Ramacahari Serial: ನಾರಾಯಣಾಚಾರ್ಯರು ತಲೆ ತಗ್ಗಿಸುವ ಕೆಲಸ ಮಾಡಿದ ಶ್ರುತಿ; ಕಣ್ಣೀರಿಟ್ಟ ಜಾನಕಿ
ಕನ್ನಡ ಸುದ್ದಿ  /  ಮನರಂಜನೆ  /  Ramacahari Serial: ನಾರಾಯಣಾಚಾರ್ಯರು ತಲೆ ತಗ್ಗಿಸುವ ಕೆಲಸ ಮಾಡಿದ ಶ್ರುತಿ; ಕಣ್ಣೀರಿಟ್ಟ ಜಾನಕಿ

Ramacahari Serial: ನಾರಾಯಣಾಚಾರ್ಯರು ತಲೆ ತಗ್ಗಿಸುವ ಕೆಲಸ ಮಾಡಿದ ಶ್ರುತಿ; ಕಣ್ಣೀರಿಟ್ಟ ಜಾನಕಿ

Ramacahari Serial: ನಾರಾಯಣಾಚಾರ್ಯರು ತನ್ನ ಮಗಳು ಶ್ರುತಿ ತುಂಬಾ ಒಳ್ಳೆಯವಳು, ಯಾವ ತಪ್ಪನ್ನೂ ಮಾಡಿಲ್ಲ ಎಂದು ಅಂದುಕೊಳ್ಳುತ್ತಿದ್ದಾರೆ. ಆದರೆ ಅವಳು ಮಾಡಿದ ಕೆಲಸ ಗೊತ್ತಾದರೆ ನಾರಾಯಣಾಚಾರ್ಯರು ತಲೆ ತಗ್ಗಿಸುತ್ತಾರೆ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (Colors Kannada)

Ramacahari Serial: ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರ್ಯರು ತನ್ನ ಮಗಳ ಬಗ್ಗೆ ತುಂಬಾ ಹೆಮ್ಮೆಯಿಂದ ಬದುಕುತ್ತಿದ್ದಾರೆ. ಆದರೆ ಅವಳು ಯಾವ ರೀತಿ ಕೆಲಸ ಮಾಡಿದ್ದಾಳೆ ಎಂದು ಅವರಿಗಿನ್ನೂ ಅರ್ಥ ಆಗಿಲ್ಲ. ಯಾಕೆಂದರೆ ಆ ವಿಷಯ ಹೊರಗಡೆ ಬರದಂತೆ ಜಾನಕಿ ತಡೆ ಗೋಡೆಯಾಗಿ ನಿಂತಿದ್ದಾಳೆ. ಶ್ರುತಿ ಯಾರೋ ಒಬ್ಬನನ್ನು ಲವ್ ಮಾಡಿ ಈಗ ಗರ್ಭಿಣಿಯೂ ಆಗಿದ್ದಾಳೆ. ಮದುವೆಗೂ ಮುನ್ನವೇ ಹೀಗೆಲ್ಲ ಆಗಿದೆ ಎಂದರೆ ನಾರಾಯಣಾಚಾರ್ಯರು ಖಂಡಿತ ಸುಮ್ಮನೆ ಇರೋದಿಲ್ಲ ಎಂದು ಜಾನಕಿ ಶ್ರುತಿಗೆ ಹೇಳುತ್ತಿದ್ದಾಳೆ. ಯಾರೋ ಗಂಡಿನ ಕಡೆಯವರು ಶ್ರುತಿ ಬಗ್ಗೆ ಒಂದು ಮಾತೂ ವಿಚಾರಿಸದೆ ಸೊಸೆ ಮಾಡಿಕೊಳ್ಳುತ್ತೇವೆ ಎಂದು ಬಂದಿದ್ದರು. ಅದೇ ವಿಚಾರವಾಗಿ ನಾರಾಯಣಾಚಾರ್ಯರು ಈಗ ಶ್ರುತಿ ಬಳಿ ಮಾತಾಡುತ್ತಿದ್ದಾರೆ.

ಮೊಬೈಲ್ ಎಂಬುದು ಮಾಯೆ ಎಂದ ನಾರಾಯಣಾಚಾರ್ಯರು

“ಮೊಬೈಲ್ ಒಂದು ಮಾಯೆ. ಅದನ್ನು ಎಷ್ಟು ಬೇಕೋ ಅಷ್ಟೇ ಬಳಸಬೇಕು. ಅದಕ್ಕಿಂತ ಹೆಚ್ಚಾಗಿ ಬಳಸಿದರೆ ಅಪಾಯ ಎನ್ನುವುದು ಕಟ್ಟಿಟ್ಟ ಬುತ್ತಿ ಎಂದು ಮತ್ತೊಮ್ಮೆ ಹೇಳುತ್ತಿದ್ದಾರೆ. ಆದರೆ ನಿನಗೆ ಅಂದು ನಾನು ಹೇಳಿದ ಮಾತು ಸರಿ ಅನಿಸದೇ ಇದ್ದರು ಇಂದು ಯಾರೋ ನಿನ್ನ ಬಗ್ಗೆ ಎಲ್ಲೂ ವಿಚಾರಿಸದೆ ಮದುವೆ ಆಗಲು ಬರುತ್ತಾರೆ ಎಂದು ಅದು ನಾನು ಹೇಳಿಕೊಟ್ಟ ಸಂಸ್ಕಾರ” ಎಂದೆಲ್ಲ ಅವರು ಹೇಳಿದ್ದಾರೆ. ಆಗ ಶ್ರುತಿಗೆ ತಾನು ಮಾಡಿದ ತಪ್ಪೇನಾದರೂ ಅಪ್ಪನಿಗೆ ಗೊತ್ತಾದರೆ ಏನಾಗಬಹುದು ಎಂಬ ಆಲೋಚನೆ ಬರುತ್ತದೆ.

ಜಾನಕಿ ಕಣ್ಣೀರು
"ನೋಡು ನಿನ್ನ ಅಪ್ಪ ನಿನ್ನ ಮೇಲೆ ಎಷ್ಟೊಂದು ನಂಬಿಕೆ ಇಟ್ಟುಕೊಂಡಿದ್ದಾರೆ. ನೀನು ಯಾವುದೇ ಕಾರಣಕ್ಕೂ ಅವರ ಮಾತನ್ನು ಮೀರಿ ನಡೆದುಕೊಳ್ಳುವುದಿಲ್ಲ ಎಂದೇ ಅಂದುಕೊಂಡಿದ್ದಾರೆ. ಆದರೆ ಈಗ ನೀನು ಮಾಡಿರೋದಾದ್ರು ಏನು? ಅವರು ತಲೆ ತಗ್ಗಿಸುವ ಹಾಗೆ ಮಾಡಿ ಬಿಟ್ಯಲ್ಲೇ" ಎಂದು ಜಾನಕಿ ಅಳುತ್ತಾಳೆ. ಶ್ರುತಿಯೂ ಅಳುತ್ತಿದ್ದಾಳೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner