Lakshmi Baramma Serial: ಲಕ್ಷ್ಮೀಯನ್ನು ಮದುವೆಯಾಗಲು ಬಂದ ನಿತಿನ್; ವೈಷ್ಣವ್‌ಗೆ ಗೊತ್ತಾಗಿದೆ ವಿಷಯ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಿತಿನ್ ಏಕಾಏಕಿ ಕೀರ್ತಿ ಮನೆ ಹತ್ತಿರ ಬಂದಿದ್ದಾನೆ. ಲಕ್ಷ್ಮೀಯನ್ನು ಕೆಣಕುವ ಉದ್ದೇಶದಿಂದ ಅವನು ಅಲ್ಲಿಗೆ ಬಂದಿದ್ದಾನೆ. ನಂತರ ಏನಾಗಿದೆ ನೋಡಿ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಬೇರೆಯಾಗಿದ್ದಾರೆ ಎನ್ನುವ ವಿಚಾರ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇದರಿಂದ ಲಕ್ಷ್ಮೀಗೆ ನಾನಾ ರೀತಿಯ ತೊಂದರೆ ಆಗುತ್ತಿದೆ. ಆದರೆ, ಆ ತೊಂದರೆಯನ್ನು ಹೇಗೆ ನಿಭಾಯಿಸುವುದು ಎಂದು ಲಕ್ಷ್ಮೀಗೆ ತಿಳಿಯುತ್ತಿಲ್ಲ. ವೈಷ್ಣವ್ ಮನೆಯಿಂದ ಆಚೆ ಹಾಕಿದ್ದರೂ ಲಕ್ಷ್ಮೀ ಭರವಸೆಯೊಂದಿಗೆ ಬದುಕುತ್ತಿದ್ದಾಳೆ. ಇಂದಲ್ಲ ನಾಳೆ ಮತ್ತೆ ನಾನು ಹಾಗೂ ವೈಷ್ಣವ್ ಒಂದಾಗುತ್ತೇವೆ ಎಂಬ ಮನೋಭಾವ ಅವಳಲ್ಲಿದೆ. ಅದೇ ಕಾರಣಕ್ಕೆ ಲಕ್ಷ್ಮೀ ಸುಮ್ಮನಿದ್ದಾಳೆ. ಆದರೆ, ಸುಮ್ಮನಿದ್ದರೂ ಅವಳಿಗೆ ತೊಂದರೆ ಕೊಡಲು ಒಬ್ಬರಲ್ಲ, ಒಬ್ಬರು ಕಾದಿರುತ್ತಾರೆ ಎಂಬುದಕ್ಕೆ ನಿತಿನ್ ಸಾಕ್ಷಿ.
ಲಕ್ಷ್ಮೀಗೆ ಮಿಥುನ್ ಕಾಟ
ನಿತಿನ್ ಈ ಹಿಂದೆಯೂ ಲಕ್ಷ್ಮೀಗೆ ಸಾಕಷ್ಟು ಬಾರಿ ತೊಂದರೆ ಕೊಟ್ಟಿದ್ದ. ಅವನಿಗೆ ಲಕ್ಷ್ಮೀ ಇಷ್ಟ ಎಂಬ ಕಾರಣಕ್ಕೆ, ಅವಳಿಗೆ ಮದುವೆ ಆದರೂ ಅವನು ಲಕ್ಷ್ಮೀಯೇ ಬೇಕು ಎಂದು ಹಠ ಮಾಡಿದ್ದ. ಆಗ ಅವನ ಕೆನ್ನೆಗೆ ಲಕ್ಷ್ಮೀ ಚಪ್ಪಲಿಯಿಂದ ಬಾರಿಸಿ ಬುದ್ಧಿ ಕಲಿಸಿದ್ದಳು. ಆದರೂ, ಬುದ್ಧಿ ಕಲಿಯದ ನಿತಿನ್ ಈಗ ಮತ್ತೆ ಬಂದಿದ್ದಾನೆ. ಅವನು ಬರುವಾಗಲೇ ಮದುಮಗನ ರೀತಿ ತಯಾರಾಗಿ ಬಂದಿದ್ಧಾನೆ. ಇನ್ನೇನು ಮದುವೆ ಆಗಿಯೇ ಬಿಡ್ತೀನಿ ಎನ್ನುವ ರೀತಿ ಕೈಯ್ಯಲ್ಲಿ ತಾಳಿ ಹಿಡಿದುಕೊಂಡಿದ್ದಾನೆ.
ಕೀರ್ತಿಗೆ ನಿತಿನ್ ನೋಡಿ ಭಯ ಆಗಿದೆ. ಅವಳಿಗೆ ಅವನು ಯಾರು ಎಂಬುದು ನೆನಪಿಲ್ಲ. ಆದರೆ ಅವಳು ಮೊದಲು ನಿತಿನ್‌ನನ್ನು ಭೇಟಿಯಾಗಿದ್ದಳು. ಈಗ ಎಲ್ಲವೂ ಮರೆತು ಹೋಗಿದೆ. ಆ ವಿಚಾರ ಅವಳ ನಡವಳಿಕೆಯಿಂದ ನಿತಿನ್‌ಗೂ ಅರ್ಥ ಆಗಿದೆ. ಕಾರುಣ್ಯ ನಿಂತ ಜಾಗದಲ್ಲೇ ನಿಂತು ನೋಡುತ್ತಿದ್ದಾಳೆ. ಅಳು ಮುಖ ಮಾಡಿದ ಲಕ್ಷ್ಮೀಯನ್ನು ನೋಡಿ ಕೀರ್ತಿ ಬೇಸರ ಮಾಡಿಕೊಂಡಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಕೀರ್ತಿ ಎಂಬ ಪಾತ್ರ ಕೂಡ ಈ ಧಾರಾವಾಹಿಯಲ್ಲಿ ಮಹತ್ವ ಪಡೆದಿದೆ. ಲಕ್ಷ್ಮೀ ಹಾಗೂ ವೈಷ್ಣವ್ ದಾಂಪತ್ಯದ ಬಗ್ಗೆ ಈ ಧಾರಾವಾಹಿ ಕಥೆ ಇದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
