Lakshmi Baramma Serial: ವೈಷ್ಣವ್, ಲಕ್ಷ್ಮೀ ಒಂದಾಗೋ ಸಮಯ; ಕೆಲವೇ ದಿನಗಳಲ್ಲಿ ಕಾವೇರಿ ತಪ್ಪು ನಿರ್ಧಾರಗಳ ಅಂತ್ಯ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ವೈಷ್ಣವ್, ಲಕ್ಷ್ಮೀ ಒಂದಾಗೋ ಸಮಯ; ಕೆಲವೇ ದಿನಗಳಲ್ಲಿ ಕಾವೇರಿ ತಪ್ಪು ನಿರ್ಧಾರಗಳ ಅಂತ್ಯ

Lakshmi Baramma Serial: ವೈಷ್ಣವ್, ಲಕ್ಷ್ಮೀ ಒಂದಾಗೋ ಸಮಯ; ಕೆಲವೇ ದಿನಗಳಲ್ಲಿ ಕಾವೇರಿ ತಪ್ಪು ನಿರ್ಧಾರಗಳ ಅಂತ್ಯ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದೆ. ಈ ಹಿಂದೆ ಲಕ್ಷ್ಮೀಯನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ವೈಷ್ಣವ್ ಈಗ ಮತ್ತೆ ಅವಳ ಪರ ನಿಂತಿದ್ದಾನೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (Colors Kannada)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರೂ ಒಂದಾಗುವ ಸಮಯ ಬಂದಿದೆ. ವೈಷ್ಣವ್ ಇಷ್ಟು ದಿನ ಲಕ್ಷ್ಮೀಯನ್ನು ದೂರ ಇಟ್ಟಿದ್ದ ಆದರೆ, ಈಗ ಮತ್ತೆ ಒಂದಾಗುವ ಲಕ್ಷಣ ಇದೆ. ಕಾವೇರಿ ಎಷ್ಟೇ ಪ್ರಯತ್ನ ಮಾಡಿದರೂ ವೈಷ್ಣವ್ ಹಾಗೂ ಲಕ್ಷ್ಮೀಯನ್ನು ದೂರ ಮಾಡಲು ಆಗುತ್ತಿಲ್ಲ. ಲಕ್ಷ್ಮೀ ಜೀವನದಿಂದ ಹೊರ ಹೋಗಿದ್ದ ನಿತಿನ್ ಮತ್ತೆ ಅವಳ ಜೀವನದಲ್ಲಿ ಬಂದಿದ್ದ. ಆದರೆ ವೈಷ್ಣವ್ ತಾನೇ ಹೋಗಿ ಲಕ್ಷ್ಮೀಯನ್ನು ಕಾಪಾಡಿದ್ದಾನೆ. “ನೀನು ಸತ್ತರೂ ತೊಂದರೆ ಇಲ್ಲ ನಿನ್ನ ಹೆಣಕ್ಕಾದರೂ ನಾನು ತಾಳಿ ಕಟ್ಟೇ ಕಟ್ಟುತ್ತೇನೆ” ಎಂದು ನಿತಿನ್, ಲಕ್ಷ್ಮೀ ಹತ್ತಿರ ಹೇಳಿದ್ದ. ಆ ಮಾತನ್ನು ವೈಷ್ಣವ್ ಕೇಳಿಸಿಕೊಂಡಿರುತ್ತಾನೆ.

ಲಕ್ಷ್ಮೀ ಪರ ನಿಂತ ವೈಷ್ಣವ್

ನಿತಿನ್ ಲಕ್ಷ್ಮೀಗೆ ತುಂಬಾ ತೊಂದರೆ ಕೊಡುವುದನ್ನು ನೋಡಲಾಗದೆ ವೈಷ್ಣವ್ ತಾನೇ ಬಂದು ಅವಳನ್ನು ಕಾಪಾಡಿದ್ದಾನೆ. ನಿತಿನ್ ಏಕಾಏಕಿ ಕೈಯ್ಯಲ್ಲಿ ತಾಳಿ ಹಿಡಿದುಕೊಂಡು ಬಂದು ಲಕ್ಷ್ಮೀಯನ್ನು ನಿಂತ ಜಾಗದಲ್ಲೇ ಮದುವೆ ಆಗುತ್ತೇನೆ ಎಂದು ಹಠ ಮಾಡುತ್ತಾನೆ. ಆ ಮಾತನ್ನು ಕೇಳಿ ಲಕ್ಷ್ಮೀ ಕಂಗಾಲಾಗಿರುತ್ತಾಳೆ. ಅವಳ ಕೈಗಳನ್ನು ಇನ್ನೊಂದಷ್ಟು ಜನ ಹಿಡಿದುಕೊಂಡು ಬಲವಂತ ಮಾಡುತ್ತಾ ಇರುತ್ತಾರೆ. ಅವಳಿಗೆ ಇಷ್ಟ ಇಲ್ಲದೇ ಇದ್ದರೂ ಸಹ ಅವಳನ್ನು ಮದುವೆ ಆಗಲು ನಿತಿನ್ ಮುಂದಾಗಿದ್ದನ್ನು ಕಂಡು, ಲಕ್ಷ್ಮೀ ಪರ ನಿಂತು ವೈಷ್ಣವ್ ಮಾತಾಡುತ್ತಾನೆ.

ಕಾವೇರಿಯ ಅಹಂಕಾರ

ನಾನು ಮತ್ತು ಲಕ್ಷ್ಮೀ ಈಗಲೂ ಕೂಡ ಗಂಡ, ಹೆಂಡತಿ ನಮ್ಮ ನಡುವೆ ಜಗಳ ಇರಬಹುದು ಆದರೆ ನಾವು ಬೇರೆ ಆಗಿಲ್ಲ. ನಮ್ಮಲ್ಲಿನ ಪ್ರೀತಿ ಹಾಗೇ ಇದೆ. ಈಗಲೂ ನಾವಿಬ್ಬರು ಗಂಡ, ಹೆಂಡತಿಯೇ ಎಂದು ಎಲ್ಲರ ಎದುರು ಖುಷಿಯಿಂದ ಹೇಳುತ್ತಾನೆ. ಅದನ್ನು ಕಂಡು ಕಾವೇರಿಗೆ ಕೋಪ ಬಂದಿರುತ್ತದೆ. ಮಗ ಇಷ್ಟು ದಿನ ನನ್ನ ಪರವಾಗಿ ಇದ್ದ ಈಗ ನೋಡಿದರೆ ಇವನು ಲಕ್ಷ್ಮೀ ಪರವಾಗಿದ್ದಾನಲ್ಲ ಎಂದು ಕಾವೇರಿಗೆ ಅನಿಸುತ್ತದೆ. ಅಷ್ಟೇ ಅಲ್ಲ ಆ ನಂತರದಲ್ಲಿ ವಿಧಿ ಬಗ್ಗೆಯೂ ಅವಳಿಗೆ ಬೇಸರ ಇರುತ್ತದೆ. ವಿಧಿ ಎಲ್ಲವನ್ನೂ ಮರೆತು ಮತ್ತೆ ಮನೆಗೆ ಬರುತ್ತಾಳೆ. ಮನೆಗೆ ಬಂದಾಗ ಕಾವೇರಿ ಅವರನ್ನು ಸ್ವಾಗತಿಸುವ ಬದಲು ಮನೆಯಿಂದ ಆಚೆ ಹಾಕಿದ್ದಾಳೆ. ಈ ರೀತಿಯಾದ ಎಲ್ಲ ಬದಲಾವಣೆ ಹಾಗೂ ಬೆಳವಣಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಾಗಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Suma Gaonkar

eMail
Whats_app_banner