ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ನೂರು ಜನ್ಮಕೂ; ಎಲ್ಲಾ ಪ್ರೇಮ ಕಥೆಗಳ ನಡುವೆ ಇದೊಂದು ಹಾರರ್ ಸೀರಿಯಲ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ನೂರು ಜನ್ಮಕು ಎಂಬ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. ಕಲರ್ಸ್ ಕನ್ನಡ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋ ಪ್ರಕಾರ ಇದೊಂದು ಹಾರರ್ ಕಥನವಾಗಿದ್ದು, ಪ್ರತಿದಿನ ಪ್ರೇಮಕಥೆ ನೋಡುವವರಿಗೆ ಈ ಮೂಲಕ ಹೊಸತನ ಸಿಗಬಹುದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರವಾಹಿಯೊಂದು ಆರಂಭವಾಗುತ್ತಿದೆ. ನೂರು ಜನ್ಮಕು ಎಂಬ ಟೈಟಲ್ ಅಡಿಯಲ್ಲಿ ಒಂದು ಚಿಕ್ಕ ತುಣುಕು ಈಗಾಗಲೇ ಬಿಡುಗಡೆಯಾಗಿದೆ. ಇದೊಂದು ಪ್ರೇಮ ಕಥೆಯಾಗಿದ್ದು ಹುಡುಗ, ಹುಡುಗಿಯ ನಡುವೆ ಒಂದು ಆತ್ಮ ಅವರಿಬ್ಬರನ್ನೂ ಬೇರ್ಪಡಿಸಲು ಯತ್ನಿಸುವ ರೀತಿ ಕಥೆಯಾಗಿದ್ದು ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಇದೊಂದು ಹೊಸ ಕಥೆಯಾಗಿದೆ. ಎಲ್ಲಾ ಧಾರಾವಾಹಿಗಳು ಪ್ರೇಮ ಕತೆಯನ್ನು ಆಧರಿಸಿದರೆ ಇದರಲ್ಲಿ ಹಾರರ್ ಕೂಡ ಇದೆ.
ಈ ಹಿಂದೆ ಗೀತಾ ಧಾರಾವಾಹಿಯಲ್ಲಿ ನಟಿಸಿದ್ದ ನಟ ಧನುಷ್ ಗೌಡ ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೌರಿಶಂಕರ’ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು. ಗೀತಾ ಧಾರಾವಾಹಿ ಸಂದರ್ಭದಲ್ಲಂತೂ ತುಂಬಾ ಜನಪ್ರಿಯರಾಗಿದ್ದರು. ಇವರು ಇತ್ತೀಚೆಗಷ್ಟೇ ಮದುವೆ ಕೂಡ ಆಗಿದ್ದಾರೆ.
ಹೊಸ ಧಾರಾವಾಹಿ ಬರುತ್ತಿದೆ ಎಂದಾಕ್ಷಣ ಯಾವ ಧಾರಾವಾಹಿ ಮುಕ್ತಾಯವಗ ಬಹುದು ಎಂದು ಹಲವರು ಆಲೋಚಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿ ಯಾವ ಸಮಯಕ್ಕೆ ಪ್ರಸಾರವಾಗುತ್ತದೆ ಎಂಬ ಅಧಿಕೃತ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಆ ಕಾರಣಕ್ಕಾಗಿ ಜನರು ಕಾತರದಿಂದ ಕಾದಿದ್ದಾರೆ. ಗ್ರಾಫಿಕ್ಸ್ ಬಳಕೆ ಮಾಡಿ ಬಿಡುಗಡೆ ಮಾಡಿದ ಪ್ರೋಮೋಒಂದು ಸುಂದರವಾಗಿ ಮೂಡಿ ಬಂದಿದೆ.
ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರೇವಕಥೆಗಳು ಹಾಗೂ ಪುಟ್ಟ ಮಕ್ಕಳಿರುವ ಧಾರಾವಾಹಿಗಳ ಸಂಖ್ಯೆ ಹೆಚ್ಚಿತ್ತು. ಆದರೆ ಇದೀಗ ಹಾರರ್ ಧಾರಾವಾಹಿಯೊಂದು ತೆರೆಕಾಣುತ್ತಿದೆ. ಇದು ಜನರ ಅಭಿರುಚಿಗೆ ತಕ್ಕಂತೆ ಹೊಸತನವನ್ನು ನೀಡಬಹುದು ಎಂಬ ನಿರೀಕ್ಷೆ ಇದೆ. ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಆ ಪ್ರೊಮೋದಲ್ಲಿ ಇದರ ಕಥೆಯ ಒಂದು ಝಲಕ್ ನೀಡಲಾಗಿದೆ. ಹಲವಾರು ಜನ ಇದು ಹಿಂದಿ ಸೀರಿಯಲ್ ಸುಹಾನಾ ರಿಮೇಕ್ ಆಗಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಹಲವರು ಹೊಸ ಧಾರಾವಾಹಿ ಬರ್ತಿದೆ ಎಂಬ ವಿಷಯ ತಿಳಿದು ಶುಭ ಕೋರಿದ್ದಾರೆ. ಹೊಸ ಧಾರಾವಾಹಿಯ ಪ್ರೋಮೋವನ್ನು ಹಂಚಿಕೊಂಡಿರುವ ಧನುಷ್ ಗೌಡ ನಿಮ್ಮೆಲ್ಲರ ಆಶಿರ್ವಾದ ಬೇಕು ಎಂದು ಹೇಳಿದ್ದಾರೆ. ಹೊಸ ಧಾರಾವಾಹಿಯೊಂದಿಗೆ ನಿಮ್ಮನ್ನು ರಂಜಿಸಲು ಮತ್ತೊಮ್ಮೆ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.