Ninagaagi Serial: ಹಿಂದಿಗೆ ಡಬ್ ಆಗ್ತಿದೆ ಕನ್ನಡದ ಧಾರಾವಾಹಿ ‘ನಿನಗಾಗಿ’; ಆನ್ಮೋಲ್ ಬಂಧನ್ ಹೆಸರಲ್ಲಿ ಸೂಪರ್ ಸ್ಟಾರ್ ರಚನಾ ಕಥೆ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ನಿನಗಾಗಿ' ಈಗ ಹಿಂದಿಯಲ್ಲೂ ಡಬ್ ಆಗಿ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಕಲರ್ಸ್ ರಿಶ್ತೆ ಚಾನಲ್‌ನಲ್ಲಿ ಹಿಂದಿಯಲ್ಲಿ ಈ ಸೀರಿಯಲ್ ನೋಡಬಹುದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿನಗಾಗಿ ಕನ್ನಡದ ಸೀರಿಯಲ್ ಪ್ರಸಾರವಾಗುತ್ತಿದೆ. ಸಾಕಷ್ಟು ಜನ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಟಿಆರ್‌ಪಿ ಓಟದಲ್ಲಿ ಅಷ್ಟೇನೂ ಕೇಳಿ ಬರದ ಹೆಸರು ಇದಾಗಿದ್ದರೂ ಈ ಧಾರಾವಾಹಿಯ ಕಥೆ ಚೆನ್ನಾಗಿದೆ, ಪಾತ್ರಧಾರಿಗಳ ಅಭಿನಯವೂ ಚೆನ್ನಾಗಿದೆ. ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಈ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇದೇ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಿ ಪ್ರಸಾರವಾಗಲಿದೆ. ಸಾಮಾನ್ಯವಾಗಿ ಬೇರೆ ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆದ ವಿಚಾರವನ್ನೇ ಕೇಳುತ್ತಿದ್ದ ಕನ್ನಡಿಗರಿಗೆ ಇದೊಂದು ಖುಷಿಯ ವಿಚಾರವೂ ಹೌದು.
ವೀಕ್ಷಣೆ ಎಲ್ಲಿ?
rishteyasia ಎಂಬ ಇನ್ಸಟಾಗ್ರಾಂ ಖಾತೆಯಲ್ಲಿ ಮೊದಲ ಪ್ರೋಮೋ ಶೇರ್ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಈ ಧಾರಾವಾಹಿ ಪ್ರಸಾರವಾಗಲಿದ್ದು ಪ್ರತಿ ದಿನ ಮರು ಪ್ರಸಾರ ಕೂಡ ಆಗಲಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಮತ್ತು ಮಧ್ಹಾನ್ನ 2:30ಕ್ಕೆ ಮರು ಪ್ರಸಾರವಾಗಲಿದೆ. ಕಲರ್ಸ್ ರಿಶ್ತೆ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತದೆ.
ಧಾರಾವಾಹಿ ಕಥೆ ಏನು?
ಸೂಪರ್ ಸ್ಟಾರ್ ಆಗಿರುವ ಸಿನಿಮಾ ಹೀರೋಯಿನ್ ರಚನಾ ಆಗಿರ್ತಾಳೆ. ಆದರೆ ಅವಳ ಮಲತಾಯಿ ತುಂಬಾ ಪ್ರೀತಿ ತೋರಿದಂತೆ ನಾಟಕ ಮಾಡುತ್ತಾ ಅವಳನ್ನು ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡು ಹಣ ಮಾಡುತ್ತಾ ಇರುತ್ತಾಳೆ. ಪ್ರೀತಿ ಇದೆ ಎಂದು ತೋರಿಸಿದರೂ ಆ ಮಲತಾಯಿಗೆ ಬೇಕಾಗಿರುವುದು ರಚನಾಳಿಂದ ಹುಟ್ಟಿದ ಹಣ ಮಾತ್ರ ಆಗಿರುತ್ತದೆ. ಯಾರನ್ನೂ ಕಣ್ಣೆತ್ತಿ ನೋಡುವ ಸ್ವಾತಂತ್ಯ್ರ ಕೂಡ ರಚನಾಗೆ ಇರೋದಿಲ್ಲ. ಅದೇ ರೀತಿ ಹಣದ ಆಸೆಗಾಗಿ ಯಾರೋ ಒಬ್ಬನಿಗೆ ಮದುವೆ ಮಾಡಲು ಅವಳ ತಾಯಿ ವಜ್ರೇಶ್ವರಿ ನೋಡುತ್ತಾಳೆ. ಆದರೆ ಮುಂದೆ ಧಾರಾವಾಹಿ ತಿರುವು ಪಡೆದುಕೊಳ್ಳುತ್ತದೆ.
ಕೃಷ್ಣ ಎಂಬ ಮುದ್ದು ಪೋರಿ
ಇನ್ನೊಂದು ಮುಖ್ಯ ಕಥೆ ಇದೇ ಧಾರಾವಾಹಿಯಲ್ಲಿದೆ. ಕೃಷ್ಣ ಎಂಬ ಒಂದು ಮಗು ತನ್ನ ತಾಯಿಯನ್ನು ಕಳೆದುಕೊಂಡಿರುತ್ತಾಳೆ. ಅವಳಿಗೆ ಅವಳ ತಂದೆ ನಿನ್ನ ಅಮ್ಮ ಸ್ಟಾರ್ ಎಂದು ಹೇಳಿ ಬೆಳೆಸಿರುತ್ತಾನೆ. ಅವಳು ಸೂಪರ್ ಸ್ಟಾರ್ ರಚನಾ ತನ್ನ ಅಮ್ಮ ಎಂದುಕೊಂಡು ಬೆಳೆಯುತ್ಥಾಳೆ,, ಈ ರೀತಿಯಾದ ಕಥಾ ಹಂದರವನ್ನು ಈ ಧಾರಾವಾಹಿ ಹೊಂದಿದೆ.