವೇ ವಾರದಲ್ಲಿ ಅಂತ್ಯವಾಗಲಿದೆ ಈ ರಿಯಾಲಿಟಿ ಶೋ

Bigg Boss Kannada 11: ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ ಇಲ್ಲಿದೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್‌ ಬಾಸ್‌ ಮುಕ್ತಾಯವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಇಲ್ಲಿದೆ ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ
ಇಲ್ಲಿದೆ ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ

Bigg Boss Kannada 11 finale date: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ಜನ ಮೆಚ್ಚುಗೆ ಪಡೆದಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋ ಕನ್ನಡದಲ್ಲಿ ಆರಂಭವಾಗಿ ಹನ್ನೊಂದು ಸೀಸನ್‌ಗಳಾಗಿದೆ. ಪ್ರತಿ ವರ್ಷವೂ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಆದರೆ ಮುಂದಿನ ಸೀಸನ್‌ನಿಂದ ತಾನು ನಿರೂಪಣೆ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಬಿಗ್‌ ಬಾಸ್‌ ಸೀಸನ್‌ ಹನ್ನೊಂದರ ಕೊನೆ ದಿನಗಳು ಹತ್ತಿರವಾಗುತ್ತಿದೆ. ಸಪ್ಟೆಂಬರ್ 29ರಂದು ಬಿಗ್‌ ಬಾಸ್‌ ಸೀಸನ್‌ 11 ಆರಂಭವಾಗಿತ್ತು. ಫೆಬ್ರವರಿ ತಿಂಗಳವರೆಗೆ ಈ ರಿಯಾಲಿಟಿ ಶೋ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಸ್ಪರ್ಧಿಗಳಲ್ಲಿ ತಾನೇ ಗೆಲ್ಲಬೇಕು ಎಂಬ ಹಠ ಹೆಚ್ಚಾಗಿದೆ.

ಬಿಗ್‌ ಬಾಸ್‌ ಬೇಸರ ಬಂತು ಎನ್ನುವವರೂ ಈಗ ಯಾರು ಗೆಲ್ಲಬಹುದು ಎಂಬ ಕುತೂಹಲ ಇಟ್ಟುಕೊಂಡಿದ್ದಾರೆ. ಈ ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಮಾಜಿ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಲ್ಲಿರುವ ಕೆಲ ಸ್ಪರ್ಧಿಗಳಿಗೆ ತಮ್ಮ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಮತ ಚಲಾಯಿಸುವಂತೆ ಸೂಚಿಸುತ್ತಿದ್ದಾರೆ. ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ನಡೆಯುತ್ತಿರುವ ಎಲ್ಲ ಟಾಸ್ಕ್‌ಗಳೂ ಸಹ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ.

ಈ ವಾರ ಅಂದರೆ ಜನವರಿ 12ರಂದು ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದಿದ್ದಾರೆ. ಇಷ್ಟು ದಿನ ಟಾಪ್ 10 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಲ್ಲಿದ್ದರೆ ಈಗ ಆ ಸಂಖ್ಯೆಯೂ ಕಡಿಮೆ ಆಗುತ್ತಾ ಬಂದಿದೆ. ಬಿಗ್‌ ಬಾಸ್‌ ಮನೆಯಲ್ಲಿ ಒಟ್ಟು 8 ಜನ ಸ್ಪರ್ಧಿಗಳು ಮಾತ್ರ. 92 ದಿನಗಳು ಈಗಾಗಲೇ ಕಳೆದಿದ್ದು ಇನ್ನು ಕೆಲವೇ ದಿನ ಬಾಕಿ ಇದೆ.

ಬಿಗ್‌ ಬಾಸ್ ಫಿನಾಲೆ ಯಾವಾಗ?

ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೆಲವೇ ವಾರ ಬಾಕಿ ಇದೆ. ಇನ್ನು ಮೂರು ವಾರಗಳಲ್ಲಿ ಬಿಗ್‌ ಬಾಸ್‌ ಗೆದ್ದ ಸ್ಪರ್ಧಿ ಯಾರು ಎಂದು ಎಲ್ಲರಿಗೂ ತಿಳಿಯಲಿದೆ. ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗಡೆ ಬಂದ ರಜತ್ ಕೂಡ ಫಿನಾಲೆಯ ಓಟದಲ್ಲಿದ್ದಾರೆ. ಇನ್ನು ಶೋಭಾ ಶೆಟ್ಟಿ ಮನೆಯೊಳಗಡೆ ಬಂದ ಕೆಲವೇ ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಹಿಂದಿರುಗಿದ್ದಾರೆ. ಫೆಬ್ರವರಿ 2ರಂದು ಬಿಗ್‌ ಬಾಸ್‌ ರಿಯಾಲಿಟಿ ಶೋ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಆ ನಂತರದಲ್ಲಿ ಕಲರ್ಸ್ ಕನ್ನಡದಲ್ಲಿ ಹೊಸ ಶೋ ಆರಂಭವಾಗಲಿದೆ.

ಈಗ ಉಳಿದಿರುವ ಸ್ಪರ್ಧಿಗಳು
1. ಹನುಮಂತ
2. ಧನರಾಜ್ ಆಚಾರ್
3. ತ್ರಿವಿಕ್ರಂ
4. ಭವ್ಯಾ ಗೌಡ
5. ಮೋಕ್ಷಿತಾ ಪೈ
6. ರಜತ್
7. ಗೌತಮಿ
8. ಮಂಜು

ಹೇಗಿದೆ ಜನಾಭಿಪ್ರಾಯ?
ಬಿಗ್‌ ಬಾಸ್‌ ಫಿನಾಲೆ ಹತ್ತಿರ ಬಂದ ಹಾಗೂ ಯಾರು ಬಿಗ್‌ ಬಾಸ್‌ ವಿನ್ನರ್ ಪಟ್ಟವನ್ನು ಅಲಂಕರಿಸುತ್ತಾರೆ ಎಂಬುದು ಎಲ್ಲರ ಮನದಲ್ಲಿರುವ ಕುತೂಹಲಕಾರಿ ಪ್ರಶ್ನೆಯಾಗಿದ್ದು ಹನುಮಂತ ಬಿಗ್‌ ಬಾಸ್‌ ಸೀಸನ್‌ 11ರ ವಿನ್ನರ್ ಆಗಬೇಕೆಂದು ಹಲವರು ಬಯಸುತ್ತಿದ್ದಾರೆ. ಇನ್ನೊಂದಷ್ಟು ಜನ ತ್ರಿವಿಕ್ರಂ ಪರ ಇದ್ದಾರೆ. ಇನ್ನು ಕೆಲವರು ಈ ಬಾರಿ ಮಹಿಳಾ ಸ್ಪರ್ಧಿ ವಿನ್ ಆಗಬಹುದು ಎಂದು ಅಂದಾಜಿಸುತ್ತಿದ್ದಾರೆ.

(ಗಮನಿಸಿ: ಈ ಬರಹದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮಗಳು ಹಾಗೂ ಕಿರುತೆರೆ ಉದ್ಯಮದ ಮೂಲಗಳನ್ನು ಆಧರಿಸಿದೆ. ಈ ರಿಯಾಲಿಟಿ ಶೋ ನಡೆಸುತ್ತಿರುವ ಕಲರ್ಸ್‌ ವಾಹಿನಿ ಶೀಘ್ರದಲ್ಲಿಯೇ ಅಧಿಕೃತವಾಗಿ ಫಿನಾಲೆ ದಿನಾಂಕವನ್ನು ಘೋಷಿಸಲಿದೆ)

ಇದನ್ನೂ ಓದಿ: Bigg Boss Kannada 11: ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆಯಲಿರುವ ಸ್ಪರ್ಧಿ ಇವರೇ? ಕೊನೆಗೂ ರಜತ್‌ ಹೇಳಿದಂತೇ ಆಯ್ತು

Whats_app_banner